Don't Miss!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Bhoomige Banda Bagavatha: ಶೀಘ್ರದಲ್ಲೇ ಹೊಸ ಧಾರಾವಾಹಿ ʻಭೂಮಿಗೆ ಬಂದ ಭಗವಂತ'!
ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಲೇ ಇದೆ. ಸದ್ಯ ಇರುವಂತ ಧಾರಾವಾಹಿಗಳು ಕೂಡ ಒಂದಕ್ಕಿಂತ ಒಂದು ಅದ್ಭುತವಾಗಿದೆ. ಟಿಆರ್‌ಪಿಯಲ್ಲೂ ಮೊದಲ ಸ್ಥಾನದಲ್ಲಿವೆ. ಸಂಜೆ ಆರು ಗಂಟೆಗೆ ಆರಂಭವಾದ ಧಾರಾವಾಹಿಗಳು ರಾತ್ರಿ 10 ಗಂಟೆಯ ತನಕ ಜನ ಮೆಚ್ಚಿದ ಧಾರಾವಾಹಿಗಳೇ ಆಗಿವೆ. ಇದೀಗ ಹೊಸದೊಂದು ಧಾರಾವಾಹಿ ಶೀಘ್ರದಲ್ಲಿಯೇ ಬರಲಿದೆ.
'ಭೂಮಿಗೆ ಬಂದ ಭಗವಂತ' ಎಂಬ ಧಾರಾವಾಹಿ ಈಗಾಗಲೇ ಸಿದ್ಧವಾಗಿದೆ. ಅತಿ ಶೀಘ್ರದಲ್ಲಿಯೇ ಪ್ರದರ್ಶನಗೊಳ್ಳಲಿದೆ. ಸದ್ಯ ಪ್ರೋಮೋ ರಿಲೀಸ್ ಮತ್ತು ಅದರ ಮೇಕಿಂಗ್ ಝಲಕ್ ರಿಲೀಸ್ ಮಾಡಿದ್ದು, ಮಿಡಲ್ ಕ್ಲಾಸ್ ಫ್ಯಾಮಿಲಿಯ ಆಗು ಹೋಗುಗಳನ್ನು ತೆರೆ ಮೇಲೆ ತೋರಿಸಲಾಗುತ್ತಿದೆ.
'ಯುಗಾಂತರ'
ಧಾರಾವಾಹಿಯ
ಮೂಲಕ
ಕಿರುತೆರೆಗೆ
ಮರಳಿದ
ದೀಪಾ
ಭಾಸ್ಕರ್

ಕಿರುತೆರೆಗೆ ನವೀನ್ ಕೃಷ್ಣ ಎಂಟ್ರಿ
ಪ್ರೋಮೋದಲ್ಲಿ ಅದಾಗಲೇ ನವೀನ್ ಕೃಷ್ಣ ಪಾತ್ರ ಎಂಥದ್ದು ಎಂಬುದು ಸಾಬೀತಾಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯ ಜವಾಬ್ದಾರಿ ಹೊತ್ತ, ಸಂಸಾರಸ್ಥನಾಗಿ ನವೀನ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಮಗು, ಹೆಂಡತಿ, ಮನೆ, ಖರ್ಚುಗಳು, ಆಫೀಸ್ ಕೆಲಸ, ಸಾಲದ ಸಂಬಳ, ಹಳೆ ಮಾಡೆಲ್ ಗಾಡಿ, ಮನೆಯಲ್ಲಿ ಹಿರಿಯರ ಜವಾಬ್ದಾರಿ. ಅಬ್ಬಬ್ಬಾ ಒಂದ ಎರಡಾ ಎಲ್ಲಾ ಜವಾಬ್ದಾರಿಯೂ ನವೀನ್ ಕೃಷ್ಣ ಹೆಗಲ ಮೇಲೆಯೇ ಇದೆ.

ಹಿರಿಯ ನಟ ಉಮೇಶ್ ರೀ ಎಂಟ್ರಿ
ಹಿರಿಯ ನಟ ಉಮೇಶ್ ಅವರ ಕಾಮಿಡಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಅವರದೊಂದು ಸಿಗ್ನೇಚರ್ ಡೈಲಾಗ್ ಒಂದಿದೆಯಲ್ಲ. ಅಯ್ಯಯ್ಯೋ ಯಾರು ಅಪಾರ್ಥ ಮಾಡಿಕೊಳ್ಳಬೇಡಿ ಎಂಬುದು. ಆ ಡೈಲಾಗ್ ಹೇಳುವ ಮೂಲಕವೇ ಮತ್ತೆ ಕಿರುತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ನವೀನ್ ಕೃಷ್ಣ ಫ್ಯಾಮಿಲಿಯಲ್ಲಿಯೇ ಇರುವ ಪಾತ್ರ ಹಿರಿಯ ನಟ ಉಮೇಶ್ ಅವರದ್ದಾಗಿದೆ.

ಮತ್ತೆ ಜೀ ಕನ್ನಡಕ್ಕೆ ಬಂದ ಕೃತಿ
ಜೀ ಕನ್ನದಲ್ಲಿ ʻರಾಧಾ ಕಲ್ಯಾಣʼ ಎಂಬ ಧಾರಾವಾಹಿ ಬಹಳ ವರ್ಷಗಳ ಹಿಂದೆ ಬರುತ್ತಾ ಇತ್ತು. ಸಂಜೆ 6.30ಕ್ಕೆ ಬರುತ್ತಿದ್ದ ಈ ಧಾರಾವಾಹಿಯನ್ನು ನೋಡಲು ಅದೆಷ್ಟು ಜನ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರೋ ಏನೋ. ಕೌಟುಂಬಿಕ ಧಾರಾವಾಹಿಯಾಗಿದ್ದ 'ರಾಧಾ ಕಲ್ಯಾಣ'ದಲ್ಲಿ ಕೃತಿ ರವೀಂದ್ರ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕೃಷ್ಣೆಯ ಆರಾಧಕರಾಗಿದ್ದರು. ಇದೀಗ ಬಹಳ ವರ್ಷಗಳ ಬಳಿಕ ಮತ್ತೆ ಜೀ ಕನ್ನಡಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಅದುವೇ ʻಭೂಮಿಗೆ ಬಂದ ಭಗವಂತʼ ಧಾರಾವಾಹಿ. ಈ ಧಾರಾವಾಹಿ ಬಗ್ಗೆ ಕೃತಿಕಾ ಕೂಡ ಎಕ್ಸೈಟ್ ಆಗಿದ್ದಾರೆ.

ಮೇಕಿಂಗ್ ವಿಡಿಯೋದಲ್ಲಿ ಅದ್ಭುತ
ಸದ್ಯ ಜೀ ಕನ್ನಡದ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿಯ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಮಧ್ಯಮವರ್ಗದ ಜೀವನದ ಜಂಜಾಟದಲ್ಲಿ ನಟಿಸುವಾಗ ಎಷ್ಟೆಲ್ಲಾ ಸರ್ಕಸ್ ಮಾಡಬೇಕಾಗುತ್ತದೆ ಎಂಬುದು ಈ ಮೇಕಿಂಗ್ ವಿಡಿಯೋದಲ್ಲಿ ಕಾಣಿಸುತ್ತಿದೆ. ಹಾಗೇ ಎಲ್ಲಾ ಪಾತ್ರಗಳ ಪರಿಚಯವೂ ಆಗಿದೆ. ದೇವರ ಅವತಾರದಲ್ಲಿ ಕಾರ್ತಿಕ್ ಕಾಣಿಸಿಕೊಂಡಿದ್ದರೆ, ನವೀನ್ ಕೃಷ್ಣ ಹಾಗೂ ಕೃತಿಕಾ ಮಗಳಾಗಿ ಬಾಲ ನಟಿ ಅಂಕಿತಾ ಜಯರಾಮ್ ಕಾಣಿಸಿಕೊಂಡಿದ್ದಾರೆ.

ರಿಪ್ಲೇಸ್ ಆಗುವ ಧಾರಾವಾಹಿ ಯಾವುದು ?
ಸದ್ಯ ಜೀ ಕನ್ನಡದಲ್ಲಿ ಎಲ್ಲಾ ಧಾರಾವಾಹಿಗಳು ಸೂಪರ್ ಆಗಿದೆ. 'ಶ್ರೀರಸ್ತು ಶುಭಮಸ್ತು' ಬಂದಾಗ ಸ್ವಲ್ಪ ಟಿಆರ್‌ಪಿ ಕಡಿಮೆಯಾಗಿದ್ದ 'ಜೊತೆ ಜೊತೆಯಲಿ' ಸಮಯ ಬದಲಾವಣೆಯಾಗಿತ್ತು. ಈಗ ಎರಡು ಹೊಸ ಧಾರಾವಾಹಿಗಳಿಗೆ ಪ್ರೈಮ್ ಟೈಮ್ ಅನ್ನೇ ಒದಗಿಸಿಕೊಡಬೇಕಾಗಿದೆ. ಅದರಲ್ಲಿ ಈಗ ರಾತ್ರಿ 10 ಗಂಟೆಯ ಸ್ಲ್ಯಾಟ್ ಖಾಲಿ ಇದೆ. ಅಲ್ಲಿಗೆ ಒಂದು ಧಾರಾವಾಹಿ ಹಾಕಿ ಸ್ಥಳವಾಕಾಶ ಒದಗಿಸಿಕೊಡಬಹುದು. ಇನ್ನು 'ಪಾರು' ಅಥವಾ 'ನಾಗಿಣಿ2' ಧಾರಾವಾಹಿ ಮುಗಿಯಬಹುದಾ ಎಂಬ ಅನುಮಾನಗಳು ಇದೆ.