ಶತಕದ ಸಂಭ್ರಮದಲ್ಲಿ 'ಭೂಮಿಗೆ ಬಂದ ಭಗವಂತ': ವೀಕ್ಷಕರಿಂದ ಧಾರಾವಾಹಿಗೆ ಫುಲ್ ಮಾರ್ಕ್ಸ್
ನವೀನ್ ಕೃಷ್ಣ ಹಾಗೂ ಕೃತಿಕಾ ರವೀಂದ್ರ ನಟನೆಯ ಭೂಮಿಗೆ ಬಂದ ಭಗವಂತ ಧಾರಾವಾಹಿ ವೀಕ್ಷಕರ ಮನಗೆದ್ದಿದೆ. ಸದ್ಯ ಈ ಧಾರಾವಾಹಿ ನೂರು ಎಪಿಸೋಡ್‌ಗಳನ್ನು ಪೂರೈಸಿದೆ. ಇದೇ ಸಂಭ್ರಮದಲಿ ತಂಡ ಇನ್ಸ್ಟಾಗ್ರಾಮ್ ಲೈವ್ ಬಂದು ವೀಕ್ಷಕರಿಗೆ ಧನ್ಯವಾದ ತಿಳಿಸಿದೆ. ಕೇಕ್ ಕಟ್ ಮಾಡುವ ಮೂಲಕ ಖುಷಿಯನ್ನು ಡಬಲ್ ಮಾಡಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ನಟಿಸಿರುವ ಪ್ರತಿಯೊಬ್ಬರು ಸಹ ಸೆಲೆಬ್ರೆಷನ್‌ನಲ್ಲಿ ಭಾಗಿಯಾಗಿದ್ದರು.
ಮಾರ್ಚ್ 20ಕ್ಕೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಶುರುವಾಯಿತು. ಅಲ್ಲಿಂದ ಇಲ್ಲಿ ತನಕವೂ ಸಹ ದಿನಕ್ಕೊಂದು ಕಥೆಯ ಮೂಲಕ ಭಗವಂತನು ಶಿವಪ್ರಸಾದ್ ಮೂಲಕ ಸಾಮಾನ್ಯ ಜನರಿಗೆ ಸಂದೇಶ ಹೇಳಿಸುತ್ತಾ ಬಂದಿದ್ದಾನೆ. ಕನ್ನಡ ಕಿರುತೆರೆಯಲ್ಲಿ ಇದೊಂದು ಹೊಸ ರೀತಿಯ ಕಥೆ ಇರುವ ಧಾರಾವಾಹಿ ಆಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ನಡೆಯುವ ತೊಂದರೆ, ಸಮಸ್ಯೆ, ಮೋಸ ಹೋಗುವುದು ಎಲ್ಲವನ್ನೂ ಸಹ ಜನರಿಗೆ ತಿಳಿಸುವುದಾಗಿದೆ.

ನವೀನ್ ಕೃಷ್ಣ ಹಾಗೂ ಕೃತಿಕಾ ರವೀಂದ್ರ ಅವರಿಗೆ ಕಮ್‌ಬ್ಯಾಕ್ ಕೊಟ್ಟ ಸೀರಿಯಲ್ ಆಗಿದ್ದು, ಇಬ್ಬರ ಪಾತ್ರ ಬಹಳ ಚನ್ನಾಗಿ ಮೂಡಿ ಬರ್ತಿದೆ ಎನ್ನುತ್ತಾರೆ ವೀಕ್ಷಕರು. ಗಿರಿಜಾ ಹಾಗೂ ಶಿವಪ್ರಸಾದ್ ಪಾತ್ರ ನಮ್ಮೊಳಗೆ ನಡೆಯುವ ಕಥೆಯಂತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಉಮೇಶ್, ಅಂಕಿತಾ ಹಾಗೂ ಅನುರಾಗ್ ಅಭಿನಯಕ್ಕೂ ಸಹ ಪಿಧಾ ಆಗಿದ್ದಾರೆ.
ಜನರಲ್ಲಿ ಅರಿವು ಮೂಡಿಸುವ ಕೆಲಸ
ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಗೆ ಕುಮಾರ್ ಎಂಬುವವರು ಎಪಿಸೋಡ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 'ಜೋಡಿಹಕ್ಕಿ' ಹೀರೋ ತಾಂಡವ್ ಪ್ರೋಡ್ಯೂಸರ್ ಆಗಿದ್ದಾರೆ. ರಾಕೇಶ್ ಅವರು ಈ ಧಾರಾವಾಹಿಯ ರೈಟರ್ ಆಗಿದ್ದಾರೆ. ಕಾರ್ತೀಕ್ ಶರ್ಮಾ ಅವರು ಸಂಗೀತ ನಿರ್ದೇಶಕರಾಗಿದ್ದು, ಶಂಕರ್ ಮಹಾದೇವನ್ ಟೈಟಲ್ ಸಾಂಗ್‌ಗೆ ಹಾಡಿದ್ದಾರೆ.
ಆ ಸಿನಿಮಾ ನೆನಪಿಸುವ ಕಥೆ
ಪ್ರತಿದಿನವೂ ಸಹ ಹೊಸ ಹೊಸ ಕಥೆಗಳನ್ನು ವೀಕ್ಷಕರ ಮನವನ್ನು ತಲುಪಿಸುವ ಕೆಲಸವನ್ನು ಭೂಮಿಗೆ ಬಂದ ಭಗವಂತ ಧಾರಾವಾಹಿ ಟೀಂ ಮಾಡುತ್ತಿದೆ. ಕಥೆಯ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೀತ್ತಿದೆ. ಈ ಧಾರಾವಾಹಿ ಕಥೆ ಮೇಲ್ನೋಟಕ್ಕೆ ಬಾಲಿವುಡ್‌ನ 'ಓ ಮೈ ಗಾಡ್' ಸಿನಿಮಾ ನೆನಪಿಸುತ್ತಿದೆ. ಆ ಸಿನಿಮಾ ಕಥೆಯ ರೀತಿಯಲ್ಲೇ ಈ ಕಥೆಯೂ ಸಾಗುತ್ತಿದೆ.
ಶಿವನ ನಟನೆಗೆ ಜನರಿಂದ ಪುಲ್ ಮಾರ್ಕ್ಸ್
ಧಾರಾವಾಹಿಯಲ್ಲಿ ಶಿವನ ನಟನೆಗೆ ಜನರು ಪುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕಾರ್ತಿಕ್ ಸಮಾಗ್ ಅವರು ಶಿವನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಭೂಮಿಗೆ ಬಂದಿರುವ ಭಗವಂತ ಇಲ್ಲಿ ಯಾವುದೇ ಪವಾಡಗಳನ್ನು ಮಾಡೋದಿಲ್ಲ. ಇದರ ಬದಲು ಶಿವಪ್ರಸಾದ್ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಾನೆ. ಮೌಢ್ಯವನ್ನು ತೊಲಗಿಸುತ್ತಾನೆ, ಜ್ಞಾನವನ್ನು ಹೆಚ್ಚಿಸುವ ಶಿವನಾಗಿದ್ದಾನೆ.
ಜನರಿಗೆ ಹತ್ತಿರವಾದ ಪಾತ್ರಗಳು
ಈ ಧಾರಾವಾಹಿಯಲ್ಲಿ ವಿಲನ್‌ಗಳಿಲ್ಲ ಹೀರೋಗೆ ಬರುವ ಸಮಸ್ಯೆಗಳೇ ವಿಲನ್ ಆಗಿ ಕಾಡುತ್ತವೆ. ಸಮಸ್ಯೆ, ಎದುರಿಸುವ ತೊಂದರೆಗಳ ಜೊತೆಗೆ ಪ್ರತಿದಿನವೂ ಹೋರಾಟ ಮಾಡಬೇಕಾಗಿದೆ. ಹೊಸ ಹೊಸ ಕಂಟೆಂಟ್ ಇರುವುದರಿಂದ ಜನರು ಧಾರಾವಾಹಿಯನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದು, ಗಿರಿಜಾ ಹಾಗೂ ಶಿವಪ್ರಸಾದ್ ಒಳಗೆ ಒಬ್ಬರಾಗಿದ್ದಾರೆ. ಗಿರಿಜಾ, ಶಿವಪ್ರಸಾದ್ ನಮ್ಮ ಅಕ್ಕಪಕ್ಕದವರೇ ಎಂದು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ.
ವೀಕ್ಷಕರಿಗೆ ಇದೊಂದೇ ಬೇಸರ
ಧಾರಾವಾಹಿ ಶುರುವಾದಾಗ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ಈಗ ಹತ್ತು ಗಂಟೆಗೆ ಪ್ರಸಾರವಾಗುತ್ತಿದ್ದು ಜನರು ಧಾರಾವಾಹಿಯನ್ನು ಸ್ಪಲ್ಪ ಬೇಗ ಹಾಕಿ ಎಂದು ಹೇಳುತ್ತಿದ್ದಾರೆ. ಇದರ ಜೊತೆಗೆ ದಿನದಿಂದ ದಿನಕ್ಕೆ ಕಥೆಯು ತುಂಬಾ ಚೆನ್ನಾಗಿ ಮೂಡಿ ಬರುತ್ತಿದ್ದು ಇದೇ ರೀತಿಯಲ್ಲಿ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡುತ್ತಿದ್ದಾರೆ. ಭೂಮಿಗೆ ಬಂದ ಭಗವಂತ ಶತಕದ ಸಂಭ್ರಮದಲ್ಲಿದ್ದು ಹೀಗೆ ಹೊಸ ಹೊಸ ಕಥೆಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿ ಎಂಬುದು ಪ್ರೇಕ್ಷಕರ ಆಶಯವಾಗಿದೆ.


Click it and Unblock the Notifications











