Bhoomige banda bhagavantha: ಶಿವಪ್ರಸಾದ್ ಮನೆಯಲ್ಲಿ ರಿಯಾಲಿಟಿ ಶೋ: ಇಲ್ಲಿ ಭಗವಂತನೇ ಬಿಗ್ ಬಾಸ್..!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮಾದರಿಯಲ್ಲೇ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲೂ ಸಹ ಒಂದು ವಾರದ ಎಪಿಸೋಡ್ ತೆಗೆಯಲಾಗಿದೆ. ಮನೆ ಮಂದಿಯವರನ್ನು ಸ್ಪರ್ಧಿಗಳನ್ನಾಗಿ ಮಾಡಿ ಶಿವಪ್ರಸಾದ್‌ಗೆ ಭಗವಂತ ಯಾವ ರೀತಿ ಮನುಷ್ಯರು ಬದಲಾಗುತ್ತಾರೆ ಎಂಬುದನ್ನು ಅರ್ಥ ಮಾಡಿಸಲು ಬಂದಿದ್ದಾನೆ.
ಶಿವಪ್ರಸಾದ್ ಭಗವಂತನಿಗೆ ಒಂದು ಚಾಲೆಂಜ್ ಹಾಕಿದ್ದನು. ನೀನು ನನ್ನ ಕಣ್ಣಿಗೆ ಕಾಣುವಂತೆ ಲೋಕದ ಜನರ ಕಣ್ಣಿಗೂ ಸಹ ಕಾಣಿಸಿಕೋ. ಆಗ ಜನರು ಮೋಸ ಮಾಡುವುದಿಲ್ಲ, ನಾಟಕ ಮಾಡುವುದಿಲ್ಲ, ಎಂದು ಹೇಳಿದ್ದನು. ಇದಕ್ಕೆ ನಕ್ಕು ಶಿವ ಸುಮ್ಮನಾಗಿದ್ದನು.

ಶಿವ, ಭಕ್ತರ ಕೋರಿಕೆಗಳನ್ನು ಈಡೇರಿಸಿಯೇ ಈಡೇರಿಸುತ್ತಾನೆ. ಅದಕ್ಕಾಗಿ ಈಗ ಭಗವಂತ ಖುದ್ದು ಶಿವಪ್ರಸಾದ್‌ನ ಮನೆಗೆ ಬಂದಿದ್ದಾನೆ. ಒಂದು ರಿಯಾಲಿಟಿ ಶೋ ಮಾಡೋಣ ಅದರಲ್ಲಿ ಈ ಮನೆಯವರೆ ಪಾತ್ರಧಾರಿಗಳು. ಯಾರ್ಯಾರು ಯಾವ್ಯಾವ ರೀತಿ ಆಟ ಆಡುತ್ತಾರೆ ನೋಡೋಣ ಎಂದು ಹೇಳಿದ್ದಾನೆ. ಇನ್ನು ಕಾಶಿ ಆಕೆಯ ಹೆಂಡತಿ ಸೇರಿದಂತೆ ಶಿವಪ್ರಸಾದ್‌ನ ಅಕ್ಕ ಪಕ್ಕದ ಮನೆಯವರು ಸಹ ಈ ರಿಯಾಲಿಟಿ ಶೋನಲ್ಲಿ ಸೇರಿಕೊಂಡಿದ್ದಾರೆ. ತಾವೇ ಗೆಲ್ಲಬೇಕು ಎಂದು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಎಲ್ಲಾದಕ್ಕೂ ಸಹ ಶಿವಪ್ರಸಾದ್‌ನನ್ನೇ ಹೊಣೆಯಾಗಿಸುತ್ತಿದ್ದಾರೆ. ಇದರಿಂದಾಗಿ ಶಿವಪ್ರಸಾದ್‌ಗೆ ಬೇಸರವಾಗುತ್ತಿದೆ.
ಭಗವಂತ, ಶಿವಪ್ರಸಾದ್ ಬಳಿ ನೀನು ಹೇಳಿದ್ದಕ್ಕಾಗಿ ನಾನು ಈ ಆಟವನ್ನು ಆಡಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ನೆನಪು ಮಾಡಿಕೋ ಅಂದು ನೀನು ಏನು ಅಂದೆ? ನನ್ನ ಕಣ್ಣಿಗೆ ಕಾಣುವ ಹಾಗೆ ಎಲ್ಲರ ಕಣ್ಣಿಗೂ ನೀನು ಕಾಣಬೇಕು ಆಗ ಮನುಷ್ಯರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದು ನಿನಗೆ ಅರ್ಥವಾಗುತ್ತದೆ ಎಂದು ಚಾಲೆಂಜ್ ಹಾಕಿದ್ದೆ. ಅದಕ್ಕಾಗಿ ನಾನು ಇಷ್ಟೆಲ್ಲವನ್ನು ಮಾಡಬೇಕಾಯಿತು ಎಂದು ತನ್ನ ಭಕ್ತ ಶಿವಪ್ರಸಾದ್‌ಗೆ ಭಗವಂತ ಹೇಳುತ್ತಿದ್ದಾನೆ. ಭಗವಂತನ ಮಾತುಗಳನ್ನ ಕೇಳಿ ಶಿವಪ್ರಸಾದ್ ಶಾಕ್ ಆಗಿದ್ದಾನೆ.
ಧಾರಾವಾಹಿಯಲ್ಲಿ ರಿಯಾಲಿಟಿ ಶೋ
ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ಬಿಗ್ ಬಾಸ್ ಆಟ ಶುರುವಾಗಿದೆ. ಈ ಆಟದಲ್ಲಿ ಶಿವಪ್ರಸಾದ್ ಮನೆಯಲ್ಲಿರುವವರು ಹಾಗೂ ಅಕ್ಕ ಪಕ್ಕದ ಮನೆಯವರು ಭಾಗವಹಿಸಿದ್ದಾರೆ. ಆದರೆ ಇಲ್ಲಿ ಪ್ರಾಮಾಣಿಕ ಶಿವಪ್ರಸಾದ್‌ಗೆ ಯಾವುದೇ ಬೆಲೆ ಇಲ್ಲ, ಅದು ಈಗ ಆತನಿಗೆ ಗೊತ್ತಾಗುತ್ತಿದೆ. ಭಗವಂತ, ಶಿವಪ್ರಸಾದ್‌ಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ಪರಿಚಯಿಸಲು ಈ ರಿಯಾಲಿಟಿ ಶೋ ಇಟ್ಟಿದ್ದಾನೆ.

ಭಗವಂತ ನಡೆಸುತ್ತಿರುವ ಶೋ
ಅಪ್ಪಟ ಯಾರು, ಲಂಪಟ ಯಾರು ಎಂಬ ಸ್ಪರ್ಧೆ ನಡೆಯುತ್ತಿದೆ. ಇಲ್ಲಿ ಮನೆಯಲ್ಲಿರುವ ಸ್ಪರ್ಧಿಗಳಿಗೆ ವೋಟ್ ಮಾಡಲು ಅವಕಾಶವಿದೆ. ಮನೆಯವರೆಲ್ಲರೂ ಸಹ ತಮ್ಮಗೆ ಇಷ್ಟವಾದವರಿಗೆ ವೋಟ್ ಮಾಡುತ್ತಾ ಇದ್ದಾರೆ. ಆದರೆ ಇಲ್ಲಿ ಯಾರು ಸಹ ಶಿವಪ್ರಸಾದ್‌ಗೆ ಸಪೋರ್ಟ್ ಮಾಡುತ್ತಿಲ್ಲ. ಇದು ಶಿವಪ್ರಸಾದ್‌ಗೆ ನೋವಾಗುತ್ತಿದೆ.ಶಿ ವಪ್ರಸಾದ್‌ನನ್ನು ಪಕ್ಷಪಾತಿ ಎಂದು ಬಿಂಬಿಸಲಾಗುತ್ತಿದೆ. ಭಗವಂತನ ಆಟದ ಮುಂದೆ ಶಿವಪ್ರಸಾದ್ ಸಹ ತಾನೇ ಏನು ಮಾಡಿಯಾನು?
ಬಿಗ್ ಬಾಸ್ ರೀತಿಯಲ್ಲಿಯೇ ಆಟ
ಇಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲಿಯೇ ಶಿವಪ್ರಸಾದ್ ಮನೆಗೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇಲ್ಲಿ ಎಲ್ಲರೂ ಸಹ ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದಾರೆ. ದೇವರು ಎಲ್ಲರನ್ನೂ ಸಹ ಜೂಟಾಟ ಆಡಿಸುತ್ತಿದ್ದಾನೆ. ಮನೆಯಲ್ಲಿ ತಮ್ಮ ತಮ್ಮ ಸ್ವಾರ್ಥಕ್ಕಾಗಿ ಗೆಲುವು ಪಡೆಯಬೇಕು ಎಂಬುವವರೇ ಹೆಚ್ಚಾಗಿದ್ದು ಅದು ಶಿವಪ್ರಸಾದ್ ಗಮನಕ್ಕೆ ಬರುತ್ತಿದೆ. ಶಿವಪ್ರಸಾದ್ ಎಲ್ಲಾ ನೋಡಿಕೊಂಡು ಸುಮ್ಮನೆ ಇದ್ದಾನೆ.
ಇದು ದೇವರು ಆಡಿಸುತ್ತಿರುವ ಜೂಜಾಟ
ಯಾಕೆಂದರೆ ಇದು ಭಗವಂತ ಆಡಿಸುತ್ತಿರುವ ಆಟ ಎಂದು ಶಿವಪ್ರಸಾದ್‌ಗೆ ಗೊತ್ತಿದೆ. ಜನರು ಯಾರೇ ಆಟವಾಡಿಸಿದರು ಸಹ ತಮ್ಮ ಸ್ವಾರ್ಥ ಸಾಧನೆಗಾಗಿ ಇದೇ ರೀತಿ ಮಾಡುತ್ತಾರೆ ಎಂಬುವುದು ಶಿವಪ್ರಸಾದ್ಗೆ ಅರ್ಥವಾಗುತ್ತಿದೆ. ಭಗವಂತ, ಶಿವಪ್ರಸಾದ್‌ಗೆ ಜನರು ಒಂದೇ ಸ್ವಾರ್ಥ ಸಾಧನೆಗಾಗಿ ಈ ರೀತಿ ಮಾಡುತ್ತಾರೆ ಎಂಬುದನ್ನು ತಿಳಿಸಲು ಈ ರೀತಿಯ ಆಟವನ್ನು ಆಡಿಸುತ್ತಾ ಇದ್ದಾನೆ.


Click it and Unblock the Notifications











