Bhoomige Bandha Bhagavantha: ಶಿವಪ್ರಸಾದ್ ಮನೆ ಗಣೇಶ ಪೂಜೆಗೆ ಕುಟುಂಬ ಸಮೇತನಾಗಿ ಬಂದ ಭಗವಂತ!
'ಭೂಮಿಗೆ ಬಂದ ಭಗವಂತ' ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ. ಯಾಕೆಂದರೆ ಇಲ್ಲಿ ಬರುವ ಪಾತ್ರಧಾರಿಗಳ ಮಾತು ಕಥೆಗಳು ಹಾಗೂ ದಿನಕ್ಕೊಂದು ಕಥೆ ಹೇಳುವ ರೀತಿ ನಮ್ಮೊಳಗೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಇನ್ನು ಈಗ ಭೂಮಿಗೆ ಬಂದ ಭಗವಂತ ಕುಟುಂಬದೊಳಗೆ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಮಾಡಲು ತಯಾರಿಯನ್ನು ಮಾಡುತ್ತಿದ್ದಾರೆ.
ಶಿವಪ್ರಸಾದ್ ಬಳಿ ಹಬ್ಬಕ್ಕೆ ಹಣವಿಲ್ಲ ತನ್ನ ಸ್ನೇಹಿತನಿಗೆ ಹಣವನ್ನು ಕೊಟ್ಟು ಬರಿಗೈಯಲ್ಲಿ ಕುಳಿತುಕೊಂಡಿದ್ದಾನೆ. ಭಗವಂತ ಇದೆ ವೇಳೆ ಶಿವಪ್ರಸಾದ್‌ಗೆ ಬುದ್ಧಿಯನ್ನ ಹೇಳಿದ್ದಾನೆ. ಆದರೆ ಶಿವಪ್ರಸಾದ್ ಕೋಪ ಮಾಡಿಕೊಂಡು ನೀನು ನಿನ್ನ ಕುಟುಂಬ ಸಮೇತ ಭೂಲೋಕಕ್ಕೆ ಬಂದು ಹಬ್ಬ ಆಚರಿಸು ಆಗ ನಿನಗೆ ಸಂಸಾರದ ಸಮಸ್ಯೆ ಏನೆಂದು ಅರ್ಥವಾಗುತ್ತದೆ ಎಂದಿದ್ದಾನೆ.

ಭಗವಂತ, ಶಿವಪ್ರಸಾದ್ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಆತನ ಮನೆಗೆ ಬಂದಿದ್ದಾನೆ. ರಸ್ತೆಯಲ್ಲಿ ಶಿವಪ್ರಸಾದ್ ಹೋಗುವ ವೇಳೆ ಒಂದು ಕುಟುಂಬ ಸಿಕ್ಕಿದೆ. ಇದೇ ವೇಳೆ ಶಿವಪ್ರಸಾದ್ ಅವರ ಪರಿಚಯವನ್ನ ಮಾಡಿಕೊಂಡಾಗ ಅವರು ತಮ್ಮ ಬಳಿ ಇದ್ದ ಹಣವೆಲ್ಲವನ್ನು ಬೇರೆ ಯಾರೋ ಮೋಸದಿಂದ ಕಿತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಶಿವಪ್ರಸಾದ್‌ಗೆ ಅವರ ಕಥೆಯನ್ನ ಕೇಳಿ ತುಂಬಾ ಬೇಸರವಾಗಿದೆ. ನಮಗೆ ಇರಲು ಸೂರಿದೆ ಊಟ ಮಾಡಲು ಅನ್ನವಿದೆ ಆದರೆ ಪಾಪ ಇವರು ಬೇರೆ ಊರಿನಿಂದ ಬಂದು ಕಷ್ಟಪಡುತ್ತಿದ್ದಾರೆ ಎಂದು ಮರುಗಿದ್ದಾನೆ. ಇದೇ ಸಂದರ್ಭದಲ್ಲಿ ಶಿವಪ್ರಸಾದ್ ಅವರನ್ನು ತನ್ನ ಮನೆಗೆ ಆಮಂತ್ರಿಸಿದ್ದಾನೆ. ನೀವು ಹೇಗಿದ್ದರೂ ನಾಳೆ ಹೋಗುವವರು ದಯವಿಟ್ಟು ಅಲ್ಲಿ ಆತನಕ ನಮ್ಮ ಮನೆಯಲ್ಲಿ ಬಂದು ನಮ್ಮ ಜೊತೆ ಹಬ್ಬ ಆಚರಣೆ ಮಾಡಿ ಎಂದು ಕೇಳಿಕೊಂಡಿದ್ದಾನೆ. ಮೊದಲು ಭಗವಂತ ಇದಕ್ಕೆ ಒಪ್ಪಿಗೆ ನೀಡಲಿಲ್ಲ, ಇದೇ ವೇಳೆ ಶಿವಪ್ರಸಾದ್ ನಮ್ಮ ಮನೆಯಲ್ಲೂ ಎರಡು ಮುದ್ದಾದ ಮಕ್ಕಳು ಇವೆ, ದಯವಿಟ್ಟು ಬನ್ನಿ ಎಂದಾಗ ಭಗವಂತ ಒಪ್ಪಿಕೊಂಡು ಸಕುಟುಂಬ ಸಮೇತನಾಗಿ ಶಿವಪ್ರಸಾದ್ ಮನೆಗೆ ಬಂದಿದ್ದಾನೆ.
ಭಕ್ತ ಶಿವಪ್ರಸಾದ್ ಮನೆಯಲ್ಲಿ ಭಗವಂತ
ಶಿವಪ್ರಸಾದ್ ಮನೆಗೆ ಬಂದೊಡನೆ ಮನೆಯಲ್ಲಿ ಇರುವ ಎಲ್ಲರ ಪರಿಚಯವನ್ನ ಮಾಡಿಸಿದ್ದಾನೆ. ಇದೇ ವೇಳೆ ಗಿರಿಜಾ ನಾವೇ ಹಬ್ಬ ಮಾಡಲು ಹಣವಿಲ್ಲ ಎಂದು ಒದ್ದಾಡುತ್ತಿದ್ದೇವೆ. ಈ ವೇಳೆ ಇವರನ್ನು ಕರೆದುಕೊಂಡು ಬಂದಿದ್ದೀರಾ ಎಂದಿದ್ದಾಳೆ. ಇದಕ್ಕೆ ಶಿವಪ್ರಸಾದ್ ನಮಗೆ ಇರಲು ಮನೆ ಇದೆ, ಊಟವಿದೆ, ಆದರೆ ಇವರಿಗೆ ಏನು ಇಲ್ಲ ಎಂದು ಹೇಳಿದಾಗ ಸುಮ್ಮನಾಗಿದ್ದಾಳೆ. ಇನ್ನು ಮನೆಯೊಳಗೆ ಭಗವಂತನನ್ನ ಕರೆದುಕೊಂಡು ಬಂದು ಶಿವಪ್ರಸಾದ್ ಭಗವಂತನಿಗೆ ಇರಲು ವ್ಯವಸ್ಥೆಯನ್ನ ಮಾಡಿದ್ದಾನೆ. ನಿಮಗೆ ಊಟಕ್ಕೆ ಏನಾದರೂ ವ್ಯವಸ್ಥೆಯನ್ನು ಮಾಡುತ್ತೇವೆ ಎಂದಿದ್ದಾನೆ.

ಶಿವ-ಪಾರ್ವತಿ ಮಾತು
ಗೌರಿ, ಭಗವಂತನ ಬಳಿ ನೀವು ನಿಮ್ಮ ಸ್ನೇಹಿತನ ಮನೆಗೆ ಬಂದಿದ್ದೀರಿ. ಅವರ ಮಾತಿಗೆ ಒಪ್ಪಿ ಇಲ್ಲಿಗೆ ಬಂದು ಹಬ್ಬ ಆಚರಣೆ ಮಾಡುತ್ತಾ ಇದ್ದೀರಾ. ಇಲ್ಲಿ ಗೆಲುವು ಯಾರಿಗೆ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಭಗವಂತ ಗೆಲುವನ್ನು ನಾನು ನನ್ನ ಸ್ನೇಹಿತನಿಗೆ ತಂದು ಕೊಡಬೇಕು ಎಂದು ಹೇಳಿದ್ದನು ಶಿವಪ್ರಸಾದ್ ಕೇಳಿಸಿಕೊಂಡಿದ್ದಾನೆ.
ಶಿವಪ್ರಸಾದ್ ಕಣ್ಣೀರು
ಸತ್ಯ ಬಾಗಿಲು ಸಂದಿಯಿಂದ ಹಾರಿ ಹೋಗುತ್ತಿದೆ ಎಂದು ಶಿವನಿಗೆ ಗೌರಿ ಹೇಳಿದ್ದಾಳೆ. ಇದಕ್ಕೆ ಶಿವ ಸತ್ಯವನ್ನ ಹೇಳಲು ಭಕ್ತ ಹೋದರು. ಸಹ ಅದನ್ನ ನಂಬುವವರು ಯಾರು ಎಂದು ಗೌರಿಗೆ ಹೇಳಿದ್ದಾನೆ. ಶಿವಪ್ರಸಾದ್ ನನ್ನ ಒಂದು ಮಾತಿಗೆ ಕಟ್ಟು ಬಿದ್ದು ಭಗವಂತ ತನ್ನ ಕುಟುಂಬದೊಂದಿಗೆ ನನ್ನ ಮನೆಗೆ ಬಂದಿದ್ದಾನೆ, ನಾನೇ ಧನ್ಯ ಎಂದು ಕಣ್ಣೀರು ಹಾಕಿದ್ದಾನೆ.
ಕಾಶಿಗೆ ಬಂತು ಅನುಮಾನ
ಪೊಲೀಸ್ ಕಾಶಿ ಹಾಗೂ ಆತನ ಹೆಂಡತಿ ಇಬ್ಬರೂ ಸಹ ಶಿವಪ್ರಸಾದ್ ಮನೆಗೆ ಬಂದಿದ್ದು ಗಣೇಶ ಬಿದ್ದುಬಿಟ್ಟಿದ್ದಾನೆ . ಇದೇ ವೇಳೆ ಅವರು ಗಣೇಶನನ್ನು ಎತ್ತಿದ್ದಾರೆ. ಗಣೇಶ ಅಮ್ಮ ಅಪ್ಪ ಎಂದಿದ್ದಕ್ಕೆ ಭಾವುಕರಾಗಿದ್ದಾರೆ. ನಂತರ ಶಿವಪ್ರಸಾದ್ ತಂದೆಯ ಬಳಿ ಯಾರು ಇವರು ಎಂದು ವಿಚಾರಣೆ ಮಾಡಿದ್ದಾರೆ. ಇವರು ರಸ್ತೆಯ ಬದಿ ಇದ್ದರೂ ಅವರನ್ನು ಶಿವಪ್ರಸಾದ್ ಮನೆಗೆ ಕರೆದುಕೊಂಡು ಬಂದಿದ್ದಾನೆ ಎಂದಾಗ. ಪೊಲೀಸ್ ಬುದ್ಧಿಯಿಂದ ಕಾಶಿ ಅನುಮಾನ ವ್ಯಕ್ತಪಡಿಸಿದ್ದಾನೆ. ಕಾಶಿಯ ಬುದ್ಧಿಗೆ ಭಗವಂತ ಜೋರಾಗಿ ನಗುತ್ತಿದ್ದಾನೆ.


Click it and Unblock the Notifications











