200 ಸಂಚಿಕೆ ಪೂರೈಸಿದ 'ಭೂಮಿಗೆ ಬಂದ ಭಗವಂತ; ಕೃತಿಕಾ ರವೀಂದ್ರ ಹೇಳಿದ್ದೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಭೂಮಿಗೆ ಬಂದ ಭಗವಂತ'. ಇತ್ತೀಚೆಗಷ್ಟೇ ಶುರುವಾಗಿರುವ ಈ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೇ ಈ ಧಾರಾವಾಹಿಯು ಈಗಾಗಲೇ ಯಶಸ್ವಿ 200 ಸಂಚಿಕೆ ಪೂರೈಸಿದೆ. 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಾಯಕಿ ಗಿರಿಜಾ ಆಗಿ ಅಭಿನಯಿಸುತ್ತಿರುವ ಕೃತಿಕಾ ರವೀಂದ್ರ ಅವರು ತಮ್ಮ ಧಾರಾವಾಹಿ 200 ಸಂಚಿಕೆ ಪೂರೈಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
"ಭೂಮಿಗೆ ಬಂದ ಧಾರಾವಾಹಿ ಯಶಸ್ವಿ 200 ಸಂಚಿಕೆ ಪೂರೈಸಿದೆ. ನನಗಂತೂ ತುಂಬಾನೇ ಸಂತೋಷವಾಗುತ್ತಿದೆ. ಇಂತಹ ಒಂದು ಅದ್ಭುತವಾದ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ನನಗೆ ಖುಷಿಯಿದೆ. ಜೊತೆಗೆ ಅದರಲ್ಲೂ ನಾನು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಮಾಡುತ್ತಿರುವುದಕ್ಕೆ ಸಂತಸವಿದೆ. ಈ ಧಾರಾವಾಹಿಯಲ್ಲಿ ಇರುವ ಹೆಚ್ಚಿನವರು ಅನುಭವಿ ಕಲಾವಿದರುಗಳು. ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಸಿಕ್ಕಿರುವುದು ಪುಣ್ಯವೇ ಸರಿ" ಎಂದು ಫಿಲ್ಮಿಬೀಟ್ ಜೊತೆಗೆ ನಟಿ ಕೃತಿಕಾ ರವೀಂದ್ರ ಸಂತಸ ವ್ಯಕ್ತಪಡಿಸಿದ್ದಾರೆ .

"ಭೂಮಿಗೆ ಬಂದ ಭಗವಂತ ಧಾರಾವಾಹಿಯು ಇತರ ಧಾರಾವಾಹಿಗಳಿಗೆ ಹೋಲಿಸಿದರೆ ಕೊಂಚ ಭಿನ್ನ ಎಂದು ಹೇಳಬಹುದು. ಧಾರಾವಾಹಿಯ ಪ್ರತಿ ಸಂಚಿಕೆಯಲ್ಲಿಯೂ ಜನರಿಗೆ, ಸಮಾಜಕ್ಕೆ ಸಂದೇಶವನ್ನು ಕೂಡಾ ಕೊಡಲಾಗುತ್ತದೆ. ಜೊತೆಗೆ ವೀಕ್ಷಕರು ಕೂಡಾ ನಮ್ಮ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ." ಎಂದು ತಮ್ಮ ಸಂತಸವನ್ನು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಕೃತಿಕಾ ರವೀಂದ್ರ.
"ಇನ್ನು ನಾನು ಈ ಧಾರಾವಾಹಿಯಲ್ಲಿ ಗಿರಿಜಾ ಆಗಿ ನಟಿಸುತ್ತಿದ್ದೇನೆ. ಆ ಪಾತ್ರದ ಜೊತೆಗೆ ಧಾರಾವಾಹಿಯ ಬಗ್ಗೆಯೂ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಆಗ ನಿಜವಾಗಿಯೂ ತುಂಬಾ ಖುಷಿಯಾಗುತ್ತಿದೆ. ನಾನು ಈ ಪ್ರಾಜೆಕ್ಟ್‌ನ ಭಾಗ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಗಿರಿಜಾ ಪಾತ್ರ ನೆಮ್ಮದಿಯನ್ನು ನೀಡಿದೆ. ಇನ್ನು ಒಳ್ಳೆಯ ಚಾನೆಲ್‌ನ ಜೊತೆಗೆ ಉತ್ತಮ ಪ್ರೊಡಕ್ಷನ್ ಹೌಸ್‌ನಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೆ ಖುಷಿಯಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹಂಚಿಕೊಂಡಿದ್ದಾರೆ ಕೃತಿಕಾ ರವೀಂದ್ರ.

"ಮಧ್ಯಮ ಕುಟುಂಬಕ್ಕೆ ಸೇರಿದ ಗಿರಿಜಾ ತುಂಬಾ ಗಟ್ಟಿಗಿತ್ತಿ ಹೆಣ್ಣುಮಗಳು. ಗೃಹಿಣಿಯಾಗಿರುವ ಆಕೆ ಏನೇ ಕಷ್ಟ ಬಂದರೂ ಗಂಡ, ಮನೆ, ಮಕ್ಕಳನ್ನು ಯಾವತ್ತಿಗೂ ಬಿಟ್ಟು ಕೊಡುವುದಿಲ್ಲ. ಪರ್ಸನಲಿ ಆಗಿ ನಾನು ಗಿರಿಜಾ ಪಾತ್ರವನ್ನು ತುಂಬಾನೇ ಇಷ್ಟಪಡುತ್ತೇನೆ. ತುಂಬಾ ಇಷ್ಟಪಟ್ಟು ಆ ಪಾತ್ರದಲ್ಲಿ ನಟಿಸುತ್ತಿದ್ದೇನೆ. ದಿನ ಕಳೆದಂತೆ ಆ ಪಾತ್ರ ನನಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಒಟ್ಟಿನಲ್ಲಿ ಗಿರಿಜಾ ಪಾತ್ರ ಮಾಡುತ್ತಿರುವುದಕ್ಕೆ ನಾನು ತುಂಬಾನೇ ಲಕ್ಕಿ" ಎಂದು ಗಿರಿಜಾ ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಕೃತಿಕಾ ರವೀಂದ್ರ.


Click it and Unblock the Notifications











