Bhoomige Bandha Bhagavantha: ಹೆಣ್ಣಿನ ಮುಟ್ಟು ಶಾಪವಲ್ಲ ವರ ಎಂದ ಭಗವಂತ..!: ಏನಿದು ಭಗವಂತನ ಮೆಸೇಜ್!

By Shruthi Harish Gowda

ಇತ್ತೀಚಿನ ದಿನಗಳಲ್ಲಿ ಅತ್ಯಂತ ಚರ್ಚೆಗೆ ಬಂದ ವಸ್ತು ಎಂದರೆ ಅದು ಹೆಣ್ಣಿನ ಮುಟ್ಟು, ಹೆಣ್ಣು ಮುಟ್ಟಾಗುವುದೇ ಒಂದು ಮಹಾ ಅಪರಾಧ ಎಂದು ಬಿಂಬಿಸಲಾಗಿತ್ತು. ಕೆಲವೊಂದು ಸ್ವಾಮೀಜಿಗಳು ಹೆಣ್ಣು ಮುಟ್ಟಾದಾಗ ಅಡುಗೆ ಮಾಡಿಸಿಕೊಂಡು ತಿಂದರೆ ಅವರು ನರಕಕ್ಕೆ ಹೋಗುತ್ತಾರೆ ಎಂದೆಲ್ಲಾ ಮಾತನಾಡಿದರು. ಆಗ ಕೆಲವೊಂದಿಷ್ಟು ಹೆಣ್ಣು ಮಕ್ಕಳು ಬಹಳಷ್ಟು ಬೇಸರ ವ್ಯಕ್ತಪಡಿಸಿದರು.

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಹೆಣ್ಣಿನ ಮುಟ್ಟಿನ ಬಗ್ಗೆ ಒಂದು ಎಪಿಸೋಡ್ ಬಂದಿದೆ. ಜಗತ್ತಿನಲ್ಲಿ ಹೆಣ್ಣಿನ ಮುಟ್ಟಿನ ಬಗ್ಗೆ ಸಾಕಷ್ಟು ಅಸಹ್ಯದ ಮಾತುಗಳನ್ನ ಕೇಳುತ್ತಲೇ ಬಂದಿದ್ದೇವೆ. ಅದನ್ನು ಭಗವಂತನಿಂದಲೂ ಕೂಡ ಪರಿಹಾರ ಮಾಡಲು ಆಗಿಲ್ಲ. ಆದರೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ಜನರಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ಗಂಟೆಗಳ ಮಹಾ ಸಂಚಿಕೆಯ ಮೂಲಕ ಹೆಣ್ಣಿನ ಮುಟ್ಟಿನ ಕಷ್ಟವನ್ನು ಅರಿತುಕೊಳ್ಳಲು ಮಾಡಿರುವ ಎಪಿಸೋಡ್ ಬರುತ್ತಿದೆ.

Bhoomige Bandha Bhagavantha Kannada serial october 23rd written update

ಶಿವಪ್ರಸಾದ್ ಮನೆಯಲ್ಲಿ ಆಕೆಯ ಹೆಂಡತಿ ಹಾಗೂ ಆಕೆಯ ಮಗಳನ್ನೇ ಇಟ್ಟುಕೊಂಡು ಮುಟ್ಟಿನ ವಿಷಯವನ್ನು ಮನಮುಟ್ಟುವಂತೆ ಹೇಳಲಾಗುತ್ತಿದೆ. ಗಿರಿಜಾ ಮನೆಯಲ್ಲಿ ಮುಟ್ಟಾಗಿ ಹೊಟ್ಟೆ ನೋವಿನಿಂದ ತೊಳಲಾಡುತ್ತಾ ಇದ್ದಾಗ ಶಿವಪ್ರಸಾದ್‌ಗೆ ಹೆಂಡತಿಯ ತೊಡಲಾಟವನ್ನು ನೋಡಿ ಬಹಳಷ್ಟು ಬೇಸರವಾಗಿದೆ. ಇದರಿಂದ ಮನನೊಂದು ಒಬ್ಬನೇ ನಿಂತಿದ್ದಾನೆ. ಇನ್ನೂ ಇದೆ ವೇಳೆ ಅಲ್ಲಿಗೆ ಭಗವಂತ ಬಂದಿದ್ದು ಶಿವಪ್ರಸಾದ್ ಬಳಿ ಏನಾಯಿತು? ಎಂದು ಕೇಳಿದ್ದಾನೆ. ಇದಕ್ಕೆ ಶಿವಪ್ರಸಾದ್ ಸುಮ್ಮನೆ ನಿಂತುಕೊಂಡಿದ್ದಾನೆ.

ಹೆಂಡತಿಯ ನೋವಿಗೆ ಮಿಡಿದ ಶಿವಪ್ರಸಾದ್

ಮನೆಯಲ್ಲಿ ಶಿವಪ್ರಸಾದ್ ತನ್ನ ಹೆಂಡತಿ ಹೊಟ್ಟೆ ನೋವಿನಿಂದ ಕಣ್ಣೀರು ಹಾಕುತ್ತಿರುವುದಕ್ಕೆ ತಾನು ಸಹ ಕಣ್ಣೀರನ್ನು ಹಾಕಿದ್ದಾನೆ. ತಿಂಗಳಲ್ಲಿ ಈ ಮೂರು ದಿನ ಯಾವ ರೀತಿಯ ಯಾತನೆ ಅನುಭವಿಸುತ್ತಾರೆ ಎಂದು ಶಿವಪ್ರಸಾದ್ ಮನ ಮಿಡಿಯುತ್ತಿದೆ. ಮನೆಗೆ ಕಾಶಿಯ ಹೆಂಡತಿ ಬಂದಿದ್ದು ಗಿರಿಜಾಳನ್ನು ಬನ್ನಿ ಆಸ್ಪತ್ರೆಗೆ ಹೋಗೋಣ ಎಂದು ಕರೆದಿದ್ದಾಳೆ. ಆದರೆ ಗಿರಿಜಾ ಅಲ್ಲಿಗೆ ಹೋದರೆ ಏನು ಪ್ರಯೋಜನವಿಲ್ಲ, ಇದನ್ನೆಲ್ಲಾ ತಡೆದುಕೊಳ್ಳಬೇಕು ಎಂದು ವೈದ್ಯರು ಸಹ ಹೇಳುತ್ತಾರೆ ಎಂದು ಹೇಳಿದ್ದಾಳೆ. ನಂತರ ಗಿರಿಜಾಗೆ ಸಾಕಷ್ಟು ಫೋರ್ಸ್ ಮಾಡಿದರು ಸಹ ಗಿರಿಜಾ ಬರೋದಿಲ್ಲ

ಮುಟ್ಟಿನ ಬಗ್ಗೆ ಬೇಸರ ವ್ಯಕ್ತ

ಹೆಣ್ಣನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಹೆಣ್ಣನ್ನ ಆದಿಶಕ್ತಿಗೆ ಹೋಲಿಸಲಾಗುತ್ತದೆ. ಹೆಣ್ಣು ಸರ್ವ ಸೃಷ್ಟಿಕರ್ತಳು ಎಂದು ಸಹ ಹೇಳಲಾಗುತ್ತದೆ. ಈ ಮೂರು ದಿನವೂ ಸಹ ಹೆಣ್ಣಿನಲ್ಲಿರುವ ದೌರ್ಬಲ್ಯವನ್ನು ತೊಡಗಿಸಲು ಇರುವ ಅಸ್ತ್ರ ಎಂದು ಕಾಶಿಯ ಹೆಂಡತಿಗೆ ಗಿರಿಜಾ ಬಿಡಿಸಿ ಹೇಳುತ್ತಾ ಇದ್ದಾಳೆ. ಆದರೆ ಕಾಶಿಯ ಹೆಂಡತಿ ಗಂಡಸರು ಈ ಹೆಣ್ಣು ಮಕ್ಕಳನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾಳೆ. ಇದಕ್ಕೆ ಗಿರಿಜಾ ಅದು ಆ ರೀತಿಯಲ್ಲ ಎಂದು ಹೇಳುವ ಮೂಲಕ ಇದಕ್ಕೆಲ್ಲವೂ ಸಹ ತೆರೆ ಎಳೆಯಲಾಗಿದೆ.

Bhoomige Bandha Bhagavantha Kannada serial october 23rd written update

ಮುಟ್ಟು ಶಾಪವಲ್ಲ ವರ ಎಂದ ಭಗವಂತ

ಮಹಿಳೆಯರಿಗೆ ಮುಟ್ಟು ಎಂಬುವುದು ಶಾಪವಲ್ಲ ಅದು ಹೆಣ್ಣಿಗೆ ಇರುವ ವರ ಎಂದು ಭಗವಂತ ಹೇಳುತ್ತಿದ್ದಾನೆ. ಹೆಣ್ಣಿಗಿರುವ ಶಕ್ತಿಯನ್ನು ತೋರಿಸಲು ಪ್ರಕೃತಿ ಕೊಟ್ಟಿರುವ ವರ, ಅದನ್ನ ಜರಿಯುವುದು ಸರಿಯಾದದ್ದಲ್ಲ ಎಂದು ಭಗವಂತ ಹೇಳಿದ್ದಾನೆ. ಇದು ದೌರ್ಬಲ್ಯವಲ್ಲ ಎಂದು ಭಗವಂತ ಶಿವಪ್ರಸಾದ್‌ಗೆ ಹೇಳಿದ್ದು ಶಿವಪ್ರಸಾದ್ ಭಗವಂತನ ಮಾತನ್ನ ಕೇಳಿ ಖುಷಿಯಾಗಿದ್ದಾನೆ.

ಹೆಣ್ತನ ತೋರಿಸಲು‌ ಇರುವ ಅಸ್ತ್ರ

ಸಾಕಷ್ಟು ವರ್ಷಗಳಿಂದ ಜನರು ಸಹ ಮುಟ್ಟಿನ ಬಗ್ಗೆ ಅಸಹ್ಯ ಭಾವನೆ ಹೊಂದಿದ್ದಾರೆ. ಮುಟ್ಟಿನ ದಿನಗಳಲ್ಲಿ ಹೆಣ್ಣಿಗೆ ಸಾಂತ್ವನದ ಮಾತುಗಳು ಬೇಕಾಗುತ್ತದೆ. ಇದರ ಜೊತೆಗೆ ಆರೈಕೆಯು ಬೇಕಾಗುತ್ತದೆ ಎಂಬುದನ್ನು ತಿಳಿಯಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೂಡ ಹೆಣ್ಣಿನ ಮುಟ್ಟಿನ ಬಗ್ಗೆ ಇರುವ ಮನಸ್ಥಿತಿ ಯಾರಿಂದಲೂ ಸಹ ಹೋಗಲಾಡಿಸಲು ಸಾಧ್ಯವಾಗಿಲ್ಲ. ಇನ್ನಾದರೂ ಸಮಾಜದಲ್ಲಿರುವ ನಾಗರಿಕರು ಬದಲಾಗುತ್ತಾರಾ ನೋಡಬೇಕು.

More from Filmibeat

English summary
Bhoomige Bandha Bhagavantha Kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X