Bhoomige Bandha Bhagavantha: ಕಪಾಳೇಶ್ವರ ಬಾಬಾ ಬಳಿಗೆ ಬಂದ ಭಗವಂತ

By ಪ್ರಿಯಾ ದೊರೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಮನೆಯವರ ಮಾತನ್ನು ಕೇಳಿ ಶಿವಪ್ರಸಾದ್ ಆಫಿಸ್ ಹಣವನ್ನು ಉಳಿಸಿಕೊಳ್ಳಲು ಯತ್ನಿಸಿದ. ಅದರಿಂದಾಗಿ ದೊಡ್ಡ ಸಮಸ್ಯೆ ಅನ್ನು ಎದುರಿಸಿದ. ಸುಳ್ಳು ಬಿಲ್‌ಗಳನ್ನು ದಾಖಲಿಸಿದ ಶಿವಪ್ರಸಾದ್‌ಗೆ ದೇವರು ತೊಂದರೆ ಕೊಡದಿದ್ದರೂ ತಾನು ಮಾಡಿದ ತಪ್ಪಿನಿಂದ ಅಕೌಂಟೆಂಟ್ ಸಮಸ್ಯೆ ಎದುರಿಸಬೇಕಾಯ್ತು. ಆಫೀಸ್‌ನಲ್ಲಿ ಇದರಿಂದ ದೊಡ್ಡ ರಗಳೆ ಆಗುವಂತೆ ಆಯಿತು.

ಆಫಿಸಿನಲ್ಲಿ ಎಲ್ಲರ ಮುಂದೆ ಅಕೌಂಟೆಂಟ್ ಬೈಯಿಸಿಕೊಳ್ಳುತ್ತಿದ್ದದ್ದನ್ನು ನೋಡಿದ ಶಿವಪ್ರಸಾದ್‌ಗೆ ತಾನು ಮಾಡಿದ ತಪ್ಪಿನ ಅರಿವಾಯ್ತು. ಆದರೆ, ಪರಿಹಾರ ಸಿಗದೇ ಒದ್ದಾಡುತ್ತಿದ್ದ. ಎಷ್ಟು ಸಲ ಭಗವಂತನನ್ನು ಕರೆದರೂ ಬರಲಿಲ್ಲ. ಕೊನೆಗೆ ಶಿವಪ್ರಸಾದ್ ಆಫಿಸಿನ ಹಣದಲ್ಲಿ ಉಳಿಸಿದ್ದನ್ನು ಅಕೌಂಟೆಂಟ್‌ಗೆ ನೀಡಿ ತಾನು ಮಾಡಿದ್ದನ್ನೆಲ್ಲಾ ತಪ್ಪೊಪ್ಪಿಕೊಳ್ಳುತ್ತಾನೆ. ಕ್ಷಮೆ ಕೇಳುತ್ತಾನೆ. ಪಶ್ಚಾತಾಪ ಅನುಭವಿಸಿದ ಶಿವಪ್ರಸಾದ್‌ನನ್ನು ಭಗವಂತ ಬಂದು ಭೇಟಿಯಾಗುತ್ತಾನೆ.

Bhoomige Bandha Bhagavantha Serial 08th May episode written update

ಇಷ್ಟೆಲ್ಲಾ ಆದಮೇಲೆ ಶಿವಪ್ರಸಾದ್‌ಗೆ ಈಗ ಕಪಾಳೇಶ್ವರ ಬಾಬಾನ ಕಾಟ ಶುರುವಾಗಿದೆ. ಶಿವನ 108ನೇ ಅವತಾರದ ಹೆಸರಿನಲ್ಲಿ ಕಪಾಳೇಶ್ವರ ಬಾಬಾ ಬಂದಿದ್ದು, ಇವರಿಗೆ ಊರಿನಲ್ಲಿರುವವರೆಲ್ಲಾ ಭಕ್ತರೇ ಆಗಿದ್ದಾರೆ. ಆದರೆ ಶಿವಪ್ರಸಾದ್‌ಗೆ ಸಾಕ್ಷತ್ ಭಗವಂತನನ್ನೇ ನೋಡಿರುವ ಕಾರಣ ಈ ಡೋಂಗಿ ಬಾಬಾಗಳ ಮೇಲೆ ಯಾವುದೇ ಒಲವಿಲ್ಲ. ಆದರೆ ಶಿವಪ್ರಸಾದ್ ಮನೆಯವರು ಕೂಡ ಕಪಾಳೇಶ್ವರ ಬಾಬಾನ ಮೇಲೆ ಅಪಾರವಾದ ನಂಬಿಕೆ ಹಾಗೂ ಭಕ್ತಿಯನ್ನು ಇಟ್ಟುಕೊಂಡಿದ್ದಾರೆ.

ಬಾಬಾನ ಟ್ರೇಡ್ ಮಾರ್ಕ್

ಕಪಾಳೇಶ್ವರ ಬಾಬಾ ಬಳಿ ಏನೇ ಸಮಸ್ಯೆ ಇದ್ದರೂ ಪರಿಹಾರ ಸಿಗುತ್ತದೆಯಂತೆ. ಭಕ್ತರ ಕೆನ್ನೆಗೆ ಬಾರಿಸುವುದೇ ಕಪಾಳೇಶ್ವರ ಬಾಬಾನ ಆಶೀರ್ವಾದವಾಗಿದೆ. ಎಲ್ಲರೂ ಹೋಗಿ ಕೆನ್ನೆ ಮೇಲೆ ಕಪಾಳೇಶ್ವರ ಬಾಬಾನ ಟ್ರೇಡ್ ಮಾರ್ಕ್ ಅನ್ನು ಹಾಕಿಸಿಕೊಂಡು ಬರುತ್ತಿದ್ದಾರೆ. ಶಿವ ಪ್ರಸಾದ್, ಗಿರಿಜಾಳಿಗೆ ಬುದ್ಧಿ ಹೇಳಿದರೆ, ಅವಳೂ ಕೂಡ ಕೇಳುತ್ತಿಲ್ಲ. ಬದಲಿಗೆ ನೀವೂ ಬಂದು ಕಪಾಳೇಶ್ವರ ಬಾಬಾನ ಆಶೀರ್ವಾದವನ್ನು ಪಡೆಯಿರಿ ಎಂದು ಹೇಳಿದ್ದಾಳೆ. ಶಿವಪ್ರಸಾದ್ ತಂದೆಯೂ ಕೂಡ ಬಾಬಾ ಬಳಿ ಆಶೀರ್ವಾದ ಪಡೆದಿದ್ದಕ್ಕೆ ಮಂಡಿ ನೋವು ಮಾಯಾವಾಗಿದೆ ಎಂದು ಹೇಳಿದ್ದಾರೆ.

ಬಾಬಾ ಬಳಿಗೆ ಬಂದ ಭಗವಂತ

ಗಿರಿಜಾ ಬಲವಂತವಾಗಿ ಶಿವಪ್ರಸಾದ್‌ನನ್ನು ಕಪಾಳೇಶ್ವರ ಬಾಬನ ಬಳಿಗೆ ಕರೆದುಕೊಮಡು ಹೋಗಿ ಆಶಿರ್ವಾದವನ್ನು ಕೊಡಿಸುತ್ತಾಳೆ. ಒಬ್ಬೊಬ್ಬರೆ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿ, ಎರಡೂ ಕೆನ್ನೆಗಳಿಗೆ ಟ್ರೇಡ್ ಮಾರ್ಕ್ ಹಾಕಿಸಿದ್ದಾಳೆ. ಇದರಿಂದ ಶಿವಪ್ರಸಾದ್‌ಗೆ ಕೆನ್ನೆ ನೋವಿನ ಜೊತೆಗೆ ಸಿಟ್ಟು ಕೂಡ ಬಂದಿದೆ. ಬಾಬಾನ ಫೋಟೋಗೆ ಶಿವಪ್ರಸಾದ್ ಕಲ್ಲು ಎಸೆದಿದ್ದು, ಇದನ್ನು ನೋಡಿದ ಬಾಬಾ ಭಕ್ತರು ಅಟ್ಟಿಸಿಕೊಂಡು ಬರುತ್ತಾರೆ. ಅವರಿಂದ ತಪ್ಪಿಸಿಕೊಂಡ ಶಿವಪ್ರಸಾದ್ ಹಠ ಮಾಡಿ ಭಗವಂತನನ್ನು ಬಾಬಾ ಬಳಿಗೆ ಕರೆದುಕೊಂಡು ಹೋಗುತ್ತಾನೆ.

Bhoomige Bandha Bhagavantha Serial 08th May episode written update

ಭಗವಂತನಿಗೆ ಹೊಡೆದನಾ ಬಾಬಾ..?

ಕಪಾಳೇಶ್ವರ ಅಲ್ಲ ದೇವರ ಅವತಾರ ನಿಜವಾದ ಈಶ್ವರ ಇವನು ಎಂದು ಭಗವಂತನನ್ನು ತೋರಿಸುತ್ತಾನೆ. ಯಾರೂ ನಂಬುವುದಿಲ್ಲ. ಭಗವಂತ ಕೂಡ ನನಗೆ ಪವಾಡಗಳನ್ನು ಮಾಡಲು ಬರುವುದಿಲ್ಲ ಎಂದು ಹೇಳುತ್ತಾನೆ. ಕಪಾಳೇಶ್ವರ ಬಾಬಾ ಇಲ್ಲಿ ಬಾ ನಿನಗೆ ಆಶೀರ್ವಾದ ಕೊಡುತ್ತೇನೆ ಎಂದು ಹೇಳಿ ಕರೆಯುತ್ತಾನೆ. ಭಗವಂತನಿಗೆ ಕಪಾಳಕ್ಕೆ ಹೊಡೆಯಲು ಹೋದ ಬಾಬನ ಕೈ ಟ್ವಿಸ್ಟ್ ಆಗಿ ಸ್ವಾಧೀನವನ್ನು ಕಳೆದುಕೊಳ್ಳುತ್ತದೆ. ಇನ್ನು ಮನೆಯಲ್ಲಿ ಗಿರಿಜಾ, ಬಾಬಾನ ಭಜನೆಯನ್ನು ಮಾಡಿಸುತ್ತಿರುತ್ತಾಳೆ.

ಶಿವಪ್ರಸಾದ್‌ಗೆ ಇದೆಲ್ಲವನ್ನೂ ನೋಡಿದಷ್ಟು ಕೋಪ, ಬೇಸರ ಹೆಚ್ಚಾಗುತ್ತಿರುತ್ತದೆ. ಇವರಿಗೆಲ್ಲಾ ಬುದ್ಧಿ ಇಲ್ಲ ಎಂದು ಭಗವಂತನ ಬಳಿ ಮಾತನಾಡುತ್ತಾನೆ. ಇನ್ನು ಬೆಳಗೆದ್ದು ನೋಡಿದರೆ, ಶಿವಪ್ರಸಾದ್ ಮಗಳಿಗೆ ಮಾತು ನಿಂತು ಹೋಗಿರುತ್ತದೆ. ಇದನ್ನು ತಿಳಿದು ಮನೆಯವರೆಲ್ಲಾ ಕಂಗಾಲಾಗಿದ್ದಾರೆ. ಮಗಳಿಗೆ ಯಾಕೆ ಹೀಗಾಯ್ತು ಎಂಬುದು ತಿಳಿಯದೇ ಒದ್ದಾಡುತ್ತಿದ್ದಾರೆ.

More from Filmibeat

English summary
Bhoomige Bandha Bhagavantha Serial 08th May episode written update. here is detials about Girija is doing Baba's bhajan at home. This makes shivaprasad to get worried. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X