Bhoomige Bandha Bhagavantha: ಕಾಣೆಯಾದ ಶಿವಪ್ರಸಾದ್: ಮನೆಯಲ್ಲಿ ಆತಂಕ

By ಪ್ರಿಯಾ ದೊರೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ದೇವರು ಎಂದಿಗೂ ಮನುಷ್ಯರಿಂದ ಒಳ್ಳೆಯತನವನ್ನಷ್ಟೇ ಬಯಸುವುದು ಎಂದು ಭಗವಂತ ಹೇಳುತ್ತಿರುತ್ತಾರೆ. ಈ ಮಾತಿನಂತೆಯೇ ಶಿವಪ್ರಸಾದ್‌ಗೆ ಪ್ರತಿ ಬಾರಿ ಕಷ್ಟ ಬಂದಾಗ ಭಗವಂತ ಸಹಾಯ ಮಾಡುವುದಿಲ್ಲ. ಬದಲಿಗೆ ಶಿವಪ್ರಸಾದ್ ಕಷ್ಟ ಬಂದಾಗ ಹೇಗೆ ನಡೆದುಕೊಳ್ಳುತ್ತಾನೆ ಎಂಬುದನ್ನು ನೋಡುತ್ತಾನೆ. ಸುಖ ಬಂದಾಗ ಹೇಗೆ ನಡೆದುಕೊಳ್ಳುತ್ತಾನೆ ಎಂಬುದನ್ನು ಭಗವಂತ ಗಮನಿಸುತ್ತಿರುತ್ತಾನೆ.

ಶಿವಪ್ರಸಾದ್ ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳುತ್ತಾನೆ ಎಂಬುದರ ಮೇಲೆ ಆತನ ಕರ್ಮಗಳನ್ನು ನಿರ್ಧರಿಸುತ್ತಾನೆ. ಇನ್ನು ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಶಿವಪ್ರಸಾದ್ ಮಗಳು ಪ್ರಣಿತಾಳಿಗೆ ಮಾತೇ ನಿಂತು ಹೋಗಿರುತ್ತದೆ. ಇದರಿಂದ ಮನೆಯಲ್ಲಿ ಎಲ್ಲರೂ ಗಾಬರಿಯಾಗಿರುತ್ತಾರೆ. ಗಿರಿಜಾ ಕಪಾಳೇಶ್ವರ ಬಾಬನಿಗೆ ಶಿವಪ್ರಸಾದ್ ಬೈದಿದ್ದಕ್ಕೆ ಪ್ರಣಿತಾಳಿಗೆ ಮಾತು ನಿಂತು ಹೋಗಿದೆ ಎಂದು ಹೇಳುತ್ತಾಳೆ.

Bhoomige Bandha Bhagavantha Serial 10th May episode written update

ಶಿವಪ್ರಸಾದ್ ಬೇಡ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ ವೈದ್ಯರು ಏನೂ ಮಾಡದ ಕಾರಣ ಕಪಾಳೇಶ್ವರ ಬಾಬ ಬಳಿ ಹೋಗುತ್ತಾನೆ. ಆದರೆ, ಕಪಾಳೇಶ್ವರ ಬಾಬ ಪ್ರಣಿತಾಳನ್ನು ಕೆಟ್ಟ ದೃಷ್ಟಿಯಿಂದ ನೋಡಿದಾಗ ಸಹಿಸಿಕೊಳ್ಳದ ಶಿವಪ್ರಸಾದ್ ಬಾಬನ ಬಣ್ಣವನ್ನು ಬಯಲಿಗೆಳೆಯುತ್ತಾನೆ. ಈ ಮೂಲಕ ಶಿವಪ್ರಸಾದ್‌ಗೆ ಆತನ ಮಗಳೇ ಧ್ವನಿಯಾಗಿದಳು.

ಸದಾ ಹಣದ ಲೆಕ್ಕಾಚಾರ ಹಾಕುವ ಶಿವಪ್ರಸಾದ್

ಇನ್ನು ಶಿವಪ್ರಸಾದ್ ಸದಾ ಹಣದ ಲೆಕ್ಕಾಚಾರ ಹಾಕುತ್ತಿರುತ್ತಾನೆ. ತನ್ನ ಕುಟುಂಬದ ನೊಗವನ್ನು ಸಾಗಿಸಲು ಕಷ್ಟ ಪಡುತ್ತಿರುತ್ತಾನೆ. ತನಗೆ ಬರುವ ಸಂಬಳದಲ್ಲಿ ಇಡೀ ತಿಂಗಳು ಸಂಬಾಳಿಸುವುದೇ ಕಷ್ಟ. ಹೀಗಾಗಿ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಅವನ ಆಫೀಸಿನಲ್ಲಿ ಕೊಲೀಗ್ ಒಬ್ಬರು ಒಂದು ಕಾಲು ಲಕ್ಷದ ಬ್ರ್ಯಾಂಡೆಡ್ ಫೋನ್ ಅನ್ನು ಖರೀದಿಸಿದ್ದಾಳೆ. ಇದನ್ನು ನೋಡಿದ ಶಿವಪ್ರಸಾದ್ ಇಷ್ಟು ಕಾಸ್ಟ್ಲಿ ಫೋನ್ ಅಗತ್ಯವಿದೆಯಾ ಎಂದು ಕೇಳುತ್ತಾನೆ.

ಎಲ್ಲರೂ ಬ್ರ್ಯಾಂಡ್ ಬಗ್ಗೆ ಹೇಳುತ್ತಾರೆ. ಅದಕ್ಕೆ ಶಿವಪ್ರಸಾದ್ ಏನಾದರೇನು, ಹಲೋ ಎನ್ನುವುದಕ್ಕೆ ಅಷ್ಟು ಅಧಿಕ ಮೊತ್ತದ ಫೋನ್ ಖರೀದಿಸುವ ಅಗತ್ಯವಿಲ್ಲ ಎನಿಸುತ್ತದೆ ಎಂದು ಹೇಳುತ್ತಾನೆ. ಶಿವಪ್ರಸಾದ್ ಮಾತನ್ನು ಕೇಳಿದವರು ನಿಜ ಅಲ್ವಾ ಎಂದು ಎಲ್ಲರೂ ಆಲೋಚಿಸುತ್ತಾರೆ.

Bhoomige Bandha Bhagavantha Serial 10th May episode written update

ಕಾಣೆಯಾಗಿರುವ ಶಿವಪ್ರಸಾದ್

ಇನ್ನು ಆಫೀಸಿಗೆ ಶಿವಪ್ರಸಾದ್‌ನ ಹುಡುಕಿಕೊಂಡು ಯಾರೋ ಬರುತ್ತಾರೆ. ಅವರು ಯಾರು ಎಂಬುದು ಮಾತ್ರ ಯಾರಿಗೂ ಗೊತ್ತಿರುವುದಿಲ್ಲ. ಆ ವ್ಯಕ್ತಿಯನ್ನು ಮಾತನಾಡಿಸಲು ಹೋದ ಶಿವಪ್ರಸಾದ್ ಮತ್ತೆ ವಾಪಸ್ ಬರುವುದೇ ಇಲ್ಲ. ತಡ ರಾತ್ರಿ ಆದರೂ ಕೂಡ ಶಿವಪ್ರಸಾದ್ ಮನೆಗೆ ಬಂದಿರುವುದಿಲ್ಲ. ಎಷ್ಟೇ ಫೋನ್ ಮಾಡಿದರೂ ಫೋನ್ ಸ್ವಿಚ್ ಆಫ್ ಎಂದು ಬರುತ್ತಿರುತ್ತದೆ. ಇದರಿಂದ ಗಿರಿಜಾ ಗಾಬರಿಯಾಗುತ್ತಾಳೆ. ರಾಮಯ್ಯನಿಗೆ ಫೋನ್ ಮಾಡಿ ವಿಚಾರಿಸದರೂ ಏನೂ ತಿಳಿಯುವುದಿಲ್ಲ.

ಆತಂಕಗೊಂಡ ಮನೆಯವರು

ಶಿವಪ್ರಸಾದ್ ಮನೆಗೆ ಬಾರದ ಕಾರಣ ಗಿರಿಜಾ ಆತಂಕಗೊಳ್ಳುತ್ತಾಳೆ. ಶಿವಪ್ರಸಾದ್ ತಂದೆ ಮಗನನ್ನು ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿ ಹೊರಡುತ್ತಾನೆ. ರಾಮಯ್ಯ ಹಾಗೂ ಕಾಶಿ ಎಲ್ಲರೂ ಬಂದು ಗಿರಿಜಾ ಬಳಿ ವಿಚಾರಿಸುತ್ತಾರೆ. ಗಿರಿಜಾ ಶಿವಪ್ರಸಾದ್ ಕಾಣದೇ ಇರುವುದಕ್ಕೆ ಆತಂಕಗೊಂಡಿರುವುದನ್ನು ನೋಡಿದ ಕಾಶಿ ಶಿವಪ್ರಸಾದ್ ಎಲ್ಲಿ ಹೋಗಿದ್ದಾನೆ ಎಂಬುದನ್ನು ಹುಡುಕೋಣ. ನಾನಿದ್ದೀನಿ ಎಂದು ಹೇಳುತ್ತಾನೆ.

ಇದ್ದಕ್ಕಿದ ಹಾಗೆ ಶಿವಪ್ರಸಾದ್ ಕಾಣೆಯಾಗಿರುವುದು ಎಲ್ಲರಿಗೂ ಶಾಕ್ ಆಗುವಂತೆ ಮಾಡಿದೆ. ಶಿವಪ್ರಸಾದ್ ಮಾಡಿದ ಸಾಲಗಳೇ ಅವನಿಗೆ ಉರುಳಾಗಿದೆಯಾ ಎಂಬ ಪ್ರಶ್ನೆ ಎದ್ದಿದೆ. ಈಗ ಭಗವಂತ ಶಿವಪ್ರಸಾದ್ ಗೆ ಯಾವ ರೀತಿ ಸಹಾಯ ಮಾಡುತ್ತಾನೋ ಕಾದು ನೋಡಬೇಕಿದೆ.

More from Filmibeat

English summary
Bhoomige Bandha Bhagavantha Serial 10th May episode written update. here is detials about shivaprasad lost some where and girija is worried for this. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X