Bhoomige Bandha Bhagavantha: ಲಂಚ ಕೊಡಲು ಒಪ್ಪದ ಶಿವಪ್ರಸಾದ್‌ಗೆ ಭಗವಂತ ಸಹಾಯ ಮಾಡ್ತಾನಾ ?

By ಪ್ರಿಯಾ ದೊರೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಶಿವಪ್ರಸಾದ್‌ಗೆ ಭಗವಂತನ ಸ್ನೇಹ ಸಿಕ್ಕಿದೆ. ತನ್ನ ಒಳ್ಳೆಯತನವನ್ನು ಮೆಚ್ಚಿದ ಈಶ್ವರನೇ ಭೂಮಿಗೆ ಇಳಿದು ಬಂದಿದ್ದಾನೆ. ಶಿವಪ್ರಸಾದ್‌ಗೆ ಸ್ನೇಹಿತನಾಗಿ ನಿಂತಿರುವ ಭಗವಂತ, ಅಡ್ಡದಾರಿ ಹಿಡಿಯದೆ. ಒಳ್ಳೆಯ ದಾರಿಯಲ್ಲೇ ನಡೆಯುವಂತೆ ಪ್ರತೀ ಹಂತದಲ್ಲೂ ಪಾಠ ಹೇಳಿ ಕೊಡುತ್ತಿದ್ದಾನೆ. ಶಿವಪ್ರಸಾದ್ ಗೂ ಭಗವಂತ ಸಿಕ್ಕಿರುವುದು ಖುಷಿ ಇದೆ.

ಮನೆಯ ಜಂಜಾಟದಲ್ಲಿ ಬೆಂಡಾಗಿದ್ದಾನೆ. ಯಾವಾಗ ನನ್ನ ಬದುಕು ಸುಧಾರಿಸುತ್ತೋ ಎಂಬುದೇ ಶಿವಪ್ರಸಾದ್ ಯೋಚನೆಯಾಗಿದೆ. ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಈಗ ಎಲೆಕ್ಷನ್ ಸಮಯ. ಒಂದೊಂದು ಪಕ್ಷವೂ ಆಮಿಷಗಳನ್ನು ಒಡ್ಡಿ ಮತ ಕೇಳುತ್ತಿವೆ. ಮನೆಯನ್ನು ಕಷ್ಟದಲ್ಲೇ ದೂಕುತ್ತಿರುವ ಗಿರಿಜಾ, ಯಾವ ಪಕ್ಷದವರೂ ಏನೇ ಕೊಟ್ಟರೂ ನಿಮಗೆ ವೋಟ್ ಹಾಕುತ್ತೇನೆ ಎಂದು ಹೇಳಿ ಫ್ಯಾನ್, ಮಿಕ್ಸಿ, ಕುಕ್ಕರ್ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದಾಳೆ.

Bhoomige Bandha Bhagavantha Serial 13th April episode written update

ಗಿರಿಜಾ ನಡೆಯನ್ನು ಶಿವಪ್ರಸಾದ್ ಒಪ್ಪಿಕೊಳ್ಳುತ್ತಿಲ್ಲ. ಎಲ್ಲವನ್ನೂ ವಾಪಸ್ ಮಾಡುವಂತೆ ಹೇಳಿದ್ದಾನೆ. ಅವರು ಕೊಟ್ಟ ಮಿಕ್ಸಿಯಲ್ಲಿ ದೋಸೆ ಹಿಟ್ಟು ರುಬ್ಬಿ ಗಿರಿಜಾ ದೋಸೆಯನ್ನು ತಿಂಡಿ ಮಾಡಿರುತ್ತಾಳೆ. ಯಾರೋ ಕೊಟ್ಟ ಮಿಕ್ಸಿಯಲ್ಲಿ ಹಿಟ್ಟು ರುಬ್ಬಿದ್ದಕ್ಕೆ ತಿಂಡಿ ತಿನ್ನದೇ ಹೋಗುತ್ತಾನೆ. ಶಿವಪ್ರಸಾದ್ ಮನೆಯವರಿಗೆ, ಕಛೇರಿಯಲ್ಲಿ ಎಲ್ಲರಿಗೂ ಅಭ್ಯರ್ಥಿಗಳ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ ಎಂದು ಬುದ್ಧಿ ಹೇಳುತ್ತಲೇ ಇರುತ್ತಾನೆ.

ಯಾರೂ ಕೂಡ ಶಿವಪ್ರಸಾದ್ ಮಾತು ಕೇಳುತ್ತಿಲ್ಲ. ಬೇಕರಿ ಅಂಗಡಿಯ ಬಸ್ಯ, ಪವ್ಯ ಅಂತೂ ಯಾವ ಪಕ್ಷ ಬರುತ್ತೋ ಆ ಪಕ್ಷದವರಿಗೆ ಸಪೋರ್ಟ್ ಮಾಡಿ ಹಣ ಪೀಕುತ್ತಿದ್ದಾರೆ. ಇದನ್ನು ನೋಡಿದ ಶಿವಪ್ರಸಾದ್‌ಗೆ ಸಹಿಸೋದಕ್ಕೆ ಆಗುವುದಿಲ್ಲ. ಹಾಗಾಗಿ ಇಬ್ಬರಿಗೂ ಶಿವಪ್ರಸಾದ್ ಬುದ್ಧಿ ಹೇಳುತ್ತಾನೆ. ಇದನ್ನು ಕೇಳುವುದೇ ಇಲ್ಲ.

ಇನ್ನು ಗಿರಿಜಾ ಯಾವಾಗಲೂ ಶಿವಪ್ರಸಾದ್ ಗೆ ವಿಠ್ಠಲನನ್ನ ನೋಡಿ ಕಲಿಯಿರಿ ಎಂದು ಹೋಲಿಸಿ ಮಾತನಾಡುತ್ತಿರುತ್ತಾಳೆ. ಇದರಿಂದ ಶಿವಪ್ರಸಾದ್‌ಗೂ ಬೇಸರ ವಾಗಿರುತ್ತದೆ. ಇನ್ನು ಇದೇ ಸಂದರ್ಭದಲ್ಲಿ ವಿಠ್ಠಲನ ಹೆಸರು ಹೇಳಿಕೊಂಡು ಯಾರೋ ಬಂದು ಒಂದಷ್ಟು ಬಾಕ್ಸ್‌ಗಳನ್ನು ಗಿರಿಜಾ ಮನೆಯಲ್ಲಿ ಇಟ್ಟಿರುತ್ತಾರೆ. ಶಿವಪ್ರಸಾದ್ ಏನಿದು ಎಂದು ಕೇಳುತ್ತಾನೆ. ಆಗ ಅದು ವಿಠ್ಠಲರದ್ದು, ಎರಡು ದಿನ ನಮ್ಮ ಮನೆಯಲ್ಲಿ ಇದ್ದರೆ, ದಿನಕ್ಕೆ 15 ಸಾವಿರದಂತೆ ಬಾಡಿಗೆ ಸಿಗುತ್ತೆ ಎಂದು ಹೇಳುತ್ತಾಳೆ.

Bhoomige Bandha Bhagavantha Serial 13th April episode written update

ಅಷ್ಟೆಲ್ಲಾ ಹಣ ಕೊಡುತ್ತಾರೆ ಎಂದರೆ, ಇದರಲ್ಲಿ ಅಕ್ರಮವಾದದ್ದು ಏನೋ ಇದೆ ಬೇಡ ವಾಪಸ್ ಕಳಿಸು ಎಂದು ಹೇಳಿದರೂ ಕಳಿಸುವುದಿಲ್ಲ. ಪೊಲೀಸರು ಬಂದು ಈ ಬಾಕ್ಸ್ ಗಳಲ್ಲಿ ಹಣ ಇರುವುದನ್ನು ನೋಡಿ ಗಿರಿಜಾ ಹಾಗೂ ಅವರ ಮಾವನನ್ನು ಅರೆಸ್ಟ್ ಮಾಡುತ್ತಾರೆ. ಶಿವಪ್ರಸಾದ್ ಪೊಲೀಸ್ ಠಾಣೆಗೆ ಬಂದು ಎಷ್ಟೇ ಕೇಳಿದರೂ ಬಿಡುವುದಿಲ್ಲ. ಕಾಶಿನಾಥ್ ಬಂದು ಪೊಲೀಸರಿಗೆ ಗಿರಿಜಾ ಪರ ಮಾತನಾಡಿ ಬಿಡಿಸಿಕೊಂಡು ಹೋಗುತ್ತಾನೆ. ಕಾಶಿ, ಪೊಲೀಸರಿಗೆ 50 ಸಾವಿರ ಲಂಚ ಕೊಡು. ಅವರು ಕೇಸ್‌ನಿಂದ ಖುಲಾಸೆ ಮಾಡುತ್ತಾರೆ. ಆಗ ನಿನಗೆ ಸಮಸ್ಯೆ ಆಗುವುದಿಲ್ಲ ಎಂದು ಹೇಳುತ್ತಾನೆ.

ಶಿವಪ್ರಸಾದ್ ಮನಸ್ಸು ಇದಕ್ಕೆ ಒಪ್ಪುವುದಿಲ್ಲ. ಭಗವಂತ ಕೂಡ ಶಾರ್ಟ್ ಕಟ್‌ನಲ್ಲಿ ಹೋಗಬೇಡ. ನ್ಯಾಯಕ್ಕೆ ಯಾವತ್ತಿದ್ದರೂ ಬೆಲೆ ಇದೆ ಎಂದು ಹೇಳಿರುತ್ತಾರೆ. ಹೀಗಾಗಿ ಶಿವಪ್ರಸಾದ್ ಲಂಚ ಕೊಡಲು ಒಪ್ಪುವುದಿಲ್ಲ. ಇದರಿಂದ ಮನೆಯವರಿಗೆಲ್ಲಾ ಸಂಕಷ್ಟ ಎದುರಾಗಿದೆ. ಈ ಸಂಕಷ್ಟದಿಂದ ಶಿವಪ್ರಸಾದ್‌ನನ್ನು ದೇವರು ಪಾರು ಮಾಡುತ್ತಾನಾ..? ಇಲ್ಲವೇ ಶಿವಪ್ರಸಾದ್ ಬೇರೆ ದಾರಿ ಇಲ್ಲದೇ, ಅಡ್ಡದಾರಿ ಹಿಡಿಯುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Bhoomige Bandha Bhagavantha Serial 13th April episode written update. Here is details about shivaprasad is under trouble. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X