Bhoomige Bandha Bhagavantha: ಕೊನೆಗೂ ಕನಸಿನ ಮನೆಯನ್ನು ಖರೀದಿಸಿದ ಶಿವಪ್ರಸಾದ್

By ಪ್ರಿಯಾ ದೊರೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಸದಾ ಹಣಕ್ಕಾಗಿ ಒದ್ದಾಡುವ ಶಿವಪ್ರಸಾದ್ ತಾನಿರುವ ಬಾಡಿಗೆ ಮನೆಯನ್ನೇ ಖರೀದಿ ಮಾಡಲು ಮುಂದಾಗಿದ್ದಾನೆ. ತಾನಾಯ್ತು ತನ್ನ ಕೆಲಸವಾಯ್ತು ಎಂದು ಬಡತನದಲ್ಲೂ ಪ್ರಾಮಾಣಿಕತೆಯಿಂದ ಸುಳ್ಳು ಹೇಳದೇ ಬದುಕುವ ಶಿವಪ್ರಸಾದ್‌ಗೆ ಜೀವನವನ್ನು ಈಗ ನಡೆಯುತ್ತಿರುವ ಹಾಗೆಯೇ ನಡೆಸುವ ಹಂಬಲ. ಆತನಿಗೆ ಭಗವಂತನ ಬಲವಿದೆ.

ಆದರೆ, ಶಿವಪ್ರಸಾದ್ ಹೆಂಡತಿ, ಮಕ್ಕಳಿಗೆ ಬೇರೆಯವರಂತೆ ಬೆಳೆಯಬೇಕು. ಸ್ವಂತ ಮನೆ ಮಾಡಿಕೊಂಡು ಕಂಡಿದ್ದನ್ನೆಲ್ಲಾ ಖರೀದಿ ಮಾಡಬೇಕು, ಐಷಾರಾಮಿ ಜೀವನ ಸಾಗಿಸಬೇಕು ಅನ್ನೋ ಆಸೆ. ಹೇಗೋ ಏನೋ ಶಿವಪ್ರಸಾದ್ ಹೆಂಡತಿ ಏನೇ ಆಸೆ ಇದ್ದರು, ಇರುವದರಲ್ಲಿ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುತ್ತಾಳೆ. ಆಗಾಗ ಶಿವಪ್ರಸಾದ್‌ಗೆ ಬೇರೆಯವರನ್ನು ನೋಡಿ ಕಲಿಯಿರಿ ಎಂದು ಚುಚ್ಚಿ ಮಾತನಾಡುತ್ತಾಳೆ. ಇನ್ನು ಹೀಗಿರುವಾಗ ತಿಂಗಳ ಕೊನೆಯಲ್ಲಿ ಹಣವೇ ಇಲ್ಲದೇ, ಮನೆಯನ್ನು ನಡೆಸಲು ಶಿವಪ್ರಸಾದ್ ಹಾಗೂ ಗಿರಿಜಾ ಇಬ್ಬರೂ ಪರದಾಡುತ್ತಾರೆ.

Bhoomige Bandha Bhagavantha Serial 21st April episode written update

ಕೇವಲ 800 ರೂಪಾಯಿಯಲ್ಲಿ ಇಡೀ ವಾರ ಮನೆಯನ್ನು ನಡೆಸಬೇಕು ಎಂದಿರುವಾಗಲೇ ಇವರ ಮನೆಗೆ ನೆಂಟರು ಬರುತ್ತಾರೆ. ಅವರಂತೂ ಒಂದೇ ದಿನಕ್ಕೆ ಭರ್ಜರಿ ಅಡುಗೆಯನ್ನು ಕೇಳಿ, ಕೈಯಲ್ಲಿದ್ದ ಹಣವನ್ನೆಲ್ಲಾ ಖಾಲಿ ಮಾಡಿಸುತ್ತಾರೆ. ಎರಡು ದಿನಗಳ ನೋಡಿಕೊಳ್ಳಲಾಗದೇ, ಕೊನೆಗೆ ಶಿವಪ್ರಸಾದ್ ಅವರಿಗೆ ದಯವಿಟ್ಟು ಹೊರಡಿ ಎಂದು ಹೇಳಿ ಕಳಿಹಿಸುತ್ತಾನೆ. ಕೊನೆಗೆ ಮನೆಗೆ ಬಂದ ನೆಂಟರಿಗೆ ಬೇಸರ ಮಾಡಿದೆ ಎಂದು ಪಶ್ಚಾತ್ತಾಪವನ್ನೂ ಪಡುತ್ತಾನೆ.

ಇನ್ನು ಬಾಡಿಗೆ ಮನೆಯಲ್ಲಿರುವ ಶಿವಪ್ರಸಾದ್‌ಗೆ ಮತ್ತೊಂದು ಸಂಕಷ್ಟ ಎದುರಾಗುತ್ತದೆ. ಮನೆಯ ಮಾಲೀಕ ಬಂದು, ಈ ಮನೆಯನ್ನು ಮಾರಾಟ ಮಾಡುತ್ತಿದ್ದೇನೆ. ಹಾಗಾಗಿ ಎರಡು ತಿಂಗಳಲ್ಲಿ ಮನೆಯನ್ನು ಖಾಲಿ ಮಾಡಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಶಾಕ್ ಆದ ಶಿವಪ್ರಸಾದ್, ಈ ಮನೆಯಲ್ಲಿ ನಮಗೆ ಎಲ್ಲಾ ರೀತಿಯ ಅನುಕೂಲವಿದೆ ಎಂದು ಹೇಳುತ್ತಾನೆ. ಈ ಮಾತಿಗೆ ಮಾಲೀಕ ನೀವೇ ಬೇಕಿದ್ದರೆ, 55 ಲಕ್ಷ ಕೊಟ್ಟು ಖರೀದಿ ಮಾಡಿ ಎಂದು ಹೇಳುತ್ತಾನೆ. ಇದೆಲ್ಲಾ ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಶಿವಪ್ರಸಾದ್ ಸುಮ್ಮನಾಗುತ್ತಾನೆ.

ಆಫೀಸಿನಲ್ಲಿ ಅಟೆಂಡರ್ ರಾಮಯ್ಯ ಕೂಡ ಮನೆಯನ್ನು ಕಟ್ಟಿ ಗೃಹಪ್ರವೇಶಕ್ಕೆ ಆಹ್ವಾನ ನೀಡುತ್ತಾನೆ. ಇದನ್ನು ತಿಳಿದು ಶಿವಪ್ರಸಾದ್‌ಗೆ ತನ್ನ ಬಗ್ಗೆ ತನಗೇ ಬೇಸರವಾಗುತ್ತದೆ. ಇದೇ ವೇಳೆಗೆ ಬ್ಯಾಂಕ್‌ನಿಂದ ಹೋಮ್ ಲೋನ್ ಫೋನ್ ಕಾಲ್ ಬರುತ್ತದೆ. ಆಗ ಭರವಸೆ ಬಂದ ಶಿವಪ್ರಸಾದ್ ಮನೆಯನ್ನು ಖರೀದಿ ಮಾಡಲು ಲೆಕ್ಕಾಚಾರ ಹಾಕುತ್ತಾನೆ. ಆಗ ಆತನಿಗೆ ಎಂಟು ಲಕ್ಷ ಪಿಎಫ್ ಹಣ ಹಾಗೂ ಗಿರಿಜಾ ಕೊಡುವ ಒಡವೆ ಮತ್ತು ತಂದೆಯ ಐದು ಲಕ್ಷ ರೂಪಾಯಿ ಹಣವನ್ನು ಕೂಡಿಸಿ ಒಟ್ಟು 15 ಲಕ್ಷವಾಗುತ್ತದೆ ಎಂದು ಲೆಕ್ಕಾ ಹಾಕುತ್ತಾನೆ.

Bhoomige Bandha Bhagavantha Serial 21st April episode written update

ಶಿವಪ್ರಸಾದ್ ಬ್ಯಾಂಕ್‌ಗೆ ಹೋಗಿ ಲೋನ್‌ಗಾಗಿ ಅಪ್ಲೈ ಮಾಡುತ್ತಾನೆ. ಹತ್ತು ದಿನದಲ್ಲಿ ಲೋನ್ ಸಿಗುತ್ತೆ ಎಂಬ ಭರವಸೆಯಲ್ಲಿ ಮನೆ ಮಾಲೀಕರಿಗೆ ಹದಿನೈದು ಲಕ್ಷ ರೂಪಾಯಿ ಅನ್ನು ನೀಡಿ ಖಾಲಿ ಚೆಕ್ ಅನ್ನು ಕೊಡುತ್ತಾನೆ. ಆದರೆ ಬ್ಯಾಂಕ್‌ನಲ್ಲಿ ಶಿವಪ್ರಸಾದ್‌ಗೆ ಲೋನ್ ಸಿಗುವುದಿಲ್ಲ. ಆಗ ಶಿವಪ್ರಸಾದ್‌ಗೆ ಆತಂಕ ಹೆಚ್ಚಾಗುತ್ತದೆ. ಭಗವಂತ ಭರವಸೆಯನ್ನು ಕೊಡುತ್ತೀನಿ. ನನ್ನ ಬಳಿ ಹಣವಿಲ್ಲ ಎಂದು ಹೇಳಿ ಬಿಡುತ್ತಾನೆ.

ಮನೆ ಮಾಲೀಕ ಬಂದು ಮನೆಯನ್ನು ಖಾಲಿ ಮಾಡುವಂತೆ ಹೇಳುತ್ತಾನೆ. ಬೇರೆ ದಾರಿ ಇಲ್ಲದೇ, ಶಿವಪ್ರಸಾದ್ ಮನೆಯನ್ನು ಖಾಲಿ ಮಾಡಲು ಮುಂದಾಗುತ್ತಾನೆ. ಇದೇ ಸಂದರ್ಭದಲ್ಲಿ ಅಂದು ಮನೆಗೆ ಬಂದ ಅತಿಥಿಗಳಿಗೆ ಸತ್ಕರಿಸಿದವರು ಲೋನ್ ಸಿಗುವಂತೆ ಮಾಡಿ ಶಿವಪ್ರಸಾದ್‌ಗೆ ಮನೆ ಸಿಗುವಂತೆ ಮಾಡುತ್ತಾರೆ. ಕೊನೆಗೂ ಶಿವಪ್ರಸಾದ್ ಮನೆ ಖರೀದಿಸಬೇಕು ಎಂಬ ಆಸೆಯನ್ನು ನೆರವೇರಿಸಿಕೊಂಡಿದ್ದಾನೆ.

More from Filmibeat

English summary
Bhoomige Bandha Bhagavantha Serial 21st April episode written update. Here is details about Shivprasad is planned to buy home but he is not getting loan. Now he is in trouble. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X