Bhoomige Bandha Bhagavantha: ಕೆಲಸ ಕಳೆದುಕೊಂಡ ಶಿವಪ್ರಸಾದ್ ಕೈ ಹಿಡಿಯುತ್ತಾನಾ ಶಂಕರ ಮಹದೇವ..?

By ಪ್ರಿಯಾ ದೊರೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಶಿವಪ್ರಸಾದ್ ನಿತ್ಯ ಸಂಸಾರ, ಕೆಲಸದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾನೆ. ಸಾಮಾನ್ಯ ಮಿಡಲ್ ಕ್ಲಾಸ್ ಕುಟುಂಬದ ಜವಾಬ್ದಾರಿ ಹೊತ್ತಿರುವ ಶಿವಪ್ರಸಾದ್ ಸಂಕಟ ಕೇಳೋರೇ ಇಲ್ಲ.

ಯಾರಿಗೂ ಏನೂ ಮಾತನಾಡದ ಶಿವಪ್ರಸಾದ್, ಆಫೀಸಿನಲ್ಲಿ ಮ್ಯಾನೇಜರ್, ಮನೆಯಲ್ಲಿ ಹೆಂಡತಿ ಏನೇ ಹೇಳಿದರೂ ಕೋಲೆ ಬಸವನಂತೆ ತಲೆ ಆಡಿಸುತ್ತಿರುತ್ತಾನೆ.

ಆದರೆ, ಗುಡ್ಡದ ತುದಿಗೆ ಬಂದು ಮರಕ್ಕೆ ಹೆಂಡತಿ ಹಾಗೂ ಮ್ಯಾನೇಜರ್ ಫೋಟೋ ಅಂಟಿಸಿ, ಮನದಲ್ಲಿನ ಮಾತುಗಳನ್ನೆಲ್ಲಾ ಆಡುತ್ತಾ, ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುತ್ತಾನೆ.

ಲೆಕ್ಕಾಚಾರದ ಮಡದಿ

ಲೆಕ್ಕಾಚಾರದ ಮಡದಿ

ಒಂದೊಂದು ರೂಪಾಯಿಗೂ ಲೆಕ್ಕಾಚಾರ ಹಾಕುವ ಹೆಂಡತಿಯ ಜೊತೆಗೆ ದಿನಾ ಏಗುವ ಶಿವಪ್ರಸಾದ್. ಎಲ್ಲದಕ್ಕೂ ಹೆಂಡತಿ ಪಕ್ಕದ ಮನೆಯ ವಿಠ್ಠಲನನ್ನು ಪ್ರತಿಯೊಂದಕ್ಕೂ ಉದಾಹರಣೆ ಕೊಡುತ್ತಾ ಶಿವಪ್ರಸಾದ್‌ನನ್ನು ಹಂಗಿಸುತ್ತಿರುತ್ತಾಳೆ. ಇದರಿಂದ ಬೇಸರವಾದರೂ ಕೂಡ ಶಿವಪ್ರಸಾದ್ ತನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮೌನವಾಗಿಯೇ ಇರುತ್ತಾನೆ. ಹೆಂಡತಿಯ ಮೇಲೆ ಕೂಗಾಡುವುದಿಲ್ಲ. ಅಪ್ಪನ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮಗಳು, ಇನ್ನು ಪರಿಸ್ಥಿತಿ ಅರ್ಥವಾಗದ ಮಗ. ಇನ್ನು ಮಗನ ಕಷ್ಟಕ್ಕೆ ಸ್ಪಂದಿಸಲಾಗದೇ ಒದ್ದಾಡುವ ಶಿವಪ್ರಸಾದ್ ತಂದೆ.

ಸದಾ ಬೈಯಿಸಿಕೊಳ್ಳುವ ಶಿವ ಪ್ರಸಾದ್

ಸದಾ ಬೈಯಿಸಿಕೊಳ್ಳುವ ಶಿವ ಪ್ರಸಾದ್

ಶಿವಪ್ರಸಾದ್ ಇನ್ನರ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನರ್‌ವೇರ್‌ಗಳು ಸೇಲ್ ಆಗುತ್ತಿಲ್ಲ ಎಂದು ನಿತ್ಯ ಬೈಯಿಸಿಕೊಳ್ಳುತ್ತಿರುತ್ತಾನೆ. ಮ್ಯಾನೇಜರ್ ಲಿಂಗರಾಜು ಅವರನ್ನು ಬೇರೆ ಕೆಲಸಗಾರರು ಹೊಗಳಿ, ಬಕೆಟ್ ಹಿಡಿದು, ಸಂಬಳ ಪಡೆದರೆ, ಶಿವಪ್ರಸಾದ್ ಇದ್ದದ್ದನ್ನು ಇದ್ದ ಹಾಗೆ ಹೇಳಿ ಬೈಯಿಸಿಕೊಳ್ಳುತ್ತಾನೆ. ಇನ್ನು ಇನ್ನರ್‌ವೇರ್ ಕ್ವಾಲಿಟಿ ಸರಿಯಿಲ್ಲ. ಹೀಗಾಗಿ ಇನ್ನರ್‌ವೇರ್‌ಗಳು ಮಾರಾಟವಾಗುತ್ತಿಲ್ಲ ಎಂದು ಕಂಪನಿಯ ಬಾಸ್‌ಗೆ ಮೇಲ್ ಮಾಡಿದ್ದಾನೆ. ಇದನ್ನು ತಿಳಿದು ಮ್ಯಾನೇಜರ್ ಕೋಪ ಮಾಡಿಕೊಂಡಿದ್ದಾರೆ.

ಶಂಕರ ಮಹದೇವನನ್ನು ನೋಡಿ ಗಾಬರಿ

ಶಂಕರ ಮಹದೇವನನ್ನು ನೋಡಿ ಗಾಬರಿ

ಇನ್ನು ಶಿವಪ್ರಸಾದ್ ನಿತ್ಯ ಮರದ ಬಳಿ ಬೈಯುವುದನ್ನು ಕೇಳುತ್ತಿದ್ದ ಭಗವಂತ ಈಗ ಭೂಮಿಗೆ ಇಳಿದು ಬಂದಿದ್ದಾನೆ. ಶಿವ ಪ್ರಸಾದ್‌ಗೆ ಕಾಣಿಸಿಕೊಂಡಿದ್ದಾನೆ. ಆದರೆ, ಬೇರೆ ಯಾರಿಗೂ ಕಾಣಿಸಿಕೊಂಡಿಲ್ಲ. ಶಂಕರ ಮಹದೇವ ದೇವರು ಎಂಬುದನ್ನು ತಿಳಿಯದ ಶಿವಪ್ರಸಾದ್, ಸದ್ಯ ಯಾರೋ ವ್ಯಕ್ತಿ ಎಂದು ಭಾವಿಸಿದ್ದಾನೆ. ಆದರೆ, ರಾತ್ರಿಯೆಲ್ಲಾ ಶಂಕರಮಹದೇವ, ಶಿವಪ್ರಸಾದ್‌ನನ್ನು ಕಾಡಿದ್ದಾನೆ. ಇದರಿಂದ ಶಿವಪ್ರಸಾದ್‌ಗೆ ಕೊಂಚ ಗಾಬರಿಯೂ ಆಗಿದೆ. ಆದರೆ, ಮುಂದೆ ದೇವರು ತನಗಾಗಿ ಇಳಿದು ಬಂದಿರುವುದು ತಿಳಿಯುತ್ತದೆಯಾ..? ಆಗ ಶಿವಪ್ರಸಾದ್ ಏನು ಮಾಡುತ್ತಾನೋ ಗೊತ್ತಿಲ್ಲ.

ಶಿವಪ್ರಸಾದ್ ಸಹಾಯಕ್ಕೆ ಬರುತ್ತಾನಾ..?

ಶಿವಪ್ರಸಾದ್ ಸಹಾಯಕ್ಕೆ ಬರುತ್ತಾನಾ..?

ಆಫಿಸಿನಲ್ಲಿ ಕಂಪನಿ ಬಾಸ್‌ಗೆ ಮೇಲ್ ಮಾಡಿದ್ದಕ್ಕೆ ಶಿವಪ್ರಸಾದ್‌ನನ್ನು ಮ್ಯಾನೇಜರ್ ಲಿಂಗರಾಜು ಕೆಲಸದಿಂದ ತೆಗೆದಿದ್ದಾನೆ. ಆಫೀಸಿನಿಂದ ಶಿವಪ್ರಸಾದ್‌ನನ್ನು ಹೊರಗೆ ಹಾಕಿದ್ದಾನೆ. ಸಂಸಾರದ ಜವಾಬ್ದಾರಿ ಹೊತ್ತಿರುವ ಶಿವ ಪ್ರಸಾದ್ ಈಗ ಕೆಲಸ ಕಳೆದುಕೊಂಡು ಏನು ಮಾಡುತ್ತಾನೋ ಗೊತ್ತಿಲ್ಲ. ಅಲ್ಲದೇ, ಶಿವಪ್ರಸಾದ್ ಕಷ್ಟಗಳಿಗೆ ಈಗ ಶಂಕರಮಹದೇವ ಸಹಾಯ ಮಾಡುತ್ತಾನಾ? ಯಾವ ರೀತಿ ಶಿವಪ್ರಸಾದ್‌ನನ್ನು ಕಾಪಾಡುತ್ತಾನೆ? ಏನೆಲ್ಲಾ ಸಹಾಯ ಮಾಡುತ್ತಾನೆ ಅನ್ನೋ ಕುತೂಹಲ ಈಗ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.

More from Filmibeat

English summary
Bhoomige Bandha Bhagavantha Serial 22nd March episode written update. here is the Detials About New Serial. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X