Bhoomige Bandha Bhagavantha: ಗಿರಿಜಾಳಿಗೆ ಪಾಠ ಹೇಳಿದ ಭಗವಂತ

By ಪ್ರಿಯಾ ದೊರೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಶಿವಪ್ರಸಾದ್, ಗಿರಿಜಾ, ಭಗವಂತ, ಕಾಶಿ ಸುತ್ತಲೂ ಕಥೆ ಸುತ್ತುತ್ತಿದೆ. ಭಗವಂತ, ಶಿವಪ್ರಸಾದ್ ಕುಟುಂಬದ ಮೂಲಕ ಜನಸಾಮಾನ್ಯರಿಗೆ ಪಾಠ ಕಲಿಸುತ್ತಿದ್ದಾನೆ. ಭಗವಂತ ಮನುಷ್ಯರಿಂದ ಏನನ್ನು ಅಪೇಕ್ಷಿಸುತ್ತಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಮನುಷ್ಯರು ಏನು ಮಾಡಬೇಕು. ಮಾನವೀಯತೆ ಮುಖ್ಯ, ಸಹಾಯ ಗುಣ ಅವಶ್ಯಕ ಇನ್ನು ನೀತಿ ಪಾಠ ಹೇಳುತ್ತಿದ್ದಾನೆ.

ರಾಗ ದ್ವೇಷಗಳಿಂದ ಹೇಗೆ ದೂರ ಉಳಿಯಬೇಕು. ಮನುಷ್ಯರಲ್ಲಿ ಒಗ್ಗಟ್ಟು ಎಂಬುದು ಎಷ್ಟು ಮುಖ್ಯ, ನಯ-ವಿನಯತೆಗೆ ಏನು ಬೆಲೆ ಇದೆ. ಪೂಜೆ ಪುನಸ್ಕಾರಗಳ ಮಹತ್ವವೇನು ಎಂಬ ಬಗ್ಗೆ ತಿಳಿಸಿ ಕೊಡಲಾಗುತ್ತಿದೆ. ಸಾಮಾನ್ಯವಾಗಿ ಜನರು ಮೂಢ ನಂಭಿಕೆಗಳಿಗೆ ಮೊರೆ ಹೋಗುವುದೇ ಹೆಚ್ಚು, ಬೆಳಗೆದ್ದು ಯಾರ ಮುಖವನ್ನು ನೋಡಬೇಕು. ಬೆಕ್ಕು ಕಂಡರೆ ಏನಾಗುತ್ತದೆ. ಮನೆಯಿಂದ ಹೊರಗೆ ಹೋಗುವಾಗ ಒಂಟಿ ಸೀನು ಅಪಶಕುನ ಎಂದು ಹೇಳಲಾಗುತ್ತದೆ.

Bhoomige Bandha Bhagavantha Serial 24th May episode written update

ಕೆಲವರಂತೂ ಕೆಲವೊಬ್ಬರ ಮುಖವನ್ನೇ ಅಪಶಕುನಾ ಎಂದು ಕರೆದು ಬಿಡುತ್ತಾರೆ. ಇದರಿಂದ ತಾಳ್ಮೆ ಮೀರಿ ವರ್ತಿಸುತ್ತಾರೆ. ಆದರೆ, ದೇವರು ಎಂದಿಗೂ ಮನುಷ್ಯರನ್ನು ಸೃಷ್ಟಿ ಮಾಡುವಾಗ ಒಬ್ಬರು ಶುಭ ಮತ್ತೊಬ್ಬರು ಅಶುಭ ಎಂದು ಸೃಷ್ಟಿಸಿರುವುದಿಲ್ಲ. ಇದೆಲ್ಲವನ್ನು ಮನುಷ್ಯರೇ ತಮಗೆ ಬೇಕಾದಂತೆ ರೀತಿ-ರಿವಾಜುಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇನ್ನು ಮನುಷ್ಯರು ಮಾಡಿಕೊಂಡಿರುವ ಈ ಮೂಢ ನಂಬಿಕೆಗಳಿಂದ ದೇವರನ್ನು ಅದೆಷ್ಟೋ ಜನ ನಿತ್ಯ ದೂಷಿಸುತ್ತಾರೆ. ಈ ಬಗ್ಗೆ ಧಾರಾವಾಹಿಯಲ್ಲಿ ತೋರಿಸಿ ಕೊಡಲಾಗಿದೆ.

ಸರಿ-ತಪ್ಪುಗಳನ್ನು ತಿಳಿಸಿಕೊಟ್ಟ ಭಗವಂತ

ಈಗಾಗಲೇ ಧಾರಾವಾಹಿಯಲ್ಲಿ ಸುಳ್ಳು ಹೇಳುವುದರಿಂದ ಏನಾಗುತ್ತದೆ. ಯಾಕೆ ತಪ್ಪನ್ನು ಮಾಡಬಾರದು. ಇನ್ನೊಬ್ಬರಿಗೆ ಮೋಸ ಮಾಡುವುದು ಅನ್ಯಾಯ ಎಂಬ ಬಗ್ಗೆ ಎಲ್ಲಾ ಈ ಧಾರಾವಾಹಿಯಲ್ಲಿ ಶಿವಪ್ರಸಾದ್ ಮೂಲಕ ತೋರಿಸಿಕೊಡಲಾಗಿದೆ. ಆಗ ಮಾಡಿದ ತಪ್ಪಿಗೆ ಆಗಲೇ ಪಶ್ಚಾತಾಪವನ್ನು ಎದುರಿಸುವ ಸಂದರ್ಭವನ್ನೂ ತರಲಾಗಿದೆ. ಇದನ್ನೆಲ್ಲಾ ನೋಡಿ ಪ್ರೇಕ್ಷಕರು ಕೂಡ ಭಗವಂತನ ಬಗ್ಗೆ ತಿಳಿದುಕೊಳ್ಳುತ್ತಾ, ಸರಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾರೆ.

Bhoomige Bandha Bhagavantha Serial 24th May episode written update

ಕಾಶಿ ಮುಖ ಅಪಶಕುನ

ಧಾರಾವಾಹಿಯಲ್ಲಿ ಗಿರಿಜಾಳಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಸಮಸ್ಯೆ ಎದುರಾದಾಗಲೆಲ್ಲಾ ಗಿರಿಜಾ, ಕಾಶಿಯ ಮುಖವನ್ನು ನೋಡಿರುತ್ತಾಳೆ. ಇದರಿಂದ ಗಿರಿಜಾ ಅಪಾರ್ಥ ಮಾಡಿಕೊಂಡಿದ್ದು, ಕಾಶಿಯ ಮುಖವನ್ನು ಅಪಶಕುನಾ ಎಂದು ಹೇಳಿದ್ದಾಳೆ. ಇದರಿಂದ ಮನೆಯಲ್ಲಿ ಎಲ್ಲರೂ ಗಿರಿಜಾಳಿಗೆ ಬುದ್ಧಿ ಹೇಳಿದರೂ ಕೂಡ ಕೇಳುವುದಿಲ್ಲ. ಕಾಶಿ ಮುಖ ನನಗೆ ಅಪಶಕುನ ಎಂದು ತೀರ್ಮಾನಿಸಿ ಬಿಡುತ್ತಾಳೆ.

ಗಿರಿಜಾ ಮಾತನಾಡುವ ಈ ಮಾತುಗಳನ್ನು ಅಕಸ್ಮಾತ್ ಆಗಿ ಕಾಶಿ ಕೂಡ ಕೇಳಿಸಿಕೊಂಡು ಬಿಡುತ್ತಾನೆ. ಇದರಿಂದ ಕಾಶಿ ಹಾಗೂ ಗೌರಿಯೂ ಬೇಸರ ಮಾಡಿಕೊಳ್ಳುತ್ತಾರೆ. ಮಕ್ಕಳಿಲ್ಲದ ಗೌರಿ ಮತ್ತು ಕಾಶಿ ಇಬ್ಬರೂ ನಿತ್ಯ ಪ್ರಣೀತಾ ಹಾಗೂ ಸ್ಕಂದನಲ್ಲಿ ಪ್ರೀತಿಯನ್ನು ಕಾಣುತ್ತಿರುತ್ತಾರೆ.

ಕಾಶಿ ಬಳಿ ಕ್ಷಮೆ ಕೇಳಿದ ಗಿರಿಜಾ

ಆದರೆ, ಗಿರಿಜಾ ಮಾತಿನಿಂದ ಇಬ್ಬರೂ ಅವರ ಮನೆಗೆ ಹೋಗುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಕಾಶಿ ಹಾಗೂ ಗೌರಿ ಬಹಳ ಬೇಸರ ಮಾಡಿಕೊಂಡಿರುತ್ತಾರೆ. ಮಕ್ಕಳನ್ನು ಕದ್ದು ಮುಚ್ಚಿ ಭೇಟಿಯಾಗುತ್ತಿರುತ್ತಾರೆ. ಹೀಗಿರುವಾಗ ಭಗವಂತ, ಕಾಶಿ ಮುಖ ಅಪಶಕುನ ಅಲ್ಲ ಎಂಬುದನ್ನು ಪರಿಸ್ಥಿತಿಯ ಮೂಲಕ ಮನವರಿಕೆ ಮಾಡಿಕೊಡುತ್ತಾನೆ. ಇದರಿಂದ ಗಿರಿಜಾ ನೇರವಾಗಿ ಕಾಶೀ ಮನೆಗೆ ಹೋಗಿ ಕ್ಷಮೆಯನ್ನೂ ಹೇಳುತ್ತಾರೆ.

ಕಾಶಿ ಕೂಡ ಗಿರಿಜಾ ಅವರ ಮಾತಿಗೆ ಕರಗಿ ನಡೆದದ್ದನ್ನೆಲ್ಲಾ ಮರೆತು ಬಿಡುತ್ತಾರೆ. ಬಳಿಕ ಭಗವಂತನೇ ಮೂಢನಂಬಿಕೆಯನ್ನು ನಾನು ಸೃಷ್ಟಿಸಿಲ್ಲ. ಮನುಷ್ಯರಾದ ನೀವೇ ಸೃಷ್ಟಿಸಿಕೊಂಡಿದ್ದು ಎಂಬುದನ್ನು ಶಿವಪ್ರಸಾದ್ ಗೆ ತಿಳಿಸಿಕೊಡುತ್ತಾನೆ.

More from Filmibeat

English summary
Bhoomige Bandha Bhagavantha Serial 24th May episode written update. here is details about Bhagavatha teachs lesson for Girija. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X