Bhoomige Bandha Bhagavantha: ನಿಮ್ಮ ಮನೆ ಗೃಹಪ್ರವೇಶಕ್ಕೂ ಬರ್ತಾರೆ ಗಿರಿಜಾ – ಶಿವಪ್ರಸಾದ್!
'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಶಿವಪ್ರಸಾದ್ ಹಾಗೂ ಗಿರಿಜಾ ಕಷ್ಟಪಟ್ಟು ಹಣ ಹೊಂದಿಸಿ ಲೋನ್ ಮಾಡಿ ಸ್ವಂತ ಮನೆಯನ್ನು ಖರೀದಿ ಮಾಡಿದ್ದಾರೆ. ಶಿವಪ್ರಸಾದ್ ಒಳ್ಳೆಯ ಗುಣಕ್ಕೆ ಮೆಚ್ಚಿದ ಭಗವಂತ ಸ್ನೇಹಿತನಿಗೆ ಪ್ರತೀ ಹಂತದಲ್ಲೂ ಸಹಾಯ ಮಾಡುತ್ತಲೇ ಇದ್ದಾನೆ. ಈಗ ಎಲ್ಲರೂ ಶಿವಪ್ರಸಾದ್ ಮನೆಗೆ ಗೃಹಪ್ರವೇಶ ಮಾಡಬೇಕು ಎಂದು ಹಠ ಹಿಡಿದಿದ್ದಾರೆ.
ಶಿವಪ್ರಸಾದ್ ಕೂಡ ಬೇರೆ ದಾರಿ ಇಲ್ಲದೇ, ಎಲ್ಲರ ಬಳಿ ಸಾಲ ಮಾಡಿ ಗೃಹಪ್ರವೇಶ ಮಾಡುತ್ತಿದ್ದಾನೆ. ಹಣ ಖರ್ಚು ಮಾಡಬೇಕು ಎಂದು ಪ್ರತೀ ಹಂತದಲ್ಲೂ ಒದ್ದಾಡಿದ್ದಾನೆ. ಭೂಮಿಗೆ ಬಂದ ಭಗವಂತ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಮಧ್ಯಮವರ್ಗದ ಕುಟುಂಬಗಳ ಕಷ್ಟ ನಷ್ಟಗಳನ್ನು ಈ ಧಾರಾವಾಹಿಯಲ್ಲಿ ಅದ್ಭುತವಾಗಿ ತೋರಿಸಲಾಗುತ್ತಿದೆ.

ಎಂತಹ ಕಷ್ಟ ಬಂದರೂ ಕೂಡ ಮನುಷ್ಯ ತಪ್ಪು ದಾರಿಯನ್ನು ಹಿಡಿಯಬಾರದು, ಕೆಟ್ಟ ಕೆಲಸಗಳನ್ನು ಮಾಡಬಾರದು, ಬೇರೆಯವರಿಗೆ ಕೆಟ್ಟದ್ದನ್ನು ಬಗೆಯಬಾರದು, ಸದಾ ಶಾಂತ ಚಿತ್ತದಿಂದ ಬದುಕಿನಲ್ಲಿ ಬಂದಿದ್ದನ್ನು ಸ್ವೀಕರಿಸಬೇಕು ಎನ್ನುವ ವಿಚಾರಗಳನ್ನು ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ.
ಹೀಗೆಲ್ಲಾ ನಡೆದುಕೊಂಡ ಕಾರಣದಿಂದಲೇ ಶಿವಪ್ರಸಾದ್‌ಗೆ ಭಗವಂತ ಒಲಿದಿದ್ದು, ಪ್ರತಿ ಬಾರಿಯೂ ಕಷ್ಟ ಬಂದಾಗ ಬೇರೆ ಬೇರೆ ರೂಪದಲ್ಲಿ ಬಂದು ಸಹಾಯ ಮಾಡುತ್ತಿದ್ದಾನೆ ಎಂದು ತೋರಿಸಲಾಗುತ್ತಿದೆ. ಗೃಹಪ್ರವೇಶದ ದಿನ ಮನೆಗೆ ಬಂದ ಭಿಕ್ಷಿಕನನ್ನು ಕೂಡ ಮನೆಗೆ ಕರೆದು ಊಟ ಬಡಿಸಿರುವ ಶಿವಪ್ರಸಾದ್ ಗುಣ ನೋಡಿ ಭಗವಂತ ಮೆಚ್ಚಿದ್ದಾನೆ. ಈಗ ಜೀ ಕನ್ನಡ ವಾಹಿನಿಯೂ ಕೂಡ ಪ್ರೇಕ್ಷಕರಿಗೆ ಆಫರ್ ಒಂದನ್ನು ನೀಡಿದೆ.
ಇದೀಗ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಸ್ವಂತ ಮನೆ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಗಿರಿಜಾ - ಶಿವಪ್ರಸಾದ್ ಜೋಡಿಗೆ ಈಗ ಗೃಹಪ್ರವೇಶದ ಸಂಭ್ರಮ ಹಿನ್ನೆಲೆ ಪ್ರೇಕ್ಷಕರಿಗೆ ಹೊಸ ಲಕ್ಕಿ ಡಿಪ್ ಅನ್ನು ಜೀ ಕನ್ನಡ ವಾಹಿನಿಯೂ ಪ್ರಾರಂಭಿಸಿದೆ. ಸ್ವಂತ ಮನೆಯ ಗೃಹಪ್ರವೇಶ ಮಾಡುವವರ ಮನೆಗೆ ಕೃತಿಕಾ ರವೀಂದ್ರ ಹಾಗೂ ನವೀನ್ ಕೃಷ್ಣ ಇಬ್ಬರೂ ಬರಲಿದ್ದಾರೆ. ಅದು ಹೇಗೆ ಅಂತ ಕೇಳ್ತಿದ್ದೀರಾ ಮುಂದೆ ಓದಿ ನಿಮಗೇ ತಿಳಿಯುತ್ತೆ.

ಈ ಬಗ್ಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರೋಮೋ ಹರಿದಾಡುತ್ತಿದೆ. ಅದರಲ್ಲಿ, ಸ್ವಂತಕ್ಕೊಂದು ಸೂರು ಕಟ್ಟಿಕೊಳ್ಳುವ ಕನಸು ಯಾರಿಗೆ ಇರುವುದಿಲ್ಲ ಹೇಳಿ. ಶಿವಪ್ರಸಾದ್ ಥರ ನೀವೂ ಹೊಸ ಮನೆ ಕಟ್ಟಿದರೆ ಅಥವಾ ಖರೀದಿ ಮಾಡಿದರೆ ಇದೇ ಮೇ-ಜೂನ್ ತಿಂಗಳಿನಲ್ಲಿ ನಿಮ್ಮ ಮನೆ ಗೃಹಪ್ರವೇಶ ಇದ್ದರೆ, ಆಮಂತ್ರಣ ಪತ್ರಿಕೆಗಳನ್ನು ನಮಗೂ ಕಳಿಸಿ, ಆಯ್ಕೆಯಾಗುವ 5 ಲಕ್ಕಿ ವಿನ್ನರ್‌ಗಳ ಮನೆ ಗೃಹಪ್ರವೇಶಕ್ಕೆ ಗಿರಿಜಾ - ಶಿವಪ್ರಸಾದ್ ದಂಪತಿ ಬರುತ್ತಾರೆ. ನಿಮ್ಮ ಸ್ವಂತ ಮನೆ ಸಂಭ್ರಮದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿದೆ.
ಇನ್ನು ನಿಮ್ಮ ಮನೆಯ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಿ, ಗಿರಿಜಾ- ಶಿವಪ್ರಸಾದ್ ದಂಪತಿ ಆಗಮನ ನಿರೀಕ್ಷಿಸಿ ಎಂದು ಜೀ ಕನ್ನಡ ಕಚೇರಿಯ ವಿಳಾಸ ನೀಡಲಾಗಿದೆ. ಕಚೇರಿಗೆ ಆಮಂತ್ರಣ ಪತ್ರವನ್ನು ಕಳುಹಿಸಿದರೆ, ಸೆಲೆಕ್ಟ್ ಆಗುವ ಐವರ ಮನೆಯ ಗೃಹಪ್ರವೇಶಕ್ಕೆ ಕೃತಿಕಾ ರವೀಂದ್ರ ಮತ್ತು ನವೀನ್ ಕೃಷ್ಣ ಅವರು ಆಗಮಿಸಲಿದ್ದಾರೆ. ಹಾಗೇನಾದರೂ ನಿಮ್ಮ ಮನೆಗೆ ಇವರಿವಬ್ಬರೂ ಬರಬೇಕು ಎಂದಿದ್ದರೆ ಈ ಕೂಡಲೇ ಜೀ ಕನ್ನಡ ವಾಹಿನಿಗೆ ನಿಮ್ಮ ಮನೆಯ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿ.


Click it and Unblock the Notifications











