Amruthadhaare ; ಸದಾಶಿವನ ಆತಂಕ ದೂರ ಮಾಡಿದ ಭೂಮಿಕಾ : ಮೈದುನನ ಪ್ರೀತಿಗೆ ಎಳ್ಳು ನೀರು ಬಿಟ್ಟ ಅತ್ತಿಗೆ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮನೆಗೆ ಹುಡುಗಿ ಮನೆಯವರು ಬಂದು ಪಾರ್ಥನ ಜೊತೆಗೆ ಮಾತನಾಡಿ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿದೆ.ಈ ವಿಚಾರದ ಬಗ್ಗೆ ಅಪೇಕ್ಷಾಳನ್ನು ಇನ್ನಷ್ಟು ಉರಿಸುವ ಕಾರಣದಿಂದ ಮಹಿಮಾಳಿಗೆ ಫೋನ್ ಮಾಡಿ ಅಶ್ವಿನಿ ಮೂಲಕ ಮದುವೆ ಅಪ್ ಡೇಟ್ ನೀಡಲಾಗಿದೆ. ಅಣ್ಣನ ಮದುವೆ ಇಷ್ಟು ಫಾಸ್ಟ್ ಆಗಿ ನಡೆಯುತ್ತಿದೆ ಎಂದು ಮಹಿಮಾ ಖುಷಿ ಪಟ್ಟಿದ್ದಾಳೆ. ಅಲ್ಲದೇ, ಈ ವಿಚಾರವನ್ನು ಮನೆಯವರಿಗೂ ತಿಳಿಸಿದ್ದು, ಅಪೇಕ್ಷಾಳಿಗಿರುವ ದಾರಿಗಳೆಲ್ಲವೂ ಕ್ಲೋಸ್ ಆಗುತ್ತಿವೆ.

ಅಕ್ಕನಿಂದ ಅಪೇಕ್ಷಾಳಿಗೆ ನಿರಾಸೆ

ಭೂಮಿಕಾ ಅಕ್ಕನ ಬಳಿ ಸತ್ಯ ಹೇಳಲೇಬೇಕು ಎಂದು ತೀರ್ಮಾನಗೈದ ಅಪೇಕ್ಷಾ ಸೀದಾ ರೂಮಿಗೆ ಹೋಗಿ ಸತ್ಯ ಹೇಳಿದ್ದಾಳೆ. ನಾನು ಪಾರ್ಥ ಮೊದಲಿನಿಂದಲೂ ಪ್ರೀತಿಸುತ್ತಿದ್ದೇವೆ. ಏನಾದರೂ ಮಾಡಿ ಈ ಮದುವೆಯನ್ನು ನಿಲ್ಲಿಸು. ಅಪ್ಪ ಕೂಡ ಚಾಲೆಂಜ್ ಹಾಕಿದ್ದು, ಅದರಲ್ಲಿ ಪಾರ್ಥ ಗೆಲ್ಲುತ್ತಾನೆ. ನಮ್ಮ ಪ್ರೀತಿಯನ್ನು ಉಳಿಸಿಕೊಡು ಎಂದು ಕೇಳಿದ್ದಾಳೆ. ಆದರೆ, ಭೂಮಿಕಾ ತಂಗಿ ಅಪೇಕ್ಷಾಳಿಗೆ ಬೈದು ಕಳಿಸಿದ್ದಾಳೆ. ಪ್ರೀತಿಯನ್ನು ಮರೆತು ಬದುಕುವುದನ್ನು ಕಲಿ ಎಂದು ಹೇಳಿದ್ದಾಳೆ. ಅಪೇಕ್ಷಾಳ ಪರಿಸ್ಥಿತಿಯನ್ನು ಕಂಡು ಭೂಮಿಕಾ ಮನದೊಳಗೇ ಮರುಗಿದ್ದಾಳೆ. ಆದರೆ, ಶಕುಂತಲಾ ಮತ್ತು ಲಕ್ಷ್ಮೀಕಾಂತ ಈ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.

Bhoomika tells Apeksha and partha to forget their love and move on

ಸದಾಶಿವನ ಆತಂಕ ದೂರ ಮಾಡಿದ ಭೂಮಿಕಾ

ಇನ್ನು ಸದಾಶಿವನಿಗೆ ಕೆಟ್ಟ ಕನಸೊಂದು ಬಿದ್ದಿದೆ. ಊರಿನ ಜನರೆಲ್ಲರೂ ಸದಾಶಿವ ಭಲೇ ಕಿಲಾಡಿ. ಮೂವರು ಮಕ್ಕಳನ್ನು ಒಂದೇ ಮನೆಗೆ ಅದೂ ಕೋಟ್ಯಾಧಿಪತಿಗಳಿಗೆ ಕೊಟ್ಟು ಮದುವೆ ಮಾಡಿ ಗೆದ್ದು ಬಿಟ್ಟ. ಸದಾಶಿವನ ಬುದ್ಧಿ ಅಂತಹದ್ದು, ಇಂತಹದ್ದು ಎಂದು ಜನ ಬೀದಿಯಲ್ಲಿ ಮಾತನಾಡುತ್ತಿರುತ್ತಾರೆ. ಈ ಕನಸು ಬಿದ್ದ ಕೂಡಲೇ ಗಾಬರಿಯಾದ ಸದಾಶಿವ ಮಗಳು ಭೂಮಿಕಾಳಿಗೆ ಫೋನ್ ಮಾಡಿ ಪಾರ್ಕ್ ಬಳಿ ಕರೆಸಿಕೊಂಡಿದ್ದಾನೆ. ಬಹಳ ಮುಖ್ಯವಾದ ವಿಚಾರವನ್ನು ಮಾತನಾಡಬೇಕು ಎಂದಿದ್ದು. ಪಾರ್ಥ ಮತ್ತು ಅಪೇಕ್ಷಾ ಬಗ್ಗೆ ಮಾತನಾಡಿದ್ದಾರೆ. ಭೂಮಿಕಾ ಸದಾಶಿವನಿಗೆ ಆ ಬಗ್ಗೆ ಗಾಬರಿಯಾಗಬೇಡಿ. ಅದೆಲ್ಲಾ ವಿಚಾರವೂ ನನಗೆ ಗೊತ್ತಿದೆ. ಎರಡೂ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳೋಣ ಎಂದಿದ್ದು, ಸದಾಶಿವ ಕೂಡ ಈ ಮದುವೆಯಿಂದ ಬೇರೆ ಸಂಸಾರಗಳಿಗೆ ಸಮಸ್ಯೆ ಆಗಬಾರದು ಎಂದು ತನ್ನ ಆತಂಕವನ್ನು ವ್ಯಕ್ತಪಡಿಸಿದ್ದಾನೆ.

ಈಗಲೂ ಜೈದೇವ್ ಮನದಲ್ಲಿ ಬಟರ್ ಫ್ಲೈ

ಇನ್ನು ಮಲ್ಲಿಯನ್ನು ಮದುವೆಯಾಗಿ ಈಗಾಗಲೇ ದಿಯಾ ಎಂಬ ಹುಡುಗಿ ಜೊತೆಗೆ ಜೈದೇವ್ ಅಫೇರ್ ಇಟ್ಟುಕೊಂಡಿದ್ದಾನೆ. ಹಾಗಿದ್ದರೂ ಕೂಡ ಇನ್ನೂ ಅವನ ಮನಸಲ್ಲಿ ಅಪೇಕ್ಷಾ ಇದ್ದಾಳೆ. ಈಗ ಪಾರ್ಥ ಮತ್ತು ಅಪೇಕ್ಷಾ ಪ್ರೀತಿಗೆ ಬೆಂಕಿ ಬಿದ್ದಂತಾಗಿದ್ದು, ಪಾರ್ಥನಿಗೆ ಬೇರೆ ಮದುವೆ ಮಾಡುತ್ತಿರುವುದಕ್ಕೆ ಜೈದೇವ್ ಫುಲ್ ಖುಷಿಯಾಗಿದ್ದಾನೆ. ತನ್ನ ಖುಷಿಯನ್ನು ಒಬ್ಬನೇ ಎಂಜಾಯ್ ಮಾಡುತ್ತಿದ್ದು, ಪಾರ್ಥನ ಮದುವೆ ಬೇರೆ ಹುಡುಗಿ ಜೊತೆಗೆ ನಡೆದೇ ಹೋಯಿತು ಎಂಬಂತೆ ಭಾವಿಸಿದ್ದಾನೆ.

bhoomika-tells-apeksha-and-partha-to-forget-their-love-and-move-on


ಪಾರ್ಥನ ಕೈ ಬಿಟ್ಟ ಅತ್ತಿಗೆಮ್ಮ

ಅಪೇಕ್ಷಾ ಮತ್ತೆ ಮತ್ತೆ ಅಕ್ಕ ಭೂಮಿಕಾಳ ಜೊತೆಗೆ ತನ್ನ ಪ್ರೀತಿ ಬಗ್ಗೆ ಮಾತನಾಡುತ್ತಾಳೆ. ಆದರೆ, ಭೂಮಿಕಾ ಅದು ಮುಗಿದು ಹೋದ ಕನಸು. ಎಲ್ಲವನ್ನೂ ಮರೆತು ಬಿಡು ಎಂದಿದ್ದಾಳೆ. ಪಾರ್ಥ ಅತ್ತಿಗೆ ಬಳಿ ಬಂದು ನಮ್ಮ ಪ್ರೀತಿಗೆ ನೀವೇ ಸಪೋರ್ಟ್ ಮಾಡಬೇಕು. ಗೌತಮ್ ಅಣ್ಣನ ಬಳಿ ಮಾತನಾಡಿ, ಈ ಮದುವೆಯನ್ನು ನಿಲ್ಲಿಸಿ ಎಂದು ಕೇಳಿಕೊಳ್ಳುತ್ತಾನೆ. ಆದರೆ, ಭೂಮಿಕಾ ಈ ವಿಚಾರದಲ್ಲಿ ನಾನು ಅಸಹಾಯಕಳು. ಪ್ರೀತಿಯನ್ನು ಕೆಟ್ಟ ಕನಸು ಎಂದು ಮರೆತು ಬಿಡು. ಈಗ ನೋಡಿರುವ ಹುಡುಗಿಯನ್ನು ಮದುವೆಯಾಗು ಎನ್ನುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X