"ಸಾಲ ತೀರಿಸಲು ಬಟ್ಟೆಬಿಚ್ಚಿ ಆ ತಪ್ಪು ಮಾಡಿದ್ದೆ.. ವಿಡಿಯೋ ಲೀಕ್ ಆಗಿ ನಾನು ಡಿಪ್ರೆಷನ್‌ಗೆ ಹೋಗಿಬಿಟ್ಟೆ"

ಕಿರುತೆರೆ ಅಂದ್ರೆ ಧಾರಾವಾಹಿಗಳು ಅನ್ನುವ ಕಾಲವೊಂದಿತ್ತು. ಆದರೆ ವೀಕ್ಷಕರನ್ನು ಸೆಳೆಯಲು, ಹಿಡಿದಿಟ್ಟುಕೊಳ್ಳಲು ಇತ್ತೀಚೆಗೆ ರಿಯಾಲಿಟಿ ಶೋಗಳು ಬಂದಿವೆ. ಒಂದಕ್ಕಿಂತ ಒಂದು ಬಹಳ ರೋಚಕವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇಷ್ಟು ದಿನ ಸ್ಪರ್ಧಿಗಳಿಗೆ ಟಾಸ್ಕ್‌ಗಳನ್ನು ಕೊಟ್ಟು ವೀಕ್ಷಕರನ್ನು ರಂಜಿಸಲಾಗುತ್ತಿತ್ತು. ಇದೀಗ ಅವರ ವೈಯಕ್ತಿಕ ವಿಚಾರಗಳನ್ನು ಬಯಲು ಮಾಡುವ ಪ್ರವೃತ್ತಿ ಶುರುವಾಗಿದೆ. ಅದೇ ಈಗ ಬಂಡವಾಳ ಆಗಿದೆ.

ಹಿಂದಿ ಕಿರುತೆರೆಯಲ್ಲಿ ಬಿಗ್‌ಬಾಸ್ ನಂತರ 'ಲಾಕಪ್', 'ಎಂಟಿವಿ ರೋಡೀಸ್', 'ಸ್ಪ್ಲಿಟ್ಸ್ ವಿಲ್ಲಾ' ಶೋಗಳು ಹೆಚ್ಚು ಸದ್ದು ಮಾಡ್ತಿದೆ. ಕಳೆದ ಶನಿವಾರ ಎಂಟಿವಿ ರೋಡೀಸ್‌ನ ಹೊಸ ಸೀಸನ್ ಪ್ರಾರಂಭವಾಗಿದೆ. ಸ್ಪ್ಲಿಟ್ಸ್ ವಿಲ್ಲಾದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಭೂಮಿಕಾ ವಶಿಷ್ಟ್ ಕೂಡ ಈ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪ್ರೇಕ್ಷಕರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಅತಿರೇಕ ಅತಿಯಾಗುತ್ತಿದೆ. ಆಯೋಜಕರು ಜನಪ್ರಿಯತೆಗಾಗಿ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ. ಸ್ಪರ್ಧಿಗಳು ಬೋಲ್ಡ್ ಆಗಿ ಪ್ರವರ್ತಿಸುತ್ತಿದ್ದಾರೆ.

Bhoomika Vasishth opens up about her leaked videos during Roadies audition

ಸಾಮಾನ್ಯವಾಗಿ ರಿಯಾಲಿಟಿ ಶೋಗಳು ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆರಂಭದಲ್ಲಿ ಮಾತನಾಡುತ್ತಾರೆ. ಅಪ್ಪ, ಅಮ್ಮ ಹೀಗೆ ಇಡೀ ಕುಟುಂಬದ ಸದಸ್ಯರು, ಕುಟುಂಬದ ಸ್ಥಿತಿಗತಿ ಹೇಗಿದೆ ಅನ್ನೋದರ ಬಗ್ಗೆ ವಿವರಿಸುತ್ತಾರೆ. ಇತ್ತೀಚೆಗೆ ಕೆಲವರು ತಮ್ಮ ಗರ್ಲ್ ಫ್ರೆಂಡ್, ಬಾಯ್‌ಫ್ರೆಂಡ್‌ಗಳ ಬಗ್ಗೆ ಕೂಡ ಮಾತನಾಡುತ್ತಾರೆ. ಅಲ್ಲಿಗೆ ನಿಂತರೆ ಪರವಾಗಿಲ್ಲ. ಇದೀಗ ಕೆಲವರು ಮತ್ತಷ್ಟು ಮುಂದೆ ಹೋಗಿ ಸಾರ್ವಜನಿಕವಾಗಿ ಹೇಳಬಾರದ ವಿಚಾರಗಳನ್ನು ಹೇಳುತ್ತಿರೋದು ವಿಪರ್ಯಾಸ.

ಶಾಕಿಂಗ್ ಸಂಗತಿ ಬಿಚ್ಚಿಟ್ಟ ಭೂಮಿಕಾ

ನಾವು ಸಿಕ್ಕಾಪಟ್ಟೆ ಬೋಲ್ಡ್ ಎಂದು ತೋರಿಸಿಕೊಳ್ಳುವುದಕ್ಕೋ ಏನೋ ಜೀವನದ ರಹಸ್ಯ ಸಂಗತಿಗಳನ್ನು ಬಿಚ್ಚಿಡುತ್ತಿದ್ದಾರೆ. ಇದೀಗ ಭೂಮಿಕಾ ವಶಿಷ್ಟ್ ಅಂತದ್ದೇ ಕೆಲಸ ಮಾಡಿದ್ದಾರೆ. ಡ್ಯಾನ್ಸ್ ಶೋಗಳ ಮೂಲಕ ಜನಪ್ರಿಯಳಾದ ನಂತರ ಆಕೆ ತನ್ನ ಗ್ಲಾಮರ್ ಹಾಗೂ ಇಮೇಜ್ ಉಳಿಸಿಕೊಳ್ಳಲು ಹಣದ ಅಗತ್ಯವಿತ್ತು. ಹಣಕ್ಕಾಗಿ ಏನೆಲ್ಲಾ ಮಾಡಿದೆ. ಅದರಿಂದ ಎಡವಟ್ಟು ಆಗಿ ಮುಂದೆ ಏನಾಯಿತು. ಇದರಿಂದ ತಮ್ಮ ಜೀವನದಲ್ಲಿ ಏನೆಲ್ಲಾ ನಡೀತು ಎಂದು ಹೇಳಿಕೊಂಡಿದ್ದಾರೆ.

Bhoomika Vasishth opens up about her leaked videos during Roadies audition

ವಿಡಿಯೋ ಲೀಕ್ ಆಗಿ ಎಡವಟ್ಟು

"ಸ್ಪ್ಲಿಟ್ಸ್ ವಿಲ್ಲಾ ಶೋ ನಂತರ ತನ್ನ ಗ್ಲಾಮರ್, ಇಮೇಜ್ ಉಳಿಸಿಕೊಳ್ಳಲು ಬಹಳ ಸಾಲ ಮಾಡಿದ್ದೆ. ಒಮ್ಮೆ ಆ ಸಾಲ ಹೆಚ್ಚಾಯಿತು. ನನ್ನ ಸಂಪಾದನೆಯಿಂದ ಆ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಅಂತಹ ಸಮಯದಲ್ಲಿ ಒಂದು ತಪ್ಪು ಮಾಡಿದೆ. ನಾನು ಬಟ್ಟೆ ಬಿಚ್ಚುವ ವಿಡಿಯೋವನ್ನು ಆಪ್‌ವೊಂದರಲ್ಲಿ ಪೋಸ್ಟ್ ಮಾಡಿ ಹಣ ಗಳಿಸಲು ಮುಂದಾಗಿದ್ದೆ. ಆದರೆ ಆ ವಿಡಿಯೋ ಆನ್‌ಲೈನ್‌ನಲ್ಲಿ ಲೀಕ್ ಆಗಿ ಎಡವಟ್ಟಾಯಿತು. ಈ ಕಾರಣಕ್ಕೆ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದೆ" ಎಂದು ಭೂಮಿಕಾ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ರಿಯಾ ಹಾಗೂ ಸಹ ಸ್ಪರ್ಧಿಗಳ ಬೆಂಬಲ

ಭೂಮಿಕಾ ವಶಿಷ್ಟ್ ಮಾತು ಕೇಳಿ ತೀರ್ಪುಗಾರರು, ಉಳಿದ ಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದರು. ತೀರ್ಪುಗಾರ್ತಿ ರಿಯಾ ಚಕ್ರವರ್ತಿ ಕೂಡಲೇ ಭೂಮಿಕಾ ಅವರಿಗೆ ಸಾಂತ್ವನ ಹೇಳಿದರು. ಸಹ ಸ್ಪರ್ಧಿಗಳು ಇದನ್ನೆಲ್ಲಾ ಮೀರಿ ಮುಂದೆ ನಡೆಯಬೇಕು ಎಂದು ಆಕೆಗೆ ಧೈರ್ಯ ತುಂಬಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

Bhoomika Vasishth opens up about her leaked videos during Roadies audition

ಮೆಗಾ ಆಡಿಷನ್

ಸದ್ಯ ಎಂಟಿವಿ ರೋಡೀಸ್ ಶೋಗೆ ಬಹುಭಾಷಾ ನಟ ಸೋನುಸೂದ್ ಹೋಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಿನ್ಸ್ ನರೂಲ, ರಿಯಾ ಚಕ್ರವರ್ತಿ, ಗೌತಮ್ ಗುಲಟಿ ತೀರ್ಪುಗಾರರಾಗಿದ್ದಾರೆ. ದೆಹಲಿ, ಪುಣೆ, ಇಂದೋರ್‌ನಲ್ಲಿ ನಗರಗಳಲ್ಲಿ ಶೋಗಾಗಿ ಆಡಿಯನ್ ಮಾಡಲಾಯಿತು. ಕೆಲ ಯಂಗ್‌ಸ್ಟರ್ಸ್‌ನ ಆಯ್ಕೆ ಮಾಡಿ ಶೋ ಆರಂಭಿಸಲಾಗಿದೆ. ಆಡಿಶನ್ ವೇಳೆಯೇ ಭೂಮಿಕಾ ವಶಿಷ್ಟ್ ತಮ್ಮ ಜೀವನದ ಕಹಿ ಘಟನೆ ಬಿಚ್ಚಿಟ್ಟಿದ್ದಾರೆ.

More from Filmibeat

English summary
Bhoomika Vasishth opens up about her leaked videos during Roadies audition. she revealed that she went into a dark phase after Splitsvilla show. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X