»   »  ಮಣಿ ದೊಡ್ಡವಳಾಗಿದ್ದಾಳೆ, ಬದಲಾಗಿಲ್ಲ: 'ಕಿನ್ನರಿ' ಧಾರಾವಾಹಿಗೆ ಹೊಸ ತಿರುವು

ಮಣಿ ದೊಡ್ಡವಳಾಗಿದ್ದಾಳೆ, ಬದಲಾಗಿಲ್ಲ: 'ಕಿನ್ನರಿ' ಧಾರಾವಾಹಿಗೆ ಹೊಸ ತಿರುವು

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿ ಕೌಟುಂಬಿಕ ಮನರಂಜನಾ ಚಾನೆಲ್. ಪ್ರೇಕ್ಷಕರಿಗೆ ವೈವಿಧ್ಯಮಯ ಕಾರ್ಯಕ್ರಮವನ್ನು ನೀಡುವ ಮತ್ತು ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಉತ್ತಮ ಮನರಂಜನಾ ಕಾರ್ಯಕ್ರಮ ನೀಡುವ ಚಾನೆಲ್. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕಿನ್ನರಿ" ಧಾರಾವಾಹಿ ಈಗ ಹೊಸ ತಿರುವು ಪಡೆದುಕೊಂಡಿದೆ.

'ಕಿನ್ನರಿ' ಧಾರಾವಾಹಿಯ ಮುದ್ದು ಮುಖದ ಮಣಿ ಕನ್ನಡಿಗರೆಲ್ಲರ ಮನೆಯ ಮಗಳು. 'ಕಿನ್ನರಿ' ಧಾರಾವಾಹಿ ಎಂದರೇ ಮಣಿ ಎಂಬಷ್ಟು ಜನಪ್ರಿಯತೆ ಪಡೆದ ಪಾತ್ರ ಈ ಮಗುವಿನದು. ಈ ಮಣಿ ಈಗ ಕಾಲದ ನಿಯಮಕ್ಕೆ ಬದ್ಧಳಾಗಿದ್ದಾಳೆ. ಅಂದರೆ ಕಾಲಚಕ್ರದ ನಿಯಮದಂತೆ ಮುದ್ದು ಮಗು ಮಣಿ ಈಗ ದೊಡ್ಡವಳಾಗಿದ್ದಾಳೆ. ಧಾರಾವಾಹಿಯಲ್ಲಿ ನಿರ್ವಹಿಸುತ್ತಿದ್ದ ಮಕ್ಕಳ ಪಾತ್ರಗಳೆಲ್ಲವೂ ಲೀಪ್ ಪಡೆದುಕೊಂಡಿವೆ.

Bhumika Shetty will Play 'Kinnari' serial Mani role

"ಕಿನ್ನರಿ" ಯಲ್ಲಿ ಮುದ್ದು ಮುಖದ ಮಣಿಯನ್ನೇ ಹೋಲುವಂತಹ ಮುದ್ದಾದ ಹೊಸ ಮುಖವನ್ನು ದೊಡ್ಡವಳಾದ ಮಣಿಯ ಪಾತ್ರದಲ್ಲಿ ತೆರೆಗೆ ಪರಿಚಯಿಸಲಾಗುತ್ತಿದೆ. ಭೂಮಿಕಾ ಶೆಟ್ಟಿ ಎಂಬುವವರು ಇನ್ನುಮುಂದೆ ಮಣಿ ಪಾತ್ರವನ್ನು "ಕಿನ್ನರಿ"ಯಲ್ಲಿ ನಿರ್ವಹಿಸಲಿದ್ದಾರೆ.

ಅಂದಹಾಗೆ ದೊಡ್ಡವಳಾದ ಮಣಿಯ ಪಾತ್ರವನ್ನು ನಿರ್ವಹಿಸುವ ಮುದ್ದಾದ ಹೊಸ ಮುಖವನ್ನು ಧಾರಾವಾಹಿಯಲ್ಲಿ ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಪರಿಚಯಿಸಲಾಗುತ್ತಿದೆ. ಬಾಲ್ಯದಿಂದಲೂ ಸವಾಲುಗಳನ್ನೇ ಸ್ವೀಕರಿಸುತ್ತ ಬರುತ್ತಿದ್ದ ಮಣಿ, ಬೆಳದು ದೊಡ್ಡವಳಾದ ಮೇಲೆ ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ? ಮುಂದೆ ಕತೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಾಗಿದೆ. ವಿಶೇಷ ಅಂದ್ರೆ ಪ್ರೌಢಾವಸ್ಥೆಯ ಮಣಿಯನ್ನು ಪರಿಚಯಿಸುವ 'ಕಿನ್ನರಿ' ಸಂಚಿಕೆಗಳು ಮುಂಬೈಯಲ್ಲಿ ಚಿತ್ರೀಕರಣ ಆಗಿವೆ.

English summary
Colors Kannada 'Kinnari' Serial got new turn. Bhumika Shetty will Play 'Kinnari' serial Mani role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada