Anupama Gowda: ನೀಲಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಅನುಪಮಾಗೌಡ ಫುಲ್ ಮಿಂಚಿಂಗ್

By ಶೃತಿ ಹರೀಶ್ ಗೌಡ

'ಅಕ್ಕ' ಧಾರಾವಾಹಿಯ ಮೂಲಕ ಪ್ರಮುಖ ಪಾತ್ರಧಾರಿ ಆಗಿ ಕಾಣಿಸಿಕೊಂಡ ಅನುಪಮಾ ಗೌಡ ತಮ್ಮ ಪ್ರತಿಭೆಯಿಂದಲೇ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. 'ಅಕ್ಕ' ಧಾರವಾಹಿಯ ನಂತರ ಅವರ ಲಕ್ ಬದಲಾಗಿತ್ತು. ಅಲ್ಲಿಂದ ಹೊಸ ಹೊಸ ಅವಕಾಶಗಳು ನಟಿಯನ್ನು ಹರಸಿ ಬಂದವು.

ಹಲವಾರು ಕಾರ್ಯಕ್ರಮಗಳನ್ನು ಅನುಪಮಾ ಗೌಡ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಕನ್ನಡದಲ್ಲಿ ಹಲವಾರು ಶೋಗಳ ಜವಾಬ್ದಾರಿಯನ್ನು ಅನುಪಮಾ ಅವರೇ ಹೊತ್ತಿದ್ದರು. ಕೆಲ ಶೋಗಳನ್ನು ನಿರೂಪಣೆ ಮಾಡಿ ಕಾರ್ಯಕ್ರಮ ಮುಗಿಸಿದ ಕೀರ್ತಿ ಅನುಪಮಾ ಗೌಡ ಅವರಿಗೆ ಸಲ್ಲುತ್ತದೆ.

ಬಿಗ್ ಬಾಸ್ ಸೀಸನ್ 5ರಲ್ಲಿ ಕೂಡ ಅನುಪಮಾ ಗೌಡ ಗುರುತಿಸಿ ಕೊಂಡು ತಮ್ಮ ಸಾಮರ್ಥ್ಯವನ್ನು ತೋರಿದ್ದರು. ನಂತರ ಅವರಿಗೆ ಮತ್ತೊಂದು ಬಾರಿ ಬಿಗ್ ಬಾಸ್ ಸೀಸನ್‌ 9ರಲ್ಲಿ ಅವಕಾಶವನ್ನು ಕಲ್ಪಿಸಿ ಕೊಡಲಾಗಿತ್ತು. ಬಿಗ್ ಬಾಸ್ ಸೀಸನ್ 9ರಲ್ಲಿ ತುಂಬಾ ನಾಜೂಕಾಗಿ ಆಟವನ್ನು ಆಡಿ ಇವರು ಸಹ ವಿನ್ ಆಗುತ್ತಾರೆ ಎಂಬ ಭರವಸೆಯನ್ನು ಅನುಪಮಾ ಗೌಡ ಹುಟ್ಟಿಸಿದ್ದರು.

ಅನುಪಮಾ ಹೊಸ ಫೋಟೊಶೂಟ್

ಅನುಪಮಾ ಹೊಸ ಫೋಟೊಶೂಟ್

ನಟಿ, ನಿರೂಪಕಿ ಅನುಪಮಾ ಗೌಡ ಮೊದಲಿನಿಂದಲೂ ವಿಭಿನ್ನವಾಗಿ ಅವರದೇ ಆದ ಒಂದು ಸ್ಟೈಲ್‌ ಫಾಲೋ ಮಾಡುತ್ತಾ ಬಂದಿದ್ದಾರೆ. ಇನ್ನೂ ಸರಳವಾಗಿ ಸೀರೆಯುಟ್ಟು ನಿರೂಪಣೆಯನ್ನು ಮಾಡಿ ಸಹ ಅನುಪಮಾಗೌಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಅವರು ನೀಲಿ ಬಣ್ಣದ ಗೌನ್‌ನಲ್ಲಿ ಫೋಟೋ ಶೂಟ್ ಮಾಡಿಸಿರುವುದು ಸಾಕಷ್ಟು ವೈರಲ್ ಆಗಿದೆ. ಅನುಪಮಾಗೌಡ ತಾವು ನೀಲಿ ಬಣ್ಣದ ಡ್ರೆಸ್‌ನಲ್ಲಿ ಫೋಟೋ ತೆಗಿಸಿರುವುದನ್ನು ಇನ್ಸ್ಟಾಗ್ರಾಮ್ ನಲ್ಲಿ ಹರಿ ಬಿಟ್ಟಿದ್ದಾರೆ.

ಫೋಟೋಗೆ ವಾರೆವ್ಹಾ ಎಂದ ನೆಟ್ಟಿಗರು

ಫೋಟೋಗೆ ವಾರೆವ್ಹಾ ಎಂದ ನೆಟ್ಟಿಗರು

ಅನುಪಮಾಗೌಡ ಅವರ ನಗು ಎಲ್ಲರನ್ನೂ ಕ್ಲೀನ್ ಬೋಲ್ಡ್ ಮಾಡುವಂತೆ ಇದೆ. ಅವರು ನೀಡಿರುವ ಪೋಸ್‌ ಸಹ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅನುಪಮಾಗೌಡ ಅವರ ಫೋಟೋವನ್ನು ನೋಡಿ ಸಖತ್ ಲೈಕ್ಸ್ ಹಾಗೂ ಕಾಮೆಂಟನ್ನು ನೀಡಿದ್ದಾರೆ.‌ ಸದ್ಯಕ್ಕೆ ಅನುಪಮ ಗೌಡ ಬಿಗ್ ಬಾಸ್ ಸೀಸನ್ 9 ಮುಗಿಸಿಕೊಂಡು ತಮ್ಮಲ್ಲಿ ಆದ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ಮತ್ತೆ ಕಿರುತೆರೆ ನಿರೂಪಕಿ ಆಗ್ತಾರಾ?

ಮತ್ತೆ ಕಿರುತೆರೆ ನಿರೂಪಕಿ ಆಗ್ತಾರಾ?

ಅನುಪಮಾಗೌಡರವರು ಮತ್ತೆ ನಿರೂಪಣೆ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಆಸೆಯಾಗಿದೆ. ಕೆಲವರು ಅನುಪಮಾ ಗೌಡ ಅವರಿಗೆ ಈ ಬಗ್ಗೆ ಪ್ರಶ್ನೆಯನ್ನ ಮಾಡಿದ್ದಾರೆ. ವಾಪಸ್ ನೀವು ನಿರೂಪಣೆಗೆ ಯಾವಾಗ ಬರುತ್ತೀರಾ ನಿಮ್ಮ ನಿರೂಪಣೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ ಎಂದು ಅನುಪಮಾಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅನುಪಮಾ ಗೌಡ ಉತ್ತರ ಏನು ಎಂಬುದೇ ಕುತೂಹಲವಾಗಿದೆ.

ಮಾಡೆಲಿಂಗ್ ಕ್ಷೇತ್ರಕ್ಕೆ ಅನುಪಮಾ?

ಮಾಡೆಲಿಂಗ್ ಕ್ಷೇತ್ರಕ್ಕೆ ಅನುಪಮಾ?

ಅನುಪಮಾಗೌಡ ಫೋಟೋ ಶೂಟ್ ಮಾಡಿಸಿರುವುದನ್ನು ನೋಡಿದರೆ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ ಎಂಬ ಗುಸು ಗುಸು ಶುರುವಾಗಿದೆ. ಇಲ್ಲದಿದ್ದರೆ ಅವರು ಯಾಕೆ ಇಷ್ಟು ಟ್ರೆಂಡಿ ಆಗಿ ಫೋಟೋಶೂಟ್ ಮಾಡಿಸುತ್ತಿದ್ದರು ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳೇ ಎತ್ತಿದ್ದಾರೆ. ಕಿರುತರೆ, ಹಿರಿತೆರೆ‌ ಹಾಗೂ ನಿರೂಪಕಿಯಾಗಿ ಸಾಕಷ್ಟು ಸಕ್ಸಸ್ ಕಂಡಿರುವ ಅನುಪಮಾ ಮಾಡೆಲಿಂಗ್ ಕ್ಷೇತ್ರಕ್ಕೆ ಬರುತ್ತಾರಾ ಎಂಬುವುದು ಕುತೂಹಲವಾಗಿದೆ. ಇಲ್ಲಿರುವ ಕುತೂಹಲಕ್ಕೆಲ್ಲವೂ ಅನುಪಮಾ ಗೌಡ ಉತ್ತರಿಸಬೇಕಾಗಿದೆ.

More from Filmibeat

English summary
Bigg Boss anupama gowda new photoshoot Goes Viral. she has acted in serials and movies. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X