ಮಾಡರ್ನ್ ರೈತ ಶಶಿಗೆ ಮದುವೆ ಫಿಕ್ಸ್, ಸ್ವಾತಿ ಕೈ ಹಿಡಿಯಲಿರುವ ಶಶಿ ಕುಮಾರ್!
ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರಿಗೆ ಶಶಿಕುಮಾರ್ ಪರಿಚಿತ. ಆ ನಂತರ ಮಾಡರ್ನ್ ರೈತ ಎಂದು ಪ್ರಸಿದ್ದಿ ಪಡೆದಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದ ಬಳಿಕ, ಕೆಲವು ದಿನ ರೈತ ಪರ ವಿಚಾರಗಳಿಗೆ ಸುದ್ದಿ ಆಗಿದ್ದ ಶಶಿ ಕುಮಾರ್ ನಂತರ ಮಾಯವಾಗಿ ಬಿಟ್ಟಿದ್ದರು.
ಕಾರ್ಯಮದಲ್ಲಿ ಇರುವಾಗಲೆ ನಾನು ಆಧುನಿಕ ರೈತ ಎಂದು ಹೇಳಿಕೊಂಡಿದ್ದರು. ಜೊತೆಗೆ ಕೃಷಿಯಲ್ಲಿ ಪದವಿ ಪಡೆದಿದ್ದು, ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇದೆ ಎನ್ನುದನ್ನು ಹಲವು ಬಾರಿ ಹೇಳಿಕೊಂಡಿದ್ದು. ಮಾಡರ್ನ್ ರೈತ ಎನ್ನುವ ಹೆಸರಿಂದ ಕೆಲವು ಜನರು ಶಶಿ ಅವ್ರನ್ನು ಇಷ್ಟ ಪಟ್ಟಿದ್ದು ಇದೆ.
ಈಗ ಶಶಿಕುಮಾರ್ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಅದು ಅವರ ವೈಯಕ್ತಿಕ ವಿಚಾರವಾಗಿ. ಶಶಿ ಕುಮಾರ್ ಮದುವೆ ಫಿಕ್ಸ್ ಆಗಿದೆಯಂತೆ. ಇದೇ ವರ್ಷ ಶಶಿ ಧಾಮ್ ಧೂಮ್ ಅಂತ ಮದುವೆ ಆಗಲಿದ್ದಾರೆ. ಹುಡುಗಿ ಯಾರು? ಮದುವೆ ಯಾವಾಗ? ಎನ್ನುವ ಬಗ್ಗೆ ಮುಂದೆ ಓದಿ...
ಸ್ವಾತಿ ಕೈ ಹಿಡಿಯಲಿರುವ ಶಶಿ!
ಶಶಿಕುಮಾರ್‌ಗೆ ಈಗಾಗಲೇ ಮದುವೆ ನಿಗದಿ ಆಗಿದೆ. ಹುಡುಗಿ ಕರ್ನಾಟದವರೇ. ದೊಡ್ಡಬಳ್ಳಾಪುರದ ಸ್ವಾತಿ ಎಂಬ ಹುಡುಯನ್ನು ಶಶಿ ಮದುವೆ ಆಗ್ತಿದ್ದಾರಂತೆ. ಸದ್ಯ ಇದಿಷ್ಟು ಮಾಹಿತಿ ಮಾತ್ರವೇ ಲಭ್ಯ ಆಗಿದೆ. ಇನ್ನು ಕುಟುಂಬಸ್ಥರಾಗಲಿ ಅಥವಾ ಶಶಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಸದ್ಯದಲ್ಲೇ ಈ ಬಗ್ಗೆಯೂ ಮಾಹಿತಿ ಹೊರ ಬೀಳಲಿದೆ.
ಆಗಸ್ಟ್‌ನಲ್ಲಿ ಮದುವೆ!
ಶಶಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಸಾಕಷ್ಟು ತಯಾರಿ ನಡೆದಿದೆ. ಮೂಲಗಳ ಪ್ರಕಾರ ಸದ್ಯದಲ್ಲೇ ಶಶಿ ಕುಮಾರ್ ಮದುವೆಯಾಗಲಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 6 ಮತ್ತು 7 ರಂದು ಶಶಿ ಕುಮಾರ್ ಮದುವೆ ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಶಶಿ ಕುಮಾರ್ ಅಧಿಕೃತವಾಗಿ ಹೇಳಬೇಕಿದೆ. ಜೊತೆಗೆ ಮದುವೆ ಎಲ್ಲಿ ನಡೆಯಲಿದೆ ಎನ್ನುವ ಬಗ್ಗೆಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಸಿನಿಮಾ ಸಾಹಸಕ್ಕೆ ಶಶಿ!
ರಿಯಾಲಿಟಿ ಕಾರ್ಯಕ್ರಮದಲ್ಲಿ ಖ್ಯಾತಿ ಪಡೆದ ಬಳಿಕ ಶಶಿಕುಮಾರ್, ನಟ ಸುದೀಪ್ ಅವ್ರನ್ನು ಟೀಕಿಸಿ ವಿವಾದಕ್ಕೊಳಗಾಗಿದ್ದರು. ನಂತರ ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಆರಂಭಿಸಿದ್ದರು. ಜೊತೆಗೆ ಒಂದು ಸಿನಿಮಾ ಕೂಡ ಪ್ರಕಟ ಮಾಡಿದರು. ಸಿನಿಮಾ ಮಾಡಿ ಹೀರೋ ಆಗಲು ಹೊರಟಿದ್ದರು. ಆದರೆ ಆ ಸಿನಿಮಾ ಯಾವ ಹಂತದಲ್ಲಿ ಇದೆ, ಏನಾಗಿದೆ ಎನ್ನುವುದು ಬಹಿರಂಗವಾಗಿಲ್ಲ.
ಕೃಷಿಯಲ್ಲಿ ಪದವಿ!
ಕೃಷಿಯಲ್ಲಿ ಪದವಿ ಪಡೆದಿರುವ ಶಶಿಕುಮಾರ್ ರೈತ ಎಂಬ ಮಾನದಂಡದ ಮೇಲೆಯೇ ಬಿಗ್ಬಾಸ್ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರ ಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದಿದ್ದರು.
ಶಶಿ ಕುಮಾರ್ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದುಕೊಂಡಿದ್ದಾರೆ.


Click it and Unblock the Notifications











