BBK 11: ವೀಕೆಂಡ್‌ನಲ್ಲೂ ನರಕ ದರ್ಶನ; ಬೇಸರ ಹೊರ ಹಾಕಿದ ವೀಕ್ಷಕರು!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ ಕನ್ನಡ 11ರ ಮೊದಲ ಪಂಚಾಯ್ತಿ ನಡೆದಿದೆ. ಈ ಪಂಚಾಯ್ತಿಯಲ್ಲಿ ಯಾರೆಲ್ಲ ತಪ್ಪು ಮಾಡಿದ್ರು, ಯಾರೆಲ್ಲ ಸರಿ ಮಾಡಬೇಕಿತ್ತು ಎಂಬೆಲ್ಲಾ ವಿಚಾರಗಳು ಚರ್ಚೆಗೆ ಬಂದಿವೆ. ಅದರಲ್ಲೂ ಲಾಯರ್ ಜಗದೀಶ್ ಬಿಗ್ ಬಾಸ್ ಶೋವನ್ನೇ ಎಕ್ಸ್ ಪೋಸ್ ಮಾಡ್ತೀನಿ ಅಂತ ಹೇಳ್ತಾ ಇದ್ದರು. ಅದಕ್ಕೂ ಕಿಚ್ಚ ಕ್ಲಾರಿಟಿ ಕೊಟ್ಟಾಗಿದೆ. ನಿಮ್ಮಪ್ಪನಾಣೆಗೂ ಏನು ಮಾಡುವುದಕ್ಕೆ ಆಗಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಸುದೀಪ್ ಅವರ ಮಾತಿಗೆ ಲಾಯರ್ ಜಗದೀಶ್ ಕೂಡ ತಣ್ಣಗೆ ಆಗಿದ್ದಾರೆ.

ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಅರ್ಹರು.. ಅನರ್ಹರು ಎಂಬ ವಿಭಾಗ ಮಾಡಲಾಗಿತ್ತು. ಈ ಬಾರಿ ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್ ಮಾಡಲಾಗಿದೆ. ಆರಂಭದಲ್ಲಿಯೇ ಕಿಚ್ಚು ಹೆಚ್ಚಿಸುವ ಪ್ರಯತ್ನವಿದು. ಆದರೆ ಈ ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್ ನಲ್ಲಿ ವೀಕೆಂಡ್ ಬಂದ್ರು ನರಕವಾಸಿಗಳಿಗೆ ಮುಕ್ತಿ ಸಿಕ್ಕಿಲ್ಲ.

Big boss kannada 11 standing punishment for hell dwellers in weekend show

ನರಕವಾಸಿಗಳಿಗೆ ಕೂರಲು ಅವಕಾಶವಿಲ್ಲ

ಶನಿವಾರ ಮತ್ತು ಭಾನುವಾರ ಬಂತು ಅಂದ್ರೆ ಸಾಕಷ್ಟು ಜನ ಟಿವಿ ಮುಂದೆ ಕೂತು ಬಿಡುತ್ತಾರೆ. ಡೈಲಿ ಬಿಗ್ ಬಾಸ್ ನೋಡದವರು ಕೂಡ ಈ ಎರಡು ದಿನಗಳ ಬಿಗ್ ಬಾಸ್ ಅನ್ನು ನೋಡುತ್ತಾರೆ. ಸುದೀಪ್ ಪಂಚಾಯ್ತಿ ಅಷ್ಟು ಅದ್ಭುತವಾಗಿರುತ್ತದೆ. ಆದರೆ ನರಕವಾಸಿಗಳು ಮಾತ್ರ ವಾರದ ಪಂಚಾಯ್ತಿಯಲ್ಲೂ ನಿಂತೇ ಇದ್ದಾರೆ.

ಮುಕ್ತಿಗಾಗಿ ಕಾಯ್ತಿದ್ದಾರೆ ನರಕವಾಸಿಗಳು

ನರಕಕ್ಕೆ ಹೋಗಿ ಒಂದು ವಾರವಾಗಿದೆ. ಯಾವಾಗ ಬಿಡುಗಡೆ ಸಿಗಲಿದೆ ಎಂದು ಕಾಯುತ್ತಿದ್ದಾರೆ. ಈ ವಾರವೆಲ್ಲ ನರಕದಲ್ಲಿ ಏಳು ಜನ ಇರಬಹುದು. ಆದರೆ ಸ್ಚರ್ಗದಲ್ಲಿ ಇರುವವರು ಕೂಡ ವಾಪಾಸ್ ನರಕಕ್ಕೆ ಹೋಗುವ ಎಲ್ಲಾ ಸಾಧ್ಯತೆಯೂ ಇದೆ. ಆದರೆ ನರಕದಲ್ಲಿರಯವವರು ಅಲ್ಲಿಂದ ಬಿಡುಗಡೆಯಾಗಬೇಕು ಅಂದ್ರೆ ಟಾಸ್ಕ್‌ಗಳನ್ನು ಗೆಲ್ಲಲೇಬೇಕಿದೆ. ನರಕದಲ್ಲಿರುವ ಅನುಷಾ ರೈ ಟಾಸ್ಕ್ ಒಂದನ್ನು ಗೆದ್ದು ಎಲ್ಲರಿಂದ ಶಬ್ಬಾಶ್ ಗಿರಿ ತೆಗೆದುಕೊಂಡಿದ್ದಾರೆ. ಹೀಗೆ ಬಿಗ್ ಬಾಸ್ ನೀಡುವ ಟಾಸ್ಕ್ ಗಳನ್ನು ಗೆಲ್ಲಬೇಕಿದೆ.

ನರಕವಾಸಿಗಳ ಸ್ಥಿತಿ ಕಂಡು ವೀಕ್ಷಕರ ಬೇಸರ

ನರಕದಲ್ಲಿರುವವರಿಗೆ ಪಾಪ ಕರ್ಮಗಳ ನಿವಾರಣೆಯಾಗುವ ತನಕ ಮುಕ್ತಿಯಿಲ್ಲ. ಅಂದ್ರೆ ಟಾಸ್ಕ್‌ಗಳನ್ನು ಗೆದ್ದು ಹೊರಗೆ ಬರಲೇಬೇಕು. ಸುದೀಪ್ ಪಂಚಾಯ್ತಿಯಲ್ಲಿ ನಿಂತುಕೊಂಡೆ ಪಂಚಾಯ್ತಿಯನ್ನು ಕೇಳಿದ್ದಾರೆ. ಇದು ವೀಕ್ಷಕರ ಮನಸ್ಸಿಗೆ ಕೊಂಚ ಬೇಸರವೂ ಆಗಿದೆ. ಕಮೆಂಟ್ ಮೂಲಕ, ಮೀಮ್ಸ್ ಮೂಲಕ ಆ ಕೋಪವನ್ನು ಹೊರ ಹಾಕಿದ್ದಾರೆ. ವೀಕೆಂಡ್ ನಲ್ಲಾದರುಯ ನರಕವಾಸಿಗಳಿಗೆ ಕುಳಿತುಕೊಳ್ಳುವ ಅವಕಾಶ ನೀಡಬಹುದಿತ್ತೇನೋ ಅಂತ ಒಬ್ಬರು ಕಮೆಂಟ್ ಮಾಡಿದ್ರೆ, ಸುದೀಪ್ ಅವರು ಕೂಡ ನಿಂತುಕೊಂಡೆ ಬಿಗ್ ಬಾಸ್‌ ನಡೆಸಿಕೊಡಲ್ವಾ ಅಂತ ಇನ್ನೊಬ್ಬರು ಕೇಳಿದ್ದಾರೆ. ಹೀಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಈ ಹಿಂದಿನ ಸೀಸನ್‌ನಲ್ಲೂ ಅನರ್ಹರು ನೆಲದ ಮೇಲೆ ಕೂತು ಪಂಚಾಯ್ತಿ ಕೇಳಿದ್ದರು.

ಊಟಕ್ಕೂ ಸಮಸ್ಯೆ, ನೀರಿಗೂ ಸಮಸ್ಯೆ

ಇನ್ನು ನರಕವಾಸಿಗಳಿಗೆ ಊಟದ ವಿಚಾರದಲ್ಲೂ ಲಿಮಿಟೇಷನ್ ಮಾಡಿದೆ. ಗಂಜಿ ಊಟ ಬಿಟ್ಟರೆ ಮೊಸರನ್ನ ಅಷ್ಟೇ ನೀಡುತ್ತಿದೆ. ಈಗಾಗಲೇ ಅನುಷಾ ರೈ ನನಗೆ ಬೇರೆ ಏನಾದರೂ ಬೇರೆ ಊಟ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದರು. ಅದರಲ್ಲೂ ಬೇರೆ ಏನಾದರೂ ಬೇಕಾದಲ್ಲಿ ಸ್ವರ್ಗ ವಾಸಿಗಳ ಬಳಿ ಮನವಿ ಮಾಡಿನೇ ಕೇಳಬೇಕಾಗಿದೆ. ಹೀಗಾಗಿ ನರಕವಾಸಿಗಳು ಬಿಡುಗಡೆ ಭಾಗ್ಯಕ್ಕಾಗಿ ಕಾಯುತ್ತಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 October 6th episode. Here is the details about Viewers are bored that hell dwellers are standing still.
Read more about: sumanth bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X