BBK9: ಆರ್ಯವರ್ಧನ್ ಮಾತಿಗೆ ಮರುಳಾದ ಅನುಪಮಾ ತಾಯಿ!

By ಎಸ್ ಸುಮಂತ್

ಬಿಗ್ ಬಾಸ್ ಈ ವಾರವೆಲ್ಲಾ ಫ್ಯಾಮಿಲಿ ರೌಂಡ್ ಮಾಡಿದೆ. ಈ ಫ್ಯಾಮಿಲಿ ರೌಂಡ್‌ನಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಅವರ ಮನೆಯಿಂದ ಯಾರಾದರೂ ಒಬ್ಬರನ್ನು ಬಿಗ್ ಬಾಸ್ ಮನೆಗೆ ವಿಸಿಟ್ ಕೊಡುವಂತೆ ಮಾಡಿದೆ. ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ಮತ್ತಷ್ಟು ಎನರ್ಜಿ ಬೂಸ್ಟ್ ಆಗಲಿದೆ. ಬಿಗ್ ಬಾಸ್ ನಿರೀಕ್ಷೆ ಮಾಡಿದಂತೆಯೇ ಮನೆಯಲ್ಲೂ ಮ್ಯಾಜಿಕ್ ನಡೆಯುತ್ತಿದೆ.

ರಾತ್ರಿ 12 ಗಂಟೆ ಆಗುವುದರ ಒಳಗಾಗಿ ಮೂವರು ಸ್ಪರ್ದಿಗಳಿಗೆ ಮನೆಯಿಂದ ಯಾರನ್ನಾದರೂ ಕರೆಸುತ್ತಾರೆ. ನಿನ್ನೆಯೆಲ್ಲಾ ರಾಕೇಶ್, ದಿವ್ಯಾ ಅವರ ಅಮ್ಮನನ್ನು ಕರೆಸಿದ್ದರು. ಮಧ್ಯರಾತ್ರಿಯಲ್ಲಿ ಅರುಣ್ ಸಾಗರ್ ಹೆಂಡತಿಯನ್ನು ಕರೆಸಿದ್ದರು. ಇಂದು ಕೂಡ ಆ ರೌಂಡ್ ಮುಂದುವರೆದಿದೆ.

 ಅಮ್ಮಂದಿರನ್ನು ಮಕ್ಕಳು ಫುಲ್ ಖುಷಿ

ಅಮ್ಮಂದಿರನ್ನು ಮಕ್ಕಳು ಫುಲ್ ಖುಷಿ

ಬಿಗ್ ಬಾಸ್ ಆರಂಭವಾಗಿ 65 ದಿನಗಳ ಮೇಲಾಗುತ್ತಿದೆ. ಇನ್ನು ಏಣಿಕೆ ದಿನಗಳನ್ನು ಬಿಗ್ ಬಾಸ್ ಸ್ಪರ್ದಿಗಳು ಅನುಭವಿಸುತ್ತಿದ್ದಾರೆ. ಈ ದಿನಗಳನ್ನು ಮತ್ತಷ್ಟು ಸುಂದರ ಮಾಡಲು ಹೊರಟಿರುವುದು ಬಿಗ್ ಬಾಸ್. ಅದರಂತೆ ನಾಲ್ಕು ದಿನಗಳ ಕಾಲ ಪೋಷಕರನ್ನು ಕರೆಸುವ ಪ್ಲ್ಯಾನ್ ಮಾಡಿದ್ದಾರೆ. ಮೊದಲ ಅದೃಷ್ಟವಂತೆ ಅಂದ್ರೆ ಅದು ದಿವ್ಯಾ ಉರುಡುಗ. ನಿನ್ನೆ ಮೂವರು ಅಮ್ಮಂದಿರು ಬಂದಿದ್ದನ್ನು ಕಂಡು ಇನ್ನುಳಿದವರು ನಮ್ಮ ಅಮ್ಮ ಯಾವಾಗ ಬರುತ್ತಾರೆ ಅಂತ ಕಾಯುತ್ತಾ ಕುಳಿತಿದ್ದರು. ಆ ಕುತೂಹಲ ತಣಿದಿದ್ದು ಅನುಪಮಾ ಹಾಗೂ ಸಂಬರ್ಗಿ ಅವರ ಅಮ್ಮ ಮನೆಗೆ ಬಂದಿದ್ದಾರೆ.

 ಸಂಬರ್ಗಿ-ಅನುಪಮಾ ಫುಲ್ ಹ್ಯಾಪಿ

ಸಂಬರ್ಗಿ-ಅನುಪಮಾ ಫುಲ್ ಹ್ಯಾಪಿ

ನಿನ್ನೆಯಿಂದ ಕಾಯುತ್ತಿದ್ದ ದಿನ ಇಂದು ಬಂದಿದೆ. ಎಲ್ಲರೂ ಕೂತು ಮಾತನಾಡುತ್ತಿದ್ದಾಗ ಹೊರಗಿನಿಂದ ಡೋರ್ ತೆಗೆದು ಹಾಯ್ ಪ್ರಶಾಂತ್ ಅಂತ ಒಳಗೆ ಬಂದೇ ಬಿಟ್ಟರು. ಆಗ ಪ್ರಶಾಂತ್ ಅಲ್ಲಿಂದ ಎದ್ದು ಹೋಗಿ ಅಮ್ಮನನ್ನು ತಬ್ಬಿಕೊಂಡರು. ಮನೆ ಮಂದಿ ಕೂಡ ಅಷ್ಟೇ ಸಂತಸದಲ್ಲಿ ಓಡಿ ಹೋಗಿ ಅಮ್ಮನ ಬಳಿ ಆಶೀರ್ವಾದ ತೆಗೆದುಕೊಂಡರು. ಎಲ್ಲರನ್ನೂ ಅಪ್ಪಿಕೊಂಡು ಚೆನ್ನಾಗಿ ಮಾತನಾಡಿಸಿದರು. ಸಂಬರ್ಗಿ ಅವರ ಅಮ್ಮ ಮನೆಯಿಂದ ಹೋದ ಮೇಲೆ ಮತ್ತೆ ಅನುಪಮಾ ಅಮ್ಮ ಎಂಟ್ರಿ ಕೊಟ್ಟರು. ಅದೇ ಖುಷಿ, ಅದೇ ಪ್ರೀತಿಯಲ್ಲಿ ಓಡಿ ಬಂದು ಅನುಪಮಾ ಅವರ ಅಮ್ಮನನ್ನು ತಬ್ಬಿಕೊಂಡರು. ನಮ್ಮ ಅಮ್ಮ ಬರಲಿಲ್ಲವಲ್ಲ ಎಂಬ ಬೇಸರವನ್ನು ತೋರಿಸದೆ ಮನೆ ಮಂದಿ ಬಂದ ತಾಯಂದಿರನ್ನೆಲ್ಲ ಅಪ್ಪಿ ಮುದ್ದಾಡಿದ್ದಾರೆ.

 ಅನುಪಮಾ ಬಗ್ಗೆ ಮಾತನಾಡಿದ್ದಕ್ಕೆ ಏನಂದ್ರು ಅಮ್ಮ

ಅನುಪಮಾ ಬಗ್ಗೆ ಮಾತನಾಡಿದ್ದಕ್ಕೆ ಏನಂದ್ರು ಅಮ್ಮ

ಎಲ್ಲರೂ ಅನುಪಮಾ ಅಮ್ಮ ಬಂದಾಗಲೂ ಖುಷಿ ಪಟ್ಟರು. ಸಂಗೀತದಲ್ಲಿ ಸರಿಗಮ, ಅಮ್ಮನ ಪಕ್ಕ ಅನುಪಮಾ ಅಂತ ಎಲ್ಲರೂ ಖುಷಿಯಾಗಿ ಹಾಡು ಹಾಡುತ್ತಾ ಇದ್ದರು. ಅಮ್ಮ ಮಗಳ ಆಲಿಂಗನವಾಯಿತು. ಬಳಿಕ ಅನುಪಮಾ ಅವರ ಅಮ್ಮನನ್ನು ಎಲ್ಲರೂ ಸುತ್ತುವರೆದಿದ್ದರು. ಆಗ ರಾಕಿ, ಬಿಗ್ ಬಾಸ್ ಮನೆಯಲ್ಲೆಲ್ಲಾ ನಿಮ್ಮ ಮಗಳದ್ದೇ ಸೌಂಡು ಅಂತ ದೂರು ನೀಡಿದರು. ಆಗ ಅನುಪಮಾ ಅವರ ತಾಯಿ, ಯಾರನಾ ನಿಜ ಅಂದುಕೋ ಬೇಕು. ಎಲ್ಲಾರೂ ವಾಯ್ಸ್ ಮಾಡ್ತಾ ಇದ್ದೀರಾ. ನೀವೂ ಮಾತಾಡ್ತೀರಾ ಎಂದು ಮಗಳನ್ನು ಸಪೋರ್ಟ್ ಮಾಡಿಕೊಂಡಿದ್ದಾರೆ. ಆಗ ಅನುಪಮಾ ನೀವೇ ಕೇಳಿ ನೀವೇ ಸಿಕ್ಕಿ ಹಾಕಿಕೊಂಡ್ರಲ್ಲ ಎಂದು ರೇಗಿಸಿದ್ದಾರೆ.

 ಆರ್ಯವರ್ಧನ್ ಮಾತು ಅಂದ್ರೆ ಇಷ್ಟ

ಆರ್ಯವರ್ಧನ್ ಮಾತು ಅಂದ್ರೆ ಇಷ್ಟ

ಹೀಗೆ ಎಲ್ಲರೂ ಕಾಲೆಳೆಯುತ್ತಾ, ಮಾತನಾಡುತ್ತಾ ನಿಂತಿದ್ದಾಗ ಪಕ್ಕದಲ್ಲಿಯೇ ಇದ್ದ ಆರ್ಯವರ್ಧನ್ ಅವರನ್ನು ಮಾತನಾಡಿಸಿದ್ದಾರೆ. ನಿಮ್ಮ ಮಾತಿಷ್ಟ ನೀವು ಹೊಡೆಯೋ ಡೈಲಾಗ್ ಇಷ್ಟ. ದಡ್ಡರಂಗೆ ಮಾತನಾಡಿಸಿದ್ರು ಏನೇನೋ ಮಾತನಾಡುತ್ತೀರಿ ಅದೆಲ್ಲ ಇಷ್ಟ ಅಂತ ಅನುಪಮಾ ಅವರ ಅಮ್ಮ ನಕ್ಕಿದ್ದಾರೆ. ಅಮ್ಮನ ಮಾತು ಕೇಳಿಸಿಕೊಂಡು ಆರ್ಯವರ್ಧನ್ ಕೂಡ ನಕ್ಕಿದ್ದಾರೆ. ಮನೆ ಮಂದಿಗೆಲ್ಲಾ ಆರ್ಯವರ್ಧನ್ ಅಂದ್ರೆ ವೀಕೆಂಡ್‌ನಲ್ಲೂ ನಗು, ವೀಕ್ ಡೇಸ್‌ನಲ್ಲೂ ನಗು ಎಂದು ಕಾಲೆಳೆದಿದ್ದಾರೆ.

 ಸಂಬರ್ಗಿ ತಾಯಿಗೆ ರಾಜಣ್ಣ ಇಷ್ಟವಂತೆ

ಸಂಬರ್ಗಿ ತಾಯಿಗೆ ರಾಜಣ್ಣ ಇಷ್ಟವಂತೆ

ಬಿಗ್ ಬಾಸ್ ಮನೆಯಲ್ಲಿ ಈಗ ಹನ್ನೊಂದು ಜನ ಉಳಿದುಕೊಂಡಿದ್ದಾರೆ. ಪೋಷಕರಿಗೆ ಅವರ ಮಕ್ಕಳ ಜೊತೆಗೆ ಬೇರೆಯವರು ಕೂಡ ಇಷ್ಟವಾಗುತ್ತಾರೆ. ಅದರಂತೆ ಸಂಬರ್ಗಿ ಅವರ ತಾಯಿಗೆ ರಾಜಣ್ಣ ಅವರು ಇಷ್ಟವಂತೆ. ಅದನ್ನು ರಾಜಣ್ಣ ಅವರ ಮುಂದೆ ಹೇಳಿದಾಗ, "ವೋಟ್ ಮಾತ್ರ ನಿಮ್ಮ ಮಗನಿಗೆ ಹಾಕಿಬಿಡುತ್ತೀರಾ ಅಲ್ವಾ" ಎಂದಿದ್ದಾರೆ. ಬಳಿಕ ಮನೆಯಿಂದ ಹೊರಟಾಗ, ನನಗೂ ಇಲ್ಲಿ ಬಂದು ಇರಬೇಕು ಎಂದು ಆಸೆಯಾಗ್ತಾ ಇದೆ ಎಂದಿದ್ದಾರೆ. ಆಗ ಅಲ್ಲಿಯೇ ಇದ್ದ ದೀಪಿಕಾ, ಹೊರಗಡೆಗೆ ಯಾರನ್ನು ಕಳುಹಿಸೋಣಾ ಎಂದಾಗ "ನನ್ನ ಮಗನನ್ನೇ ಕಳುಹಿಸಿಬಿಡಿ" ಎಂದಿದ್ದಾರೆ.

More from Filmibeat

English summary
Bigg Boss Kannada 9 November 30th Episode Written Update. Here is the details about Anupama and Sambaragi Mother Entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X