ಹಾರರ್ ಅನ್ನೋ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡ್ರಾ ಬಿಗ್ ಬಾಸ್ ಬೆಡಗಿ ಪ್ರಿಯಾಂಕಾ ತಿಮ್ಮೇಶ್? ಯಾವುದದು?

By ಅನಿತಾ ಬನಾರಿ

ನಟಿ ಪ್ರಿಯಾಂಕಾ ತಿಮ್ಮೇಶ್ ಎಲ್ಲರಿಗೂ ನೆನಪಿರಲೇಬೇಕು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 8' ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆಗೆ ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಇದ್ದಷ್ಟು ದಿನವೂ ಆಕೆ ಬಹಳಷ್ಟು ಸದ್ದು ಮಾಡಿದ್ದರು. ಬಹಳ ಚಿಕ್ಕ ವಯಸ್ಸಿನಿಂದಲೇ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಂಡ ಈಕೆ ಗಣಪ ಎಂಬ ಚಿತ್ರದ ನಾಯಕಿಯಾಗಿ ಕೆರಿಯರ್ ಶುರು ಮಾಡಿದ್ದರು.

ಇದೀಗ ಹಾರರ್ ಸಿನಿಮಾ ಒಂದನ್ನು ಒಪ್ಪಿಕೊಂಡಿರುವ ನಟಿ ಪ್ರಿಯಾಂಕಾ ತಿಮ್ಮೇಶ್ ತಮ್ಮ ಆಕಾಂಕ್ಷೆ ಹಾಗೂ ಅನುಭವಗಳನ್ನು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೇ ಕಾಮಿಡಿ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ ನಟ ಕೋಮಲ್‌ಗೆ ನಾಯಕಿಯಾಗಿ ನಟಿಸುತ್ತಿರುವ ಈ ಹಾರರ್ ಸಿನಿಮಾದ ಹೆಸರು 'ಕುಟೀರ'. ಅನೂಪ್ ಆಂಟನಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಹಾರರ್ ಎಂಬ ಕಾರಣಕ್ಕೆ ನಟಿಸಲು ಒಪ್ಪಿಕೊಂಡಿದ್ದಾರೆ.

Big Boss kannada fame Priyanka Thimmesh will be the heroine of the horror movie

ಹಾರರ್ ಸಿನಿಮಾಗಳಲ್ಲಿ ನಟಿಸುವುದು ನಿಜವಾಗಿಯೂ ಕಷ್ಟ ಎಂದು ಪ್ರಿಯಾಂಕಾ ತಿಮ್ಮೇಶ್ ಹೇಳುತ್ತಾರೆ. ಪ್ರೇಕ್ಷಕರಿಗೆ ಹಾರರ್ ಸಿನಿಮಾ ವೀಕ್ಷಿಸುವಾಗ ಭಯ ಬರುವಂತೆ ಮಾಡುವುದು ಸುಲಭದ ಮಾತಲ್ಲ ಎಂದು ಪ್ರಿಯಾಂಕಾ ಹೇಳುತ್ತಾರೆ. ಏಕೆಂದರೆ ಪ್ರೇಕ್ಷಕರು ಭಯಪಡಬೇಕೆಂದರೆ ಪರದೆಯಲ್ಲಿ ನಡೆಯುವ ಹಲವಾರು ಘಟನೆಗಳು ಪ್ರೇಕ್ಷಕರಿಗೆ ನಿಜವೆಂದೇ ಎನಿಸಬೇಕು ಎಂಬುದು ಪ್ರಿಯಾಂಕಾ ಅವರ ಅಭಿಪ್ರಾಯ.

ಹಾರರ್ ಸಿನಿಮಾದಲ್ಲಿ ನಾವು ನಟಿಸುವಾಗ ನಮ್ಮ ಹಿಂದೆ ಮುಂದೆ ಸುತ್ತಮುತ್ತ ಏನು ಇಲ್ಲದಿದ್ದರೂ ಏನೋ ಇದೆ ಎಂಬ ಕಲ್ಪನೆಯಲ್ಲಿ ನಾವು ನಟಿಸುತ್ತಾ ಹೋಗಬೇಕು. ಇದು ನಟರಿಗೆ ಬಹುದೊಡ್ಡ ಚಾಲೆಂಜ್. ಈ ರೀತಿಯ ಹೊಸದೊಂದು ಚಾಲೆಂಜ್‌ಗೆ ನನ್ನನ್ನು ನಾನು ಒಡ್ಡಿಕೊಂಡಿದ್ದೇನೆ. ನನ್ನ ಕಂಫರ್ಟ್ ಜೋನ್ ನಿಂದ ಈ ಮೂಲಕ ಹೊರಬರಲಿದ್ದೇನೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ.

ಕುಟೀರ ಸಿನಿಮಾದ ವಿಭಿನ್ನ ಚಿತ್ರಕಥೆಯನ್ನು ಕೇಳಿದಾಗಲೇ ಪ್ರಿಯಾಂಕಾಗೆ ಈ ಸಿನಿಮಾದಲ್ಲಿ ನಟಿಸಲೇಬೇಕು ಎಂಬ ಹಂಬಲವಾಯಿತಂತೆ. ಇದರಲ್ಲಿ ಆಕೆಯದ್ದು ಒಂದು ವಿಶೇಷ ಪಾತ್ರ ಹೌದು. ಆಂಗ್ಲೋ ಇಂಡಿಯನ್ ಆಗಿ ಕಾಣಿಸಿಕೊಳ್ಳುವ ಆಕೆಯ ಪಾತ್ರ ಕಥೆಯ ಎರಡನೇ ಭಾಗದಲ್ಲಿ ಬಹಳಷ್ಟು ಟ್ರಾನ್ಸ್‌ಫರ್ಮೆಷನ್ ಅನ್ನು ಹೊಂದಲಿದೆಯಂತೆ.

Big Boss kannada fame Priyanka Thimmesh will be the heroine of the horror movie

ಒಟ್ಟಿನಲ್ಲಿ ಹೇಳುವುದಾದರೆ ವಿಶೇಷ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ನಟಿಸುವ ಮೊದಲು ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರಂತೆ ನಟಿ ಪ್ರಿಯಾಂಕಾ ತಿಮ್ಮೇಶ್. ಹಲವಾರು ಹಾರರ್ ಸಿನಿಮಾಗಳನ್ನು ನೋಡಿ ಒಂದಷ್ಟು ಅನುಭವಗಳನ್ನು ಸೂಕ್ಷ್ಮಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೀತಿಯಿಂದ' ಧಾರಾವಾಹಿಯಲ್ಲಿ ಗುಲಾಬಿ ಆಗಿ ನಟಿಸುವ ಮೂಲಕ ಪ್ರಿಯಾಂಕಾ ತಿಮ್ಮೇಶ್ ನಟನೆಗೆ ಕಾಲಿಟ್ಟಿದ್ದರು. ಮುಂದೆ 'ಗಣಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈಕೆ 'ಅಕಿರ', 'ಪಟಾಕಿ', 'ಭೀಮಸೇನ ನಳಮಹಾರಾಜ', 'ಅರ್ಜುನ ಗೌಡ', 'ಮೇಡ್ ಇನ್ ಚೈನಾ', 'ಶುಗರ್ ಲೆಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Actress Priyanka Thimmesh in the movie Kutira, and prepared a lot for the role:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X