BBK 11: ಬಿಗ್ ಬಾಸ್ ಒಂದು ವಾರದಲ್ಲಿ ಅಂತಾರೆ.. ಅದೇನು ಶಾಪ್‌ನಲ್ಲಿ ಸಿಗೋ ಚಡ್ಡಿಯಾ..?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಈ ಬಾರಿ ಕನ್ನಡದಲ್ಲಿ ಹೊಸ ಸೀಸನ್ ಶುರುವಾಗಿ ಒಂದು ವಾರ ಆಗಿದೆ. ಕಳೆದ ಭಾನುವಾರ ಹದಿನೇಳು ಮಂದಿ ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ಕಾಲಿಟ್ಟಿದ್ದರು. ನರಕಕ್ಕೆ ಏಳು ಮಂದಿ ಹೋದರೆ ಸ್ವರ್ಗಕ್ಕೆ ಹತ್ತು ಮಂದಿ ಹೋದರು. ಒಂದು ವಾರವನ್ನ ಬಹಳ ಅಚ್ಚುಕಟ್ಟಾಗಿ ಕಳೆದಿದ್ದಾರೆ ಎನ್ನುವುದಕ್ಕಿಂತ, ಗುದ್ದಾಟ, ಕಿತ್ತಾಟದಲ್ಲೇ ಕಳೆದು ಬಿಟ್ಟಿದ್ದಾರೆ.
ವಾರಪೂರ್ತಿ ನಡೆದ ಬಿಗ್ ಬಾಸ್ ಮನೆ ಮಂದಿಯ ಆಟಾಟೋಪಗಳಿಗೆ ಕೊನೆಯ ವಾರ ಅಂದ್ರೆ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ತನ್ನ ಪಂಚಾಯ್ತಿಯಲ್ಲಿ ಬ್ರೇಕ್ ಹಾಕುತ್ತಾರೆ. ಹಾರಾಡಿದವರ ರೆಕ್ಕೆ ಪುಕ್ಕ ಕಟ್ ಮಾಡುತ್ತಾರೆ. ವೀಕೆಂಡ್ ಎಪಿಸೋಡ್‌ಗಳಿಗಾಗಿ ಸಾಕಷ್ಟು ಜನ ವೀಕ್ಷಕರು ಕಾಯುತ್ತಿರುತ್ತಾರೆ. ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ಧನರಾಜ್ ಫುಲ್ ಹೈಲೆಟ್ ಆಗಿದ್ದಾರೆ.

ಕಿಚ್ಚನ ಪಂಚಾಯ್ತಿಗೆ ಮನೆ ಮಂದಿ ಹಾಜರು
ವಾರದ ಕಥೆ ಕಿಚ್ಚನ ಜೊತೆ ನಿನ್ನೆಯಷ್ಟೇ ಮುಗಿದಿದೆ. ಇವತ್ತು ಸೂಪರ್ ಸಂಡೇ ವಿತ್ ಸುದೀಪ ಜೊತೆ ಪಂಚಾಯ್ತಿ ನಡೆಯುತ್ತದೆ. ಈ ಪಂಚಾಯ್ತಿ ಮುಗಿದ ಮೇಲೆ ಮೊದಲ ವಾರವೇ ಹದಿನೇಳು ಮಂದಿಯಲ್ಲಿ ಒಬ್ಬರಿಗೆ ಬಿಗ್ ಬಾಸ್ ಮನೆಯ ಋಣ ಮುಗಿಯುತ್ತದೆ. ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಬರುತ್ತಾರೆ. ಮೊದಲ ವಾರವೇ ಹಿರಗೆ ಬರುವುದು ಯಾರೆಂಬ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇದೆ.
ಕಿಚ್ಚನ ಕಣ್ಣಿಗೆ ಬಿದ್ರು ಧನರಾಜ್
ಬಿಗ್ ಬಾಸ್ ಮನೆಗೆ ಈ ಬಾರಿ ಧನರಾಜ್ ಆಚಾರ್ಯ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತು ಸಿಕ್ಕಾಪಟ್ಟೆ ಫೇಮಸ್. ಅವರ ಊರಿನಲ್ಲೇ ಇರುವ ಧನರಾಜ್, ತನ್ನ ಫ್ಯಾಮಿಲಿ, ಫ್ರೆಂಡ್ ಜೊತೆ ಸೇರಿಯೇ ಕಂಟೆಂಟ್ ಕ್ರಿಯೇಟ್ ಮಾಡುತ್ತಾರೆ. ಈಗ ಬಿಗ್ ಬಾಸ್ ಮನೆಗೆ ಬಂದಾಗಲೂ ಅವರ ಹಾಸ್ಯಪ್ರಜ್ಞೆ ಹೊರಗೆ ಬರುತ್ತಿದೆ. ಕುಂತಲ್ಲಿ ನಿಂತಲ್ಲಿ ಹಾಸ್ಯ ಮಾಡುತ್ತಾರೆ. ಇದೀಗ ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲೂ ಧನರಾಜ್ ಗಮನ ಸೆಳೆದಿದ್ದಾರೆ.
ಧನರಾಜ್ ಕಣ್ಣಲ್ಲಿ ಪ್ರಾಣಿಗಳ ನೋಟ
ಕಿಚ್ಚ ಸುದೀಪ್ ಅವರು ಧನರಾಜ್ ಅವರಿಗೆ ಒಂದು ಟಾಸ್ಕ್ ನೀಡಿದ್ದಾರೆ. ಮನೆಯವರನ್ನೆಲ್ಲಾ ಯಾವ ಪ್ರಾಣಿಗೆ ಹೋಲಿಕೆ ಮಾಡುತ್ತೀರಿ ಎಂಬ ಟಾಸ್ಕ್. ಒಂದು ವಾರದಲ್ಲಿ ಧನರಾಜ್ ನೋಡಿದ ಸ್ಪರ್ಧಿಗಳು ಅವರ ಕಣ್ಣಲ್ಲಿ ಯಾವ ರೀತಿ ಕಾಣಿಸುತ್ತಾರೆ ಎಂಬ ಕುತೂಹಲ. ಅದಕ್ಕೆ ಧನರಾಜ್ ಹೇಳಿದ್ದು ಹೀಗೆ 'ಐಶ್ವರ್ಯಾ ಅವರನ್ನ ಆನೆಗೆ ಹೋಲಿಸುತ್ತೇನೆ' ಎಂದಾಗ ಐಶ್ವರ್ಯಾಗೆ ಶಾಕ್ ಆಗಿದೆ. ಆಗ ಧನರಾಜ್, ಆನೆ ಕೂಗಿದಂತೆ ಕೂಗಿದ್ದಾರೆ. ಇನ್ನು ಭವ್ಯಾ ಅವರನ್ನು ಜಿಂಕೆ ಮರಿಗೆ ಹೋಲಿಸಿ, 'ನಾನು ಕೂಡ ಜಿಂಕೆ ಅಲ್ವಾ. ಆದ್ರೆ ಇದು ಅಣ್ಣ ತಂಗಿ ಜಿಂಕೆ. ನನ್ನ ಹೆಂಡತಿ ಮನೆಯಲ್ಲಿ ನೋಡ್ತಾ ಇರ್ತಾಳೆ ಸರ್ ಅದಕ್ಕೆ' ಎಂದು ಕಾಮಿಡಿ ಮಾಡಿದ್ದಾರೆ.
ಜಗದೀಶ್ ಟಾಂಗ್ ಕೊಟ್ಟ ದನರಾಜ್
ಜಗದೀಶ್ ವಿಚಾರ ಬಂದಾಗ ಊಸರವಳ್ಳಿಗೆ ಹೋಲಿಕೆ ಮಾಡಿರುವ ಧನರಾಜ್, ಒಂದು ಸಲ ಚಾನೆಲ್ ಅನ್ನೇ ತೆಗೆದುಕೊಳ್ಳುತ್ತೀನಿ. ಇನ್ನೊಂದು ಸಲ ಹೇಳ್ತಾರೆ ನಾನು ಪ್ರಪಂಚವನ್ನೇ ಕೊಂಡುಕೊಳ್ತೇನೆ ಅಂತ ಹೇಳ್ತಾರೆ. ಅದೇನು ಶಾಪ್ ನಲ್ಲಿ ಸಿಗುವ ಕಾಚಾನಾ.. ಬಟ್ಟೆನಾ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಸುದೀಪ್ ಅವರು ಕೂಡ ಗೊಳ್ ಎಂದು ನಕ್ಕಿದ್ದು ಪ್ರೋಮೊ ವೈರಲ್ ಆಗುತ್ತಿದೆ.


Click it and Unblock the Notifications











