ಮೋಕ್ಷಿತಾ ಪೈ ಮನೆಗೆ ಬಂದ ಹೊಸ ಅತಿಥಿ ; ಬೆಲೆ ಎಷ್ಟು ? ವಿಶೇಷತೆಗಳೇನು ?

ಯಾರೇ ಇರಲಿ ಚಿಕ್ಕ ಚಿಕ್ಕ ಕನಸುಗಳು ನನಸು ಆದಾಗ ಸಿಕ್ಕಾಪಟ್ಟೆ ಖುಷಿಯಾಗುತ್ತೆ.ಅಂತದ್ದರಲ್ಲಿ ಕಂಡಿದ್ದ ಬಹುದೊಡ್ಡ ಕನಸು ಒಂದು ನನಸಾದಾಗ ಆಗುವ ಸಂಭ್ರಮವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಮನದ ಮೂಲೆಯಲ್ಲಿ ಕಾಪಿಟ್ಟಿದ್ದ ಆಸೆ ಈಡೇರಿದಾಗ ಬದುಕು ನಮಗೆ ನೀಡಿದ ಅತ್ಯಂತ ದೊಡ್ಡ ಉಡುಗೊರೆ ಇದು ಎಂಬ ಭಾವನೆ ಬರುತ್ತೆ. ಸುರಿಸಿದ ಬೆವರಿಗೆ ತಕ್ಕ ಪ್ರತಿಫಲ ಸಿಕ್ತು ಎಂಬ ಆಲೋಚನೆ ಬರುತ್ತೆ. ಸೋಲೊಪ್ಪದ ಛಲವೊಂದಿದ್ದರೆ ಸಾಕು, ಕಾಲವೇ ನಮಗೆ ಬೇಕಾದ್ದನ್ನು ಹುಡುಕಿಕೊಂಡು ಬಂದು ಕೊಡುತ್ತೆ. ಸದ್ಯ ಮೋಕ್ಷಿತಾ ಇಂತಹದ್ದೇ ಒಂದು ಭಾವನೆಯಲ್ಲಿ ತೇಲುತ್ತಿದ್ದಾರೆ. ಸಂಭ್ರಮದ ಅಲೆಯಲ್ಲಿದ್ದಾರೆ.

ಹೌದು, ಮೋಕ್ಷಿತಾ ಪೈ.. ಕನ್ನಡಿಗರ ಮೆಚ್ಚಿನ ''ಪಾರು''. ತಮ್ಮ ಅಭಿನಯದಿಂದ ಕನ್ನಡಿಗರ ಹೃದಯ ಗೆದ್ದ ಮೋಕ್ಷಿತಾ ಪೈ ''ಬಿಗ್ ಬಾಸ್'' ಮನೆಯಲ್ಲಿಯೂ ಕೂಡ ಮೋಡಿ ಮಾಡಿದರು. ''ಬಿಗ್ ಬಾಸ್'' ಮನೆಯಲ್ಲಿ ಕೊನೆಯವರೆಗೆ ಇದ್ದರು. ಮೂರನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

big-boss-to-jagaddhatri-queen-mokshitha-pai-s-new-mahindra-xuv400-ev

ಇದರ ನಡುವೆ ಅಂದರೆ ''ಬಿಗ್ ಬಾಸ್'' ಮನೆ ಪ್ರವೇಶಿಸುವ ಮುನ್ನ ನಿರ್ಭಯಾ 2.. ರುಕ್ಮಿಣಿ ರಾಧಾಕೃಷ್ಣ.. ಚಿತ್ರಕ್ಕೆ ನಾಯಕಿಯೂ ಆದರು. ತಮಿಳುನಾಡನ್ನು ಒಂದು ಸುತ್ತು ಹಾಕಿಕೊಂಡು ಬಂದರು. ''ಮೀನಾಕ್ಷಿ ಪೊಣ್ಣುಂಗ'' ಧಾರಾವಾಹಿಯಲ್ಲಿ ಅಭಿನಯಿಸಿದರು. ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ನಂತರ ''ಮಿಡಲ್ ಕ್ಲಾಸ್ ರಾಮಾಯಣ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದರು. ಇಷ್ಟೇ ಅಲ್ಲ ''ಅದೇ ಕಣ್ಣು'' ಎಂಬ ಮೈಕ್ರೋ ಸೀರಿಸ್​ನಲ್ಲಿಯೂ ನಟಿಸಿದ್ದಾರೆ ಮೋಕ್ಷಿತಾ.

ಸದ್ಯ ಮೋಕ್ಷಿತಾ ಪೈ ''ಜಗದ್ಧಾತ್ರಿ'' ಧಾರಾವಾಹಿ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ 'ಜೀ ಕನ್ನಡ'ದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ. ಈಗಾಗಲೇ ಚಿಕ್ಕ ಪ್ರೋಮೋ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಮೋಕ್ಷಿತಾ ಅವರ ರಗಡ್ ಅವತಾರ ನೋಡಲು ಕಾತುರದಿಂದ ಕಾಯುತ್ತಿದ್ಧಾರೆ.

ಇಂಥಾ ಮೋಕ್ಷಿತಾ ಪೈ ತಮ್ಮ ಬಹುಕಾಲದ ಕನಸೊಂದನ್ನು ಸದ್ಯ ನನಸು ಮಾಡಿಕೊಂಡಿದ್ದಾರೆ. ತಮ್ಮ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ.

ಹೌದು, ಮೋಕ್ಷಿತಾ ಪೈ ಮಹೀಂದ್ರಾ ಕಂಪನಿಯ XUV400 EV ಖರೀದಿಸಿದ್ದಾರೆ. ವಿಶೇಷ ಅಂದರೆ ಈ ಕಾರು ಪರಿಸರ ಸ್ನೇಹಿ. ಪೆಟ್ರೋಲ್-ಡಿಸೇಲ್ ಕಾರಿಗೆ ಮಣೆ ಹಾಕದೇ ಮೋಕ್ಷಿತಾ ಕೆಂಪು ಬಣ್ಣದ ಅತ್ಯಾಕರ್ಷಕ ಫೀಚರ ಹೊಂದಿರುವ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ.

big-boss-to-jagaddhatri-queen-mokshitha-pai-s-new-mahindra-xuv400-ev

ಗೂಗಲ್‌ನಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಈ ಕಾರಿನ ಬೆಲೆ ₹16.16 ಲಕ್ಷದಿಂದ ₹21.11 ಲಕ್ಷಗಳವರೆಗೆ ಇದೆ. ಇನ್ನು ಮಹೀಂದ್ರಾ ಕಂಪನಿಯ ಈ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು. 456 ಕಿ.ಮೀವರೆಗೆ ಆರಾಮಾಗಿ ತಿರುಗಾಡಬಹುದು.

ಕೇವಲ 8.3 ಸೆಕೆಂಡ್‌ಗಳಲ್ಲಿ 0 ದಿಂದ 100 ಕೀಲೋ ಮೀಟರ್ ವೇಗ ತಲುಪುವ ಸಾಮರ್ಥ್ಯ ಇದಕ್ಕಿದೆ. ಇನ್ನು ಇದು ಗೇರ್ ಅಲ್ಲ ಬದಲಿಗೆ ಸಂಪೂರ್ಣ ಆಟೋಮ್ಯಾಟಿಕ್ ಕಾರ್. ಫನ್, ಫಿಯರ್ ಲೆಸ್, ಮತ್ತು ಫಾಸ್ಟ್ ಹೀಗೆ ಮೂರು ಡ್ರೈವಿಂಗ್ ಮೋಡ್‌ಗಳು ಈ ಕಾರಿನಲ್ಲಿವೆ.

ಸನ್‌ರೂಫ್, ಆರು ಏರ್‌ಬ್ಯಾಗ್‌ ಮತ್ತು ರೀಜನರೇಟಿವ್ ಬ್ರೇಕಿಂಗ್‌ನಂತಹ ಸೌಲಭ್ಯಗಳು ಕೂಡ ಈ ಕಾರಿನಲ್ಲಿವೆ. 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದ್ದು, ಇದು ಆಪಲ್, ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುತ್ತೆ.

ಮತ್ತೊಂದು ವಿಶೇಷ ಅಂದರೆ ಈ ಕಾರಿನಲ್ಲಿ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಕೂಡ ಇದೆ. ಅಂದರೆ ಚಾಲಕ ಮತ್ತು ಪಕ್ಕದಲ್ಲಿ ಕುಳಿತವರು ತಮಗೆ ಬೇಕಾದ ವಿಭಿನ್ನ ತಾಪಮಾನವನ್ನು (Temperature) ಸೆಟ್ ಮಾಡಿಕೊಳ್ಳಬಹುದು. ಸದ್ಯ ಹಲವರು ಮೋಕ್ಷಿತಾ ಪೈ ಅವರಿಗೆ ಶುಭಾಶಯ ಕೋರುತ್ತಿದ್ಧಾರೆ.

English summary
Jagaddhatri lead actress Mokshitha Pai buys a Mahindra XUV400 EV! Discover the details behind her post-Big Boss success and her shift to electric luxury.
Read more about: biggboss car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X