'ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕೊಟ್ಟ ಸರ್ಪ್ರೈಸ್.!

By Bharath Kumar

Recommended Video

ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕೊಟ್ಟ ಸರ್ಪ್ರೈಸ್ | FIlmibeat Kannada

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿ ವಿನ್ನರ್ ಆಗಿ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಕಿರೀಟ ಗೆದ್ದ ಚಂದನ್ ಗೆ ಅಭಿಮಾನಿಗಳಿಂದ ಶುಭಾಯಶಗಳ ಮಹಾಪೂರವೇ ಹರಿದು ಬರುತ್ತಿದೆ.

ಅಂದ್ಹಾಗೆ, ಚಂದನ್ ಶೆಟ್ಟಿಗೆ ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಗುರುಗಳು ಎನ್ನುವುದು ಸ್ವತಃ ಚಂದನ್ ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಹೀಗಾಗಿ, ಬಿಗ್ ಬಾಸ್ ಚಂದನ್ ಗೆ ಗುರುಗಳಿಂದ ಏನಾದರೂ ವಿಶೇಷ ಉಡುಗೊರೆ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು.

ಆ ನಿರೀಕ್ಷೆಯಂತೆ ಚಂದನನ್ ಶೆಟ್ಟಿಗೆ, ಜನ್ಯ ಸರ್ಪ್ರೈಸ್ ನೀಡಿದ್ದಾರೆ. ಏನದು? ಮುಂದೆ ಓದಿ....

ಫೋನ್ ಮಾಡಿದ ಅರ್ಜುನ್ ಜನ್ಯ

ಫೋನ್ ಮಾಡಿದ ಅರ್ಜುನ್ ಜನ್ಯ

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸರ್ಪ್ರೈಸ್ ಕಾಲ್ ಮಾಡಿದ್ದರು. ಟಿವಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಚಂದನ್ ಗೆ ಜನ್ಯ ಫೋನ್ ಮಾಡಿ ಮಾತನಾಡಿದ್ದಾರೆ.

ಅಭಿಮಾನಿಯಂತೆ ಬಕ್ರ ಮಾಡಿದ್ದಾರೆ

ಅಭಿಮಾನಿಯಂತೆ ಬಕ್ರ ಮಾಡಿದ್ದಾರೆ

ಚಂದನ್ ಶೆಟ್ಟಿಗೆ, ಒಬ್ಬ ಅಭಿಮಾನಿಯಂತೆ ಫೋನ್ ಮಾಡಿದ್ದ ಅರ್ಜುನ್ ಜನ್ಯ, ನಿಮ್ಮನ್ನ ನಾನು ಮೊದಲಿನಿಂದಲೂ ನೋಡಿದ್ದೇನೆ. ಮೊದಲ ದಿನದಿಂದ ನಿಮಗೆ ವೋಟ್ ಮಾಡಿದ್ದೀನಿ ಎಂದು ಮಾತನಾಡಿದರು. ಆದ್ರೆ, ಇದು ಯಾರು ಎಂದು ಚಂದನ್ ಶೆಟ್ಟಿಗೆ ಗೊತ್ತಾಗಲಿಲ್ಲ.

ಫುಲ್ ಖುಷ್ ಆದ ಚಂದನ್ ಶೆಟ್ಟಿ

ಫುಲ್ ಖುಷ್ ಆದ ಚಂದನ್ ಶೆಟ್ಟಿ

ಸ್ವತಃ ಅರ್ಜುನ್ ಜನ್ಯ ಫೋನ್ ಮಾಡಿದ್ದಕ್ಕೆ ಫುಲ್ ಖುಷ್ ಆದ ಚಂದನ್ ಶೆಟ್ಟಿ ಒಂದು ಕ್ಷಣ ಅಚ್ಚರಿಗೊಂಡರು. ನಂತರ ಅರ್ಜುನ್ ಜನ್ಯ ಅವರ ಬಗ್ಗೆ ಮಾತನಾಡಿದ ಚಂದನ್, ನನ್ನ ಈ ಯಶಸ್ಸಿಗೆ ಅರ್ಜುನ್ ಜನ್ಯ ಅವರೇ ಕಾರಣ. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.

ಅರ್ಜುನ್ ಜನ್ಯ ಏನಂದ್ರು?

ಅರ್ಜುನ್ ಜನ್ಯ ಏನಂದ್ರು?

''ಚಂದನ್ ಶೆಟ್ಟಿ ಒಬ್ರು ಕನಸುಗಾರ. ಆ ಕನಸನ್ನ ನನಸು ಮಾಡಿಕೊಳ್ಳಲು ತುಂಬ ಶ್ರಮ ಪಟ್ಟಿದ್ದಾರೆ. ಅದಕ್ಕೆ ಚಂದನ್ ಸ್ವಲ್ಪ ವಿಶೇಷ. ಒಳ್ಳೆ ಮನುಷ್ಯ. ಒಳ್ಳೆ ಪ್ರತಿಭೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Big Boss kannada 5 Winner Chandan Shetty Surprised By Arjun Janya's Phone Call.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X