ಅಪ್ಪನ ಸಾವು, ಸೇಡು ತೀರಿಸಿಕೊಳ್ಳಲು ರಾಜನಂದಿನಿ ಸಂಚು!
ಸೀದಾ ಮನೆಗೆ ಬರುತ್ತಾಳೆ. ನನ್ನ ಕಣ್ಣು ಮುಂದೇನೆ ನಡೆದರೂ ಏನೂ ಗೊತ್ತಾಗಲಿಲ್ಲವಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಾಳೆ. ಬಳಿಕ ಸೀದಾ ಜಲಂಧರ್ ಇರುವ ಜೈಲಿಗೆ ಹೋಗುತ್ತಾಳೆ. ಅಲ್ಲಿ ಜಲಂಧರ್ ರಾಜನಂದಿನಿಯನ್ನು ನೋಡಿ, ಈಗ ಯಾಕೆ ಇಲ್ಲಿಗೆ ಬಂದ್ರಿ, ನನ್ನ ಪರಿಸ್ಥಿತಿ ನೋಡಿ ಆಡಿಕೊಳ್ಳೋದಕ್ಕಾ ಎಂದು ಬೇಸರಪಟ್ಟುಕೊಳ್ಳುತ್ತಾನೆ. ಆದರೆ ರಾಜನಂದಿನಿ, ಆವತ್ತು ನೀವು ಹೇಳಿದಾಗ, ನೀವು ಹೇಳಿದ್ದನ್ನು ಪೂರ್ತಿ ಕೇಳಿಸೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಆದರೆ, ನಾನಿವತ್ತು ನೀವು ಹೇಳುವುದನ್ನು ಕೇಳುವುದಕ್ಕೆ ತಯಾರಾಗಿದ್ದೀನಿ ಎಂದು ಹೇಳುತ್ತಾಳೆ.
ಆಗ ಜಲಂಧರ್, ಆ ಸುಭಾಷ್ ಪಾಟೀಲ್ ತುಂಬಾ ಕಿಲಾಡಿ ಮನುಷ್ಯ, ಎಲ್ಲವನ್ನು ತನಗೆ ಬೇಕಾದ ಹಾಗೆ ಮಾಡಿಬಿಟ್ಟ. ಸುಭಾಷ್ ಪಾಟೀಲ್ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ನಾನು ರಾಜ ಸಾಹೇಬರನ್ನು ಭೇಟಿ ಮಾಡಿ ಎಲ್ಲಾ ವಿಚಾರವನ್ನೂ ಹೇಳಿ ಬಿಟ್ಟೆ. ಅವರಿಗೆ ಎಲ್ಲಾ ಪ್ರೂಫ್ ಕೂಡ ತೋರಿಸಿದೆ. ಆದರೆ, ಅದೆಲ್ಲವನ್ನೂ ಹೇಳಿದ ಕೆಲವೇ ದಿನದಲ್ಲೇ ರಾಜ ಸಾಹೇಬರು ತೀರಿಕೊಂಡು ಬಿಟ್ಟರು. ಮ್ಯಾನೇಜರ್‌ನಿಂದನಾದರೂ ತಿಳಿದುಕೊಳ್ಳಿ ಅಂತ ಅವರ ನಂಬರ್ ಕೊಟ್ಟೆ. ಆದರೆ ಅವನು ಕೂಡ ಕೊಲೆಯಾಗಿ ಬಿಟ್ಟ. ಈಗ ಆ ಕೊಲೆ ಆರೋಪ ಹೊತ್ತು ನಾನು ಮಾಡದ ತಪ್ಪಿಗೆ ಜೈಲು ಸೇರಿದ್ದೇನೆ. ಈಗ ಸುಭಾಷ್ ಪಾಟೀಲ್ ಬಗ್ಗೆ ಗೊತ್ತಿರೋ ಪೈಕಿ ಬದುಕಿ ಉಳಿದಿರುವುದು ನಾನೊಬ್ಬನೇ ಎಂದು ಹೇಳುತ್ತಾನೆ.

ಇದನ್ನೆಲ್ಲಾ ಕೇಳಿದ ರಾಜನಂದಿನಿ ನೊಂದುಕೊಳ್ಳುತ್ತಾಳೆ. ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಕೊನೆ ಪಕ್ಷ ನಾನು ಸುಭಾಷ್ ಪಾಟೀಲ್ ನನ್ನ ಕ್ಷಮಿಸಿ ಬಿಡುತ್ತೀನಿ. ಆದರೆ, ಅಪ್ಪನ ಸಾವನ್ನು ಹೇಗೆ ಸಹಿಸಿಕೊಳ್ಳಿ ಎಂದು ಅಳುತ್ತಾಳೆ. ಆಗ ಜಲಂಧರ್ ರಾಜ ಸಾಹೇಬರ ಸಾವಿಗೆ ನಿಜವಾದ ಕಾರಣವನ್ನು ತಿಳಿದುಕೊಳ್ಳಿ. ಯಾವುದೇ ಕಾರಣಕ್ಕೂ ಬಿಡಬೇಡಿ. ಸತ್ಯ ಏನು ಅನ್ನೋದನ್ನು ಹೊರಗೆ ತನ್ನಿ ಎಂದು ಹೇಳುತ್ತಾನೆ. ಇದಕ್ಕೆ ರಾಜನಂದಿನಿ, ನನ್ನಪ್ಪನ ಸಾವಿಗೆ, ನಿಮಗೆ ಆದ ಅನ್ಯಾಯಕ್ಕೆ, ನನಗಾದ ನಂಬಿಕೆ ದ್ರೋಹಕ್ಕೆ ನಾನು ಪ್ರತೀಕಾರವನ್ನು ತೆಗೆದುಕೊಂಡೇ ತೆಗೆದುಕೊಳ್ಳುತ್ತೇನೆ. ನಾನು ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಹೋಗುತ್ತಾಳೆ.

ಇತ್ತ ಆರ್ಯವರ್ಧನ್ ಹಾಗೂ ಕೇಶವ, ರಾಜನಂದಿನಿ ಎಲ್ಲಿಗೆ ಹೋಗಿದ್ದಾಳೆ ಎಂದು ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಜಲಂಧರ್ ತನ್ನ ಮನೆಯವರಾರನ್ನೂ ಭೇಟಿ ಮಾಡಬಾರದು. ಜಲಂಧರ್‌ಗೆ ಗಲ್ಲು ಶಿಕ್ಷೆಯಾಗುವಂತೆ ನೋಡಿಕೋ ಎಂದು ಹೇಳುತ್ತಿರುತ್ತಾರೆ. ಅಷ್ಟರಲ್ಲಿ ರಾಜನಂದಿನಿ ಮತ್ತೆ ತನ್ನ ತಂದೆಯ ಫೋಟೊವನ್ನು ತಂದು ಆಫೀಸಿನಲ್ಲಿ ಇಡುತ್ತಾಳೆ. ಬಳಿಕ ತನ್ನ ಮುಂದಿನ ಪ್ಲಾನ್ ಅನ್ನು ಶಾನುಬೋಗರಿಗೆ ಹೇಳುತ್ತಾಳೆ.


Click it and Unblock the Notifications











