ಆರ್ಯವರ್ಧನ್ ಅಸಲಿ ಮುಖ ರಿವೀಲ್: ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ರೋಚಕ ತಿರುವು!

ಕಿರುತೆರೆಯಲ್ಲಿ ಹೆಚ್ಚು ಹೆಸರು ಮಾಡಿರುವ ಧಾರಾವಾಹಿಗಳಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿ ಕೂಡ ಒಂದು. ಸುಮಾರು 2 ವರ್ಷಗಳಿಂದ ಪ್ರೇಕ್ಷಕರ ನೆಚ್ಚಿನ ಸೀರಿಯಲ್ ಆಗಿದೆ ಇದು. ಸದ್ಯ ಈ ಧಾರಾವಾಹಿಯಲ್ಲಿ ರೋಚಕ ತಿರುವುಗಳು ಬರುತ್ತಿವೆ. ಅದರಲ್ಲೂ ಆರ್ಯವರ್ಧನ್ ಪಾತ್ರಕ್ಕೆ ಸಂಬಂಧ ಪಟ್ಟ ಹಾಗೆ ಹತ್ತಾರು ಟ್ವಿಸ್ಟ್‌ಗಳು ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಆರ್ಯವರ್ಧನ್ ನಡೆಯಲ್ಲಿ ಆಗುತ್ತಿರುವ ಬದಲಾವಣೆ ಪ್ರಮುಖ ಆಗಿದೆ.

ಧಾರಾವಾಹಿ ನೋಡುವವರಲ್ಲಿ ಇದು ಯಾಕೆ ಹೀಗಾಗುತ್ತಿದೆ. ಆರ್ಯವರ್ಧನ್ ಯಾಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವ ಶಂಕೆ ಮೂಡಿದೆ. ಇದು ಇಷ್ಟು ದಿನ ಪ್ರೇಕ್ಷಕರ ಕಣ್ಣಿಗೆ ಮಾತ್ರ ಬೀಳುತ್ತಿತ್ತು. ಆದರೆ ಈಗ ಇದು ಅನು ಕಣ್ಣಿಗೂ ಕಾಣಿಸುತ್ತಾ ಇದೆ. ಅನುಗೆ ಈಗ ಆರ್ಯವರ್ಧನ್ ಬಗ್ಗೆ ದೊಡ್ಡ ಸತ್ಯ ಒಂದು ಗೊತ್ತಾಗಿದೆ.

ಆರ್ಯವರ್ಧನ್ ನಡೆಯ ಬಗ್ಗೆ ಅನು ಮನಸಲ್ಲಿ ಅನುಮಾನ ಮೂಡುತ್ತಿದೆ. ಸುಭಾಷ್ ಪಾಟಿಲ್ ಒಬ್ಬ ಮೋಸಗಾರ ಎಂದು ತಿಳಿದಿರುವ ಅನುಗೆ, ಆ ಸುಭಾಷ್ ಪಾಟಿಲ್ ಯಾರು ಎನ್ನುವ ಸತ್ಯ ತಿಳಿದಿದೆ. ಆದರೂ ಅನು ಗೊಂದದಲ್ಲಿ ಇದ್ದಾಳೆ. ಆರ್ಯವರ್ಧನ್ ಅವರನ್ನು ನಂಬಬೇಕೋ ಬೇಡವೋ ಎನ್ನುವ ಗೊಂದಲ ಹೆಚ್ಚಾಗುತ್ತಿದೆ.

ಸತ್ಯದ ಹುಡುಕಾಟದಲ್ಲಿ ಅನು ಸಿರಿಮನೆ!

ಸತ್ಯದ ಹುಡುಕಾಟದಲ್ಲಿ ಅನು ಸಿರಿಮನೆ!

ಇತ್ತೀಚೆಗೆ ಅನು ತನ್ನ ಕಂಪನಿ ಮತ್ತು ಮನೆಯ ವಿಚಾರಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಹಾಗಾಗಿ ಸುಭಾಷ್ ಪಾಟೀಲ್ ಎನ್ನುವ ಹೆಸರಿನಲ್ಲಿ ಅವರ ಕಂಪನಿಗೆ ಮೋಸ ಆಗುತ್ತಿದೆ ಎನ್ನುವುದನ್ನು ಅನು ಒತ್ತೆ ಹಚ್ಚಿದ್ದಾಳೆ. ಇದು ಸ್ವತಃ ಆರ್ಯವರ್ಧನ್‌ಗೆ ಶಾಕಿಂಗ್ ಆಗಿತ್ತು. ಆದರೆ ಈ ಅನುಗೆ ಆರ್ಯ ವರ್ಧನ್ ಶಾಕ್ ಕೊಟ್ಟಿದ್ದಾನೆ. ಮತದಾರರ ಪಟ್ಟಿಯಲ್ಲಿ ಆರ್ಯವರ್ಧನ್ ಹೆಸರೇ ಇರುವುದಿಲ್ಲ. ಇದನ್ನು ಕಂಡು ಅನುಗೆ ಶಾಕ್ ಆಗುತ್ತೆ. ಆದರೆ ಇದಕ್ಕಿಂತ ದೊಡ್ಡ ಶಾಕ್ ಎಂದರೆ, ಆರ್ಯವರ್ಧನ್ ಫೋಟೊ ಮತ್ತು ಬಯೋಡೇಟಾದಲ್ಲಿ ಹೆಸರು ಮಾತ್ರ ಸುಭಾಷ್ ಪಾಟೀಲ್ ಎಂದು ಇರುತ್ತದೆ. ಇದರಿಂದ ಅನು ಶಾಕ್‌ನಿಂದ ಗೊಂದಲಕ್ಕೆ ಒಳಗಾಗುತ್ತಾರೆ.

ಅನುಳಿಂದ ಸತ್ಯ ಮರೆ ಮಾಚುತ್ತಿರುವ ಆರ್ಯವರ್ಧನ್!

ಅನುಳಿಂದ ಸತ್ಯ ಮರೆ ಮಾಚುತ್ತಿರುವ ಆರ್ಯವರ್ಧನ್!

ಈ ಆರ್ಯ ವರ್ಧನ್ ಅಸಲಿಗೆ ಆರ್ಯವರ್ಧನ್ ಅಲ್ಲವೇ ಅಲ್ಲ. ಈತನೇ ಸುಭಾಸ್ ಪಾಟಿಲ್. ಆದರೆ ಈ ಸತ್ಯ ಅನುಗೆ ಗೊತ್ತಿಲ್ಲ. ಆದರೆ ಈಗ ವೋಟರ್ ಐಡಿ ನೋಡಿ ಅನುಗೆ ಅನುಮಾನ ಬಂದ ಹಾಗೆ ಇದೆ. ಹಾಗಾಗಿ ಅನು ನೇರವಾಗಿ ಆಫೀಸಿಗೆ ಹೋಗಿ, ಅಲ್ಲಿ ಆರ್ಯವರ್ಧನ್ ಬಳಿ ಮಾತನಾಡುತ್ತಾಳೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಹೇಳುತ್ತಾಳೆ. ಅದನ್ನು ಕೇಳಿ ಶಾಕ್ ಆದ ಜೇಂಡೆ ಮತ್ತು ಆರ್ಯವರ್ಧನ್ ಅನುಗೆ ಇಲ್ಲದ ನೆಪ ಹೇಳಿ ಅಲ್ಲಿಂದ ಮನೆಗೆ ಕಳಿಸುತ್ತಾರೆ. ನಂತರ ಆರ್ಯವರ್ಧನ್ ತಾನೆ ಸುಭಾಷ್ ಪಾಟಿಲ್ ಎಂದು ಅನುಗೆ ಗೊತ್ತಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ.

ಅನು ಮುಂದೆ ಬಯಲಾಗುತ್ತಾ ಆರ್ಯವರ್ಧನ್ ಅಸಲಿ ಮುಖ!

ಅನು ಮುಂದೆ ಬಯಲಾಗುತ್ತಾ ಆರ್ಯವರ್ಧನ್ ಅಸಲಿ ಮುಖ!

ಇನ್ನು ಈಗ ಅನುಗೆ ಅನುಮಾನಗಳು ಹುಟ್ಟಿಕೊಂಡಿವೆ. ಹಾಗಾಗಿ ಇದನ್ನು ಹುಡುಕದೇ ಬಿಡುವುದಿಲ್ಲ ಅನು. ಅದಕ್ಕೆ ತಕ್ಕ ಹಾಗೆ ಆರ್ಯವರ್ಧನ್ ಕೂಡ ಅನು ಇಂದ ಇತ್ತೀಚೆಗೆ ಹಲವಾರು ವಿಚಾರಗಳನ್ನು ಮುಚ್ಚಿಡುತ್ತಿದ್ದಾನೆ. ಹಾಗಾಗಿ ಅನು ಈ ಸುಭಾಷ್ ಪಾಟಿಲ್, ಆರ್ಯವರ್ಧನ್ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಯಾಕೆಂದರೆ ಜೋಗತಿ ಅನು ಭವಿಷ್ಯ ನುಡಿದು, ನನಗೆ ಸತ್ಯ ತಿಳಿಯುತ್ತೆ. ಅದನ್ನು ತಡೆದುಕೊಳ್ಳುವ ಶಕ್ತಿ ದೇವಿ ನಿನಗೆ ನೀಡುತ್ತಾಳೆ ಎಂದು ಹೇಳಿದ್ದಾರೆ.

ಅನು- ಆರ್ಯವರ್ಧನ್ ದೂರ ಆಗ್ತಾರ?

ಅನು- ಆರ್ಯವರ್ಧನ್ ದೂರ ಆಗ್ತಾರ?

ಒಂದು ವೇಳೆ ಅನುಗೆ ಎಲ್ಲಾ ವಿಚಾರಗಳು ತಿಳಿದರೆ, ರಾಜ ನಂದಿನಿ ಸಾವಿನ ಸೀಕ್ರೆಟ್ ಕೂಡ ಹೊರ ಬರುತ್ತೆ. ಆದ ಸುಭಾಸ್ ಪಾಟಿಲ್ ಯಾರು? ಆರ್ಯವರ್ಧನ್ ಅಸಲಿ ಗುಣ ಏನು ಎನ್ನುವುದು ಕೂಡ ತಿಳಿಯಲಿದೆ. ಆ ಸಂದರ್ಭದಲ್ಲಿ ಅನು ಆರ್ಯವರ್ಧನ್ ದೂರ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಆದರೆ ಅಷ್ಟರಲ್ಲಿ ಇನ್ಯಾವ ಟ್ವಿಸ್ಟ್ ಬರುತ್ತೋ ನೋಡ್ಬೇಕು.

More from Filmibeat

English summary
Big Twist In Jothe Jotheyali Tv Serial, Anu Got To Know Who Is Aryavardhan What Will Happend Next,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X