»   » 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ ನಾಳೆ ಸಿಗಲಿದೆ ಬಹುದೊಡ್ಡ ತಿರುವು.!

'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ ನಾಳೆ ಸಿಗಲಿದೆ ಬಹುದೊಡ್ಡ ತಿರುವು.!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡ ಒಂದು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರತಿಯೊಬ್ಬ ಪಾತ್ರಧಾರಿಯೂ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯ. ಅದರಲ್ಲೂ, ಚಂದು, ಗೊಂಬೆ ಹಾಗೂ ಲಚ್ಚಿ ಯಾರಿಗೂ ಗೊತ್ತಿಲ್ಲ ಎನ್ನುವ ಹಾಗೇ ಇಲ್ಲ.! ಅಷ್ಟರಮಟ್ಟಿಗೆ ಈ ಸೀರಿಯಲ್ ಫೇಮಸ್.

ಇಲ್ಲಿಯವರೆಗೂ, 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಒಂದು ದೊಡ್ಡ ಸೀಕ್ರೆಟ್ ಮೇನ್ಟೇನ್ ಮಾಡಲಾಗಿತ್ತು. ಲಚ್ಚಿ ಕೊರಳಿಗೆ ಚಂದು ತಾಳಿ ಕಟ್ಟಿದ್ದರೂ, ಆ ಸತ್ಯ ಚಂದು ಪತ್ನಿ ಗೊಂಬೆಗೆ ತಿಳಿದಿರಲಿಲ್ಲ.

ಇಷ್ಟು ದಿನ ಗೊಂಬೆ ಪಾಲಿಗೆ ಗುಟ್ಟಾಗಿ ಉಳಿದಿದ್ದ ಈ ವಿಚಾರ ಈಗ ರಟ್ಟಾಗಲಿದೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ ನಾಳೆ ದೊಡ್ಡ ಟ್ವಿಸ್ಟ್ ಸಿಗಲಿದೆ. ಮುಂದೆ ಓದಿರಿ...

ಗೊಂಬೆಗೆ ನಾಳೆ ಸತ್ಯ ಗೊತ್ತಾಗಲಿದೆ.!

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಳೆ (ಗುರುವಾರ, ಜೂನ್ 8) ಗೊಂಬೆಗೆ ಸತ್ಯ ಗೊತ್ತಾಗಲಿದೆ.

ಗುಟ್ಟು ರಟ್ಟು

ತನ್ನ ಗಂಡ ಚಂದು ಇನ್ನೊಬ್ಬಳನ್ನು ಮದುವೆ ಆಗಿದ್ದಾನೆ ಎಂಬ ಸಂಶಯ ಗೊಂಬೆಗೆ ಕಾಡುತ್ತಲೇ ಇತ್ತು. ಅದರ ಸುಳಿವನ್ನು ಕಂಡು ಹಿಡಿಯಲು ಹೊರಟ ಗೊಂಬೆಗೆ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸತ್ಯ ಗೊತ್ತಾಗುತ್ತದೆ.

ದೇವಸ್ಥಾನದಲ್ಲಿ ಸತ್ಯ ಬಯಲು

ಅಚ್ಚರಿ ಅಂದ್ರೆ, ಅದೇ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಲಚ್ಚಿ ಕೊರಳಿಗೆ ಚಂದು ತಾಳಿ ಕಟ್ಟಿದ್ದು.! ಈಗ ಅದೇ ದೇವಸ್ಥಾನದಲ್ಲಿ ಗೊಂಬೆ ಪಾಲಿನ ರಹಸ್ಯ ಬಯಲಿಗೆ ಬರಲಿದೆ.

ಪೂಜೆ ಮಾಡುವಾಗ...

ಮುಂದೆ ಹುಟ್ಟುವ ಮಗುವಿಗೆ ಕಂಟಕ ಬಾರಬಾರದೆಂದು, ಚಂದು ಹಾಗೂ ಲಚ್ಚಿ ಪೂಜೆ ಮಾಡುವ ಸಂದರ್ಭದಲ್ಲಿ ಗೊಂಬೆ ಸಂಶಯಕ್ಕೆ ಉತ್ತರ ಸಿಗಲಿದೆ.

ಕಾಡುವ ಕುತೂಹಲ

ಮುಚ್ಚಿಟ್ಟಿದ್ದ ಸತ್ಯ ತಿಳಿದ ಗೊಂಬೆ ನೀಡುವ ಪ್ರತಿಕ್ರಿಯೆ ಏನು.? ಅವಳ ದಾಂಪತ್ಯ ಜೀವನ ಹೇಗೆ ಸಾಗುತ್ತದೆ.? ಗೊಂಬೆ ಮತ್ತು ಮನೆಯ ವಾತಾವರಣ ಹೇಗಿರಬಹುದು.? ಮುಂತಾದ ಕುತೂಹಲದ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳು ಉತ್ತರ ಕೊಡಲಿದೆ.

ನಾಳೆ ಮಿಸ್ ಮಾಡ್ಬೇಡಿ

ಇಷ್ಟು ದಿನ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯನ್ನು ತಪ್ಪದೆ ಇಂಟ್ರೆಸ್ಟ್ ನಿಂದ ನೋಡುತ್ತಿದ್ದವರು, ನಾಳೆ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಯಾಕಂದ್ರೆ, ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಸಿಗುವುದು ನಾಳೆಯೇ.!

English summary
There is a big twist in 'Lakshmi Baramma' episode tomorrow (June 8th). Don't miss to watch 'Lakshmi Baramma' in Colors Kannada tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada