ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಸು ಪತಿ ಬದಲಾಗಿದ್ದೇಕೆ..?
ಬಡತನ, ಸಿರಿತನ, ಹಗೆತನ, ಪ್ರೀತಿ-ಪ್ರೇಮದ ಒದ್ದಾಟ, ನ್ಯಾಯ, ಅನ್ಯಾಯ ಈ ಎಲ್ಲಾ ಅಂಶಗಳು ಇರುವ ಧಾರಾವಾಹಿಯೇ ಪುಟ್ಟಕ್ಕನ ಮಕ್ಕಳು. ಈ ಧಾರಾವಾಹಿ ಶುರುವಾದಾಗಿನಿಂದ ಅಗ್ರಸ್ಥಾನದಲ್ಲೇ ಇದೆ.
ದಿನ ದಿನಕ್ಕೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪುಟ್ಟಕ್ಕನ ಮಕ್ಕಳು ಸಮಚಿಕೆಗಳನ್ನು ಮಿಸ್ ಮಾಡದೇ ನೋಡಲು ಕಾತುರರಾಗಿರುತ್ತಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಬೇಡಿಕೆ ಇದೆ.
ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಕಥೆ ಇದೆ. ಸೀರಿಯಲ್ ಕಥೆಯೂ ಅಷ್ಟೇ ಅಚ್ಚುಕಟ್ಟಾಗಿ ಸಾಗುತ್ತಿದೆ. ಕುತೂಹಲಗಳನ್ನು ಉಳಿಸಕೊಂಡು ಕಥೆ ಸಾಗುತ್ತಿದೆ. ಮಂಡ್ಯ ಭಾಷೆಯಲ್ಲಿ ಡೈಲಾಗ್‌ಗಳಿದ್ದು, ಈ ಭಾಷೆಯ ಶೈಲಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಟ್ಟ ಕಾರ್ತಿಕ್!
ಇದೀಗ ಹೊಸ ಸುದ್ದಿ ಏನೆಂದರೆ ಲಾಯರ್ ಚಂದ್ರು ಪಾತ್ರಧಾರಿ ಬದಲಾಗುತ್ತಿದ್ದಾರೆ. ಇಷ್ಟು ದಿನ ಕಾರ್ತಿಕ್ ಮಹೇಶ್ ಚಂದ್ರು ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರಕ್ಕೆ ಕಾರ್ತಿಕ್ ಮಹೇಶ್ ಅವರು ಸಕತ್ ಆಗಿ ಸೂಟ್ ಆಗಿದ್ದರು. ವಸು ಹಾಗೂ ಚಂದ್ರು ಜೋಡಿ ಚೆನ್ನಾಗಿ ಮ್ಯಾಚ್ ಆಗಿತ್ತು. ಆದರೆ ಕಾರ್ತಿಕ್ ಮಹೇಶ್ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ನಿಜವಾದ ಕಾರಣವೇನು ಎಂಬುದು ಮಾತ್ರ ಗೊತ್ತಿಲ್ಲ.

ಚಂದ್ರು ಪಾತ್ರಕ್ಕೆ ಬಂದ ಹೊಸ ನಟ!
ಇನ್ನು ಚಂದ್ರು ಪಾತ್ರವನ್ನು ನಿರ್ವಹಿಸಲು ನಟ ನಂದೀಶ್ ಅವರು ಬಂದಿದ್ದಾರೆ. ನಂದೀಶ್ ಅವರು ಬ್ಯುಸಿಯಾಗಿದ್ದಾರೆ. ತೆಲುಗು ಕಿರುತೆರೆಯಲ್ಲಿ ನಟಿಸುತ್ತಿರುವ ನಂದೀಶ್ ಅವರು ಈಗ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ಅಭಿನಯಿಸುತ್ತಾ ಬ್ಯಾಲೆನ್ಸ್ ಮಾಡಲಿದ್ದಾರೆ. ನಂದೀಶ್ ಅವರು ಸದ್ಯ ತೆಲುಗಿನ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ವಸು, ಚಂದ್ರು ಪ್ರೇಮಕಥೆಗೆ ಕ್ವಿಸ್ಟ್!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮ ಮತ್ತು ನಂಜಮ್ಮನ ಸ್ಪರ್ಧೆ ಜೋರಾಗಿದೆ. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ವಸು ಹಾಗೂ ಚಂದ್ರು ದೂರ ದೂರ ಉಳಿದಿದ್ದಾರೆ. ಇನ್ನೇನು ಒಂದಾಗೇ ಬಿಟ್ಟರು ಎನ್ನುವಷ್ಟರಲ್ಲಿ ಬಂಗಾರಮ್ಮ ಹಾಗೂ ನಂಜಮ್ಮ ಮತ್ತೆ ಜಗಳವಾಡಿದ್ದಾರೆ. ಇದರಿಂದ ವಸಂತ ಹಾಗೂ ಚಂದ್ರು ಒಂದಾಗುವ ವಿಚಾರ ಇನ್ನಷ್ಟು ದೂರವಾಗಿದೆ. ನಿನ್ನ ಮಗಳಿಗೆ ನನ್ನ ಮಗ ಬೇಕೇ ಹೊರತು, ನನ್ನ ಮಗನಿಗೆ ನಿನ್ನ ಮಗಳು ಬೇಕಿಲ್ಲ ಎಂದು ನಂಜಮ್ಮ ಹೇಳಿದ್ದಾಳೆ. ನನ್ನ ಮಗನಿಗೆ ಎರಡನೇ ಮದುವೆ ಮಾಡೇ ಮಾಡುತ್ತೀನಿ ಅಂತ ಎಂದಿದ್ದಾಳೆ ನಂಜಮ್ಮ. ಊರಿನವರ ಮುಂದೆ ಕ್ಷಮೆ ಕೇಳಿ ನನ್ನ ಮಗಳ ಕಾಲಿಗೆ ನಿನ್ನ ಮಗ ಬಿದ್ದ ಮೇಲೆಯೇ ನನ್ನ ಅಳಿಯ ಅಂತ ಒಪ್ಪಿಕೊಳ್ಳುತ್ತೀನಿ ನೋಡುತ್ತಾ ಇರು ಎಂದು ಬಂಗಾರಮ್ಮ ಚಾಲೇಂಜ್ ಮಾಡಿದ್ದಾಳೆ.

ಸ್ನೇಹ ವಸು ಚಂದ್ರನನ್ನು ಒಂದು ಮಾಡುತ್ತಾಳ?
ಹೀಗೆ ವಸಂತ ಹಾಗೂ ಲಾಯರ್ ಚಂದ್ರು ದೂರ ದೂರ ಉಳಿದಿದ್ದಾರೆ. ಇನ್ನೆಷ್ಟು ದಿನ ಈ ವನವಾಸ ಎಂದು ಒಳಗೊಳಗೇ ಕೊರಗುತ್ತಿದ್ದಾರೆ. ಆದರೆ, ಸ್ನೇಹ ನಿಮ್ಮಿಬ್ಬರನ್ನು ಒಂದು ಮಾಡುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾಳೆ. ಹೀಗಿದ್ದರೂ ಇಲ್ಲೊಂದು ಸಮಸ್ಯೆ ಇದೆ. ಅದೇನೆಂದರೆ, ಬಂಗಾರಮ್ಮನಿಗೆ ಸ್ನೇಹಳನ್ನು ಕಂಡರೆ ಆಗುವುದಿಲ್ಲ. ಸ್ನೇಹಾಳಿಗೂ ಬಂಗಾರಮ್ಮ ಹಾಗೂ ಅವಳ ಮಗನ ಮೇಲೆ ಕೆಟ್ಟ ಸಿಟ್ಟಿದೆ. ಹೀಗಿರುವಾಗ ಸ್ನೇಹ ಚಂದ್ರು ಹಾಗೂ ವಸಂತಾಳನ್ನು ಹೇಗೆ ಒಂದು ಮಾಡುತ್ತಾಳೋ ಗೊತ್ತಿಲ್ಲ. ಇಂದಲ್ಲ ನಾಳೆ ಒಂದಾಗುತ್ತೇವೆ ಎಂಬ ನಂಬಿಕೆಯಲ್ಲೇ ಇಬ್ಬರೂ ಕಾಲ ಕಳೆಯುತ್ತಿದ್ದಾರೆ.


Click it and Unblock the Notifications











