ಪುಟ್ಟಕ್ಕನ ಮಕ್ಕಳು: ಅಮ್ಮನ ಮುಂದೆ ಪ್ರೀತಿ ಹೇಳಿಕೊಂಡ ನಾಯಕ ಕಂಠಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕತೆ ಹಲವು ದಾರಿಯಲ್ಲಿ ಸಾಗುತ್ತಿದೆ. ನಾಯಕ ಕಂಠಿ ಪ್ರೀತಿ, ಪುಟ್ಟಕ್ಕನ ಸಂಸಾರ, ಪುಟ್ಟಕ್ಕ ಮತ್ತು ಕಂಠಿ ಕುಟುಂಬದ ನಡುವಿವ ವಿರಸ ಹೀಗೆ ನಾನಾ ತಿರುವುಗಳಿವೆ. ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸೂಪರ್ ಲವ್ ಸ್ಟೋರಿ ನಡೀತಿದೆ. ಧಾರಾವಾಹಿಯ ನಾಯಕ ಕಂಠಿ ನಾಯಕಿ ಸ್ನೇಹಳನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ. ಎಲ್ಲೆ ನೋಡಿದರೂ ಕಂಠಿ ಕಣ್ಣಿಗೆ ಪುಟ್ಟಕ್ಕನ ಮಗಳನ್ನು ಬಿಟ್ಟು ಮತ್ಯಾರು ಕಾಣಿಸುತ್ತಿಲ್ಲ. ಸ್ನೇಹಳ ಧ್ಯಾನನದಲ್ಲೇ ಸದಾ ಕಠಿ ಮುಳುಗಿ ಹೋಗಿದ್ದಾನೆ.
ಇನ್ನೂ ಕಂಠಿ ಪ್ರೀತಿಯೇ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಕೊಡಲಿದೆ. ಯಾಕೆಂದರೆ ನಾಯಕಿ ಸ್ನೇಹಳನ್ನು ಕಂಡರೆ ನಾಯಕ ಕಂಠಿ ತಾಯಿಗೆ ಇಷ್ಟವಿಲ್ಲ. ಈಗಾಗಲೇ ಇಬ್ಬರ ನಡುವೆ ಜಗಳ ಆಗಿದೆ. ಸ್ನೇಹ ಬಗ್ಗೆ ಕಂಠಿ ತಾಯಿಗೆ ಉತ್ತಮ ಅಭಿಪ್ರಾಯ ಇಲ್ಲ. ಹಾಗಾಗಿ ಕಂಠಿ ಪ್ರೀತಿ ಗೊತ್ತಾದರೆ ಅವರು ಒಪ್ಪುವುದಿಲ್ಲ. ಆದರೆ ಈಗ ಇದಕ್ಕೆ ತೆರೆ ಬಿದ್ದಿದೆ.
ನಾಯಕ ಕಂಠಿಗೆ ಮದುವೆ ಮಾಡಲು ತಾಯಿ ಬಂಗಾರಮ್ಮ ರೆಡಿಯಾಗಿದ್ದಾರೆ. ಅದರೆ ಬಂಗಾರಮ್ಮ ಅವರು ನೋಡಿದ ಹುಡುಗಿಯನ್ನು ಮದುವೆ ಆಗಲು ಕಂಠಿಗೆ ಇಷ್ಟ ಇಲ್ಲ. ಹಾಗಂತ ಅದನ್ನು ಅಮ್ಮನ ಬಳಿ ಹೇಳುವ ಧೈರ್ಯ ಕೂಡ ಕಂಠಿಗೆ ಇಲ್ಲ. ಹಾಗಾಗಿ ಕಂಠಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಆದರೆ ಹುಡುಗಿ ಮನೆಯವರು ಮನೆಗೆ ಮದುವೆ ವಿಚಾರ ಮಾತನಾಡಲು ಬಂದಾಗ ಕಂಠಿ ಧೈರ್ಯ ಮಾಡಿ ಅಮ್ಮನ ಮುಂದೆ ಎಲ್ಲವನ್ನು ಒಪ್ಪಿಕೊಳ್ಳುತ್ತಾನೆ. ಈ ಮದುವೆ ಇಷ್ಟ ಇಲ್ಲ. ಪುಟ್ಟಕ್ಕನ ಮಗಳು ಸ್ನೇಹಳನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿ ಬಿಡುತ್ತಾನೆ. ಆದರೆ ಇದು ಕಂಠಿ ಅಮ್ಮನಿಗೆ ಮಾತ್ರ ಅಲ್ಲ, ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ಯಾಕೆಂದರೆ ಕಂಠಿ ತನ್ನ ತಾಯಿಯ ಮುಂದೆ ನಿಂತು ಹೀಗೆ ಮಾತನಾಡಲು ಸಾಧ್ಯವೇ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.
ಹಾಗಾಗಿ ಇದು ಕೇವಲ ಕಂಠಿ ಕಾಣುತ್ತಿರುವ ಹಗಲು ಕನಸು ಅನಿಸುತ್ತೆ. ಮನಸಲ್ಲಿ ಅಮ್ಮನ ಬಳಿ ಸತ್ಯ ಹೇಳಿಕೊಳ್ಳ ಬೇಕು ಎಂದುಕೊಳ್ಳುವ ಕಂಠಿ ಹಾಗೆ ಸುಮ್ಮನೆ ಆಗುತ್ತಾನೆ ಎನ್ನುವುದನ್ನು ರಿವೀಲ್ ಮಾಡಲಾಗುತ್ತದೆ. ಆದರೆ ಒಂದು ವೇಳೆ ಇದು ಕನಸಲ್ಲದೆ, ನಿಜವಾದರೆ ಅಲ್ಲಿಗೆ ಕಂಠಿ ಕಥೆ ಮುಗಿಯಿತು ಎಂದೇ ಅರ್ಥ. ಯಾಕೆಂದರೆ ನಟಿ ಸ್ನೇಹಳನ್ನು ಕಂಡರೆ ಬಂಗಾರಮ್ಮನಿಗೆ ಆಗುವುದಿಲ್ಲ.
ಈ ಪ್ರೇಮ್ ಕಹಾನಿ ಜೊತೆಗೆ ಮತ್ತೊಂದು ದೊಡ್ಡ ಬಾಂಬ್ ಸಿಡಿಯಲಿದೆ. ಪುಟ್ಟಕ್ಕನ ಮನೆ ಖಾಲಿ ಮಾಡಿಸಲು ರಾಜೇಶ್ವರಿ ಪಣ ತೊಟ್ಟಿದ್ದಾಳೆ. ಹಾಗಾಗಿ ಬಂಗಾರಮ್ಮನ ನೇತೃತ್ವದಲ್ಲಿ ಪಂಚಾಯಿತಿ ಶುರುವಾಗುತ್ತಿದೆ. ಆದರೆ ಈ ಪಂಚಾಯಿತಿಯಲ್ಲಿ ಗೆಲವು ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಕೂಡ ಮೂಡಿದೆ.


Click it and Unblock the Notifications











