ನಾಗಿಣಿ 2 ಸೀರಿಯಲ್‌ನಲ್ಲಿ ರೋಚಕ ತಿರುವು: ಬಯಲಾಯ್ತು ಶಿವಾನಿಯ ನಿಜ ರೂಪ!
ನಾಗಿಣಿ2 ಸೀರಿಯಲ್ ಜನ ಮನದಲ್ಲಿ ಪ್ರತ್ಯೇಕ ಸ್ಥಾನ ಗಿಟ್ಟಿಸಿಕೊಂಡಿದೆ. ನಾಗರಾಜನನ್ನು ಹುಡುಕಿಕೊಂಡು ಭೂಮಿಗೆ ಬಂದ ನಾಗಿಣಿ, ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತೆ. ಈಗ ಎಲ್ಲವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿರುವ ನಾಗಿಣಿ ನಾಗರಾಜನಿಗೆ ಹತ್ತಿರ ಆಗಿದ್ದಾಳೆ.
ನಾಗಿಣಿ ಶಿವಾನಿ ನಾಯಕ ತ್ರಿಶೂಲ್ ಜೊತೆಗೆ ಒಂದಾಗಿ ಸುಖ ಸಂಸಾರ ನಡೆಸುತ್ತಿದ್ದಾಳೆ. ಅಷ್ಟೇ ಅಲ್ಲಾ ನಾಗಿಣಿ, ನಾಗರಾಜನಿಗೆ ಆದಷ್ಟು ಬೇಗ ಹಳೆ ಜನ್ಮದ ನೆನಪುಗಳನ್ನು ಮರುಕಳಿಸುವಂತೆ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ.
ಆದರೆ ಈ ಸಮಯದಲ್ಲೇ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ ನಿರ್ದೇಶಕ. ಶಿವಾನಿ ತಾನು ನಾಗಿಣಿ ಎನ್ನುವ ಸತ್ಯವನ್ನು ಪತಿ ತ್ರಿಶೂಲ್‌ನಿಂದ ಮುಚ್ಚಿಟ್ಟಿದ್ದಾಳೆ. ಯಾಕೆಂದರೆ ತ್ರಿಶೂಲ್‌ಗೆ ತಾನು ನಾಗರಾಜ ಎನ್ನುವ ಸತ್ಯ ಗೊತ್ತಿಲ್ಲ. ತಾನು ಒಬ್ಬ ಮನುಷ್ಯ ಎಂದೇ ತ್ರಿಶೂಲ್ ಭಾವಿಸಿದ್ದಾನೆ.

ಶಿವಾನಿ ನಾಗಿಣಿ ಎನ್ನುವ ಸತ್ಯ ಬಯಲು!
ಇಷ್ಟು ದಿನ ಶಿವಾನಿ ತಾನು ನಾಗಿಣಿ ಎನ್ನುವ ಸತ್ಯವನ್ನು ಪತಿಯಿಂದ ಅಡಗಿಸಿಟ್ಟಿದ್ದಳು. ಆದರೆ ಶಿವಾನಿ ಹೊಟ್ಟೆಯಲ್ಲಿ ಹಾವು ಕಂಡು ಬೆಚ್ಚಿ ಬಿದ್ದ ತ್ರಿಶೂಲ್, ಸದ್ಯ ಶಿವಾನಿ ಯಾರು ಎನ್ನುವ ಹುಡುಕಾಟದಲ್ಲಿ ಇದ್ದ. ತ್ರಿಶೂಲ್‌ಗೆ ಈಗ ದಾರಿ ಸಿಕ್ಕಿದೆ. ಶಿವಾನಿ ಬಗ್ಗೆ ಸತ್ಯ ತಿಳಿದುಕೊಳ್ಳಲು ತ್ರಿಶೂಲ್ ಸ್ವಾಮಿಜೀಯಿಂದ ಮಂತ್ರ ಭೂದಿಯನ್ನು ತಂದಿದ್ದಾನೆ. ಈ ಬೂದಿ ಶಿವಾನಿ ಮೇಲೆ ಬಿದ್ದ ಕೂಡಲೇ ಶಿವಾನಿ ತ್ರಿಶೂಲ್ ಮುಂದೆ ಹಾವಾಗಿ ಬಿಟ್ಟಿದ್ದಾಳೆ.

ಶಿವಾನಿ ಕಾಯಕಕ್ಕೆ ಪತಿಯಿಂದಲೇ ಅಡ್ಡಿ!
ಶಿವಾನಿಯೇ ನಾಗಿಣಿ ಎನ್ನುವ ಸತ್ಯ ಈಗ ತ್ರಿಶೂಲ್‌ಗೆ ತಿಳಿದು ಬಿಟ್ಟಿದೆ. ಹಾಗಾಗಿ ತ್ರಿಶೂಲ್ ತಾನು ಅತಿಯಾಗಿ ಪ್ರೀತಿಸಿದ ಶಿವಾನಿಯಿಂದ ದೂರ ಹೋಗುವ ಸಾಧ್ಯತೆ ದಟ್ಟವಾಗಿದೆ. ಶಿವಾನಿ ತನಗೆ ದೊಡ್ಡ ಮೋಸ ಮಾಡಿದ್ದಾಳೆ ಎನ್ನುವ ಭಾವನೆ ಈ ತ್ರಿಶೂಲ್ ಮನಸಲ್ಲಿ ಮೂಡಿದೆ. ಹಾಗಾಗಿ ಶಿವಾನಿ ನಾಗಲೋಕದಿಂದ ಬಂದಿರುವ ಕಾರ್ಯಪೂರ್ತಿ ಆಗಲು ಸ್ವತಃ ತ್ರಿಶೂಲ್ ಅಡ್ಡಿ ಆಗುತ್ತಾನೆ.

ಅಪ್ಪನನ್ನು ಕೊಲ್ಲಲು ಕಾರಣ ಆದ ನಾಗಿಣಿಯನ್ನು ಕ್ಷಮಿಸುತ್ತಾನ ತ್ರಿಶೂಲ್!
ಇನ್ನು ನಾಗಿಣಿ ಶಿವಾನಿಯನ್ನು ಕೊಲ್ಲಲು ಬಂದ ತ್ರಿಶೂಲ್ ತಂದೆ ದಿಗ್ವಿಜಯ ತ್ರಿಶೂಲ್ ಕೈಯಿಂದಲೇ ಕೊಲೆ ಆಗಿದ್ದಾನೆ. ಹಾಗಾಗಿ ತ್ರಿಶೂಲ್ ಇದೇ ನೋವಿನಲ್ಲಿ, ಪಾಪ ಪ್ರಜ್ಞೆಯಲ್ಲಿ ಇದ್ದಾನೆ, ಈಗ ನಿಜವಾದ ನಾಗಿಣಿ ಶಿವಾನಿ ಎಂದು ತ್ರಿಶೂಲ್‌ಗೆ ಗೊತ್ತಾಗಿದೆ. ಹಾಗಾಗಿ ತ್ರಿಶೂಲ್ ನಾಗಿಣಿಯ ಮಾತನ್ನು ಕೇಳುವುದು ಇನ್ನು ಅನುಮಾನ. ಹಾಗಾಗಿ ತ್ರಿಶೂಲ್‌ಗೆ ತನ್ನ ನಿಜ ರೂಪದ ಅರಿವು ಮೂಡಿಸಲು ಶಿವಾನಿಗೆ ಇನ್ನಷ್ಟು ಕಷ್ಟ ಆಗಲಿದೆ.

ನಾಗಮಣಿ ನುಂಗಿ ತಪ್ಪು ಮಾಡಿದ ಶಿವಾನಿ!
ಗುರುಗಳು ಹೇಳುವ ಪ್ರಕಾರ ನಾಗಿಣಿ ನಾಗಮಣಿಯನ್ನು ನುಂಗದೇ ಇದ್ದಿದ್ದರೆ ಅದರಿಂದ ನಾಗರಾಜನಿಗೆ ತನ್ನ ಹಳೆ ಜನ್ಮದ ನೆನಪುಗಳು ಮರುಕಳಿಸುತ್ತಾ ಇದ್ದವು. ಆದರೆ ನಾಗಿಣಿ ನಾಗಮಣಿ ನುಂಗಿದ್ದಾಳೆ. ಹಾಗಾಗಿ ಈಗ ನಾಗಿಣಿಗೆ ಸಂಕಷ್ಟ ಎದುರಾಗಿದೆ. ನಾಗಮಣಿ ಮಗುವಾಗಿ ಬರುವ ತನಕ ನಾಗಿಣಿ ಸಂಕಷ್ಟದಲ್ಲಿ ಇರುತ್ತಾಳೆ. ಆಕೆಯನ್ನು ಯಾರು ಕಾಪಾಡುವುದಿಲ್ಲ ಎನ್ನುವುದನ್ನು ಗುರುಗಳು ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











