'ಪಾರು' ಧಾರಾವಾಹಿಯಲ್ಲಿ ಮೆಗಾ ಟ್ವಿಸ್ಟ್: ಅಖಿಲಾಂಡೇಶ್ವರಿ ಎದುರು ಸತ್ಯ ಬಾಯ್ಬಿಟ್ಟ ಆದಿ!

ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಮನೆ ಮಾತಾಗಿವೆ. ಅದರಲ್ಲಿ ಹಲವು ಧಾರಾವಾಹಿಗಳು ಜನರ ಮನಸಲ್ಲಿ ಅಚ್ಚು ಮೆಚ್ಚಿನ ಸ್ಥಾನ ಗಿಟ್ಟಿಸಿಕೊಂಡಿವೆ. ಅಂಥ ಧಾರಾವಾಹಿಗಳಲ್ಲಿ 'ಪಾರು' ಕೂಡ ಒಂದು. ಪಾರು ಧಾರಾವಾಹಿಯಲ್ಲಿ ಇದೀಗ ಟ್ವಿಸ್ಟ್ ಮೇಲೆ, ಟ್ವಿಸ್ಟ್. ಹಾಗಾಗಿ ಧಾರಾವಾಹಿ ಅತ್ಯಂತ ರೋಚಕತೆಯಿಂದ ಸಾಗುತ್ತಿದೆ.

ಇಲ್ಲಿ ನಾಯಕ ನಟಿ ಪಾರು ಮನೆ ಕೆಲಸದಾಕೆ, ನಟ ಆದಿತ್ಯ ಮನೆಯ ಯಜಮಾನ. ಈ ಇಬ್ಬರ ನಡುವೆ ಪ್ರೀತಿ ಚಿಗುರಿ ಅವರು ಒಂದಾಗುವುದೇ ಮೂಲ ಕಥಾ ವಸ್ತು. ಆದರೆ ಇವರ ಪ್ರೇಮಕ್ಕೆ ನೂರಾರು ಅಡ್ಡಿ, ಆತಂಕ, ಕಂಟಕ. ಎಲ್ಲಾ ಸವಾಲುಗಳನ್ನ ಎದುರಿಸಿ ಬೇಸತ್ತ ಪಾರು, ಆದಿತ್ಯ ತಾವೇ ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದರು. ಅದರೆ ವಿಧಿ ಆಟ ಬೇರೇನೆ ಆಗಿದೆ.

ಪಾರು ಪ್ರೀತಿ ತ್ಯಾಗ ಮಾಡಲು ನಿರ್ಧರಿಸಿದ್ದರೂ ಕೂಡ. ಆದಿತ್ಯನಿಗೆ ಪಾರ್ವತಿಯೇ ಸರಿಯಾದ ಜೋಡಿ ಎನ್ನುವುದನ್ನು ಆ ದೇವರು ನಿರ್ಧಸಿದ್ದಾನೆ. ಹಾಗಾಗಿ ಎಲ್ಲಾ ನಿಜಾಂಶಗಳು ಈಗ ಬಯಲಿಗೆ ಬಂದು ಬಿಟ್ಟಿವೆ. ಆದರೆ ಅದನ್ನು ಅಖಿಲಾಂಡೇಶ್ವರಿ ನಂಬುತ್ತಾಳಾ ಎನ್ನುವುದೆ ಪ್ರಶ್ನೆಯಾಗಿ ಉಳಿದಿದೆ. ಪಾರು ಧಾರಾವಾಹಿಯಲ್ಲಿ ನಡೆದ ರೋಚಕ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು ಎನ್ನುವುದನ್ನು ಮುಂದೆ ಓದಿ...

ಪಾರು-ಆದಿ ಮದುವೆ ಅಡ್ಡಿಯಾಗಿದ್ದ ವಿಲನ್‌ಗಳ ಮುಖವಾಡ ಖಳಚಿತು!

ಪಾರು-ಆದಿ ಮದುವೆ ಅಡ್ಡಿಯಾಗಿದ್ದ ವಿಲನ್‌ಗಳ ಮುಖವಾಡ ಖಳಚಿತು!

ಪಾರು ಮತ್ತು ಆದಿತ್ಯ ಮದುವೆಯನ್ನು ತಡೆಯಲು, ಖಳನಾಯಕಿ ಅನುಂಧತಿ ಯಾಮಿಯನ್ನು ಚೂ ಬಿಟ್ಟಿದ್ದಳು. ಯಾಮಿನಿ ಮತ್ತು ಆದಿ ಮದುವೆ ಆಗುವ ಸಂದರ್ಭದಲ್ಲಿ ಪಾರು ಎಂಟ್ರಿ ಕೊಟ್ಟು, ಆದಿತ್ಯ ನನ್ನ ಗಂಡ ಎಂದು ಹೇಳಿ ಬಿಡುತ್ತಾಳೆ. ಆಗ ಲಾಯರ್ ಕೂಡ ಪಾರು ಸಹಾಯಕ್ಕೆ ನಿಲ್ಲುತ್ತಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆ ಆಗಬಾರದು ಎಂದು ಹೇಳುತ್ತಾರೆ. ಪಾರು ಆದಿಯನ್ನು ತನ್ನ ಗಂಡ ಎಂದು ಒಪ್ಪಿಕೊಂಡಿದ್ದು ಎಲ್ಲಾರಿಗೂ ಶಾಕ್ ಆಗುತ್ತದೆ.

ಅಖಿಲಾಂಡೇಶ್ವರಿಯನ್ನು ಕೊಲ್ಲಲು ಅರುಂಧತಿ ಸಂಚು!

ಅಖಿಲಾಂಡೇಶ್ವರಿಯನ್ನು ಕೊಲ್ಲಲು ಅರುಂಧತಿ ಸಂಚು!

ಆದರೆ ಹೇಗಾದರು ಮಾಡಿ ಯಾಮಿನಿ ಜೊತೆಗೆ ಆದಿತ್ಯನ ಮದುವೆ ಮಾಡಬೇಕು ಎಂದುಕೊಂಡ ಅರುಂಧತಿ ಹೊಸ ತಂತ್ರ ಹೂಡುತ್ತಾಳೆ. ಅಖಿಲಾಂಡೇಶ್ವರಿಯನ್ನು ಬಂಧಿಸಿದ್ದೇನೆ. ಯಾಮಿನಿ, ಆದಿ ಮದುವೆ ಆಗದೇ ಇದ್ದರೆ, ನಮ್ಮ ಹುಡುಗರು ಅಖಿಲಾಂಡೇಶ್ವರಿಯನ್ನು ಕೊಂದು ಬಿಡುತ್ತಾರೆ ಎಂದು ಬೆದರಿಕೆ ಹಾಕುತ್ತಾಳೆ. ಆದೇ ಸಮಯಕ್ಕೆ ಸರಿಯಾಗಿ ಅಖಿಲಾಂಡೇಶ್ವರಿ ವೀರಣ್ಣನ ಜೊತೆಗೆ ಮದುವೆ ಮಂಟಪಕ್ಕೆಎಂಟ್ರಿ ಕೊಡ್ತಾರೆ. ಬಳಿಕ ಅರುಧಂತಿಗೆ ಚೀ ಮಾರಿ ಹಾಕಿ ಅರೆಸ್ಟ್ ಮಾಡಿಸುತ್ತಾಳೆ.

ಸತ್ಯ ಬಾಯ್ಬಿಟ್ಟ ಆದಿ: ಪಾರು ಪ್ರೀತಿಯನ್ನು ಅಮ್ಮನಿಗೆ ಹೇಳಿದ ನಟ!

ಸತ್ಯ ಬಾಯ್ಬಿಟ್ಟ ಆದಿ: ಪಾರು ಪ್ರೀತಿಯನ್ನು ಅಮ್ಮನಿಗೆ ಹೇಳಿದ ನಟ!

ಇದೆಲ್ಲಾ ಮುಗಿದ ನಂತರ, ಪಾರು ಆದಿತ್ಯ ತನ್ನ ಗಂಡ ಎಂದು ಹೇಳಿದ್ದು, ಕೇವಲ ಮದುವೆ ನಿಲ್ಲಿಸಲು ಎಂದು ಅಖಿಲಾಂಡೇಶ್ವರಿ ತಿಳಿದಿರುತ್ತಾರೆ. ಆದರೆ ವೀರಣ್ಣ ಆದಿತ್ಯನಿಗೆ ಸತ್ಯ ಹೇಳುವಂತೆ ಮನವರಿಕೆ ಮಾಡುತ್ತಾನೆ. ಆಗ ಆದಿತ್ಯ ತಡಮಾಡದೇ. ತನ್ನ ಅಮ್ಮ ಅಖಿಲಾಂಡೇಶ್ವರಿಯ ಎದುರು ನಿಂತು. ಪಾರು ನಾನು ಒಬ್ಬರನ್ನು ಒಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ ಎಂದು ಹೇಳಿ ಬಿಡುತ್ತಾನೆ. ಆದಿತ್ಯನ ಮಾತು ಕೇಳಿ ಅಖಿಲಾಗೆ ತುಂಬಾ ಶಾಕ್ ಆಗುತ್ತೆ.

ಆದಿ- ಪಾರು ಪ್ರೀತಿ ಒಪ್ಪುತ್ತಾಳ ಅಖಿಲಾಂಡೇಶ್ವರಿ!

ಆದಿ- ಪಾರು ಪ್ರೀತಿ ಒಪ್ಪುತ್ತಾಳ ಅಖಿಲಾಂಡೇಶ್ವರಿ!

ಸದ್ಯಕ್ಕೆ ಧಾರಾವಾಹಿ ಈ ಹಂತದಲ್ಲಿ ಇದೆ. ಆದಿತ್ಯ ನಿಜ ಹೇಳಿದ್ದಾನೆ. ಆದರೆ ಅಖಿಲಾಂಡೇಶ್ವರಿ ಇವರ ಪ್ರೀತಿಯನ್ನು ಒಪ್ಪುತ್ತಾರಾ? ಅಥವಾ ಈ ವಿಚಾರದಲ್ಲಿ ಮತ್ತೇನೋ ಟ್ವಿಸ್ಟ್ ಇಟ್ಟು ಸತ್ಯವನ್ನು ಮರೆಮಾಚಲಾಗುತ್ತಾ? ಅಖಿಲಾಂಡೇಶ್ವರಿ ಆದಿ, ಪಾರುಗೆ ಮದುವೆ ಮಾಡಿಸುತ್ತಾರಾ ಎನ್ನುವ ಕುತೂಹಲಗಳು ಮೂಡಿವೆ. ಇದಕ್ಕೆಲ್ಲಾ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗುತ್ತದೆ.

More from Filmibeat

English summary
Big Twist In Zee Kannada Serial 'Paaru', Aditya Admits His Love With Paaru In Front Of His Mother,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X