ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಬೆಂಕಿ ಬಿರುಗಾಳಿ! ಹೊಸ ಟ್ವಿಸ್ಟ್ ನೋಡುಗರಿಗೆ ಇಷ್ಟವಾಗುತ್ತಾ?

ಇತ್ತೀಚೆಗೆ ಜೀಕನ್ನಡ ವಾಹಿನಿಯಲ್ಲಿ ಶುರು ಆಗಿರುವ ಹೊಸ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಜನರೆಲ್ಲರೂ ಇಷ್ಟಪಡುವ ಸದಭಿರುಚಿಯ ಕಥೆ ಈ ಧಾರಾವಾಹಿಯಲ್ಲಿದೆ. ಈ ಸೀರಿಯಲ್ ನ ಪ್ರಮುಖ ಪಾತ್ರ ಪುಟ್ಟಕ್ಕ, ಈ ಪಾತ್ರವನ್ನು ಚಂದನವನದ ಖ್ಯಾತ ನಟಿ ಉಮಾಶ್ರೀ ನಟಿಸುತ್ತಿದ್ದಾರೆ.

ಉಮಾಶ್ರೀ ಅವರು ಎಂಥ ಅಧ್ಭುತವಾದ ಅಭಿನೇತ್ರಿ ಎನ್ನುವುದು ನಮಗೆ ಗೊತ್ತಿರುವ ವಿಚಾರ. ಸಿನಿಮಾದಲ್ಲಿನ ಅದ್ಭುತವಾದ ನಟನೆಯಿಂದ ರಾಷ್ಟ್ರಪ್ರಶಸ್ತಿ ಪಡೆದಿರುವ ಉಮಾಶ್ರೀ ಅವರು, ಕಿರುತೆರೆಗೆ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹಲವು ಸಂಚಿಕೆಗಳು ಪ್ರಸಾರವಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಬಂದಿದೆ.

ಈ ಧಾರಾವಾಹಿಯನ್ನು ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕರಾದ ಆರೂರು ಜಗದೀಶ್ ನಿರ್ದೇಶನ ಮಾಡುತ್ತಿದ್ದಾರೆ. ಹಳ್ಳಿ ಸೊಗಡಿನಲ್ಲಿ ಮೂಡಿ ಬರುತ್ತಿರುವ ಈ ಕಥೆಯನ್ನು ಜನರು ಬಹಳ ಇಷ್ಟಪಡುತ್ತಿದ್ದಾರೆ. ಬದುಕಿನಲ್ಲಿ ಗಂಡ ದೂರವಾದ ನಂತರ ಮೂವರು ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿ ಸಾಕಲು ಮೆಸ್ ನಡೆಸುವ ಪುಟ್ಟಕ್ಕನ ಕಥೆಯೇ ಈ ಧಾರಾವಾಹಿ. ಆದರೇ ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಒಂದು ಟ್ವಿಸ್ಟ್ ಎದುರಾಗಿದೆ ಅದೇನೂ ಅಂತ ಮುಂದೆ ಓದಿ.

ಮುಂದಿನ ಸಂಚಿಕೆಯಲ್ಲಿ ಸಾಕಷ್ಟು ತಿರುವುಗಳು

ಮುಂದಿನ ಸಂಚಿಕೆಯಲ್ಲಿ ಸಾಕಷ್ಟು ತಿರುವುಗಳು

ಎಲ್ಲರಿಗೂ ತಿಳಿದಿರುವ ಹಾಗೇ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಮತ್ತು ಕಂಠಿಯ ಪ್ರೇಮ ಕಥೆ ಜೋರಾಗಿ ನಡೆಯುತ್ತಿದೆ. ಧಾರಾವಾಹಿಯಲ್ಲಿ ಇವರಿಬ್ಬರ ಪ್ರೀತಿಯ ವಿಚಾರ ನೋಡುಗರಿಗೂ ಹಿಡಿಸಿದೆ. ಆದರೇ ಈಗ ಇವರಿಬ್ಬರ ಪ್ರೀತಿ ನಡುವೆ ಬಿರುಗಾಳಿಯೇ ಎದ್ದೇಳುವ ಸೂಚನೆ ಎದ್ದು ಕಾಣುತ್ತಿದೆ. ಅಲ್ಲದೇ ಸ್ನೇಹಾ ಮತ್ತು ಕಂಠಿ ಪ್ರೇಮ ಸಂಚಿಕೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಕೂಡ ಮುಂದಿನ ಸಂಚಿಕೆಯಲ್ಲಿ ಇರಲಿದೆ ಯಂತೆ.

ಸ್ನೇಹಾ ಮತ್ತು ಕಂಠಿ ನಡುವೆ ಬಿರುಕು ಉಂಟಾಗುತ್ತಾ

ಸ್ನೇಹಾ ಮತ್ತು ಕಂಠಿ ನಡುವೆ ಬಿರುಕು ಉಂಟಾಗುತ್ತಾ

ಪ್ರೀತಿ ಪ್ರೇಮ ಅಂದರೆ ಅಲ್ಲಿ ಅದನ್ನು ತಡೆಯಲು, ವಿಘ್ನ ಉಂಟು ಮಾಡಲು ವಿಲನ್ ಪಾತ್ರ ಇರಲೇ ಬೇಕು. ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದ ಸ್ನೇಹಾ ಮತ್ತು ಕಂಠಿ ನಡುವಲ್ಲೂ ಇಂತಃ ಒಂದು ವಿಲನ್ ಕ್ಯಾರೆಕ್ಟರ್ ಎಂಟ್ರಿ ಆಗೋದಿದೆ. ಆ ವಿಲನ್ ಬೇರೆ ಯಾರು ಅಲ್ಲ ಕಂಠಿಯ ತಾಯಿ. ಹೌದು ಕಂಠಿಯ ತಾಯಿಗೆ ಮೊದಲಿನಿಂದಲು ಸ್ನೇಹಾಳನ್ನು ಕಂಡರೇ ಆಗುವುದಿಲ್ಲ. ಅವಳನ್ನು ತನ್ನ ಮಗನೇ ಪ್ರೀತಿ ಮಾಡುತ್ತಿರುವುದನ್ನು ಸಹಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರಿಬ್ಬರನ್ನೂ ದೂರ ಮಾಡಲು ಕಂಠಿ ತಾಯಿ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಲಿದೆಯಂತೆ.

ಮುಂದಿನ ನಡೆ ಏನು ಅನ್ನೋದು ಈಗ ಬಾರಿ ಕುತೂಹಲ ಮೂಡಿಸಿದೆ.

ಎಲ್ಲಾ ಸರಿ ಮಾಡಿ ಸ್ನೇಹಾಳನ್ನು ಮದುವೆ ಆಗ್ತಾನಾ ಕಂಠಿ ?

ಎಲ್ಲಾ ಸರಿ ಮಾಡಿ ಸ್ನೇಹಾಳನ್ನು ಮದುವೆ ಆಗ್ತಾನಾ ಕಂಠಿ ?

ಹೀಗಾಗಿ ಕಂಠಿಯ ಮುಂದಿನ ನಡೆ ಏನು ಅನ್ನೋದು ಈಗ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ತಾಯಿಯ ದೃಷ್ಟಿಯಲ್ಲಿ ಸ್ನೇಹಾಳನ್ನು ಒಳ್ಳೆಯವಳಂತೆ ಮಾಡುತ್ತಾನೋ, ಅಥವಾ ತಾಯಿಗಾಗಿ ಸ್ನೇಹಾಳನ್ನು ಬಿಡುತ್ತಾನೋ, ಎಲ್ಲಾ ಸರಿ ಮಾಡಿ ಸ್ನೇಹಾಳನ್ನು ಮದುವೆ ಆಗ್ತಾನೋ ಅನ್ನುವ ಹಲವು ಪ್ರಶ್ನೆಗಳು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಧಾರಾವಾಹಿ ಸಂಚಿಕೆ ಹೇಗೆ ಮೂಡಿಬರಲಿದೆ ಅನ್ನುವುದನ್ನು ಕಾದುನೋಡಬೇಕಿದೆ.

ಟಿಆರ್‌ಪಿಯಲ್ಲಿ ಮುನ್ನುಗ್ಗುತ್ತಿದೆ ಸೀರಿಯಲ್

ಟಿಆರ್‌ಪಿಯಲ್ಲಿ ಮುನ್ನುಗ್ಗುತ್ತಿದೆ ಸೀರಿಯಲ್

ಇನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿಯೂ ಮಂಡ್ಯ ಜಿಲ್ಲೆ ದೇವಿಪುರ ಅನ್ನೋ ಗ್ರಾಮದಲ್ಲಿ ನಡೆಯುವ ಕತೆ ಈ ಧಾರಾವಾಹಿ ಹಿನ್ನೆಲೆ. ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಪುಟ್ಟಕ್ಕನ ಗಂಡ ಆಕೆಯನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ ಆಸರೆಯಾಗಿ ನಿಲ್ಲುತ್ತಾರೆ. ಈ ಧಾರಾವಾಹಿ ಪ್ರಸಾರ ಆಗಿ ಜನ ಮನ ಗೆದ್ದಿದೆ. ಸದ್ಯ ದಿನಕ್ಕೊಂದು ರೋಚಕ ತಿರುವುಗಳೊಂದಿಗೆ, ಕುತೂಹಲದೊಂದಿಗೆ ಧಾರಾವಾಹಿ ಸಾಗುತ್ತಿದೆ.

More from Filmibeat

English summary
Puttakkana Makkalu serial getting more interesting day by day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X