BBK 11: ಅನುಷಾ ಹೋದ್ರು ಶೋಭಾ ಬಂದ್ರು ; ಏನ್ ಲಕ್ ಗುರು ಧರ್ಮನದ್ದು!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11 ಶೋ ಐವತ್ತು ದಿನ ಪೂರೈಸಿದೆ. ಈ ಐವತ್ತು ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಧರ್ಮ ಹಾಗೂ ಅನುಷಾ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಕ್ಲೋಸ್ ಎನ್ನುವುದಕ್ಕಿಂತ ಪ್ರೇಮಿಗಳಾಗಿದ್ದರು.

ಅಡುಗೆ ಮನೆಯಲ್ಲೂ ಅವರಿಬ್ಬರೇ, ಗಾರ್ಡನ್ ಏರಿಯಾದಲ್ಲೂ ಅವರಿಬ್ಬರೆ.. ಕಂಡಕಂಡಲ್ಲಿ ಇಬ್ಬರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಹನುಮಂತುಗಂತು ಅದನ್ನು ನೋಡಿ ನೋಡಿನೇ ಸಾಕಾಗಿತ್ತು. ನಾಮಿನೇಷನ್ ಮಾಡುವಾಗೆಲ್ಲಾ ಇಬ್ಬರನ್ನು ದೂರ ದೂರ ಮಾಡುವ ಮಾತನ್ನೇ ಆಡುತ್ತಿದ್ದರು.

Bigboss kannad season 11 After Anusha now shobha shetty become close to dharma

ಐವತ್ತು ದಿನಕ್ಕೆ ಅನುಷಾ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೊರಗಡೆ ಆಗಲಿ ಒಳಗಡೆ ಆಗಲಿ ಕಂಫರ್ಟ್ ಝೋನ್ ನೀಡಿದ್ದರು ಅನುಷಾ. ಈಗ ಅನುಷಾ ಇಲ್ಲದ ಬಿಗ್ ಬಾಸ್ ಮನೆ ನೆನಪಿಸಿಕೊಳ್ಳುವುದಕ್ಕೂ ಧರ್ಮನಿಂದ ಆಗುತ್ತಿಲ್ಲ. ಬೇಸರದಲ್ಲಿಯೇ ಇದ್ದ ಧರ್ಮನಿಗೆ ಖುಷಿ ಕೊಟ್ಟಿದ್ದಾರೆ ಶೋಭಾ ಶೆಟ್ಟಿ.

ಶೋಭಾ ಶೆಟ್ಟಿ ಎಂಟ್ರಿ

ಬಿಗ್ ಬಾಸ್ ಮನೆಗೆ ಇನ್ನರ್ಧ ಜರ್ನಿ ಇರುವಾಗ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಶೋಭಾ ಶೆಟ್ಟಿ ಮನೆಗೆ ಬಂದು ಹವಾ ಕ್ರಿಯೇಟ್ ಮಾಡಿದ್ದಾರೆ. ಶೋಭಾ ಶೆಟ್ಟಿ ಮನೆಯೊಳಗೆ ಬರುತ್ತಿದ್ದಂತೆ ಪರಿಚಯವಿದ್ದ ಶಿಶಿರ್, ಭವ್ಯಾ ಆಲಿಂಗನ ಮಾಡಿ ಆಹ್ವಾನಿಸಿದ್ದಾರೆ. ಬಳಿಕ ಶೋಭಾ ಶೆಟ್ಟಿಯೇ ಉಳಿದವರಿಗೆ ತನ್ನ ಪರಿಚಯ ಮಾಡಿಕೊಟ್ಟಿದ್ದಾರೆ.

Bigboss kannad season 11 After Anusha now shobha shetty become close to dharma

ಬಂದ ಕೂಡಲೇ ವಿಕ್ರಂಗೆ ಸವಾಲು

ಶೋಭಾ ಹಾಗೂ ರಜತ್ ಮನೆಗೆ ಬಂದಿದ್ದಾರೆ. ಬಂದ ದಿನವೇ ಬಿಗ್ ಬಾಸ್ ಕಡೆಯಿಂದ ವಿಶೇಷ ಅಧಿಕಾರವನ್ನು ಪಡೆದಿದ್ದಾರೆ. ಅಡುಗೆ ಮನೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಎಲ್ಲವನ್ನು ತಾವೇ ನಿರ್ಧಾರ ಮಾಡಬೇಕಿದೆ. ಇದರಿಂದ ತ್ರಿವಿಕ್ರಮ್ ಹಾಗೂ ಶೋಭಾ ನಡುವೆ ಸಣ್ಣದೊಂದು ಜಗಳ ನಡೆದಿದೆ. ನಿಮಗೆ ಈಗಿನ್ನು ಅಡುಗೆ ಮನೆ ಉಸ್ತುವಾರಿ ಅಷ್ಟೇ ಕೊಟ್ಟಿರೋದು ಎಂದು ವಿಕ್ರಮ್ ಹೇಳಿದಾಗ, ಶೋಭಾ ನೋಡೋಣಾ ಬಿಗ್ ಬಾಸ್ ಇನ್ನಷ್ಟು ಅಧಿಕಾರವನ್ನು ಕೊಟ್ಟರು ಕೊಡಬಹುದು ಎಂದೇ ಸವಾಲು ಹಾಕಿದ್ದಾರೆ.

ಗೌತಮಿ ಮೇಲೆ ಶೋಭಾ ಗರಂ

ಬಿಗ್ ಬಾಸ್ ಮನೆಗೆ ಹೊಸದಾಗಿ ಬಂದ ಶೋಭಾ ಹಾಗೂ ರಜತ್‌ಗೆ ಬಿಗ್ ಬಾಸ್ ಹೊಸದೊಂದು ಟಾಸ್ಕ್ ಅನ್ನು ನೀಡಿದರು. ಸ್ನೇಹ ಬೆಳೆಸುವುದಾದರೆ ಯಾರ ಜೊತೆಗೆ, ದ್ವೇಷ ಮಾಡುವುದಾದರೆ ಯಾರನ್ನ ಎಂಬ ಟಾಸ್ಕ್ ಅದು. ಆಗ ಶೋಭಾ ಗೌತಮಿ ಅವರ ಮೇಲೆ ಕೆಂಡಕಾರಿದರು. ಗೌತಮಿ ಇನ್ನು ಕೂಡ ಮುಖವಾಡವನ್ನ ಹಾಕಿ ಬದುಕುತ್ತಿದ್ದಾರೆ. ನಾನು ಆ ಮುಖವಾಡವನ್ನ ಕಳಚುತ್ತೀನಿ ಎಂದು ತೆಂಗಿನಕಾಯಿ ಒಡೆಯಲು ಹೋದಾಗ ಕಾಯಿ ಒಡೆದುಕೊಳ್ಳಲಿಲ್ಲ‌ ಅದಕ್ಕೆ ಗೌತಮಿ ಕೂಡ ವ್ಯಂಗ್ಯವಾಗಿ ರೇಗಿಸಿದರು.

ಅನುಷಾ ಜಾಗಕ್ಕೆ ಶೋಭಾ?

ಇನ್ನು ಸ್ನೇಹ ಯಾರ ಜೊತೆಗೆ ಮುಂದುವರೆಸಬೇಕು ಎಂದಾಗ ಶೋಭಾ ಆಯ್ಕೆ ಮಾಡಿಕೊಂಡಿದ್ದು ಧರ್ಮ ಅವರನ್ನು ಶೋಭಾ ಅವರ ಮಾತು ಕೇಳಿ ಎಲ್ಲರೂ ಓ ಎಂದು ಕಿರುಚಿದರು. ನನ್ನ ಲಗೇಜ್ ಸ್ಟೋರ್ ರೂಮಿನಿಂದ ತರುವಾಗ ಧರ್ಮ ಅವರು ಸಹಾಯ ಮಾಡಿದರು. ಹಾಗಂತ ನನ್ನ ಲಗೇಜ್ ತಂದುಕೊಟ್ಟರು ಅಂತ ಅಲ್ಲ. ಅವರಲ್ಲಿ ಆ ಗುಣ ಇದ್ಯಲ್ಲ ಅದು ನಂಗೆ ಇಷ್ಟ ಆಯ್ತು. ಹೀಗಾಗಿ ಅವರನ್ನ ಫ್ರೆಂಡ್ ಅಂತ ಕನ್ಸಿಡರ್ ಮಾಡ್ತೀನಿ ಎಂದಿದ್ದಾರೆ. ಈಗಷ್ಟೇ ಅನುಷಾ ಮನೆಯಿಂದ ಹೊರ ಹೋಗಿದ್ದಾರೆ. ಅನುಷಾ ಇದ್ದಾಗ ಧರ್ಮ ಹಾಗೂ ಅನುಷಾ ಹಾಗೂ ಐಶ್ವರ್ಯಾ ನಡುವೆ ಟ್ರೈ ಹ್ಯಾಂಗಲ್ ಲವ್ ಸ್ಟೋರಿ ನಡೆಯುತ್ತಿತ್ತು. ಈಗ ಧರ್ಮ ಹಾಗೂ ಐಶ್ಚರ್ಯಾ ಹಾಗೂ ಶೋಭಾ ಶೆಟ್ಟಿ ಆಗುತ್ತಾ ನೋಡೋಣ.

More from Filmibeat

English summary
Colors kannada bigboss Written Update on Bigboss season 11 November 18th episode. Here is the details about Shobha Shetty choose was dharma;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X