BBK10: ಹೋರಾಟದ ಬದುಕು, ಪ್ರೀತಿ, ಮದುವೆ ಕತೆ ಬಿಚ್ಚಿಟ್ಟ ವಿನಯ್ ಗೌಡ

ಬಿಗ್ ಬಾಸ್ ಮನೆಗೆ ಬಂದಾಗಿನಿಂದ ವಿನಯ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಆರಂಭದಲ್ಲಿ ಬಹಳ ಅಗ್ರೆಸ್ಸಿವ್ ಆಗಿದ್ದ ವಿನಯ್ ಈಗ ಕೊಂಚ ಸೈಲೆಂಟ್ ಆಗಿದ್ದಾರೆ. ಕೆಲವೊಮ್ಮೆ ಆತನ ಮಾತುಗಳು, ನಡೆ ಸಹ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಬೇಸರ ತರಿಸಿತ್ತು. ನಂತರ ವಿನಯ್ ಎಲ್ಲರ ಬಳಿಯು ಕ್ಷಮೆ ಕೇಳಿದರು.

ಟಾಸ್ಕ್‌ ಸಮಯದಲ್ಲಿ ಕೋಪ, ಜಗಳ ಸರ್ವೇಸಾಮಾನ್ಯವಾಗಿ ಹೋಗಿತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ವಿನಯ್ ಲೈಫ್ ಸ್ಟೋರಿ ಅನಾವರಣಗೊಂಡಿದೆ. ಪ್ರತಿಯೊಬ್ಬರ ಜೀವನದಲ್ಲಿ ಒಂದು ನೋವಿನ ಕಥೆ ಇದ್ದೇ ಇರುತ್ತದೆ. ಅದೇ ರೀತಿ ವಿನಯ್ ಜೀವನದಲ್ಲೂ ನಡೆದಿದೆ. ಹತ್ತನೇ ವರ್ಷದವರೆಗೂ ಕೂಡ ವಿನಯ್ ರಾಜನಂತೆ ಬೆಳೆದಿದ್ದರು. ಆದರೆ ಮನೆಯಲ್ಲಿ ತಂದೆಗೆ ಆದ ಒಂದು ಸಣ್ಣ ಅಪಘಾತ ಎಲ್ಲಾ ಖುಷಿಯನ್ನೇ ನುಂಗು ಹಾಕಿ ಬಿಟ್ಟಿದೆ.

bigboss Kannada 10: Vinay Gowda shares his personle life and love story

ಒಬ್ಬನೇ ಮುದ್ದಿನ ಮಗನಾಗಿ ಬೆಳೆದ ವಿನಯ್‌ಗೆ ತಂದೆ ಜೊತೆ ಇರುವುದೋ ಅಥವಾ ತಾಯಿಯ ಜೊತೆ ಇರುವುದು ಎಂಬ ಪರಿಸ್ಥಿತಿ ಬಂದಿದೆ. ತಂದೆ- ತಾಯಿ ಇಬ್ಬರು ಕೂಡ ಡಿವೋರ್ಸ್ ಪಡೆದುಕೊಂಡಿದ್ದಾರೆ. ಒಮ್ಮೆ ತಂದೆ ಕೋಪದಿಂದ ವಿನಯ್ ಮೇಲೆ ರೇಗಾಡಿದ್ದಾರೆ. ಇದರಿಂದ ಕೋಪ ಮಾಡಿಕೊಂಡ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಏನೆಂದರೆ ತಾನು ಯಾರ ಮೇಲೂ ಕೂಡ ಅವಲಂಬಿತನಾಗಬಾರದು ಸ್ವಾಭಿಮಾನದಿಂದ ಬದುಕಬೇಕು ಎಂದು ಮುಂಬೈಗೆ ಹೋಗಿದ್ದಾರೆ.

ವಿನಯ್ ಮದುವೆಯ ಸ್ಟೋರಿ ರಿವೀಲ್

ಮುಂಬೈನಲ್ಲಿದ್ದ ದಿನಗಳಲ್ಲಿ ವಿನಯ್ ತುಂಬಾ ಕಷ್ಟಪಟ್ಟಿದ್ದಾರೆ. ಅಲ್ಲಿ ನಾಯಿಗೆ ಊಟ ಸಿಗುತ್ತಿತ್ತು, ಆದರೆ ಮನುಷ್ಯರಿಗೆ ಊಟ ಸಿಗುತ್ತಿರಲಿಲ್ಲ ಎಂದು ತಮ್ಮ ಕಷ್ಟದ ದಿನಗಳನ್ನ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಮೂರು ಹೊತ್ತು ವಡಾ ಪಾವ್ ತಿಂದು ಬದುಕು ಸಾಗಿಸಿದ್ದೇನೆ. ನಂತರ ಮುಂಬೈನಲ್ಲಿ ಏನು ಆಗುವುದಿಲ್ಲ ಎಂದುಕೊಂಡ ಮೇಲೆ ನಾನು ಬೆಂಗಳೂರಿಗೆ ವಾಪಸ್ ಬಂದೆ. ಅದೇ ವೇಳೆ ನನ್ನನ್ನು ಲವ್ ಮಾಡುತ್ತಿದ್ದ ನನ್ನ ಹೆಂಡತಿ ಮದುವೆಯಾಗದೆ ನನಗೋಸ್ಕರ ಕಾಯುತ್ತಾ ಇದ್ದಳು ಎಂದು ತಮ್ಮ ಹೆಂಡತಿ ತಮಗಾಗಿ ಮಾಡಿದ ತ್ಯಾಗದ ಬಗ್ಗೆಯೂ ದೊಡ್ಮನೆಯಲ್ಲಿ ತಿಳಿಸಿದ್ದಾರೆ. ನಮ್ಮದು ಬಾಲ್ಯದ ಲವ್ ಸ್ಟೋರಿ ಎಂದು ಕೂಡ ವಿನಯ್ ತಮ್ಮ ಹೆಂಡತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ವಿನಯ್ ಮದುವೆ ನಡೆಸಿದ್ದು ಎಲ್ಲಿ?

ವಿನಯ್ ಬೆಂಗಳೂರಿಗೆ ಬಂದವರೇ ತಮಗಾಗಿ ಕಾಯುತ್ತಿದ್ದ ತಮ್ಮ ಪ್ರೇಯಸಿಯನ್ನ ಭೇಟಿಯಾಗಿದ್ದಾರೆ. ನಂತರ ಎಲ್ಲವೂ ಒಂದು ಹಂತಕ್ಕೆ ಬಂದ ಮೇಲೆ ಇಬ್ಬರೂ ಕೂಡ ಸರಳವಾಗಿ ಒಂದು ದೇವಸ್ಥಾನದಲ್ಲಿ ಮದುವೆ ಆಗಬೇಕೆಂದು ನಿಶ್ಚಯಿಸಿಕೊಂಡಿದ್ದಾರೆ. ‌ಆದರೆ ಅದೇ ದಿನ ಎಂಟೂವರೆಗೆ ಮೊದಲ ಮುಹೂರ್ತವಿದ್ದುದ್ದರಿಂದ ವಿನಯ್ ಬೇಗನೆ ಬಂದಿದ್ದರು. ಆದರೆ ಹೆಂಡತಿ ತಡವಾಗಿ ಬಂದಿದ್ದಕ್ಕೆ ನೀನು ಪುರೋಹಿತರನ್ನೇ ಮದುವೆಯಾಗು ಎಂದು ವಿನಯ್ ಜಗಳ ಮಾಡಿದ್ದರಂತೆ. ಅದನ್ನು ನೆನಪಿಸಿಕೊಂಡು ಖುಷಿ ಪಟ್ಟಿದ್ದಾರೆ. ನಂತರ 10.30 ಕ್ಕೆ ಇನ್ನೊಂದು ಮುಹೂರ್ತವಿದ್ದು ಅದರಲ್ಲಿ ಮದುವೆಯಾಗಿ ಹೆಂಡತಿ ಹಾಗೂ ಗಂಡ ಇಬ್ಬರೂ ಕೂಡ ಕೆಲಸಕ್ಕೆ ಹೋಗಿದ್ದಾಗಿ ವಿವರಿಸಿದ್ದಾರೆ.

ಎಲ್ಲರ ಬಳಿ ಕ್ಷಮೆ ಕೇಳಿದ ವಿನಯ್

ಇನ್ನು ವಿನಯ್ ತಾವು ಬಿಗ್ ಬಾಸ್ ಮನೆಯಲ್ಲಿ ಬಹಳ ಕೋಪದಿಂದ ಜಗಳವಾಡಿದ್ದು ಹಾಗೂ ಅವಮಾನ ಮಾಡಿರುವುದಕ್ಕೆ ಕ್ಷಮೆಯನ್ನು ಕೇಳಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಫ್ಯಾಮಿಲಿ ಇರುತ್ತದೆ. ನನ್ನ ಮಾತಿನಿಂದ ಏನಾದರೂ ಬೇಸರವಾಗಿದ್ದರೆ ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ ಎಂದಿದ್ದಾರೆ. ಹೆಂಡತಿ ಎಂದರೆ ಅತಿ ಪ್ರೀತಿಯಿದ್ದು, ನನಗಾಗಿ ನನ್ನ ಮಡದಿ ಸಾಕಷ್ಟು ತ್ಯಾಗ ಮಾಡಿದ್ದಾಳೆ. ಅವಳಿಗೂ ಸಹ ಬೇಸರವಾಗುವಂತಹ ಕೆಲಸ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಹೆಂಡತಿ ಎಂದರೆ ಬೆಟ್ಟದಷ್ಟು ಪ್ರೀತಿ

ಪ್ರತಿಯೊಂದು ಕ್ಷಣದಲ್ಲೂ ನನ್ನ ಜೊತೆಗೆ ಇದ್ದು ನಾನು ಒಂದಿಷ್ಟು ಹೆಸರು ಮಾಡಲು ನನ್ನ ಮಡದಿಯೇ ಕಾರಣ ಎಂದು ವಿನಯ್ ತಮ್ಮ ಹೆಂಡತಿಯ ಮೇಲಿರುವ ಪ್ರೀತಿಯನ್ನು ದೊಡ್ಮನೆಯಲ್ಲಿ ವ್ಯಕ್ತಪಡಿಸಿದ್ದಾರೆ. ಹೆಂಡತಿ ಹಾಗೂ ಮಗುವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ವಿನಯ್ ಹೋರಾಟದಿಂದಲೇ ಬದುಕನ್ನ ರೂಪಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಕೆಲವೊಮ್ಮೆ ಬಿಗ್ ಬಾಸ್ ಮನೆಯಲ್ಲೂ ಕೋಪ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಹೋರಾಟವಿಲ್ಲದಿದ್ದರೆ ಬದುಕನ್ನ ಸಾರ್ಥಕ ಗೊಳಿಸಿಕೊಳ್ಳಲು ಆಗುವುದಿಲ್ಲ ಎಂದು ವಿನಯ್ ಹೇಳಿದ್ದಾರೆ.

More from Filmibeat

English summary
Biggboss kannada: Here is the details about Vinay exaplain his life story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X