BBK 11: ಬಿಗ್ ಬಾಸ್ ಮನೆಯಲ್ಲಿ ಮಾನಸ ಹಾಕೋ ಡ್ರೆಸ್ ಬೆಲೆ ಎಷ್ಟು ಗೊತ್ತಾ?
ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ಬೇಕು ಎಂಬ ಪ್ರಶ್ನೆ ಬಂದಾಗ ಮಾನಸ ಅವರ ಹೆಸರು ಕೂಡ ಚಾಲ್ತಿಯಲ್ಲಿತ್ತು. ಈ ವರ್ಷದಿಂದ ಅಲ್ಲ ಕಳೆದ ಸೀಸನ್‌ನಲ್ಲಿ ತುಕಾಲಿ ಸಂತೋಷ್ ಜೊತೆಗೆ ವೇದಿಕೆ ಏರಿದಾಗ ಹೊಡೆಯುತ್ತಿದ್ದ ಪಂಚ್ ಡೈಲಾಗ್, ಕೊಡುತ್ತಿದ್ದ ಕೌಂಟರ್ ಜನರನ್ನ ಸಿಕ್ಕಾಪಟ್ಟೆ ರಂಜಿಸಿತ್ತು.
ಬಿಗ್‌ಬಾಸ್ ಸೀಸನ್ 11ಗೆ ಮಾನಸ ಹೋದ್ರೆ ಒಳ್ಳೆ ಕಾಮಿಡಿ ಕಂಟೆಂಟ್ ಸಿಗುತ್ತೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ ಬಂದ ಮೇಲೆ ನಿರೀಕ್ಷೆ ಹುಸಿಯಾಗಿದೆ. ಮಾನಸ ಮೇಲೆ ಇದ್ದ ಭರವಸೆ ಒಂದೇ ವಾರಕ್ಕೆ ಹೋಯ್ತು ಅನ್ನಿ.

ಮಾನಸಾಗೆ ಹೊರಗಿದ್ದ ಟ್ಯಾಲೆಂಟ್ ಎಲ್ಲಿ ಹೋಯ್ತು ಎಂಬ ಪ್ರಶ್ನೆ ಕಾಡುತ್ತಿದೆ. ಬರೀ ಜಗಳ ಮಾಡೋದೆ ಆಗಿದೆ. ಅದರ ಜೊತೆಗೆ ಬಿಗ್ ಬಾಸ್ ಬೇರೆ ಮಾನಸಾರನ್ನ ಜೂಮ್‌ನಲ್ಲಿ ತೋರಿಸುವುದಕ್ಕೆ ನೋಡಿದ ಜನ ಶಾಕ್ ಆಗಿದ್ದಾರೆ. ಈಗ ವಿಚಾರ ಏನಂದ್ರೆ ಮಾನಸಾ ಬಿಗ್ ಬಾಸ್ ಮನೆಯೊಳಗೆ ಹಾಕುವ ಡ್ರೆಸ್ ವಿಚಾರ. ಎಲ್ಲಿ ತಗೊಳ್ತಾರೆ..? ಎಷ್ಟು ರೇಟ್ ಇದೆ ಎಂಬ ಮಾಹಿತಿ ಇಲ್ಲಿದೆ.
ಮಾನಸ ಡ್ರೆಸ್ ಕಲೆಕ್ಷನ್ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಓಪನ್ ಮಾಡಿದ್ರೆ ಸಾಕು ಬಿಗ್ ಬಾಸ್ ವಿಡಿಯೋಗಳೇ ಅತಿ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಮಾನಸಾ ಅವರ ಪೋಸ್ಟರ್, ವಿಡಿಯೋಗಳೇ ಅತಿ ಹೆಚ್ಚಾಗಿ ಬರುತ್ತಿವೆ. ಈಗ ಮಾನಸಾ ಹಾಕಿರುವ ಡ್ರೆಸ್ ವಿತ್ ರೇಟ್ ಕಾರ್ಡ್‌ನಲ್ಲಿ ಶೋ ಆಗ್ತಾ ಇದಾವೆ.
ವೀಕೆಂಡ್ ಡ್ರೆಸ್, ನೈಟ್ ಡ್ರೆಸ್ ಬೇರೆ..?
ಮಾನಸಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ನೈಟ್ ಡ್ರೆಸ್ ರೀತಿಯ ಬಟ್ಟೆಗಳನ್ನೇ ಹಾಕಿಕೊಳ್ಳುತ್ತಾರೆ. ಆ ಡ್ರೆಸ್‌ಗಳ ಫೋಟೋ ಜೊತೆಗೆ ಅದರ ಬೆಲೆಯನ್ನು ಟ್ಯಾಗ್ ಮಾಡಿದ ವಿಡಿಯೋಗಳು ವೈರಲ್ ಆಗುತ್ತಿವೆ. ನೈಟ್ ವೇರ್ 550 ರೂ, ಹಾಗೇ ಒಂದಿನ ಗಿಣಿ ಹಸಿರು ಚೂಡಿದಾರ್ ಹಾಕಿದ್ದರು. ಆ ಡ್ರೆಸ್ 1299 ರೂಪಾಯಿ ಇದೆ. ಆದರೆ ಮಾನಸಾ ಇದೇ ಲಿಂಕ್‌ನಿಂದ ಡ್ರೆಸ್ ತರಿಸಿಕೊಂಡಿದ್ದಾರಾ..? ಅಥವಾ ಮಾನಸಾ ಹಾಕಿಕೊಂಡಿರುವ ಥರದ್ದೇ ಡ್ರೆಸ್ ಅದೇ ಲಿಂಕ್‌ನಲ್ಲಿ ಸಿಗ್ತಾ ಇದ್ಯಾ ಎಂಬ ಬಗ್ಗೆ ಮಾಹಿತಿ ಇಲ್ಲ. ಯಾಕಂದ್ರೆ ಮಾನಸಾ ಅವರಿಗೆ ಟ್ಯಾಗ್ ಮಾಡಿಲ್ಲ.
ಮಾನಸಾ ಟ್ರೋಲ್
ಬಿಗ್ ಬಾಸ್ ಮನೆಯಲ್ಲಿ ಮಾನಸಾ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದಾರೆ. ಅವರ ಮಾತುಗಳಿಂದ, ಅವರ ನಡವಳಿಕೆಯಿಂದ ಹೊರಗಿನವರು ಟ್ರೋಲ್ ಮಾಡುತ್ತಿದ್ದಾರೆ. ಮಾನಸಾ ಕಾಮಿಡಿ ಮಾಡ್ತಾರೆ ಅಂತ ಕಳುಹಿಸಿದ್ರೆ ಅವರೇ ಇರಿಟೇಟಿಂಗ್ ಪರ್ಸನ್ ಆಗ್ಬಿಟ್ಟಿದ್ದಾರೆ.
ಮಾನಸಾ ಮೇಲೆ ಬೇಸರ
ಈ ವಾರ ಮನೆಯಿಂದ ಹೊರಗೆ ಯಾರು ಬರಬೇಕು ಎಂದು ಕೇಳುವ ಪ್ರಶ್ನೆಗೂ ಎಲ್ಲರೂ ಉತ್ತರಿಸಿದ್ದು ಮಾನಸಾ ಹೆಸರು. ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕು ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಕಲರ್ಸ್ ಕನ್ನಡದವರು ಪ್ರೋಮೋ ಬಿಟ್ಟರು ಅದಕ್ಕೂ ಮೊದಲು ಮಾನಸಾ ಹೊರಗೆ ಬರಲಿ ಎಂದೇ ಮನವಿ ಮಾಡುತ್ತಿದ್ದಾರೆ.


Click it and Unblock the Notifications











