BBK 11: ಲಾಯರ್ ಜಗದೀಶ್ ಆರ್ಭಟಕ್ಕೆ ಕನ್ಫೆಷನ್​​ ರೂಮ್‌ನಲ್ಲಿ ಕಣ್ಣೀರು ಹಾಕಿದ ಧನರಾಜ್

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಸದ್ಯ ಈಗ ಮನರಂಜನೆ ಶುರುವಾಗಿದೆ. ಈ ಬಾರಿ ನಕ್ಕು ನಲಿಸೋಕೆ ಅಂತ ಮೂರು ಮಂದಿ ಇದ್ದಾರೆ. ಧನರಾಜ್ ಆಚಾರ್ಯ, ಮಾನಸ ಸಂತೋಷ್ ಹಾಗೇ ಲಾಯರ್ ಜಗದೀಶ್. ಆ ಇಬ್ಬರು ಓಕೆ ಲಾಯರ್ ಹೇಗೆ ಅನ್ನೋ ಪ್ರಶ್ನೆ ಬರಬಹುದು. ಹಂಗೆ ನೋಡುವುದಕ್ಕೆ ಹೋದ್ರೆ ಲಾಯರ್ ಜಗದೀಶ್ ಮಾತಾಡುವ ಮಾತುಗಳೇ ಒಮ್ಮೊಮ್ಮೆ ನಗು ತರಿಸುತ್ತದೆ. ಇಂದು ಧನರಾಜ್ ಬಳಿ ಆಡಿದ್ದು ನೋಡುಗರಿಗೆ ಹೆಚ್ಚು ಮನರಂಜನೆಯನ್ನೇ ನೀಡಿದೆ.

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಶುರುವಾಗಿವೆ. ಟಾಸ್ಕ್ ಶುರುವಾದಾಗಲೇ ಜಗಳಗಳು ಹೆಚ್ಚಾಗುವುದು. ಗೆಲ್ಲುವುದಕ್ಕೆಂದು ಆಡುವ ಆಟಗಳು ಅಲ್ಲಿ ಸ್ಪರ್ಧೆಯಾಗಿ ಕಾಣಿಸುತ್ತದೆ. ನಾನೇ ಗೆಲ್ಲಬೇಕೆಂಬ ಛಲವೂ ಒಬ್ಬರಿಗೊಬ್ಬರಲ್ಲಿ ಶುರುವಾಗುತ್ತೆ. ಆಟ ಆಡುವಾಗಲೇ ತಮಾಷೆಯ ಪ್ರಸಂಗ ನಡೆದಿದೆ.

Bigboss kannada 11 Dhanraj Achar breaks down in tears at confession room after task

ಮನೆ ಮಂದಿಗೆ ಬಿಗ್ ಬಾಸ್ ಟಾಸ್ಕ್

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಚೈತ್ರಾ ಕುಂದಾಪುರ, ಜಗದೀಶ್, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಮಾನಸ, ಮೋಕ್ಷಿತಾ ಇವರುಗಳು ನಾಮಿನೇಷನ್ ಆಗಿದ್ದಾರೆ. ಇದರ‌ ನಡುವೆ ನಾಮಿನೇಷನ್‌ನಿಂದ ಪಾರಾಗುವುದಕ್ಕೂ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ನೇತಾಡುವ ಬುಟ್ಟಿಗಳಿಗೆ ಕೈನಲ್ಲಿ ತೆಗೆದುಕೊಂಡು ಹೋಗಿ ಮಣ್ಣು ತುಂಬಿಸುವುದು.

ಎಚ್ಚರಿಕೆ ನೀಡಿದ ಧನರಾಜ್ ಆಚಾರ್ಯ

ಪ್ರತಿಸಲ ಟಾಸ್ಕ್ ಕೊಟ್ಟಾಗಲು ಬಿಗ್ ಬಾಸ್ ಒಬ್ಬರನ್ನ ರೆಫ್ರಿಯಾಗಿ ನಿಲ್ಲಿಸುತ್ತಾರೆ. ಈ ಬಾರಿ ರೆಫ್ರಿಯಾಗಿ ಧನರಾಜ್ ಆಚಾರ್ಯ ನಿಂತಿದ್ದಾರೆ. ರೂಲ್ಸ್ ಏನು, ಹೇಗೆ ಆಡಬೇಕು ಎಂಬುದನ್ನು ಓದಿ ಹೇಳಿದ್ದಾರೆ. ಆದರೆ ಲಾಯರ್ ಜಗದೀಶ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಯಾರಿಗೂ ಹಾನಿ ಮಾಡಬಾರದು ಎಂಬುದು ರೂಲ್ಸ್‌ನಲ್ಲಿ ಇದೆ. ಆದರೆ ಲಾಯರ್ ಜಗದೀಶ್ ಆಡುವಾಗ ಯಮುನಾ ಅವರನ್ನು ತಳ್ಳಿ ಬೀಳಿಸಿದ್ದಾರೆ. ಆಗ ಧನರಾಜ್ ತಳ್ಳುವಂತೆ ಇಲ್ಲ. ರೂಲ್ಸ್ ಬ್ರೇಕ್ ಎಂದು ಚೀರಿದ್ದಾರೆ.

ಇಬ್ಬರ ನಡುವೆ ಹೊತ್ತಿಕೊಳ್ತು ಜಗಳ

ಧನರಾಜ್ ಈ ರೀತಿ ಹೇಳಿದ್ದಕ್ಕೆ ಲಾಯರ್ ಜಗದೀಶ್ ಕೆಂಡಾಮಂಡಲರಾಗಿದ್ದಾರೆ. ರೆಫ್ರಿ ಆಗೋದಕ್ಕೆ ಫಿಟ್ ಇಲ್ಲ ಎಂದು ಜಗದೀಶ್ ಹೇಳಿದ ಕೂಡಲೇ ಧನರಾಜ್, ಹೋಯ್ ಸುಮ್ಮನೆ ಕೂತ್ಕೊ ಅಂತೀರಾ. ನೀನ್ ಯಾರ್ ಹೇಳೋಕೆ ಎಂದು ಚೀರಿದ್ದಾರೆ. ಆದರೆ ಧನರಾಜ್ ಮುಖದಲ್ಲಿ ಕೋಪಕ್ಕಿಂತ ಹೆಚ್ಚಾಗಿ ಆ ಕೋಪದಲ್ಲೂ ಕಾಮಿಡಿಯೇ ಕಾಣಿಸುತ್ತಾ ಇತ್ತು. ಬಿಗ್ ಬಾಸ್ ಮನೆಗೆ ಧನರಾಜ್ ಬಂದಾಗಿನಿಂದ ಬಿಗ್ ಬಾಸ್ ಆಟ ಆಡಿಸುತ್ತಾರೆ. ಒಳ್ಳೆ ಎಂಟರ್‌ಟೈನರ್ ಆಗಿದ್ದಾರೆ.

ಧನರಾಜ್ ಕಾಮಿಡಿಗೆ ಎಲ್ಲರೂ ಖುಷ್

ಈ ಜಗಳ ಅತಿರೇಕಕ್ಕೆ ಹೋಗಿತ್ತು. ಕೈ ಸನ್ನೆಯನ್ನು ಧನರಾಜ್ ಕಾಮಿಡಿ ಮಾಡಿದ್ದಾರೆ. ಸದಾ ಕೋಪದಲ್ಲಿದ್ದ ಜಗದೀಶ್ ಮುಖದಲ್ಲೂ ಧನರಾಜ್ ಇಮೋಜಿ ನಗು ತರಿಸಿದೆ. ಮುಖದಲ್ಲಿ ನಗು ಮೂಡಿದ್ದು ಕಾಣಿಸಿದೆ. ಮನೆ ಮಂದಿಯೆಲ್ಲಾ ಜೋರಾಗಿ ನಕ್ಕಿದ್ದಾರೆ. ಜಗಳದ ನಡುವೆಯೂ ಧನರಾಜ್ ಮಾತಿನಿಂದ ಮನೆ ತಣ್ಣಗೆ ಆಗಿದೆ. ಧನರಾಜ್ ಕೋಪ ಮಾಡಿಕೊಂಡರೆ ಸಿನಿಮಾದಲ್ಲಿ ಸಾಧುಕೋಕಿಲಾ ಅವರನ್ನೇ ನೋಡಿದಂತೆ ಫೀಲ್ ಆಯ್ತು. ಧನರಾಜ್ ಅವರಿಂದ ಒಂದೊಳ್ಳೆ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಧನರಾಜ್ ಕಣ್ಣೀರು

ಟಾಸ್ಕ್‌ ಬಳಿಕ ಧನರಾಜ್ ಕನ್ಫೆಷನ್​​ ರೂಮ್‌ಗೆ ತೆರಳಿದ್ದಾರೆ. ಈ ವೇಳೆ ಟಾಸ್ಕ್‌ ಅನ್ನು ಸರಿಯಾಗಿ ನಿಭಾಯಿಸಲು ಆಗಲಿಲ್ಲ, ಕ್ಷಮಿಸಿ ಬಿಗ್‌ಬಾಸ್ ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಆ ಪ್ರೋಮೊ ಸಹ ವೈರಲ್ ಆಗ್ತಿದೆ.

More from Filmibeat

English summary
Colors kannada bigboss Written Update on Bigboss season 11 October 2nd episode. Here is the details about Lawyer Jagdish angry goes missing in front of Dhanraj Comedy;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X