BBK 11: ಹಂಸಾ ಜೊತೆಗೆ ಜಗ್ಗು ಡ್ಯಾನ್ಸ್; ಹಂಸಾ ಪತಿ ಎಂಟ್ರಿ!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಸ್ಪರ್ಧಿಯಾಗಿ ಬಂದಿದ್ದರು. ಹೊರಗಡೆ ಹಾರಾಡಿದ್ದ ರೀತಿ ಕಂಡು ಮನೆಯೊಳಗೂ ಜಗದೀಶ್ ಹೀಗೆ ಇರಬಹುದು ಎಂದೇ ಥಿಂಕ್ ಮಾಡಿದ್ದರು ಜನ.

ಒಂದೆರಡು ವಾರ ಜಗದೀಶ್ ಅದೇ ರೀತಿಯೇ ಆಡಿದರು. ಆದರೆ ಸುದೀಪ್ ಕ್ಲಾಸ್ ತೆಗೆದುಕೊಂಡ ಮೇಲೆ ಜಗದೀಶ್ ವರಸೆಯೇ ಬದಲಾಗಿತ್ತು. ಜಗದೀಶ್ ಕುಂತ್ರು ನಿಂತ್ರು ಕಾಮಿಡಿ ಮಾಡ್ತಾ ಇದ್ರು.

Bigboss kannada 11 ex contestant hamsa and lawyer Jagadish funny dance video goes viral

ಹಂಸ ವಿಚಾರದಲ್ಲಿ ಜಗದೀಶ್ ಇದ್ದಿದ್ದೆ ಬೇರೆ ರೀತಿಯಾಗಿತ್ತು. ಯಾವಾಗಲೂ ಕಾಲೆಳೆಯುತ್ತಾ, ಫ್ಲರ್ಟ್ ಮಾಡುತ್ತಾ ಓಡಾಡುತ್ತಿದ್ದರು. ಹಂಸಗೆ ಕಾಲೆಳೆಯುವುದೇ ದೊಡ್ಡ ಕೆಲಸವಾಗಿತ್ತು. ಆ ರೀತಿ ಮಾಡಿ ಮಾಡಿನೇ ಕೋಪ ತರಿಸುತ್ತಿದ್ದರು. ಅದೇ ಥರ ಇದ್ದಿದ್ರೆ ಜಗ್ಗು ಇನ್ನು ಕೂಡ ಬಿಗ್ ಬಾಸ್ ನಲ್ಲಿಯೇ ಇರುತ್ತಿದ್ದರು. ಆದರೆ ಕೋಪದ ಕೈಗೆ ಬುದ್ದಿಕೊಟ್ಟು ಹೊರಗೆ ಬರುವಂತೆ ಆಯ್ತು. ಇದೀಗ ಮನೆಯಿಂದ ಹೊರಗೆ ಬಂದ ಮೇಲೆ ಹಂಸ ಗಂಡನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್

ಜಗದೀಶ್ ಅವರು ಮತ್ತೆ ಬಿಗ್ ಬಾಸ್‌ಗೆ ವಾಪಾಸ್ ಹೋಗ್ತಾರೆ ಅಂತಾನೇ ಹೇಳಲಾಗ್ತಿತ್ತು. ಆದರೆ ಅದು ಸುಳ್ಳಾಗಿದೆ. ಜಗದೀಶ್ ಹೊರಗಡೆಯೇ ಉಳಿದುಕೊಂಡರು. ಆದರೆ ಈಗ ಮತ್ತೆ ಹಳೆಯ ಜಗದೀಶ್ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರೊಚ್ಚಿ ಗೆದ್ದಿದ್ದಾರೆ.

ಹಂಸಾ ಜೊತೆ ಜಗದೀಶ್ ಡ್ಯಾನ್ಸ್

ಲಾಯರ್ ಜಗದೀಶ್ ಬಂದ ನೆಕ್ಸ್ಟ್ ವಾರಕ್ಕೆ ಹಂಸ ಕೂಡ ಹೊರಗೆ ಬಂದಿದ್ದಾರೆ. ಈಗ ಇಬ್ಬರು ಸೇರಿ ಖಾಸಗಿ ವಾಹಿನಿಗಳಲ್ಲಿ ಇಂಟರ್‌ವ್ಯೂ ಕೊಡುವುದಕ್ಕೆ ಶುರು ಮಾಡಿದ್ದಾರೆ. ಇತ್ತಿಚೆಗೆ ಗ್ಯಾರಂಟಿ ನ್ಯೂಸ್ ಹಂಸ, ಹಂಸ ಪತಿ ಹಾಗೂ ಜಗದೀಶ್ ಮೂವರನ್ನು ಕೂರಿಸಿಕೊಂಡು ಒಂದು ಇಂಟರ್‌ವ್ಯೂ ಮಾಡಿತ್ತು. ಇಂಟರ್ ವ್ಯೂ ಮುಗಿದ ಮೇಲೆ ಡ್ಯಾನ್ಸ್ ಕೂಡ ಮಾಡಿಸಲಾಗಿತ್ತು. ಅದರಲ್ಲಿ ಹಂಸ ಹಾಗೂ ಜಗದೀಶ್ ಅವರೇ ಹೆಜ್ಜೆ ಹಾಕಿದರು.

ರಾಡ್ ಹಿಡಿದು ಬಂದ ಹಂಸಾ ಪತಿ

ಹಂಸ ಪತಿ ಇದೆಲ್ಲವನ್ನು ನೋಡುವ ತನಕ ನೋಡಿದರು. ಕೋಪ ನೆತ್ತಿಗೇರಿ ದೊಡ್ಡದೊಂದು ರಾಡ್ ಅನ್ನೇ ಎತ್ತಿಕೊಂಡು ಬಂದರು. ಅಲ್ಲಿಯ ತನಕ ಖುಷಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ಜಗದೀಶ್ ಕೊಂಚ ಗಾಬರಿಯಾದರು. ಎತ್ತಿ ಹೊಡೆಯುವುದಕ್ಕೆ ಹೋದರು. ಆದರೆ ಅಲ್ಲಿಗೆ ಸುಮ್ಮನೆ ಆದ್ರು. ಬಳಿಕ ಮೂವರು ಸೇರಿ ಡ್ಯಾನ್ಸ್ ಮಾಡಿ,‌ ಮಸ್ತ್ ಎಂಜಾಯ್ ಮಾಡಿದರು. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದೆ.

ಜಗ್ಗುಗೆ ಸಪೋರ್ಟ್ ಮಾಡಿದ ಫ್ಯಾನ್ಸ್

ಈ ವಿಡಿಯೋ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಒಂದಷ್ಟು ಜನ ಫನ್ ಕಮೆಂಟ್ ಹಾಕಿದ್ರೆ ಇನ್ನಷ್ಟು ಜನ ಜಗ್ಗುಗೆ ಸಪೋರ್ಟ್ ಮಾಡಿದ್ದಾರೆ. ಇನ್ನು ಕೆಲವರು ಹಂಸ ಗಂಡನಿಗೆ ಸಲಹೆ ನೀಡಿದ್ದಾರೆ. ಹೊಡೀರಿ ಮೊದ್ಲು ಜಗ್ಗುಗೆ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಆದರೆ ಇಲ್ಲಿಯೂ ಬೆಣ್ಣೆ ಶಾಂತಮ್ಮನನ್ನು ಮರೆತಿಲ್ಲ. ಬೆಣ್ಣೆ ಶಾಂತಮ್ಮ, ಜಗ್ಗು ಜೊತೆಗೆ ಹೋಗಿದ್ದಾರೆ. ಇಬ್ಬರು ಸೂಪರ್ ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಇದೊಂದು ಕಾಮಿಡಿ ವಿಡಿಯೋ ಆಗಿದೆ.

More from Filmibeat

English summary
BBK 11: Hamsa and Jagadish romantic dance; hamsa husband interfere with stick;
Read more about: bigg boss bigg boss kannada 11
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X