BBK 11: ನರಕವಾಸಿಗಳ ಜೊತೆಗೆ ಅನ್ಯೋನ್ಯತೆ; ಎರಡೇ ದಿನಕ್ಕೆ ಗೌತಮಿ ಟಾರ್ಗೆಟ್..!

By ಎಸ್ ಸುಮಂತ್

ಬಿಗ್ ಬಾಸ್ ಶುರುವಾಗಿ ಎರಡು ದಿನ ಕಳೆದಿದೆ. ಆದರೆ ಮನೆಗೆ ಹೋದವರೆಲ್ಲಾ ಆಟ ಆಡಬೇಕು ಎಂಬ ಮನಸ್ಥಿತಿಯಲ್ಲಷ್ಟೇ ಹೋಗಿದ್ದಾರೆ ಅನ್ನೋದು ಅವರ ಏರು ಧ್ವನಿ,‌ ಮಾತಿಗೆ ಮುಂಚೆ ಜಗಳದಿಂದಾನೇ ತಿಳಿಯುತ್ತಿದೆ.

ಬಿಗ್ ಬಾಸ್ ಅನ್ನೋದು ಇನ್ನ್ಯಾವತ್ತು, ಇನ್ನ್ಯಾರು ನೀಡಲಾರದ ಒಂದು ದೊಡ್ಡ ಗಿಫ್ಟ್. ಮೊಬೈಲ್ ಇಲ್ಲದೆ, ಪ್ರಪಂಚದ ಸಂಪರ್ಕವೇ ಇಲ್ಲದೆ ಬದುವುದೇ ಒಂದು ದೊಡ್ಡ ಟಾಸ್ಕ್ ಆಗಿರುವಾಗ, ಆರಂಭದಿಂದಾನೇ ಜಗಳ ಆಡಿದರೆ ಇನ್ನೆಲ್ಲಿ ಬೆಳೆಯುತ್ತೆ ಬಾಂಧವ್ಯ, ಇನ್ನೆಲ್ಲಿ ಉಳಿಯುತ್ತೆ ನೆನಪುಗಳು.

Bigboss kannada 11 Gauthami Jadav targeted by housemates day 2 itself

ಒಂದೇ ದಿನದಲ್ಲಿ ಜನರಿಗೆ ಇದು ಅರ್ಥವಾಗಿ ಬಿಟ್ಟಿದೆ. ನಿನ್ನೆಯ ಎಪಿಸೋಡಿನಲ್ಲೂ ಅದೇ ಆಗಿದೆ. ನರಕವಾಸಿಗಳು ಹಾಗೂ ಸ್ವರ್ಗ ವಾಸಿಗಳನ್ನಾಗಿ ಮಾಡಿರುವುದು ದ್ವೇಷ ಸಾಧಿಸುವುದಕ್ಕೂ ಅಲ್ಲ, ಜೋರು ಜಗಳ ಆಡುವುದಕ್ಕೂ ಅಲ್ಲ. ಅದೊಂದು ಬಿಗ್ ಬಾಸ್‌ನ ಟಾಸ್ಕ್ ಫನ್ನಿಯಾಗಿಯೇ ಗೆಲ್ಲಬಹುದಾದ ಟಾಸ್ಕ್‌ನಲ್ಲಿ ಈಗಾಗಲೇ ಯಮುನಾ-ಚೈತ್ರಾ ಶತ್ರುಗಳಾಗಿದ್ದು ಆಯ್ತು. ಈಗ ಸತ್ಯ ಅಲಿಯಾಸ್ ಗೌತಮಿ ಕೂಡ ಟಾರ್ಗೆಟ್.

ಗೇಮ್ ಮೂಲಕ ನಾಮಿನೇಷನ್

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಮೊದಲ ವಾರವೇ ಮನೆಯಿಂದ ಹೊರಗೆ ಬರುವುದು ಯಾರು ಎಂಬ ಕುತೂಹಲವೂ ಎಲ್ಲರಲ್ಲೂ ಇದೆ. ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದು, ಗೇಮ್ ಮೂಲಕ ನಾಮಿನೇಷನ್ ಪ್ರಕ್ರಿಯೆ ಶುರು ಮಾಡಿದೆ. ಯಮುನಾ, ಭವ್ಯಾ, ಗೌತಮಿಯ ಹೆಸರು ನಾಮಿನೇಷನ್ ಆಗಿರುವುದು ಪ್ರೋಮೋದಲ್ಲಿ ಕೇಳಿ ಬಂದಿದೆ.

ಗೌತಮಿಯನ್ನ ಟಾರ್ಗೆಟ್ ಮಾಡಿದ್ದೇಕೆ..?

ಭವ್ಯಾ ಅವರಿಗೆ ಡಾಮಿನೇಟ್ ಎಂಬ ಪಟ್ಟ ಕೇಳಿ ಬಂದಿದೆ. ಇದರ ನಡುವೆ ಭವ್ಯಾ ಹಾಗೂ ಯಮುನಾ ಇಬ್ಬರು ಒಬ್ಬರನ್ನೇ ಆಯ್ಕೆ ಮಾಡಿದ್ದು, ಕಾರಣವನ್ನು ವಿಚಿತ್ರವಾಗಿಯೇ ಕೊಟ್ಟಿದ್ದಾರೆ. ಗೌತಮಿ ಹೆಸರೇಳಿದ ಈ ಇಬ್ಬರು, ಅವರಿಗೆ ನರಕವಾಸಿಗಳ ಮೇಲೆ ಸಾಫ್ಟ್ ಕಾರ್ನರ್ ಇದೆ. ನಮಗಿಂತ ಹೆಚ್ಚು ಅವರ ಜೊತೆಗೆ ಇರುತ್ತಾರೆ ಎಂಬ ಕಾರಣವನ್ನು ನೀಡಿದ್ದಾರೆ.

ಕಾರಣ ಕೇಳಿ ಗೌತಮಿ ಬೇಸರ

ಸತ್ಯ ಧಾರಾವಾಹಿಯಲ್ಲಿದ್ದ ಔಟ್ ಲುಕ್‌ನಲ್ಲಿಯೇ ಗೌತಮಿ, ಬಿಗ್ ಬಾಸ್‌ಗೆ ಬಂದಿದ್ದರು. ಆದರೆ ನಿನ್ನೆ ಮನೆಯಲ್ಲಿ ನಡೆದ ವಿಚಾರಕ್ಕೆ ವಿಗ್ ತೆಗೆದರು. ಆಗಲು ಗೌತಮಿಗೆ ಸ್ವಲ್ಪ ನೋವು ಕೊಟ್ಟಿತ್ತು. ಆದರೆ ಇಂದು ನರಕವಾಸಿಗಳ ಜೊತೆಗೆ ಕ್ಲೋಸ್ ಆಗಿದ್ದಾರೆ ಎಂಬ ಕಾರಣಕ್ಕೆ ನಾಮಿನೇಟ್ ಮಾಡುತ್ತಿದ್ದೇವೆ ಎಂದಾಗಲೇ ಅವರ ಮನಸ್ಸಿಗೆ ನೋವಾಗಿದೆ. ಸುಮ್ಮನೆ ಎಲ್ಲವನ್ನು ನೋಡಿಕೊಂಡು ನಿಂತು ಬಿಟ್ಟಿದ್ದಾರೆ. ಇದು ನೋಡುಗರಿಗೂ ಪಾಪ ಎನಿಸಿದೆ. ಗೌತಮಿಯನ್ನು ಟಾರ್ಗೆಟ್ ಮಾಡಿದ್ದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.

ಯಮುನಾ ಬಗ್ಗೆ ವೀಕ್ಷಕರ ಬೇಸರ

ನರಕವಾಸಿಗಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಯಮುನಾ ಹೇಳಿದ್ದು, ಶಿಶಿರ್‌ಗೆ ಕೋಪ ತರಿಸಿದೆ. ಮೊದಲೇ ಆಯ್ಕೆಯ ಪ್ರಕ್ರಿಯೆ ದಿನವೇ ನರಕಕ್ಕೇ ಹೋಗಲಿ ಎಂದಾಗಲೇ ಕೋಪ ಮಾಡಿಕೊಂಡಿದ್ದ ಶಿಶಿರ್ ಇದೀಗ, ಯಮುನಾ ಮೇಲೆ ತಿರುಗಿ ಬಿದ್ದಿದ್ದಾರೆ. ಅವರು ನಮ್ಮ ಜೊತೆಗೆ ಮಾತನಾಡಿದರೆ ಏನು ತಪ್ಪು ಎಂದು ಪ್ರಶ್ನೆ ಮಾಡಿದ್ದಾರೆ. ಆಗಲು ಯಮುನಾ ಜೋರಾಗಿಯೇ ಉತ್ತರಿಸಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು ಯಮುನಾ ಮೇಲೆ ಕೋಪಗೊಂಡಿದ್ದಾರೆ. ಗೌತಮಿ ತುಂಬಾ ಒಳ್ಳೆಯ ಹುಡುಗಿ. ಈ ಯಮುನಾ ಮಾತಿಗೆ ಮುಂಚೆ ಜಗಳಕ್ಕೆ ಬರುತ್ತಾರೆ ಎಂದು ಕಮೆಂಟ್ ಹಾಕಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 October 1st episode. Here is the details about Yamuna and Bhavya targeted Gautami;
Read more about: sumanth bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X