BBK 11: ಬಿಗ್ ಬಾಸ್‌ನಲ್ಲಿ ಗೌತಮಿ ಹಾಕೋ ಈ ಡ್ರೆಸ್ ಎಲ್ಲಿ ಸಿಗುತ್ತೆ? ಬೆಲೆ ಎಷ್ಟು?

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಈಗಾಗಲೇ ಮುಕ್ಕಾಲು ಭಾಗ ಮುಗಿಯುತ್ತಾ ಬಂದಿದೆ. ಕಪ್ ಗೆಲ್ಲುವುದಕ್ಕೆ ಎಲ್ಲರೂ ಅಣಿಯಾಗುತ್ತಿದ್ದಾರೆ. ಆರಂಭದಲ್ಲಿ ಏನೇ ಫ್ರೆಂಡ್ಶಿಪ್ ಇದ್ದರು, ಕಪ್, ವಿನ್ನರ್ ಎಂಬ ವಿಚಾರ ಬಂದಾಗ ಫ್ರೆಂಡ್ಶಿಪ್ ಎಲ್ಲಾ ಮರೆತೆ ಹೋಗಿರುತ್ತೆ. ಆತ್ಮೀಯರಾಗಿದ್ದವರೇ ಟಾರ್ಗೆಟ್ ಆಗುತ್ತಾರೆ. ಬಿಗ್ ಬಾಸ್ ಅಂದ್ರೆನೇ ಹಾಗೆ.

ಬಿಗ್ ಬಾಸ್ ಮನೆಯೊಳಗೆ ಬಂದಂತ ಗೌತಮಿ ಹಾಗೂ ಮೋಕ್ಷಿತಾ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು. ಇಬ್ಬರು ಒಂದೇ ಥರದ ಡ್ರೆಸ್ ಗಳನ್ನು ಹಾಕಿಕೊಳ್ಳುತ್ತಿದ್ದರು. ಆದರೆ ದಿನೇ ದಿನೇ ಇಬ್ಬರು ದೂರ ದೂರವಾಗಿದ್ದಾರೆ. ಈಗ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ ಎಂಬಂತೆ ಇದ್ದಾರೆ.

Bigboss kannada 11 Gowthami stuns in green kurti at home Here s How Much It Costs

ಒಂದೇ ಥರದ‌ ಡ್ರೆಸ್ ಇರಲಿ ಎದುರು ಬದುರು ಸಿಕ್ಕರು ಮಾತಾಡಿಸುವುದಕ್ಕೆ ಹೋಗ್ತಿಲ್ಲ. ಆದರೆ ಈಗ ಹೇಳುವುದಕ್ಕೆ ಹೊರಟಿದ್ದೇನೆಂದರೆ ಗೌತಮಿ ಜಾದವ್ ಬಿಗ್ ಬಾಸ್ ಮನೆಯೊಳಗೆ ಹಾಕುವ ಡ್ರೆಸ್ ಗಳ ಬಗ್ಗೆ.

ಹೊಸ ಬಟ್ಟೆ ಹಾಕುವ ಗೌತಮಿ

ಗೌತಮಿ ಬಿಗ್ ಬಾಸ್ ಮನೆಯಲ್ಲಿ ಜರ್ನಿ ಶುರು ಮಾಡಿ 60 ದಿನಗಳ ಮೇಲಾಗಿದೆ. ಆದರೆ ಬಂದಾಗಿನಿಂದ ಒಂದು ಡ್ರೆಸ್ ರಿಪೀಟ್ ಹಾಕಿಲ್ಲ. ಬಿಗ್ ಬಾಸ್ ಮನೆಗೆ ಬಂದವರೆಲ್ಲರೂ ಅದೇ ಥರವೇ. ಬರುವಾಗಲೇ ಎರಡ್ಮೂರು ವಾರಕ್ಕೆ ಆಗುವಷ್ಟು ಬಟ್ಟೆ ತಂದಿರುತ್ತಾರೆ. ಆಮೇಲೆ ವಾರಕ್ಕೊಮ್ಮೆ ಮನೆಯಿಂದ ಬಟ್ಟೆಗಳನ್ನು ಕೊಟ್ಟು ಕಳುಹಿಸುತ್ತಾರೆ. ಹೀಗಾಗಿ ಪ್ರತಿದಿನ ಹೊಸ ಹೊಸ ಬಟ್ಟೆಗಳನ್ನೇ ಹಾಕುತ್ತಾರೆ.

ಗೌತಮಿ ಡ್ರೆಸ್ ಯಾವ ಬ್ರಾಂಡ್..?

ಗೌತಮಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಹಾಕುವುದು ಚೂಡಿದಾರ್ ಅನ್ನೇ. ಆ ಚೂಡಿದಾರ್‌ಗಳನ್ನು ಹೆಚ್ಚು ಒಂದೇ ಕಡೆ ತರಿಸುತ್ತಾರೆ. ಗೌತಮಿ ಹಾಕುವ ಕುರ್ತಾ ಸೆಟ್ ಒಂದೊಂದು ಕೂಡ 1800-1900-2000 ರೂಪಾಯಿ ಇದೆ. ಒಂದೊಂದು ಡ್ರೆಸ್‌ಗಳು ಒಂದೊಂದು ರೀತಿಯ ಬೆಲೆ ಇದೆ. ಅದರಲ್ಲೂ ಕಲೆಕ್ಷನ್ಸ್ ಮಾತ್ರ ತುಂಬಾ ಅದ್ಭುತವಾಗಿರುತ್ತವೆ.

ಉಡೋಜಸ್ ಸೂತ್ರ ರಾಯಭಾರಿ

ಗೌತಮಿ ಹಾಕುವ ಡ್ರೆಸ್‌ಗಳು ಉಡೋಜಸ್ ಸೂತ್ರ ಬ್ರಾಂಡ್‌ನದ್ದು. ಬೆಂಗಳೂರಿನಲ್ಲಿಯೇ ಈ ಡ್ರೆಸ್ ಶಾಪ್ ಇರುವುದು. ಗೌತಮಿಗೆ ಬಿಗ್ ಬಾಸ್ ಮನೆಯಲ್ಲಿ ಹಾಕುವುದಕ್ಕೆ ಉಡೋಜಸ್ ಸೂತ್ರದಿಂದಾನೇ ಡ್ರೆಸ್‌ಗಳನ್ನು ಕೊಡುತ್ತಾರೆ. ಇವರ ಪೇಜ್ ನೋಡಿದ್ರೆ ಗೌತಮಿ ಅವರೇ ರಾಯಭಾರಿಯಂತೆ ಫೀಲ್ ಆಗುತ್ತದೆ. ಯಾಕಂದ್ರೆ ಉಡೋಜಸ್ ಸೂತ್ರ ಹೆಚ್ಚು ಡ್ರೆಸ್‌ಗಳ ಬಗ್ಗೆ ಗೌತಮಿ ಪ್ರಚಾರ ಮಾಡಿದ್ದಾರೆ.

ಗೌತಮಿ ಬಗ್ಗೆ ನೆಗೆಟಿವ್ ಟಾಕ್ಸ್

ಇನ್ನು ಇತ್ತೀಚಿನ ಎಪಿಸೋಡ್‌ಗಳಲ್ಲಿ ಗೌತಮಿಯ ನಡವಳಿಕೆ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಪಾಸಿಟಿವ್ ಪಾಸಿಟಿವ್ ಎಂಬ ಮಾತನ್ನು ಹೇಳಿ, ಅದರಿಂದಾನೇ ನೆಗೆಟಿವ್ ಕಮೆಂಟ್‌ಗಳನ್ನ ಪಡೆಯುತ್ತಿದ್ದಾರೆ. ಅದರಲ್ಲೂ ಮಂಜು ಜೊತೆಗಿನ ನಡವಳಿಕೆಯನ್ನು ಬಕೆಟ್ ಎಂದೇ ಟ್ರೋಲ್ ಮಾಡುತ್ತಿದ್ದಾರೆ. ಪಾಸಿಟಿವ್ ಎಂದವರ ಮುಖವಾಡ ಈಗ ಕಳಚುತ್ತಿದೆ ಎಂದೆಲ್ಲ ಹೇಳುತ್ತಿದ್ದಾರೆ. ಇನ್ನು ಮೋಕ್ಷಿತಾ ಅವರ ಜೊತೆಗೆ ಕಿತ್ತಾಟದಿಂದಾನೂ ಬೇಸರ ಮಾಡಿಕೊಂಡಿದ್ದು, ಟ್ರೋಲ್ ಗಳೆಲ್ಲಾ ಸಿಕ್ಕಾಪಟ್ಟೆ ನೆಗೆಟಿವ್ ಆಗಿನೇ ಬರ್ತಿವೆ. ಅಷ್ಟೇ ಅಲ್ಲ ಶೋಭಾ ಶೆಟ್ಟಿ ಮೊದಲೇ ಚಾಲೆಂಜ್ ಹಾಕಿದ್ದರು. ಗೌತಮಿ ಮುಖವಾಡವನ್ನು ಕಳಚುತ್ತೀನಿ ಎಂದಿದ್ದರು.

More from Filmibeat

English summary
BBK 11: Decoding cost and brand name of gowthmi's bigg boss show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X