BBK 11: ಒಂದೇ ದಿನಕ್ಕೆ ಶುರುವಾಯ್ತು ಗಿಮಿಕ್; ರಿಯಲ್ ಆಟ ತೋರಿಸ್ಲಾ ಅಂದ್ರು ಜಗದೀಶ್
ಬಿಗ್ ಬಾಸ್ ಮನೆಗೆ ಮಂದಿ ಎಂಟ್ರಿಕೊಟ್ಟು ಒಂದೇ ಒಂದು ದಿನವಾಗಿದೆ ಅಷ್ಟೆ. ನಾವಿದ್ದ ಸ್ಥಳ ಬಿಟ್ಟು ಬೇರೆ ಕಡೆಗೆ ಹೋದಾಗ ಅಲ್ಲಿನ ವಾತಾವರಣವನ್ನ ಅರ್ಥ ಮಾಡಿಕೊಳ್ಳೋದಕ್ಕೆ, ಅಲ್ಲಿರುವ ಜನರನ್ನ ಅರ್ಥ ಮಾಡಿಕೊಳ್ಳುವ, ಸ್ನೇಹ ಬೆಳೆಸುವ ಪ್ರಯತ್ನವನ್ನಾದರೂ ಎಲ್ಲರೂ ಮಾಡುತ್ತಾರೆ. ಆದರೆ ಬುಗ್ ಬಾಸ್ ಮನೆಗೆ ಹೋದವರು ಆರಂಭದಿಂದಲೇ ಅದೊಂದು ಗೇಮ್ ಎಂದು ಕನ್ಸಿಡರ್ ಮಾಡಿಕೊಂಡು ಬಿಡುತ್ತಾರೆ.
ಸ್ಪರ್ಧೆ, ಜಗಳ ಅದೆಲ್ಲವೂ ಟಾಸ್ಕ್ ಕೊಟ್ಟ ಮೇಲೆ ಶುರುವಾಗಿಯೇ ಆಗುತ್ತದೆ. ಆದರೆ ಈ ಸೀಸನ್ ನಲ್ಲಿರುವ ಸ್ಪರ್ಧಿಗಳು ಜಗಳ ಆಡಿದರೇನೆ ನಾವೂ ಉಳಿದುಕೊಳ್ಳುವುದು ಅಂದುಕೊಂಡಿದ್ದಾರಾ ಹೇಗೋ ತಿಳಿತಿಲ್ಲ. ಬಿಗ್ ಬಾಸ್‌ಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆಗೂ ಸರಿಯಾದ ಉತ್ತರ ತಿಳಿದುಕೊಂಡಂತೆ ಕಾಣಿಸುತ್ತಿಲ್ಲ.

ನರಕ ನಿವಾಸಿಗಳಿಗೆ ಟಾರ್ಚರ್
ನರಕ ನಿವಾಸಿಗಳಿಗೆ ಎಲ್ಲವೂ ಸ್ವರ್ಗ ನಿವಾಸಿಗಳೇ ನೀಡಬೇಕು. ಇದೀಗ ಬೆಳಗ್ಗೆಯಿಂದ ಬಿಸಿ ನೀರು ಬೇಕು ಅಂತ ಕೇಳಿದರು ಸ್ವರ್ಗ ನಿವಾಸಿಗಳು ಕೊಡುವುದಕ್ಕೆ ರೆಡಿ ಇಲ್ಲ. ಬಿಸಿ ನೀರು ಒಂದಕ್ಕೇನೆ ಎಲ್ಲರ ನಡುವೆ ಜಗಳ ಎದ್ದಿದೆ. ಇದರಿಂದಾನೇ ಜಗಳ ಆರಂಭವಾಗಿದೆ. ಕಡೆಗೂ ಬಿಸಿ ನೀರು ಕೊಡಲೇ ಇಲ್ಲ.
ನರಕವಾಸಿಗಳಿಗೆ ಶುರು ನರಕ ದರ್ಶನ
ಈಗ ಬಿಗ್ ಬಾಸ್ ಕಡೆಯಿಂದ ಒಂದು ಸೂಚನೆ ಬಂದಿದೆ. ನರಕ ವಾಸಿಗಳಲ್ಲಿ ಯಾರಾದರೂ ಇಬ್ಬರನ್ನು ಕರೆದು ಸ್ವರ್ಗ ವಾಸಿಗಳು ಎಲ್ಲಾ ಕೆಲಸವನ್ನು ಮಾಡಿಸಬೇಕೆಂಬುದು ಆದೇಶ ಬಂತು. ಆಗ ನರಕವಾಸಿಗಳು ಗೇಮ್ ಪ್ಲ್ಯಾನ್ ಮಾಡಿದರು. ಅವರು ಕೆಲಸ ಮಾಡುವುದಕ್ಕಷ್ಟೇ ಹೇಳಿದ್ದಾರೆ. ನಾವೂ ಹೇಗೆ ಮಾಡಬೇಕು ಎಂಬುದನ್ನು ಯಾರು ಹೇಳಿಲ್ಲ. ಇದನ್ನ ನಾವೂ ಬಳಸಿಕೊಳ್ಳಬೇಕು ಎಂಬ ಪ್ಲ್ಯಾನ್ ಮಾಡಿದರು. ಈಗ ನರಕವಾಸಿಗಳು ಸ್ವರ್ಗ ವಾಸಿಗಳ ತಪ್ಪನ್ನು ಎತ್ತಿ ಹಿಡಿಯುವುದಕ್ಕೆ ಪ್ರಯತ್ನ ನಡೆಯುತ್ತಿದೆ.
ಜಗಳ ನೋಡಿ ಜಗದೀಶ್ ಎಂಜಾಯ್
ಇನ್ನು ಚೈತ್ರಾ ಕೆಲಸ ಮಾಡಲು ಬಂದ ತಕ್ಷಣವೇ ಯಮುನಾ ಜೊತೆಗೆ ಜಗಳ ಶುರುವಾಗಿದೆ. ಹೆಚ್ಚು ಮಾತನಾಡುತ್ತಿದ್ದಾಗ ಯಮುನಾ ಅದನ್ನು ಸ್ಟಾಪ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ ಇಬ್ಬರು ಜೋರು ಜಗಳ ಮಾಡಿದ್ದಾರೆ. ಹಣ್ಣನ್ನ ತೊಳೆದುಕೊಡಿ ಎಂದು ಕೇಳಿದರೆ ಚೈತ್ರಾ ಮಾಡಿದ್ದೇ ಬೇರೆ. ಆ ಹಣ್ಣನ್ನು ತಿಂದಿದ್ದಾಳೆ. ಜೊತೆಗೆ ತಮ್ಮ ನರಕ ವಾಸಿಗಳಿಗೆ ನೀಡಿದ್ದಾರೆ. ಇದು ರೂಲ್ಸ್ ಬ್ರೇಕ್ ಮಾಡಿದ್ದಂತೆ ಆಗಿದೆ. ಅಂದ್ರೆ ರೂಲ್ಸ್ ಬುಕ್‌ನಲ್ಲಿ ಸ್ವರ್ಗ ವಾಸಿಗಳು ನೀಡದೆ ನರಕವಾಸಿಗಳು ಏನನ್ನು ತಿನ್ನಬಾರದು ಎಂಬ ರೂಲ್ಸ್ ಇತ್ತು. ಹೀಗಾಗಿ ಎಲ್ಲರೂ ಚೈತ್ರಾ ಮೇಲೆ ಗರಂ ಆಗಿದ್ದಾರೆ.
ಬಾತ್ ರೂಮ್ ತೊಳೆದ ಜಗದೀಶ್
ಜಗದೀಶ್ ತನ್ನ ವಕೀಲಿ ವೃತ್ತಿಯನ್ನು ಎಲ್ಲಾ ಕಡೆ ತೋರಿಸುತ್ತಾ ಇರುತ್ತಾರೆ. ತಪ್ಪು ಕಂಡಾಗ ಜೋರು ಸದ್ದು ಮಾಡುತ್ತಾರೆ. ಅದೇ ಕಾರಣದಿಂದಾನೇ ಈಗ ಬಿಗ್ ಬಾಸ್ ಮನೆಗೆ ಬಂದಿರೋದು. ಆದರೆ ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಚೈತ್ರಾ ಮನೆಯನ್ನು ಸರಿಯಾಗಿ ಕ್ಲೀನ್ ಮಾಡಿಲ್ಲವೆಂದು ಬಾತ್ ರೂಮ್ ಕ್ಲೀನ್ ಮಾಡಿದ್ದಾರೆ. ಅವಳು ಸರಿಯಾಗಿ ಕ್ಲೀನ್ ಮಾಡಿಲ್ಲ. ನೆಟ್ಟುಗೆ ಕ್ಲೀನ್ ಮಾಡುವುದಕ್ಕೆ ಬರಲ್ಲ ಅವಳಿಗೆ ಎಂದು ಬ್ರೆಶ್ ಹಿಡಿದು ಕ್ಲೀನ್ ಮಾಡಿದ್ದಾರೆ. ಸ್ವರ್ಗವಾಸಿಗಳು ಬೇಡ ಎಂದರೂ ಜಗದೀಶ್ ಕೇಳಲೇ ಇಲ್ಲ.
ಕೆಲ ಲಗ್ಜುರಿ ವಸ್ತುಗಳು ವಾಪಸ್
ಜಗದೀಶ್ ಬಿಗ್‌ಬಾಸ್ ಮನೆಯ ನಿಮಯ ಉಲ್ಲಂಘಿಸಿದ ಕಾರಣಕ್ಕೆ ಲಗ್ಜುರಿ ಬಜೆಟ್‌ನಲ್ಲಿ ಮನೆಮಂದಿಗೆ ನೀಡಿದ್ದ ಕೆಲ ವಸ್ತುಗಳನ್ನು ವಾಪಸ್ ಕೊಡುವಂತಾಯಿತು. ಆದರೆ ಜಗದೀಶ್ ತಾವೇ ತಪ್ಪಿನ ಜವಾಬ್ದಾರಿ ವಹಿಸಿಕೊಂಡರು. ಕೆಲವರು ಅವರನ್ನು ಸಮರ್ಥಿಸಿಕೊಂಡರು. ಮತ್ತೆ ಕೆಲವರು ನಿಮ್ಮದೇ ತಪ್ಪು ಎಂದು ವಾದಿಸಿದ್ದರು.


Click it and Unblock the Notifications











