BBK 11: ಬಿಗ್ ಬಾಸ್ ಮನೆಯಲ್ಲಿ ಬೀಪ್ ಸೌಂಡ್ ಹಾಕುವಂತ ಪದಗಳನ್ನು ಬಳಸಿದ ಶಿಶಿರ್!
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಆಟಕ್ಕೆ ಒಂದೊಳ್ಳೆ ಟಾಸ್ಕ್ ಕೊಟ್ಟಿದ್ದಾರೆ. ಬಲೆಯಲ್ಲಿ ನುಗ್ಗಿ ಹೋಗಿ, ತಮ್ಮ ಫೋಟೋ ಇರುವ ಬಾಕ್ಸ್ ಬಿಟ್ಟು ಬೇರೆಯವರ ಭಾವಚಿತ್ರ ಇರುವ ಬಾಕ್ಸ್ ತೆಗೆದುಕೊಂಡು ಬರಬೇಕು. ಈ ಆಟದಲ್ಲಿ ಮಂಜಣ್ಣ ಹಾಗೂ ಸುರೇಶ್ ನಡುವೆ ದೊಡ್ಡ ಜಗಳವೇ ಹೊತ್ತಿಕೊಂಡಿದೆ. ಯಾಕಂದ್ರೆ ಆಟ ಆಡುವುದಕ್ಕೂ ಮುನ್ನವೇ ಹಲವರು ಡೀಲ್ ಮಾಡಿಕೊಂಡಿದ್ದಾರೆ.
ಬಲೆಯಿಂದ ತೂರಿ ಒಳಗೆ ಹೋಗಿ, ಬಾಕ್ಸ್ ತರುವಷ್ಟರಲ್ಲಿ ಮಂಜಣ್ಣ ಲಾಕ್ ಆಗಿದ್ದರು. ಫೋಲ್ ಮಾಡಿದ್ದರು. ಹೀಗಾಗಿ ಮಂಜಣ್ಣ ತಂದಿದ್ದ ಸುರೇಶ್ ಕೂಡ ಕ್ಯಾಪ್ಟನ್ಸಿ ಆಟದಿಂದ ಹೊರಗೆ ಉಳಿದಿದ್ದರು. ಇದು ಮನೆಯಲ್ಲಿ ಒಂದಷ್ಟು ಜಗಳಕ್ಕೆ ಕಾರಣವಾಯ್ತು. ಮಂಜಣ್ಣ ಜೊತೆಗೆ ಸುರೇಶ್ ಹೊರಗೆ ಉಳಿಯುವಂತೆ ಆಯ್ತು.

ಮಂಜಣ್ಣ ಮೇಲೆ ಹೌಹಾರಿದ ಸುರೇಶ್
ಬಾಕ್ಸ್ ಎತ್ತಿಕೊಂಡು ಬರುವ ಟಾಸ್ಕ್‌ನಲ್ಲಿ ಮಂಜಣ್ಣ ಮಾಡಿದ ಯಡವಟ್ಟಿನಿಂದ ಸುರೇಶ್ ಕೂಡ ಹೊರಗೆ ಉಳಿಯುವಂತೆ ಆಗಿದೆ. ಇದನ್ನು ಸಹಿಸದ ಸುರೇಶ್, ಮಂಜಣ್ಣನ ಬಳಿ ಜಗಳಕ್ಕೆ ಬಿದ್ದಿದ್ದಾರೆ. ಒಳಗೆ ಬರುತ್ತಲೇ ವ್ಯಂಗ್ಯ ಬೇರೆ ಮಾಡಿದ್ದಾರೆ. ಮಂಜಣ್ಣ ಆರಂಭದಲ್ಲಿ ಸಮಾಧಾನವಾಗಿ ಮಾತಾಡಿದ್ದರು. ಆದರೆ ಆಮೇಲೆ ಮಂಜಣ್ಣ ಕೂಡ ರೊಚ್ಚಿಗೆದ್ದಿದ್ದಾರೆ. ವಿಚಿತ್ರ ಟಾಸ್ಕ್ ಕೊಟ್ಟು, ಮನೆ ಮಂದಿಯನ್ನು ಗೊಂದಲ ಮಾಡಿರುವ ಬಿಗ್ ಬಾಸ್ ಜೊತೆಗೆ ಜಗಳಕ್ಕೂ ಈ ಟಾಸ್ಕ್ ದಾರಿ ಮಾಡಿಕೊಟ್ಟಿದೆ. ಅವರ ಫೋಟೋ ಇರುವ ಬಾಕ್ಸ್‌ಗಳನ್ನು ಅವರೇ ಎತ್ತಿಕೊಳ್ಳುವಂತೆ ಇಲ್ಲದಿರುವುದೇ ಸಮಸ್ಯೆಯಾಗಿದೆ.
ಮಾತಿನ ಮಧ್ಯೆ ಶಿಶಿರ್ ಮ್ಯಾಟರ್
ಮಂಜಣ್ಣ ಮಾತಿನ ಬರದಲ್ಲಿ ಸುರೇಶ್ ಹೇಳಿದ್ದಾರೆ ಎನ್ನಲಾದ ಮಾತನ್ನು ಹೇಳಿದ್ದಾರೆ. ಶಿಶಿರ್ ಅವರು ನುಗ್ತಾರೋ ಇಲ್ವೋ ಗೊತ್ತಿಲ್ಲ ಎಂದಿದ್ದಾರೆ. ಈ ಮಾತು ಜಗಳಕ್ಕೆ ಕಾರಣವಾಗಿದೆ. ಬಳಿಕ ವಾದ ಪ್ರತಿವಾದದ ನಂತರ ಸತ್ಯ ಗೊತ್ತಾದ್ಮೇಲೆ ಹೀಗೆ ಆಡೋದು. ಈಗ ಗೊತ್ತಾಯ್ತಾ ಯಾರು ಸುಳ್ಳು ಹೇಳ್ತಾ ಇದಾರೆ ಅನ್ನೋದು ಅಂತ ಮಂಜಣ್ಣ ಮತ್ತೆ ಪ್ರೂವ್ ಮಾಡಲು ಹೊರಟಿದ್ದಾರೆ.
ಮಗಳ ಮೇಲೆ ಆಣೆ ಇಟ್ಟ ಸುರೇಶ್!
ಮಂಜಣ್ಣನ ಮಾತಿಗೆ ಸುರೇಶ್ ಒಪ್ಪಲಿಲ್ಲ. ನಾನು ಆ ರೀತಿ ಹೇಳಲಿಲ್ಲ, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಂದಿಡೋರೆ ಜಾಸ್ತಿ ಎಂದಿದ್ದಾರೆ. ಶಿಶಿರ್ ಪದೇ ಪದೇ ಹೌದಾ ನನ್ನ ಬಗ್ಗೆ ಮಾತನಾಡಿದ್ದೀರಾ? ಎಂದು ಕೇಳಿದಾಗ ಸುರೇಶ್ ಮಗಳ ಮೇಲೆ ಆಣೆ ಇಟ್ಟಿದ್ದಾರೆ. ನನ್ನ ಮಗಳ ಮೇಲೆ ಆಣೆ ಮಾಡ್ತೀನಿ ನಾನು ನಿನ್ನ ಹೆಸರು ಹೇಳಿಲ್ಲ. ನಿನ್ನ ಹೆಸರನ್ನು ಹೇಳಿದ್ರೆ ಭಗವಂತ ನೋಡಿಕೊಳ್ಳುತ್ತಾನೆ. ನನ್ನ, ನಿನ್ನ, ಚೈತ್ರಾರನ್ನ ಹೊರಗೆ ಕೂರಿಸೋದಕ್ಕೆ ಪ್ಲ್ಯಾನ್ ಮಾಡಿದ್ದು, ಮಂಜುನೇ ನನ್ನ ತಳ್ಳಿದ್ದು ಅಂತ ವಾದಿಸಿದ್ದಾರೆ.
ಬೀಪ್ ಸೌಂಡ್ ಹಾಕುವಂತೆ ಬೈದಾ ಶಿಶಿರ್
ಶಿಶಿರ್‌ಗೆ ತನ್ನ ಬಗ್ಗೆ ಈ ರೀತಿಯೆಲ್ಲಾ ಮಾತಾಡಿದ್ದು ಕೋಪ ತರಿಸಿದೆ. ಸುರೇಶ್ ಬಳಿ ಕ್ಲಾರಿಟಿಯನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಸುರೇಶ್ ಒಪ್ಪದೇ ಹೋದಾಗ,'ಯಾವನೋ .... ಏನು ಮಾಡವ್ನೋ ನಮ್ಮ ತಾಯಾಣೆ ಹೇಳ್ತೀನಿ .... ಮಾಡವ್ನೋ ಅವ್ನು ಆಚೆ ಹೋಗ್ತಾನೆ. ಯಾವನು, ಯಾವಳು ಮಾಡಿದ್ದಾರೋ ಅವರು ಆಚೆ ಹೋಗ್ತಾರೆ ಎಂದು ಬಿಗ್ ಬಾಸ್ ಬೀಪ್ ಸೌಂಡ್ ಹಾಕುವಂತೆ ಮಾತನಾಡಿದ್ದಾರೆ.


Click it and Unblock the Notifications











