BBK 11: ಧನರಾಜ್‌ಗೆ ಬಿಗ್ ಬಾಸ್ ಮನೆ ಸಾಕಾಯ್ತಾ? ಹನುಮಂತನ ಬಳಿ ಹೇಳಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಧನರಾಜ್ ನಡುವೆ ಒಳ್ಳೆ ಬಾಂಡಿಂಗ್ ಬೆಳೆದಿದೆ. ಸಿಟಿ ಜನರ ಮಾತುಗಳು ಕೆಲವೊಮ್ಮೆ ಅರ್ಥವಾಗುವುದೇ ಇಲ್ಲ. ಆದರೆ ಧನರಾಜ್ ಮಾತುಗಳನ್ನು ಖುಷಿಯಿಂದ ಕೇಳುತ್ತಾರೆ. ಧನರಾಜ್ ದಕ್ಷಿಣ ಕನ್ನಡ, ಹನುಮಂತು ಉತ್ತರ ಕರ್ನಾಟಕ. ಇಬ್ಬರ ಭಾಷೆಯೂ ವಿಭಿನ್ನ. ಆದರೂ ಇಬ್ಬರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.
ಅಂದಹಾಗೆ ಹನುಮಂತ ಬಿಗ್ ಬಾಸ್ ಮನೆಗೆ ಬಂದ ಮೇಲೆ ಧನರಾಜ್ ಆಕ್ಟೀವ್ ಆಗಿದ್ದಾರೆ. ಒಳ್ಳೆ ಕಾಮಿಡಿ ಕಂಟೆಂಟ್ ಕ್ರಿಯೇಟ್ ಮಾಡುವ ಧನರಾಜ್ ಅದ್ಯಾಕೋ ಸ್ವಲ್ಪ ದಿನ ಡಲ್ ಆಗಿದ್ದರು. ಆದರೆ ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ನೋಡುಗರಿಗೂ ಒಳ್ಳೆ ಮನರಂಜನೆ ನೀಡುತ್ತಿದ್ದಾರೆ.

ಧನರಾಜ್- ಹನುಮಂತ ಜುಗಲ್ಬಂದಿ
ಹನುಮಂತ ಆ ಕ್ಷಣಕ್ಕೆ ಪದ ಕಟ್ಟಿ ಹಾಡುವುದರಲ್ಲಿ ಫೇಮಸ್. ಈಗ ಬಿಗ್ ಬಾಸ್ ಮನೆಯಲ್ಲೂ ಅದೇ ಆಗುತ್ತಿರೋದು. ಧನರಾಜ್ ಹಾಗೂ ಹನುಮಂತ ಕೂತರೆ ಹಾಡೇಳಿಕೊಂಡು ಕೂರುತ್ತಾರೆ. ಹನುಮಂತ ಶುರು ಮಾಡಿದ ಹಾಡನ್ನ ಧನರಾಜ್ ಕಂಟಿನ್ಯೂ ಮಾಡುತ್ತಾರೆ. ಇದು ನೋಡುವುದಕ್ಕೂ ಖುಷಿ ನೀಡುತ್ತದೆ. ಈ ರೀತಿ ಇಬ್ಬರ ಬಾಂಡಿಂಗ್ ಸ್ಟ್ರಾಂಗ್ ಆಗಿದೆ.
ಧನರಾಜ್‌ಗೆ ನಾಮಿನೇಟ್ ಆಗಬೇಕಂತೆ
ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಮನೆಯ ಮಂದಿಯೇ ನಾಮಿನೇಷನ್ ಮಾಡ್ತಾರೆ. ಆದರೆ ಜನರು ವೋಟ್ ಮಾಡುವ ಮೂಲಕ ಸೇವ್ ಮಾಡುತ್ತಾರೆ. ಸಾಧ್ಯವಾದಷ್ಟು ನಾಮಿನೇಷನ್ ನಿಂದ ದೂರ ಉಳಿಯುವುದಕ್ಕೇನೆ ಸ್ಪರ್ಧಿಗಳು ಟ್ರೈ ಮಾಡುತ್ತಾರೆ. ಆದರೆ ಧನರಾಜ್ ಅದ್ಯಾಕೋ ಏನೋ ಈ ವಾರ ನಾಮಿನೇಟ್ ಆಗಬೇಕೆಂದು ಬಯಸುತ್ತಿದ್ದಾರೆ. ಹನುಮಂತನ ಬಳಿ ಈ ವಾರ ನಾನು ನಾಮಿನೇಟ್ ಆಗಬೇಕು ಎಂದಿದ್ದಾರೆ. ಇದು ಧನರಾಜ್ ಫಾಲೋವರ್ಸ್‌ಗೆ ಬೇಸರವೂ ತರಿಸಿದೆ, ಪ್ರಶ್ನೆಯನ್ನು ಮೂಡಿಸಿದೆ.
ಮನೆಯಲ್ಲಿ ಎಲ್ಲರೂ ಒಂದೊಂದು ದಿಕ್ಕು
ಧನರಾಜ್ ಈ ರೀತಿ ಮಾತನಾಡಿದ್ದು ಕೇಳಿ ಫಾಲೋವರ್ಸ್ ಶಾಕ್ ಆಗಿದ್ದಾರೆ. ಧನರಾಜ್‌ಗೆ ಮನೆಯಲ್ಲಿ ಬೇಸರ ಏನಾದ್ರೂ ಆಯ್ತಾ ಅಥವಾ ಇಷ್ಟು ದಿನ ಫ್ಯಾಮಿಲಿ ಬಿಟ್ಟು ಇರೋದಕ್ಕೆ ಕಷ್ಟವಾಗ್ತಾ ಇದೆಯಾ..? ಮಗಳು ನೆನಪಾಗುತ್ತಿದ್ದಾಳಾ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಅಂಡ್ ಹನುಮಂತು ಇಬ್ಬರೇ ಒಂದು ಟೀಂ ಆಗಿದ್ದಾರೆ. ಹೆಚ್ಚಾಗಿ ಇವರು ಯಾರ ಸುದ್ದಿಗೂ ಹೋಗಲ್ಲ. ಮನೆಯ ವಾತಾವರಣಕ್ಕೇನಾದರೂ ಧನರಾಜ್ ಬೇಸರ ಮಾಡಿಕೊಂಡಿದ್ದಾರಾ ಎಂಬ ಅನುಮಾನವೂ ಕಾಡಿದೆ.
ಹನುಮಂತ ಹಾಡಿಗೆ ಧನರಾಜ್ ಹ್ಯಾಪಿ
ಹನುಮಂತ ಹಾಗೂ ಧನರಾಜ್ ಸೇರಿದರೆ ಒಂದೊಂದಕ್ಕೂ ಹಾಡುಗಳು ಸೃಷ್ಟಿಯಾಗುತ್ತಾ ಇರುತ್ತವೆ. ಅದೇ ಅವರಿಬ್ಬರ ಸ್ಪೆಷಾಲಿಟಿ. ಈಗ ಧನರಾಜ್ ಆ ರೀತಿ ಹೇಳಿದ್ದನ್ನು ಕೇಳಿದ ಹನುಮಂತು ಅದಕ್ಕೂ ಒಂದು ಹಾಡು ಸೃಷ್ಟಿಸಿದ್ದಾರೆ. ಇರೋ ತನ್ಕ ಜಗಳ ಆಡೋಣಾ, ಸುಮ್ನೆ ಯಾಕೆ ತಲೆ ನೋವು ಯಾಕೆ ಆರಾಮಾಗಿರೋಣ ಎಂದು ಎರಡೆರಡು ಹಾಡನ್ನ ಹಾಡಿದ್ದಾರೆ. ಧನರಾಜ್ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ. ಬಾತ್ ರೂಮಿಗೆ ಹೋಗಿ ಬಂದಾಗಲೂ ಹನುಮಂತ ಹಾಡು ಹಾಡುತ್ತಲೇ ಇದ್ದರು. ಇದು ಧನರಾಜ್‌ಗೆ ಖುಷಿ ಕೊಟ್ಟಿದೆ.


Click it and Unblock the Notifications











