Bigg Boss: ದೊಡ್ಮನೆಯಲ್ಲಿ ಬಿಗ್ ಬ್ರೇಕಿಂಗ್ ನ್ಯೂಸ್: ಪದೇ ಪದೇ ಹಳೆಯದನ್ನೇ ಕೆದಕುತ್ತಿರುವ ತನಿಷಾ
ಬಿಗ್ ಬಾಸ್ ಸೀಸನ್ 10 ಹತ್ತನೇ ವಾರವನ್ನು ಮುಗಿಸಿ 11ನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಈಗ ಜಿದ್ದಿನ ಹೋರಾಟ ನಿರ್ಮಾಣವಾಗಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಸಂಗೀತಾ ಒಬ್ಬಂಟಿ ಎಂದು ಅನಿಸುತ್ತಿದೆ.
ಇಷ್ಟು ದಿನ ಕಾರ್ತಿಕ್ ಹಾಗೂ ತನಿಷಾ ಇಬ್ಬರು ಸಹ ಸಂಗೀತಾ ಜೊತೆಗೆ ಇದ್ದು ಸಪೋರ್ಟ್ ಮಾಡುತ್ತಿದ್ದರು. ಆದರೆ ಸಂಗೀತ ಆಡಿರುವ ಒಂದೇ ಒಂದು ಮಾತು ಮೂವರ ನಡುವೆಯೂ ಕೂಡ ಅಸಮಾಧಾನ ತಂದಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವೂ ಕೂಡ ಒಂದೊಂದು ಹೊಸ ಹೊಸ ಟಾಸ್ಕ್‌ನ್ನು ನೀಡಲಾಗುತ್ತದೆ. ಅದರಂತೆ ಈಗ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬ್ರೇಕಿಂಗ್ ನ್ಯೂಸ್ ಟಾಸ್ಕ್ ಕೊಡಲಾಗಿದೆ. ಇಲ್ಲಿ ಸ್ಪರ್ಧಿಗಳೇ ನ್ಯೂಸ್ ಓದಿದ್ದು ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನ್ಯೂಸ್ ಮೂಲಕ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ತನಿಷಾ ಡಿಬೇಟ್ ಮಾಡಿದ್ದಾರೆ. ಅದು ಕೂಡ ಸಂಗೀತಾ ಜೊತೆಗೆ.
ಕಾರ್ತಿಕ್ ಬಗ್ಗೆ ಸಂಗೀತಾ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಕೇಳಿದ ಮಾತು ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಮುನ್ನೆಲೆಗೆ ಬಂದಿದೆ. ಇಲ್ಲಿ ಸಂಗೀತ ಮಾತ್ರ ತಮ್ಮ ನಿಲುವನ್ನು ಬಿಟ್ಟುಕೊಡಲು ಸುತಾರಾಂ ಒಪ್ಪುತ್ತಿಲ್ಲ.
ಕಲರ್ಸ್ ಕನ್ನಡದವರು ಬಿಟ್ಟಿರುವ ಪ್ರೋಮೋದಲ್ಲಿ ಮತ್ತೆ ಸ್ನೇಹಿತರ ನಡುವೆ ಮನಸ್ತಾಪ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ಇನ್ನು ಸಂಗೀತಾ ನಾನು ಕಾರ್ತಿಕ್‌ನಿಂದ ಈ ರೀತಿಯ ವರ್ತನೆ ನಿರೀಕ್ಷೆ ಮಾಡಿರಲಿಲ್ಲ, ಆದರೆ ಕಾರ್ತಿಕ್, ವಿನಯ್ ಜೊತೆಗೆ ಚೆನ್ನಾಗಿಯೇ ಇದ್ದಾರೆ. ನಾನು ಯಾವಾಗಲೂ ಒಂಟಿ ಅನಿಸುತ್ತದೆ ನಾನು ಒಬ್ಬಳೇ ಆಟವನ್ನು ಆಡುತ್ತೇನೆ ಎಂಬ ಮಾತನ್ನು ಪ್ರತಾಪ್‌ಗೆ ಸಂಗೀತಾ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಹಾಗೂ ಸಂಗೀತಾ ಈಗ ಪದೇ ಪದೇ ಟಾರ್ಗೆಟ್ ಆಗುತ್ತಲೇ ಇದ್ದಾರೆ.

ನ್ಯೂಸ್ ರೀಡರ್‌ಗಳಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆ ವಾರದ ಮೊದಲನೇ ದಿನವೇ ಬಹಳಷ್ಟು ಕುತೂಹಲ ಹುಟ್ಟು ಹಾಕುತ್ತಿದೆ. ಈಗಂತೂ ಬಿಗ್ ಬಾಸ್ ಮನೆ ನ್ಯೂಸ್ ಚಾನಲ್ ಆಗಿ ಪರಿವರ್ತನೆಯಾಗಿದೆ. ನಮ್ರತಾ ಹಾಗೂ ಪ್ರತಾಪ್ ಇಬ್ಬರೂ ಕೂಡ ಮೊದಲಿಗೆ ನ್ಯೂಸ್ ಆ್ಯಂಕರ್ ಆಗಿ ಬಂದಿದ್ದಾರೆ. ಇಲ್ಲಿ ನಮ್ರತಾ ಬಿಗ್ ಬಾಸ್ ನ್ಯೂಸ್‌ಗೆ ಸ್ವಾಗತ ಎಂದು ಶುರು ಮಾಡಿದ್ದಾರೆ. ತನುಷಾ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ನ್ಯೂಸ್ ಓದಿದ್ದಾರೆ. ಜೊತೆಗೆ ಸಂಗೀತಾ ಜೊತೆಗೆ ಡಿಬೇಟ್ ಮಾಡಿದ್ದಾರೆ.
ಸಂಗೀತಾ ಜೊತೆ ಡಿಬೇಟ್ ಮಾಡಿದ ತನಿಷಾ
ಸಂಗೀತಾ ಹಾಗೂ ತನಿಷಾ ನಡುವೆ ನ್ಯೂಸ್ ಚಾನೆಲ್‌ನಲ್ಲಿ ನಡೆಯುವಂತೆ ಡಿಬೇಟ್ ನಡೆದಿದೆ. ತನಿಷಾ, ಡ್ರೋನ್ ಪ್ರತಾಪ್‌ಗೆ ಇತ್ತೀಚಿನ ದಿನಗಳಲ್ಲಿ ನಾನು ಎನ್ನುವ ಅಹಂ ಹೆಚ್ಚಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ನಂತರ ಸಂಗೀತಾ ಬಳಿ ಡಿಬೇಟ್ ಆರಂಭಿಸಿದ್ದಾರೆ. ಕಾರ್ತಿಕ್, ವಿನಯ್ ಟೀಮ್‌ಗೆ ಬಕೆಟ್ ಹಿಡಿಯಬೇಕು ಎಂದಿದ್ದರೆ 70 ದಿನಗಳನ್ನ ತೆಗೆದುಕೊಳ್ಳುತ್ತಿರಲಿಲ್ಲ ಎಂಬ ಮಾತನ್ನು ಸಂಗೀತಾ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸಂಗೀತಾ ಇತ್ತೀಚಿನ ದಿನಗಳಲ್ಲಿ ಅವರು ತುಂಬಾ ಕ್ಲೋಸ್ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ. ಮೊದಲು ತುಂಬಾ ದ್ವೇಷದಿಂದ ನಡೆದುಕೊಳ್ಳುತ್ತಾ ಇದ್ದರು, ಈಗ ಸ್ನೇಹಿತರಂತೆ ವರ್ತಿಸುತ್ತಿದ್ದಾರೆ ಎಂದಿದ್ದಕ್ಕೆ ಕಾರ್ತಿಕ್ ಯಾಕೆ ಆಗಬಾರದು? ಎಂದಿದ್ದಾರೆ.
ತನ್ನ ನಿಲುವಿಗೆ ನಿಂತುಕೊಂಡ ಸಂಗೀತಾ
ಕಾರ್ತಿಕ್, ವಿನಯ್ ಟೀಮ್‌ಗೆ ಬಕೆಟ್ ಹಿಡಿಯುತ್ತಿದ್ದಾರೆ ಎನ್ನುವ ತಮ್ಮ ಮಾತಿಗೆ ಸಂಗೀತಾ ಬದ್ಧರಾಗಿದ್ದಾರೆ. ಅಷ್ಟೇ ಅಲ್ಲದೆ ಸಂಗೀತಾ ನೀವು ಸ್ಟೇಟ್ಮೆಂಟ್ ಕೊಡುವ ಮುಂಚೆ ಯೋಚಿಸಿ ಮಾತನಾಡಬಹುದಿತ್ತು ಅಲ್ವಾ? ಕೇಳಿದ್ದಕ್ಕೆ ನನ್ನ ಮನಸ್ಸಿಗೆ ಏನು ಬಂತು ಅದನ್ನೇ ನಾನು ಹೇಳಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸಂಗೀತಾ ಶೃಂಗೇರಿ ತಲೆಗೆ ಹೊಡೆದ ಕಾರ್ತಿಕ್ ಮಹೇಶ್ ಎಂಬ ಬ್ರೇಕಿಂಗ್ ನ್ಯೂಸ್ ಅನ್ನು ಸಂಗೀತಾ ಓದಿದ್ದಾರೆ.
ಸ್ಟ್ರ್ಯಾಟಜಿ ಮಾಡ್ತಿದ್ದಾರಾ ಸಂಗೀತಾ?
ಡಿಬೆಟ್‌ನಲ್ಲಿ ಸಂಗೀತಾಗೆ ತನಿಷಾ ಹಲವಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಕೊನೆಗೆ ನೀವು ಸ್ಟ್ರ್ಯಾಟಜಿ ಮಾಡುತ್ತಾ ಇದ್ದೀರಾ? ಎಂಬ ಪ್ರಶ್ನೆಯನ್ನ ತನಿಷಾ, ಸಂಗೀತಾಗೆ ಕೇಳಿದ್ದಾರೆ. ಸಂಗೀತಾ ಯಾವುದೇ ಸಂಗೀತ ನೀಡಲಿಲ್ಲ. ಸಂಗೀತಾ ಹಾಗೂ ಕಾರ್ತಿಕ್, ತನಿಷಾ ನಡುವೆ ಬಿರುಕು ಮೂಡಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಾ ಇದೆ. ಇನ್ನು ಕೆಲವು ವೀಕ್ಷಕರು ಸಂಗೀತಾಗೆ ಸಪೋರ್ಟ್ ಮಾಡುತ್ತಿದ್ದಾರೆ. ಕೆಲವರು ಕಾರ್ತಿಕ್ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎನ್ನುತ್ತಿದ್ದಾರೆ.
ವಿನಯ್- ತುಕಾಲಿಗೆ ಖುಷಿ
ಕಾರ್ತಿಕ್, ಸಂಗೀತಾ ಜೊತೆ ಜಗಳ ಮಾಡಿಕೊಂಡಿರುವುದು ವಿನಯ್ ಹಾಗೂ ತುಕಾಲಿ ಸಂತೋಷ್‌ಗೆ ಖುಷಿ ಕೊಟ್ಟಂತೆ ಕಾಣಿಸುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಮನಸ್ಸು ಸಂಕುಚಿತಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ತಾವು ಗೆಲುವು ಪಡೆಯಲೇಬೇಕು ಎಂಬ ದಿಕ್ಕಿನಲ್ಲಿ ಸ್ಪರ್ಧಿಗಳು ಸಾಗುತ್ತಿದ್ದಾರೆ.


Click it and Unblock the Notifications











