Bigg Boss: ಸಂಗೀತಾ ವಿರುದ್ಧ ತಿರುಗಿ ಬಿದ್ದ ಮೈಕಲ್: ಸಂಗೀತಾ ಮಾಡಿದ್ದು ಸರೀನಾ?
ಬಿಗ್ ಬಾಸ್ ಸೀಸನ್ 10 ಶುರುವಾದ ದಿನದಿಂದಲೂ ಕೂಡ ಬಿಗ್ ಬಾಸ್ ಮನೆಯಲ್ಲಿ ಜಗಳ ತಪ್ಪಿದ್ದಲ್ಲ. ಯಾವುದಾದರೂ ಒಂದು ವಿಚಾರಕ್ಕೆ ಪ್ರತಿದಿನವೂ ಕೂಡ ಜಗಳ ಮನಸ್ತಾಪ ಬರುತ್ತಲೇ ಇದೆ. ಈಗ ಟಾಸ್ಕ್‌ನಲ್ಲಿ ಗಳಿಸಿರುವ ಪಾಯಿಂಟ್ ಹಂಚಿಕೆ ವಿಚಾರಕ್ಕೆ ಸಂಗೀತಾ ತಂಡ ಆಕೆಯ ವಿರುದ್ಧವೇ ತಿರುಗಿ ಬಿದ್ದಿದೆ.
ತಂಡ ರಚನೆ ಆದಾಗಲೇ ವಿನಯ್ ಒಂದು ಮಾತು ಹೇಳಿದ್ದರು. ಸಂಗೀತಾಗೆ ಇಗೋ ಜಾಸ್ತಿ ಇನ್ನೂ ಮೈಕಲ್ ಕೂಡ ಸಂಗೀತಾ ಮಾತನ್ನ ಕೇಳೋದಿಲ್ಲ ಹೀಗಾಗಿ ತಂಡದಲ್ಲಿ ಜಗಳ ಬಂದೇ ಬರುತ್ತದೆ ಎಂದಿದ್ದರು. ಕೊನೆಗೂ ವಿನಯ್ ಹೇಳಿದ ಮಾತು ಸತ್ಯವಾಗಿದೆ. ಮೈಕಲ್‌ಗೆ ಎಲ್ಲರಿಗಿಂತಲೂ ಹೆಚ್ಚಿನ ಪಾಯಿಂಟ್ಸ್ ಅನ್ನು ಸಂಗೀತಾ ಕೊಟ್ಟಿದ್ದರು. ಆದರೆ ಮೈಕಲ್ ಇನ್ನೂ ಹೆಚ್ಚು ಪಾಯಿಂಟ್ಸ್ ಬೇಕು ಎಂದು ಕೇಳಿಕೊಂಡಿದ್ದರು. ಸಂಗೀತಾ ನಾನು ಎಲ್ಲರಿಗೂ ಸಮನಾಗಿ ಪಾಯಿಂಟ್ ಹಂಚಿಕೆ ಮಾಡೋದಿಲ್ಲ ಎಂದಿದ್ದರು. ಇದೇ ಮಾತು ಮೈಕಲ್‌ಗೆ ಬೇಸರ ತರಿಸಿದ್ದು ಸಂಗೀತಾ ಮೇಲೆ ಮುಗಿಬಿದ್ದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೈಕಲ್‌ಗೆ ಸಂಗೀತಾಳನ್ನು ಕಂಡರೆ ಇಷ್ಟವಾಗುತ್ತಿರಲಿಲ್ಲ. ಸಂಗೀತಾರನ್ನು ಟಾರ್ಗೆಟ್ ಮಾಡಿ ಮಾತನಾಡಲು ಶುರು ಮಾಡಿದರು. ಈಗಲೂ ಕೂಡ ಪಾಯಿಂಟ್ಸ್ ವಿಚಾರಕ್ಕೆ ಸಂಗೀತಾರನ್ನು ಟಾರ್ಗೆಟ್ ಮಾಡಿ ಮೈಕಲ್ ಮಾತನಾಡಿದ್ದಾರೆ.
ಬಿಗ್ ಬಾಸ್ ತನಿಷಾ ಹಾಗೂ ಸಂಗೀತಾ ಇಬ್ಬರನ್ನು ಕೂಡ ನಾಯಕರನ್ನಾಗಿ ಮಾಡಿ ಅವರಿಗೆ ಒಂದಷ್ಟು ಪಾಯಿಂಟ್ಸ್ ಕೊಟ್ಟಿತ್ತು. ಈ ಪಾಯಿಂಟ್ಸ್‌ನಲ್ಲಿ ಸ್ಪರ್ಧಿಗಳನ್ನು ಖರೀದಿ ಮಾಡಿ ತಂಡವನ್ನಾಗಿ ಮಾಡಿಕೊಂಡು ಆಟವಾಡಿದರು. ಈ ವೇಳೆ ಒಂದು ಸ್ಪರ್ಧೆಯಲ್ಲಿ ಸಂಗೀತ ಟೀಮ್ ಗೆದ್ದರೆ ಇನ್ನೊಂದು ಸ್ಪರ್ಧೆಯಲ್ಲಿ ತನಿಷಾ ಟೀಮ್ ಗೆಲುವು ಪಡೆದಿದೆ. ಹೊಸ ಪ್ರೋಮೋದಲ್ಲಿ ಮೈಕಲ್, ಸಂಗೀತಾ ವಿರುದ್ಧ ಮನೆಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ತಿರುಗಿ ಬಿದ್ದಿದ್ದಾರೆ. ಸಂಗೀತಾ ಬಳಿ ಜಾಸ್ತಿ ಪಾಯಿಂಟ್ ಇದ್ದು ಅದನ್ನ ಬೇರೆಯವರೊಂದಿಗೆ ಶೇರ್ ಮಾಡುತ್ತಿಲ್ಲ ಎಂದಿದ್ದಾರೆ.

ಸಂಗೀತಾಗೆ ಚುಚ್ಚಿ ಮಾತನಾಡಿದ ಮೈಕಲ್
ಎರಡು ತಂಡದ ನಾಯಕರು ತಮ್ಮ ತಂಡದ ಮುಂದೆ ಕುಳಿತಿದ್ದಾರೆ. ಈ ವೇಳೆ ಮೈಕಲ್, ಸಂಗೀತಾ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಗ್ ಬಾಸ್ ನಮ್ಮ ತಂಡದ ಮಾಲೀಕರು ಗೆದ್ದ ದುಡ್ಡನ್ನ ಶೇರ್ ಮಾಡಲು ರೆಡಿ ಇಲ್ಲ. ಬೇಕಾದರೆ ನಾನು ಕೊಡ್ತೀನಿ ನೀವು ತೆಗೆದುಕೊಳ್ಳಿ ಎಂಬ ಮನಸ್ಥಿತಿ ಹೊಂದಿದ್ದಾರೆ. ಇಲ್ಲಿ ನಾವೇನು ಭಿಕ್ಷುಕರಲ್ಲ ಎಂದು ಮೈಕಲ್ ಹೇಳಿದ್ದಾರೆ. ಮೈಕಲ್ ಹೇಳಿದ ಮಾತಿಗೆ ಸಂಗೀತಾ ಕೂಡ ಉತ್ತರ ನೀಡಿದ್ದಾರೆ. ನಿಮಗೆ ನಾಚಿಕೆ ಆಗಬೇಕು ಎಲ್ಲರಿಗಿಂತ ಹೆಚ್ಚು ಅಮೌಂಟ್ ನಿಮಗೆ ಕೊಟ್ಟಿದ್ದೇನೆ. ಆದರೂ ಕೂಡ ಈ ರೀತಿ ಮಾತನಾಡುತ್ತಿದ್ದೀರಾ? ಎಂದು ಕೇಳಿದ್ದಾರೆ.
ಮೈಕಲ್ ಮಾತಿಗೆ ಚಾರ್ಲಿ ಬೆಡಗಿ ಕಣ್ಣೀರು
ಮುಂದುವರೆದು ಮಾತನಾಡಿದ ಮೈಕಲ್, ಸಂಗೀತಾ ಈ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಎಂದು ಹೇಳಿದ್ದಾರೆ. ಇದಕ್ಕೆ ಸಂಗೀತಾ ನಿಮಗೆ ನನ್ನ ಬಗ್ಗೆ ಮಾತನಾಡಲು ಯಾವ ಹಕ್ಕು ಇಲ್ಲ ಎಂದಿದ್ದಾರೆ. ಆದರೂ ಕೂಡ ಮೈಕಲ್ ಇದು ಫ್ರೀಡಂ ಆಫ್ ಸ್ಪೀಚ್ ಎಂದು ಹೇಳಿ ಸಂಗೀತಾಗೆ ಹರ್ಟ್ ಮಾಡಿದ್ದಾರೆ. ತಮ್ಮ ಬಗ್ಗೆ ಮೈಕಲ್ ಈ ರೀತಿಯಾಗಿ ಮಾತನಾಡುತ್ತಿರುವುದು ಸಂಗೀತಾಗೆ ಒಂದು ಕಡೆ ಬೇಸರ ತರಿಸಿದ್ದು ಬಿಕ್ಕಿ ಬಿಕ್ಕಿ ಹತ್ತಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಸಂಗೀತಾ ಬೇಸರ ಪಡುತ್ತಾ ಕಣ್ಣೀರನ್ನು ಹಾಕುತ್ತಾ ಇದ್ದಾರೆ. ಆದರೆ ನಮ್ರತಾ, ವಿನಯ್ ಬಳಿ ನಾನು ಕೊಟ್ಟಿರುವ ಪಾಯಿಂಟ್ಸ್ ಅನ್ನು ಕೂಡ ವಾಪಸ್ ಪಡೆಯಬಹುದು ಎಂದು ಸಂಗೀತಾ ನನ್ನ ಬಳಿ ಹೇಳಿದ್ದಾರೆ ಎಂಬ ಮಾತನ್ನು ಹೇಳಿದ್ದರು.
ತಂಡ ಕಟ್ಟುವಲ್ಲಿ ಎಡವಿದ್ರಾ ಸಂಗೀತಾ..!?
ಸಂಗೀತಾ, ಕಾರ್ತಿಕ್ ಮನವೊಲಿಸಿ ತಂಡವನ್ನು ಕಟ್ಟಿದ್ದರೆ ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನಿಸುತ್ತದೆ. ತಮ್ಮ ಇಗೋಯಿಂದಾಗಿ ಕಾರ್ತಿಕ್ ವಾಪಸ್ ಎದುರಾಳಿ ತಂಡಕ್ಕೆ ಕಳುಹಿಸಿದ್ದರಿಂದ ಮೈಕಲ್‌ನ ಅವ್ರು ಆಯ್ಕೆ ಮಾಡಿದ್ದರು. ಮೈಕಲ್‌ಗೆ ನಾನೇ ಎಲ್ಲವನ್ನ ಗೆಲ್ಲಿಸಿ ಕೊಟ್ಟಿದ್ದೇನೆ ಎಂಬ ಮನಸ್ಥಿತಿ ಇದ್ದು ಹೆಚ್ಚಿನ ಪಾಯಿಂಟ್ಸ್ ಬರಬೇಕು ಎಂದು ಹಠ ಹಿಡಿದಿದ್ದಾರೆ. ಇದಕ್ಕಾಗಿ ಸಂಗೀತಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಮೈಕಲ್ ಮಾತಿಗೆ ಚಾರ್ಲಿ ಬೆಡಗಿ ಕಣ್ಣೀರು
ಮೊದಲಿನಿಂದಲೂ ಕೂಡ ಮೈಕಲ್‌ಗೆ ಸಂಗೀತಾ ಕಂಡರೆ ಇಷ್ಟವಿಲ್ಲ. ಅವರು ಹೇಳಿದಂತೆ ಕೇಳಬೇಕು ಎಂಬ ಮನೋಭಾವ ಇದೆ. ಹೀಗಾಗಿ ಇಬ್ಬರ ನಡುವೆ ಪರಸ್ಪರ ಜಗಳವು ಕೂಡ ಆಗಿತ್ತು. ಆದರೂ ಕೂಡ ಸಂಗೀತಾ, ಮೈಕಲ್ ಅವರನ್ನು ತಮ್ಮ ತಂಡಕ್ಕೆ ಬಲಶಾಲಿಯಾಗಿದ್ದಾರೆ ಎಂದು ಸೇರಿಸಿಕೊಂಡು ತಪ್ಪು ಮಾಡಿದ್ದಾರೆ. ಈಗ ಅದಕ್ಕೆ ಪಶ್ಚಾತಾಪ ಎನ್ನುವಂತೆ ಕಣ್ಣೀರಾಗಿದ್ದಾರೆ. ದಿನದ 24 ಗಂಟೆ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ ನೋಡಹುದಾಗಿದೆ.


Click it and Unblock the Notifications











