Bigg Boss: ಬಿಗ್ ಬಾಸ್ ಮನೆಯಲ್ಲಿ ಭಾರೀ ರಾಜಕೀಯ..? ವಿನಯ್ ಪರ ಮಾತನಾಡಿದ್ದೇಕೆ ಕಾರ್ತಿಕ್..?!

By Shruthi Harishgowda

ಬಿಗ್ ಬಾಸ್ ಮನೆ ಈಗ ಬಿಗ್ ಬಾಸ್ ಕನ್ನಡ ಪ್ರಾಥಮಿಕ ಶಾಲೆಯಾಗಿ ಬದಲಾಗಿದೆ. ದಿನಕ್ಕೆ ಒಬ್ಬರು ಟೀಚರ್ ಆಗಿ ಪಾಠ ಮಾಡುತ್ತಿದ್ದಾರೆ. ತನಿಷಾ, ಪ್ರತಾಪ್, ಪವಿ, ಮೈಕಲ್, ನಮ್ರತಾ, ತುಕಾಲಿ ಸಂತು, ಸಂಗೀತಾ ಸರದಿ ಮುಗಿದು ಈಗ ಕಾರ್ತಿಕ್ ರಾಜಕೀಯ ಶಾಸ್ತ್ರದ ಮೇಷ್ಟ್ರಾಗಿ ಪಾಠ ಮಾಡಲು ಬಂದಿದ್ದಾರೆ. ರಾಜಕೀಯ ಎಲ್ಲದರಲ್ಲೂ ಇದೆ ಎಂಬುದು ಬಿಗ್ ಬಾಸ್ ಶಾಲೆಯ ಮಕ್ಕಳಿಗೆ ತುಂಬಾ ಚೆನ್ನಾಗಿ ಗೊತ್ತಿದೆ.

ಕಾರ್ತಿಕ್ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಪ್ರಶ್ನೆಗಳನ್ನು ಕೇಳುತ್ತಾ ಇದ್ದಾರೆ. ಕಾರ್ತಿಕ್ ವಾಯ್ಸ್ ಮಾತ್ರ ಮೇಷ್ಟ್ರು ಪಾತ್ರದಲ್ಲಿ ಜೋರಾಗಿಯೇ ಇದೆ. ರಾಜಕೀಯ ಶಾಸ್ತ್ರದ ಮೇಷ್ಟ್ರು ಆಗಿರುವ ಕಾರ್ತಿಕ್ ಸಂಗೀತಾ ಕೆಂಗಣ್ಣಿಗೆ ಗುರಿಯಾದಂತೆ ಕಾಣುತ್ತಿದ್ದಾರೆ. ಕಾರ್ತಿಕ್ ನಡೆದುಕೊಳ್ಳುತ್ತಿರುವ ರೀತಿ ಸಂಗೀತಾಗೆ ಇಷ್ಟವಾಗಿಲ್ಲ. ಇದಕ್ಕೆ ಕಾರ್ತಿಕ್ ಬಕೆಟ್ ಹಿಡಿಯುತ್ತಾ ಇದ್ದಾರೆ ಎಂಬೆಲ್ಲ ಮಾತುಗಳನ್ನು ಡ್ರೋನ್ ಪ್ರತಾಪ್ ಹತ್ತಿರ ಹೇಳಿದ್ದಾರೆ. ರಾಜಕೀಯದ ಮೇಷ್ಟ್ರು ಆಗಿರುವ ಕಾರ್ತಿಕ್ ವಿದ್ಯಾರ್ಥಿಗಳಿಗೆ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಾ ಇದ್ಯಾ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಎಲ್ಲರೂ ಗಂಭೀರವಾಗಿದ್ದಾರೆ. ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಕಾರ್ತಿಕ್ ಕೇಳಿದ ಈ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ನಂತರ ಕಾರ್ತಿಕ್ ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿದ್ದಾರೆ.

Bigboss kannada season 10 latest promo Written Update; School task

ಕಾರ್ತಿಕ್ ಮುಂದುವರೆದು ಯಾರಿಗೆ ಹ್ಯಾಂಗರ್ ಮ್ಯಾನೇಜ್ಮೆಂಟ್‌ನ ಅವಶ್ಯಕತೆ ಇದೆ? ಎಂದು ಕೇಳಿದಾಗ ಸಂಗೀತಾ ನನ್ನದೇ ಹೆಸರು ಸಾರ್ ಎಂದು ಹೇಳಿದ್ದಾರೆ. ಇದಕ್ಕೆ ಕಾರ್ತಿಕ್ ಏನಪ್ಪಾ ಸಂಗೀತಾ ಎಲ್ಲ ವಿಷಯ ಒಪ್ಪಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ‌ಈ ಮಾತು ಯಾಕೋ ಸಂಗೀತಾಗೆ ಇಷ್ಟವಾಗಿಲ್ಲ. ಕಾರ್ತಿಕ್ ಮೇಲೆ ಸಂಗೀತಾಗೆ ಕೋಪ ಬಂದಿದೆ. ಇದ್ದಕ್ಕಿದ್ದಂತೆ ಕಾರ್ತಿಕ್ ಯಾಕೆ ಬದಲಾಗಿದ್ದಾರೆ ಎಂಬುದು ಸಂಗೀತಾಗೆ ತಿಳಿಯುತ್ತಿಲ್ಲ. ಸಂಗೀತಾ, ವಿನಯ್ ಹೆಸರು ತಗೆದುಕೊಳ್ಳಬಹುದೆನೋ ಎಂದು ಕಾರ್ತಿಕ್ ಅಂದುಕೊಂಡಿದ್ದರು. ಆದರೆ ಸ್ವತಃ ಸಂಗೀತಾ ನಾನೇ ಎಂದು ಒಪ್ಪಿಕೊಂಡಿದ್ದು ಕಾರ್ತಿಕ್‌ಗೂ ಸಹ ಆಶ್ಚರ್ಯ ತಂದಿದೆ.

ವಿನಯ್ ಟೀಂ ಸೇರಿ ಬಿಟ್ರಾ ಕಾರ್ತಿಕ್‌...!

ರಾಜಕೀಯದ ಮೇಷ್ಟ್ರು ಆಗಿ ಕಾರ್ತಿಕ್ ಮನೆಯಲ್ಲಿ ಯಾರು ಬ್ಯಾಡ್ ಪಾಲಿಟಿಕ್ಸ್ ಮಾಡ್ತಾ ಇದ್ದಾರೆ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಂಗೀತಾ, ವಿನಯ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇನ್ನು ಕಾರ್ತಿಕ್ ಈ ಮಾತನ್ನ ಒಪ್ಪಿಕೊಳ್ಳದೇ ಅದಕ್ಕೆ ಸೂಕ್ತವಾದ ಕಾರಣವನ್ನು ಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ವಿನಯ್ ಕೂಡ ಇದು ಸರಿಯಿಲ್ಲ ಎಂಬ ಉತ್ತರ ನೀಡಿದ್ದು, ಸಂಗೀತಾಗೆ ಯಾಕೋ ಕಾರ್ತಿಕ್ ನಡೆದುಕೊಳ್ಳುತ್ತಿರುವ ರೀತಿ ಇಷ್ಟವಾಗಿಲ್ಲ. ಇದಕ್ಕಾಗಿ ಡ್ರೋನ್ ಪ್ರತಾಪ್ ಬಳಿ ಹೋಗಿ ವಿನಯ್ ಟೀಂಗೆ ಕಾರ್ತಿಕ್ ಯಾಕೋ ಬಕೆಟ್ ಹಿಡಿಯುವಂತೆ ಕಾಣಿಸುತ್ತಿದೆ ಎಂದಿದ್ದಾರೆ.

ಬಕೆಟ್ ಹಿಡಿತಿದ್ದಾನೆ ಎಂದ ಸಂಗೀತಾ..?

ಕಾರ್ತಿಕ್‌ಗೆ ಏನಾಗಿದೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಡ್ರೋನ್ ಪ್ರತಾಪ್ ಹಾಗೂ ಸಂಗೀತ ಚರ್ಚೆ ನಡೆಸಿದ್ದಾರೆ. ಇನ್ನು ಕಾರ್ತಿಕ್ ಈ ರೀತಿ ನಡೆದುಕೊಂಡಿದ್ದಕ್ಕಾಗಿ ಇಬ್ಬರ ನಡುವೆ ಬಿರುಕು ಮೂಡುತ್ತಾ? ಎನ್ನುವ ಕುತೂಹಲವಿದೆ. ಯಾಕೆಂದರೆ ಸಂಗೀತಾ ಒಮ್ಮೆ ಟಾಸ್ಕ್ ವಿಚಾರಕ್ಕಾಗಿ ವಿನಯ್ ಟೀಮ್ ಸೇರಿಕೊಂಡಾಗ ಇಬ್ಬರ ನಡುವೆಯೂ ಸಹ ಬಿರುಕು ಮೂಡಿ ಮತ್ತೆ ಒಂದಾಗಿದ್ದರು. ಈಗ ಕಾರ್ತಿಕ್ ವಿನಯ್ ಪರ ಮಾತನಾಡುತ್ತಿರುವುದು ಸಂಗೀತಾಗೆ ಇಷ್ಟವಾಗಿಲ್ಲ, ಇದೇ ವಿಚಾರಕ್ಕೆ ಇಬ್ಬರಿಗೂ ಜಗಳವಾಗುತ್ತಾದ ನೋಡಬೇಕಾಗಿದೆ.

Bigboss kannada season 10 latest promo Written Update; School task

ಮೇಷ್ಟ್ರನ್ನು ಪ್ರಶ್ನೆ ಮಾಡಿದ ಮೈಕಲ್

ಕಾರ್ತಿಕ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ ಮೇಲೆ ನಂತರ ಮೈಕಲ್ ತಿರುಗಿ ಕಾರ್ತಿಕ್‌ಗೆ ಪ್ರಶ್ನೆ ಕೇಳಿದ್ದಾರೆ. ನೀವು ರಾಜಕೀಯ ಮಾಡುತ್ತೀರಾ ಅಥವಾ ಬೇರೆಯವರ ಕುತಂತ್ರದ ರಾಜಕೀಯದಲ್ಲಿ ಭಾಗಿಯಾಗಿದ್ದೀರಾ? ಎಂಬ ಪ್ರಶ್ನೆ ಕೇಳಿದ್ದು ಇದಕ್ಕೆ ಕಾರ್ತಿಕ್ ಜೋರಾಗಿ ನಕ್ಕಿದ್ದಾರೆ. ಇಲ್ಲಿ ಮೈಕಲ್ ಹೇಳಿದ್ದು ನೋಡಿದರೆ ಸಂಗೀತಾ ಅವರು ಮಾಡುವ ರಾಜಕೀಯಕ್ಕೆ ಕಾರ್ತಿಕ್ ಬಲಿಯಾಗುತ್ತಿದ್ದಾರೆ ಎಂಬಂತೆ ಕಾಣುತ್ತಿದೆ. ಈ ಪ್ರಶ್ನೆಗೆ ಕಾರ್ತಿಕ್ ಏನು ಉತ್ತರಿಸಿದ್ದಾರೆ ಎಂಬುದನ್ನು ನಾವು ಬಿಗ್ ಬಾಸ್ ಎಪಿಸೋಡ್‌ನಲ್ಲಿ ನೋಡಿ ತಿಳಿದುಕೊಳ್ಳಬೇಕಾಗಿದೆ. ಯಾಕೆಂದರೆ ಪ್ರೋಮೋರಲ್ಲಿ ಕಾರ್ತಿಕ್ ಏನು ಉತ್ತರಿಸಿದ್ದಾರೆ ಎಂಬುದನ್ನು ತಿಳಿಸದೇ ಕುತೂಹಲ ಉಳಿಸಿಕೊಳ್ಳಲಾಗಿದೆ. ದಿನ 24 ಗಂಟೆ ವೀಕ್ಷಕರು ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ ಲೈವ್ ವೀಕ್ಷಿಸುವ ಅವಕಾಶವಿದೆ.

More from Filmibeat

English summary
Colors kannada bigboss Written Update on Bigboss season 10. Here is the details about kartik become a political teacher, sangeetha angry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X