BiggBoss: ಮನೆಮಂದಿಗೆ ಮತ್ತೆ ಬಂತು ಲಕ್ಷುರಿ ಬಜೆಟ್: ಪಾಯಿಂಟ್ಸ್ ಕೊಡಲು ತನಿಷಾ, ಸಂಗೀತಾ, ನಮತ್ರಾ ನಡುವೆ ಕಿರಿಕ್
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ದಿನಸಿ ಸಾಮಾಗ್ರಿಗಳನ್ನು ಕೊಡುವ ಪ್ರಮಾಣ ಕಡಿಮೆಯಾಗಿದೆ. ಮೊದಲು ಎರಡು ಚಪಾತಿ ತಿನ್ನುತ್ತಿದ್ದವರಿಗೆ ಈಗ ಒಂದೇ ಚಪಾತಿ ಸಿಗುತ್ತಿದೆ. ಅದಕ್ಕೆಲ್ಲ ಮುಖ್ಯ ಕಾರಣ ಏನೆಂದರೆ ಬಿಗ್ ಬಾಸ್ ಮನೆಯ ಸ್ಪರ್ದಿಗಳು ಲಕ್ಷುರಿ ಬಜೆಟ್ ಕಳೆದುಕೊಂಡಿರೋದು.
ಲಕ್ಷುರಿ ಬಜೆಟ್ ಟಾಸ್ಕ್‌ನಲ್ಲಿ ಕಾರ್ತಿಕ್ ಸಂಗೀತಾ ಹಾಗೂ ತನಿಷಾ ಈ ಮೂವರು ಕಳೆದ ಬಾರಿ ಪಾಯಿಂಟ್ಸ್ ಕಳೆದುಕೊಂಡು ಮನೆಗೆ ಬೇಕಾದ ಸಾಮಾಗ್ರಿಗಳು ಸರಿಯಾದ ರೀತಿಯಲ್ಲಿ ದೊರೆತಿರಲಿಲ್ಲ. ಬಂದಿದ್ದ ಸಾಮಗ್ರಿಗಳಲ್ಲೇ ಅಡುಗೆ ಮಾಡಲಾಗುತ್ತಿತ್ತು. ಆದರೆ ಈಗ ಬಿಗ್ ಬಾಸ್ ಮತ್ತೊಂದು ಚಾನ್ಸ್ ಕೊಟ್ಟಿದ್ದು ಇಲ್ಲಿ ಕಠಿಣ ಸವಾಲು ಎದುರಾಗಿದೆ.

ಸಿರಿ ಹಾಗೂ ಸಂಗೀತಾ ಇಬ್ಬರು ಅಡುಗೆ ಮನೆಯಲ್ಲಿದ್ದಾಗ ಮನೆಯಲ್ಲಿರುವ ಸ್ಕ್ರೀನ್ ಮೇಲೆ ಮನೆಗೆ ಬೇಕಾಗುವ ಪದಾರ್ಥಗಳನ್ನು ಪ್ರದರ್ಶಿಸಲಾಗಿದೆ. ಇದನ್ನು ನೋಡಿದ ಸಿರಿ ಎಲ್ಲರೂ ಬನ್ನಿ. ಮತ್ತೊಮ್ಮೆ ಲಕ್ಷುರಿ ಬಜೆಟ್ ಬಂದಿದೆ ಎಂದು ಕರೆದಿದ್ದಾರೆ. ಎಲ್ಲರೂ ಬಂದಿದ್ದು ಬಿಗ್ ಬಾಸ್ ಒಂದು ಸೂಚನೆ ನೀಡಿದ್ದಾರೆ. ಮನೆಯಲ್ಲಿರುವ ಎಲ್ಲಾ ಸದಸ್ಯರು ಕೂಡ ತಮ್ಮ ಬಳಿ ಇರುವ ಪಾಯಿಂಟ್ಸ್ ಬಳಸಿ ದಿನಸಿ ಸಾಮಗ್ರಿಗಳನ್ನು ಖರೀದಿ ಮಾಡಬಹುದಾಗಿದೆ. ಬಿಗ್ ಬಾಸ್ ಈ ಮಾತು ಹೇಳಿದ ಕೂಡಲೇ ಎಲ್ಲರೂ ಕೂಡ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನು ಇದೇ ವೇಳೆ ವಿನಯ್ ಎಲ್ಲರಿಗಿಂತ ಹೆಚ್ಚಾಗಿ ಮಾಲೀಕರ ಬಳಿ ಅತಿ ಹೆಚ್ಚು ಪಾಯಿಂಟ್ ಇದೆ ಎಂಬ ಮಾತನ್ನು ಆಡಿದ್ದಾರೆ.
ಇನ್ನು ವಿನಯ್ ಅಭಿಪ್ರಾಯ ಎಲ್ಲರಿಗೂ ಕೂಡ ಸರಿ ಅನಿಸಿದೆ. ಯಾಕೆಂದರೆ ಮನೆಯ ಮಾಲೀಕರಿಬ್ಬರೂ ಕೂಡ ಯಾವುದೇ ಟಾಸ್ಕ್ ಆಡದೇ ತಂಡ ಖರೀದಿ ಮಾಡಿ ಅವರ ಮೂಲಕ ಆಟವಾಡಿಸಿ ಗೆದ್ದಿದ್ದಾರೆ. ಈಗ ಮನೆ ಮಾಲೀಕರ ಬಳಿ ಇರುವ ಪಾಯಿಂಟ್ಸ್ ಬಳಸಿ ದಿನಸಿ ಸಾಮಾಗ್ರಿಗಳನ್ನು ಖರೀದಿ ಮಾಡಬಹುದಾಗಿದೆ. ಇದಕ್ಕೆ ಸಂಗೀತಾ ಒಪ್ಪಿಗೆ ನೀಡಿದಂತೆ ಕಾಣಿಸುತ್ತಿದ್ದು ತನಿಷಾ ಮಾತ್ರ ಒಪ್ಪಿಗೆ ನೀಡಿಲ್ಲ. ಹೊಸ ಪ್ರೋಮೋದಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ತನಿಷಾ ತಮ್ಮ ಬಳಿ ಇರುವ ಹಣ ನೀಡುವುದಿಲ್ಲ ಎಂದು ಹೇಳಿರುವಂತೆ ತೋರಿಸಲಾಗಿದೆ. ಈ ವಿಚಾರಕ್ಕೆ ತನಿಷಾ ಹಾಗೂ ನಮ್ರತಾ ನಡುವೆ ಮಾತಿನ ಚಕಮಕಿ ನಡೆದಿದೆ.
ದಿನಸಿ ಪಡೆಯಲು ಅವಕಾಶ ಪಡೆದ ಸ್ಪರ್ಧಿಗಳು
ವಿನಯ್ ಮಾಲೀಕರ ಬಳಿ ಅತಿ ಹೆಚ್ಚು ಪಾಯಿಂಟ್ಸ್ ಇದೆ. ಅವರೇ ದಿನಸಿ ಖರೀದಿ ಮಾಡಬಹುದು ಎಂದಾಗ ಸಂಗೀತಾ, ತನಿಷಾ ಬಳಿ ಬಂದು ಚರ್ಚೆ ನಡೆಸಿದ್ದಾರೆ. ನಾವಿಬ್ಬರೂ ಪಾಯಿಂಟ್ಸ್ ಹಂಚಿಕೆ ಮಾಡೋಣ ಎಂಬ ಮಾತನ್ನು ಸಂಗೀತಾ ಹೇಳಿದ್ದಾರೆ. ಈ ವೇಳೆ ತನಿಷಾ ಮನೆಯಲ್ಲಿ ನಾವೇ ಊಟ ಮಾಡೋದಿಲ್ಲ ಮನೆಯ ಎಲ್ಲಾ ಸದಸ್ಯರು ಕೂಡ ಊಟ ಮಾಡುತ್ತಾರೆ. ಎಲ್ಲರೂ ಶೇರ್ ಮಾಡಿದರೆ ಮಾತ್ರ ನಾನು ನೀಡುತ್ತೇನೆ ಎಂದಿದ್ದಾರೆ. ಇನ್ನು ಇದೇ ವಿಚಾರಕ್ಕೆ ನಮ್ರತಾ ವಿರುದ್ಧ ಕೂಗಾಡಿದ್ದಾರೆ.

ಪಾಯಿಂಟ್ಸ್ ಕೊಡುವುದಿಲ್ಲ ಎಂದ ತನಿಷಾ
ತನಿಷಾ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ನಿಮ್ಮೊಬ್ಬರಿಗೆ ಕಿರುಚಲು ಬರುವುದಿಲ್ಲ. ನನಗೂ ಕೂಡ ಕಿರುಚಲು ಬರುತ್ತದೆ ಎಂಬ ಮಾತನ್ನು ಹೇಳಿದ್ದಾರೆ. ಮನೆಯ ಇತರ ಸದಸ್ಯರು ಇಬ್ಬರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ನಮ್ರತಾ ಎಲ್ಲಾ ವಿಚಾರಕ್ಕೂ ಮಧ್ಯ ಪ್ರವೇಶ ಮಾಡುತ್ತಿರುವುದು ತನಿಷಾಗೆ ಇಷ್ಟವಾಗುತ್ತಿಲ್ಲ. ಇದೇ ರೀತಿ ಜಗಳವಾಡಿಕೊಂಡು ಈ ಬಾರಿಯೂ ಮನೆಯ ಸದಸ್ಯರು ಕಳೆದುಕೊಳ್ಳುತ್ತಾರಾ ನೋಡಬೇಕಿದೆ.
ಲಕ್ಷುರಿ ಬಜೆಟ್‌ನಲ್ಲಿ ಇರುವ ಸಾಮಾಗ್ರಿಗಳು
ಲಕ್ಷುರಿ ಬಜೆಟ್‌ನಲ್ಲಿ ಮನೆಗೆ ಅವಶ್ಯಕವಾಗಿರುವ ಧನಿಯಾ, ಪುದೀನ, ಪಾಲಕ್ ಸೊಪ್ಪು, ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಕರಿಬೇವು, ಹಸಿರು ಬೀನ್ಸ್, ಸೇಬಿನ ಹಣ್ಣು, ಮೊಸಂಬಿ ಹಣ್ಣು, ಬಾಳೆಹಣ್ಣು, ದಾಳಿಂಬೆ, ಕಿತ್ತಳೆ ಹಣ್ಣು ಇಷ್ಟು ಕೊಡಲಾಗಿದೆ. ಇದಕ್ಕೆ ತಕ್ಕನಾಗಿ ಪಾಯಿಂಟ್ಸ್ ಕೂಡ ಇಡಲಾಗಿದೆ. ಒಂದು ಕೆಜಿ ಅಕ್ಕಿ, ಗೋಧಿಗೆ 750 ಪಾಯಿಂಟ್ ಇಡಲಾಗಿದ್ದು ಮನೆಯ ಸದಸ್ಯರ ಬಳಿ ಇರುವ ಹಣದಿಂದ ಇದೆಲ್ಲವನ್ನು ಕೂಡ ಖರೀದಿಸಲು ಸಾಧ್ಯವಿಲ್ಲ. ಅವಶ್ಯಕತೆ ಇರುವ ಸಾಮಾಗ್ರಿ ಖರೀದಿ ಮಾಡಬೇಕಾಗಿದೆ. ಯಾರು ಮನೆಗಾಗಿ ತ್ಯಾಗ ಮಾಡುತ್ತಾರೆ ನೋಡಬೇಕಾಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಬಿಗ್‌ಬಾಸ್ ಶೋ ಲೈವ್ ವೀಕ್ಷಿಸುವ ಅವಕಾಶ ಇದೆ.


Click it and Unblock the Notifications











