Bigg Boss: ಕೊನೆಗೂ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದವರು ಇವರೇ ನೋಡಿ..

By ಪ್ರಿಯಾ ದೊರೆ

ಇನ್ನೆರಡು ವಾರಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ -10 ಅಂತ್ಯವಾಗಲಿದೆ. ಇದು ಸ್ಪರ್ಧಿಗಳಿಗೂ ಬೇಸರ ಮೂಡಿಸಿದ್ದು, ಬಿಗ್ ಬಾಸ್ ಅಭಿಮಾನಿಗಳು ಈಗಾಗಲೇ ಸೀಸನ್- 11 ಬೇಗ ಶುರುವಾಗಲಿ ಎಂದು ಆಲೋಚಿಸುತ್ತಿದ್ದಾರೆ.

ಸೀಸನ್- 10 ರಲ್ಲಿರುವ ಸ್ಪರ್ಧಿಗಳು ಹೆಚ್ಚು ಅಗ್ರೆಸ್ಸಿವ್ ಆಗಿ ಆಡಿ, ಒಂದಷ್ಟು ಕಾಂಟ್ರವರ್ಸಿಗಳನ್ನು ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದಾರೆ.

Bigboss kannada season 10 weekend elimination show, january 14th episode

ಇಷ್ಟೆಲ್ಲಾ ಗೊಂದಲದ ನಡುವೆಯೂ ಬಿಗ್ ಬಾಸ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಸಕ್ಸಸ್ ಆಗಿದ್ದು, ಈ ಸೀಸನ್‌ನ ವಿನ್ನರ್ ಪಟ್ಟ ಯಾರ ಪಾಲಾಗುತ್ತೆ? ರನ್ನರ್ ಅಪ್ ಲೇಬಲ್ ಯಾರಿಗೆ ಸಿಗುತ್ತೆ? ಎಂಬ ಕುತೂಹಲ ಹೆಚ್ಚಿಸಿದೆ.

ಒಂದು ಸ್ನೇಹ ಬಿಟ್ಟು, ಮತ್ತೊಂದನ್ನು ಆರಿಸಿಕೊಂಡ ಸ್ಪರ್ಧಿಗಳು

ಯಾರ ಸ್ನೇಹ ಮನೆಯವರೆಗೂ ತೆಗೆದುಕೊಂಡು ಹೋಗುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಪ್ರತಾಪ್, ನಮ್ರತಾ ಸ್ನೇಹವನ್ನು ಬಿಟ್ಟು ಸಂಗೀತಾ ಗೆಳೆತನವನ್ನು ಬಿಗ್ ಬಾಸ್ ಮನೆಯ ಹೊರಗೂ ಮುಂದುವರೆಸಲು ಬಯಸಿದ್ದಾರೆ. ಸಂಗೀತಾ, ವಿನಯ್ ಹಾಗೂ ಕಾರ್ತಿಕ್ ಎರಡೂ ಸ್ನೇಹವನ್ನು ರಿಜೆಕ್ಟ್ ಮಾಡಿದ್ದಾರೆ. ತನಿಷಾ, ಕಾರ್ತಿಕ್ ಸ್ನೇಹ ಬಿಟ್ಟು, ವರ್ತೂರ್ ಸಂತೋಷ್ ಫ್ರೆಂಡ್‌ಶಿಪ್ ಖುಷಿ ಪಟ್ಟಿದ್ದಾರೆ. ನಮ್ರತಾ, ಸಂಗೀತಾ ಸ್ನೇಹಕ್ಕೆ ಬ್ರೇಕ್ ಹಾಕಿ ವಿನಯ್ ಅವರ ಗೆಳೆತನವನ್ನು ಬಯಸಿದ್ದಾರೆ. ಕಾರ್ತಿಕ್ ಮಾತ್ರ ನಮ್ರತಾ ಸ್ನೇಹ ಬೇಕು ಎಂದು ಹೇಳಿದ್ದು, ಸಂಗೀತಾ ಸ್ನೇಹವನ್ನು ಬಿಟ್ಟಿದ್ದಾರೆ. ವಿನಯ್, ನಮ್ರತಾ ಸ್ನೇಹವನ್ನು ಇಷ್ಟಪಟ್ಟಿದ್ದು, ಕಾರ್ತಿಕ್ ಸ್ನೇಹವನ್ನು ಬಿಟ್ಟುಕೊಟ್ಟಿದ್ದಾರೆ. ತುಕಾಲಿ ಸಂತೋಷ್, ವರ್ತೂರ್ ಸ್ನೇಹವನ್ನು ಇಷ್ಟಪಟ್ಟಿದ್ದಾರೆ. ಸಂಗೀತಾ ಸ್ನೇಹ ಸ್ಟ್ರಾಂಗ್ ಆಗಿ ಇಲ್ಲ ಎಂದು ಹೇಳಿ ರಿಜೆಕ್ಟ್ ಮಾಡಿದ್ದಾರೆ. ವರ್ತೂರು ಸಂತೋಷ್ ಕೂಡ ತುಕಾಲಿ ಸಂತೋಷ್ ಸ್ನೇಹವನ್ನೇ ಮುಂದುವರೆಸಿದ್ದು, ಪ್ರತಾಪ್ ಅನ್ನು ಬಿಟ್ಟಿದ್ದಾರೆ.


ಸೇಫ್ ಆದ ಸ್ಫರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ಭಾನುವಾರ ಮೊದಲು ವಿನಯ್ ಸೇಫ್ ಆಗಿದ್ದು, ಬಳಿಕ ತನಿಷಾ ಎಲಿಮಿನೇಷನ್ ಬೆಂಕಿಯಿಂದ ಪಾರಾಗಿದ್ದಾರೆ. ಮೂರನೆಯದಾಗಿ ಕಾರ್ತಿಕ್ ಸೇವ್ ಆಗಿದ್ದು, ವರ್ತೂರ್ ಸಂತೋಷ್ ಮತ್ತು ತುಕಾಲಿ ಸಂತೋಷ್ ಇಬ್ಬರಲ್ಲಿ ಒಬ್ಬರು ಉಳಿಯಬೇಕಿತ್ತು. ಇಬ್ಬರೂ ಕೂಡ ಒಬ್ಬರ ಹಿತವನ್ನು ಮತ್ತೊಬ್ಬರು ಬಯಸಿದ್ದಾರೆ. ತುಕಾಲಿ ಸಂತೋಷ್ ಅವರು ವರ್ತೂರ್ ಇಲ್ಲೇ ಉಳಿಯಬೇಕು ಗೆದ್ದು ಬರಬೇಕು ಎಂದು ಬಯಸಿದ್ದರೆ, ವರ್ತೂರ್ ಸಂತೋಷ್ ಕೂಡ ತುಕಾಲಿ ಗೆಲುವನ್ನು ಬಯಸಿದ್ದಾರೆ. ಇಬ್ಬರೂ ತಮ್ಮ ಸ್ನೇಹವನ್ನು ಸುಲಭವಾಗಿ ಬಿಟ್ಟು ಕೊಡಲಿಲ್ಲ.


ಸಂತು-ಪಂತು ಸ್ನೇಹದಿಂದ ಎಲಿಮಿನೇಷನ್ ಕ್ಯಾನ್ಸಲ್

ರೈತನಾಗಿ ಬಿಗ್ ಬಾಸ್ ಮನೆಗೆ ಬಂದ ವರ್ತೂರ್ ಬಹಳ ನಿಧಾನವಾಗಿ ಮನೆಗೆ ಒಗ್ಗಿಕೊಂಡರು. ಆಟವಾಡಲು ಇತ್ತೀಚೆಗಷ್ಟೇ ಆರಂಭಿಸಿದ್ದು, ತಾವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಇರಲು ಅರ್ಹರು ಎಂಬುದನ್ನು ತೋರಿಸಿಕೊಟ್ಟರು. ಅದರ ಜೊತೆಗೆ ತುಕಾಲಿ ಸಂತೋಷ್ ಅವರೊಂದಿಗೆ ಒಳ್ಳೆಯ ಗೆಳೆತನವನ್ನು ಬೆಳೆಸಿಕೊಂಡಿದ್ದು, ಇಬ್ಬರದ್ದು ಬಿಡಿಸಲಾರದ ಬಂಧವಾಗಿದೆ. ಆದರೆ, ಇಬ್ಬರಲ್ಲಿ ಒಬ್ಬರು ಮನೆಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂದಿದ್ದು, ವರ್ತೂರ್ ಸಂತೋಷ್ ಅವರು ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಟ್ ಆಗುವ ಹಿಂದಿನ ರಾತ್ರಿ ವರ್ತೂರ್ ಮತ್ತು ತುಕಾಲಿ ಅವರಿಬ್ಬರೂ ಕೂಡ ಹೊರಗೆ ಹೋಗುವುದನ್ನು ಗೆಸ್ ಮಾಡಿದ್ದರು. ಈ ಬಗ್ಗೆ ಬಾಲ್ಕನಿಯಲ್ಲಿ ಕೂತು ಮಾತನಾಡಿದ್ದರು. ಇದರ ವೀಟಿಯನ್ನು ತೋರಿಸಿದ ಬಳಿಕ ಇಬ್ಬರೂ ಇನ್ನಷ್ಟು ನೊಂದುಕೊಂಡರು.

Bigboss kannada season 10 weekend elimination show, january 14th episode


ನೋ ಎಲಿಮಿನೇಷನ್ ವೀಕ್ ಎಂದ ಕಿಚ್ಚ

ಈ ವಾರ ಯಾಕೆ ಎಲಿಮಿನೇಷನ್ ಇಲ್ಲ ಎಂಬ ವಿಚಾರವನ್ನು ಕಿಚ್ಚ ಸುದೀಪ್ ಸಸ್ಪೆನ್ಸ್ ಅನ್ನು ಕ್ರಿಯೇಟ್ ಮಾಡಿದ್ದರು. ಸ್ವಲ್ಪ ಹೊತ್ತು ಎಲಿಮಿನೇಷನ್ ಬಿಸಿಯನ್ನು ಮುಟ್ಟಿಸಿದ ಸುದೀಪ್ , ಬಳಿಕ ಸತ್ಯ ಹೇಳಿ ಮತ್ತೆ ಸಂತು-ಪಂತು ಮೊಗದಲ್ಲಿ ನಗು ಮೂಡಿಸಿದರು. ಸ್ಪರ್ಧಿಗಳಿಗೆ ಬುದ್ಧಿ ಹೇಳಿ ಸಂಕ್ರಾಂತಿ ಹಬ್ಬದ ವಿಶ್ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 10 ಮುಗಿಯಲು ಇನ್ನು ಎರಡೇ ವಾರವಿದ್ದು, 8 ಸ್ಪರ್ಧಿಗಳನ್ನು ಹೇಗೆಲ್ಲಾ ಎಲಿಮಿನೇಟ್ ಮಾಡಬಹುದು ಎಂಬ ಕುತೂಹಲವೂ ಮೂಡಿದೆ. ಈ ವಾರ ಎಲಿಮಿನೇಷನ್ ಮಾಡದ್ದಕ್ಕೆ ಕಾರಣವೇನಿರಬಹುದುದು ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿದೆ.

More from Filmibeat

English summary
No eviction again on Bigg Boss kannada season 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X