BBK 11: ಬಿಗ್ ಬಾಸ್ ಮನೆಗೆ ಭಟ್ರು; ಖುಷಿಯಾಗಿರುವವರಿಗೆ ತಿಳಿಯುತ್ತಾ ಕಿಚ್ಚನ ನೋವು?

By ಎಸ್ ಸುಮಂತ್

ಬಿಗ್ ಬಾಸ್ ವಾರಪೂರ್ತಿ ನೋಡುವವರಿಗಿಂತ ವೀಕೆಂಡ್‌ನಲ್ಲಿ ನೋಡುಗರ ಸಂಖ್ಯೆ ಹೆಚ್ಚು. ಬಿಗ್ ಬಾಸ್ ಮನೆಯ ಸದಸ್ಯರು ಮಾಡುವ ತಪ್ಪುಗಳನ್ನು ಕಿಚ್ಚ ಸುದೀಪ್ ಅಚ್ಚುಕಟ್ಟಾಗಿ ತಿದ್ದುತ್ತಾರೆ. ಆಗಾಗ ಬಿಗ್ ಬಾಸ್ ಮನೆ ವಾರೆಕೋರೆಯಾಗುತ್ತಲೆ ಇರುತ್ತದೆ. ವಾರಾಂತ್ಯದಲ್ಲಿ ಇದೆಲ್ಲವನ್ನು ಸರಿ ಮಾಡ್ತಾ ಇದ್ದದ್ದು ಕಿಚ್ಚ ಸುದೀಪ್. ಒಂದಷ್ಟು ಕಾಲೆಳೆಯೋದು, ಒಂದಷ್ಟು ಟಾಸ್ಕ್ ಆಡಿಸೋದು, ಒಂದಷ್ಟು ಮನರಂಜನೆಯನ್ನು ನೀಡುವ ಕೆಲಸವನ್ನು ಮಾಡುತ್ತಾರೆ.

ಈ ವಾರ ಕಿಚ್ಚನ ಗೈರು ಎದ್ದು ಕಾಣುತ್ತಿದೆ. ಅಪಾರ ದುಃಖದಲ್ಲಿರುವ ಸುದೀಪ್ ಅವರನ್ನು ಕರೆಯುವುದಕ್ಕೆ ಕಲರ್ಸ್ ಅವರಿಗೂ ಸಾಧ್ಯವಿಲ್ಲ. ಹೀಗಾಗಿ ಇಂದು ಕಿಚ್ಚನ ಅನುಪಸ್ಥಿತಿಯಲ್ಲಿಯೇ ಬಿಗ್ ಬಾಸ್ ನಡೆಯಲಿದೆ. ಈ ಬೇಸರ ಕರುನಾಡ ಮಂದಿಗೆ ಇದ್ದರೂ ಕೂಡ, ಸುದೀಪ್ ಅವರ ನೆಮ್ಮದಿಯನ್ನು, ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತಿದ್ದಾರೆ.

Bigboss kannada season 11 Director Yogaraj bhat special entry to house

ಬರುತ್ತಲೇ ಕವನಗಳ ಸುರಿಮಳೆ

ಬಿಗ್ ಬಾಸ್ ಮನೆಗೆ ಆಗಾಗ ಅತಿಥಿಗಳ ಆಗಮನ ಆಗ್ತಾ ಇರುತ್ತೆ. ನಿನ್ನೆಯಷ್ಟೇ ನಿರೂಪಕಿ ರಾಧಾ ಹಿರೇಗೌಡರ್ ಅತಿಥಿಯಾಗಿ ಬಂದಿದ್ದರು. ಬಿಗ್ ಬಾಸ್ ಮನೆ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಂದಷ್ಟು ಸರಿ ತಪ್ಪುಗಳ ಬಗ್ಗೆಯೂ ಅರ್ಥ ಮಾಡಿಸಿದ್ದರು. ಇದೀಗ ವೀಕೆಂಡ್ ನಲ್ಲಿ ವಿಕಟ ಕವಿ ಯೋಗರಾಜ್ ಭಟ್ರು ಬಂದಿದ್ದಾರೆ. ಬರುತ್ತಲೇ ನಮಸ್ತೆಗಳು, ವ್ಯವಸ್ಥೆಗಳು, ಸ್ಚಾಗತಗಳು ಅಂತ ಹೇಳುತ್ತಾ ಬಂದಿದ್ದಾರೆ.

ಹನುಮಂತುಗೆ ಹೊಸ ಟಾಸ್ಕ್

ಯೋಗರಾಜ್ ಭಟ್ರು ಬಂದಿದ್ದಕ್ಕೆ ಮನೆ ಮಂದಿ ಫುಲ್ ಖುಷಿಯಾಗಿದ್ದಾರೆ. ಓಡಿ ಬಂದು ಸ್ವಾಗತ ಮಾಡಿದ್ದಾರೆ. ಮಾತು ಕತೆ, ಊಟ ಉಪಚಾರ ಎಲ್ಲವನ್ನು ವಿಚಾರಿಸಿ ಆಗಿದೆ. ಉತ್ತರ ಕರ್ನಾಟಕದ ಹುಡುಗ ಹನುಮಂತುಗಾಗಿ ಭಟ್ರು ಹುಡುಕಾಡಿದ್ದಾರೆ. ಆತನ ಮಾತು, ಆತನ ಇನೋಸೆನ್ಸ್ ಎಲ್ಲವೂ ಭಟ್ಟರಿಗೆ ಇಷ್ಟವಾಗಿ ಬಿಟ್ಟಿದೆ. ಅದರಲ್ಲೂ ಹನುಮಂತು ಕುಂತಲ್ಲೇ ಹಾಡು ಕಟ್ಟುವ ರೀತಿಗೆ ವಿಕಟಕವಿ ಮನಸೋಲಲೇ ಬೇಕಲ್ಲ.

ಭಟ್ಟರ ಮಾತಿಗೆ ಮಾನಸಾ

ಭಟ್ಟರ ಬಳಿ ಹನುಮಂತ ಬಂದಿದ್ದಾರೆ. ಆಗ ಭಟ್ರು ಹೊಸದೊಂದು ಟಾಸ್ಕ್ ನೀಡಿದ್ದಾರೆ. ಹನುಮಂತು ಕುರಿ ಕಾಯುವ ಮೂಲಕವೇ ಫೇಮಸ್ ಆಗಿರೋದು. ಹೀಗಾಗಿ ಅಲ್ಲಿರೋರಿಗೆಲ್ಲ ಕುರಿಯ ಹೆಸರನ್ನೇ ಹೇಳಿ ಪರಿಚಯ ಮಾಡಿಕೊಡುವಂತ ಟಾಸ್ಕ್ ನೀಡಿದ್ದಾರೆ. ಗೋಲ್ಡ್ ಸುರೇಶನಿಗೆ ಕಳ್ಳ ಟಗರು ಎಂದಿದ್ದಾರೆ. ಧರ್ಮ ಅವರಿಗೆ ಕೋಡಿಲ್ಲದ ಟಗರು ಎಂದಿದ್ದಾರೆ ಹನುಮಂತ. ದಿಡ್ಡ ಫ್ರಾಗಿ ಮಾನಸ ಅವರ ಬಗ್ಗೆ ಹೇಳು ಎಂದಾಗ, ಸುಮ್ನಿರಿ ಸರ್ ಇಲ್ಲಿ ಇರೋರೆಲ್ಲ ಹಾಗೇ ಅಂತಾರೆ ಎಂದಿದ್ದಾರೆ. ಆಗ ಭಟ್ರು ಹೊರಗಡೆಯೂ ಹಾಗೇ ಅನ್ನೋದು ಎಂಬ ಸುಳಿವು ನೀಡಿದ್ದಾರೆ. ಇದನ್ನು ಕೇಳಿದ ಮಾನಸಾಗೆ ಶಾಕ್ ಆಗಿದೆ.

ಸುದೀಪ್ ಸರ್ ಬಗ್ಗೆ ಕೇಳ್ತಾರಾ?

ಶನಿವಾರ, ಭಾನುವಾರದ ಪಂಚಾಯ್ತಿಗೆ ಹೇಗೆ ರೆಡಿಯಾಗಬೇಕೋ ಹಾಗೆಯೇ ಎಲ್ಲರೂ ರೆಡಿಯಾಗಿದ್ದಾರೆ.‌ ಆದರೆ ಕಿಚ್ಚ ಮಾತ್ರ ಇಂದು ಕಾಣಿಸಿಕೊಳ್ಳಲ್ಲ. ಯೋಗರಾಜ್ ಭಟ್ ಬಂದಿದ್ದಾರೆ ಅಷ್ಟು ಮಾತ್ರ ಗೊತ್ತು. ಕಿಚ್ಚ ಯಾಕೆ ಬಂದಿಲ್ಲ ಎಂಬುದು ಏನಾದ್ರೂ ಬಿಗ್ ಬಾಸ್ ಸ್ಪರ್ಧಿಗಳಿಗೆ ತಿಳಿಯುತ್ತಾ ಎಂಬುದನ್ನು ಫುಲ್ ಎಪಿಸೋಡಿನಲ್ಲಿ ನೋಡಬೇಕಾಗಿದೆ.

More from Filmibeat

English summary
Colors kannada bigboss Written Update on Bigboss season 11 October 26th episode. Here is the details about Yogaraj bhat in Bigboss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X