BBK 11: ಈ ಬಾರಿ ಸ್ಪರ್ಧಿಗಳ ನಡುವೆಯೇ ಬೆಂಕಿ ಹಚ್ಚೋ ಕೆಲಸ ನಡೀತಿದ್ಯಾ?

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಈಗ ಸೀಸನ್ 11ಕ್ಕೆ ಬಂದು ನಿಂತಿದೆ. ಸೀಸನ್ 9ರವರೆಗೂ ನಡೆದು ಬಂದ ಹಾದಿಯೇ ಒಂದು ರೀತಿಯಾದರೆ 10 ಹಾಗೂ 11 ಬೇರೆಯದ್ದೇ ಮಗ್ಗುಲಿಗೆ ಹೊರಳಿದೆ. ಬಿಗ್ ಬಾಸ್ ಯಾರೆಂಬುದು ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ. ಅಶರೀರವಾಣಿಯ ಮೂಲಕವಷ್ಟೇ ಗೊತ್ತಿರೋದು. ಮನೆಯೊಳಗೆ ಹೋದ ಸ್ಪರ್ಧಿಗಳ ಕೊನೆಯ ಬೇಡಿಕೆಯೇ ಬಿಗ್ ಬಾಸ್ ನೋಡಬೇಕು ಎಂಬುದು. ಆದರೆ ಆ ಆಸೆಯೊಂದು ಈಡೇರಿಲ್ಲ.

ಬಿಗ್ ಬಾಸ್ ಇಷ್ಟು ಸೀಸನ್‌ನಲ್ಲಿ ಒಂದಷ್ಟು ಬಾಂಧವ್ಯ ಬೆರೆತಿತ್ತು, ನಿಜವಾದ ಪ್ರೀತಿ ಮೊಳಕೆಯೊಡೆದಿತ್ತು, ಒಂಟಿತನಕ್ಕೊಂದಿಷ್ಟು ಗೆಳೆಯರಾಗುತ್ತಿದ್ದರು, ಮನೆಯ ನಂಟು ಮುಗಿಯುತ್ತಿದೆ ಎನ್ನುವಾಗ ಹೊರಗಿನ ಪ್ರಪಂಚವೇ ಬೇಡ ಎನ್ನುವಷ್ಟು ಬಂಧ ಬೆರೆತು ಹೋಗಿರುತ್ತಿತ್ತು. ಆದರೆ ಸೀಸನ್ 10 ಹಾಗೂ 11ರಲ್ಲಿ ಇಷ್ಟೆಲ್ಲಾ ಭಾವನೆಗಳು ಕಾಣುವುದಕ್ಕೆ ಸಿಗುತ್ತಿಲ್ಲ. ಇದು ಸ್ಪರ್ಧಿಗಳ ನಡೆಗೆ ಬಿಟ್ಟಿದ್ದು. ಆದರೆ ಅದ್ಯಾಕೋ ಬಿಗ್ ಬಾಸ್ ಬದಲಾಗಿದ್ದಾರೆ ಎನಿಸುತ್ತಿದೆ. ಅವರೇ ತಂದಿಡುವ ಕೆಲಸ ಶುರು ಹಚ್ಚಿಕೊಂಡಿದ್ದಾರೆ ಎನಿಸುತ್ತಿದೆ.

Bigboss kannada season 11 is bigg boss playing a double game

ಯಾರ ಬಗ್ಗೆ ಯಾರು ಮಾತಾಡಿದ್ರು?

ಮನೆಯವರ ಮುಂದೆ ಬೆನ್ನ ಹಿಂದೆ ಮಾತಾಡಿದ್ದೆಲ್ಲ ವಿಡಿಯೋವನ್ನು ಪ್ಲೇ ಮಾಡಿದ್ದಾರೆ. 'ಕಣ್ಣಮುಂದೆ ಕಾಣಿಸ್ತಾ ಇದೆ ಹೊಟ್ಟೆಕಿಚ್ಚು ಪಟ್ಟಿದ್ದು ಅಂತ ಐಶ್ವರ್ಯಾ, ಭವ್ಯಾ ಬಗ್ಗೆ ಮಾತಾಡಿದರೆ, ಒಂದು ಹಕ್ಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ತ್ರಿವಿಕ್ರಮ್ ಹೇಳಿದ್ದಾರೆ. ಮೊದಲೇ ತ್ರಿವಿಕ್ರಮ್ ಹಾಗೂ ಮೋಕ್ಷಿತಾಗೆ ಅಷ್ಟಕ್ಕೆ ಅಷ್ಟೇ. ಈ ಮಾತು ಕೇಳಿ ರೊಚ್ಚಿಗೆದ್ದ ಮೋಕ್ಷಿತಾ ಅಕ್ಕ ತಂಗಿ ಹಿಂದೆ ಹುಟ್ಟಿದವರು ಈ ರೀತಿ ಮಾತಾಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ'

ಬಿಗ್ ಬಾಸ್ ಈ ರೀತಿ ಮಾಡಿದ್ದೇಕೆ?

ತ್ರಿವಿಕ್ರಮ್ ಇದೆಲ್ಲ ಕೇಳಿ ಶಾಕ್ ಆಗಿದ್ದಾರೆ. ಇಷ್ಟು ದಿನ ಗೋಮುಖ ವ್ಯಾಘ್ರನಂತೆ ಇರಲಿಲ್ಲ, ಇನ್ಮೇಲೆ ಇರ್ತೀನಿ ಎಂದಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ಕ್ಯಾಮೆರಾ ಮುಂದೆ ಮಾತಾಡಿದ ಮಾತುಗಳು ವೀಕ್ಷಕನಿಗಷ್ಟೆ ಗೊತ್ತಾಗುತ್ತಿತ್ತು. ಒಳಗೆ ನೋಡಲು ಹೋದವರು ಕೂಡ ಸ್ಪರ್ಧಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅವರ ಗಮನಕ್ಕೆ ತರುವಂತೆ ಇರಲಿಲ್ಲ. ಹೀಗಾಗಿ ಸ್ಪರ್ಧಿಗಳ ರಿಯಾಲಿಟಿ ಹೊರಗೆ ಕಾಣಿಸ್ತಾ ಇತ್ತು.

Bigboss kannada season 11 is bigg boss playing a double game

ಬಿಗ್ ಬಾಸ್ ತಂದಿಡುವ ಕೆಲಸ ?

ಸ್ಪರ್ಧಿಗಳ ತಪ್ಪೇನು, ತಾವೂ ಹೊರಗೆ ಹೇಗೆ ಕಾಣಿಸ್ತಾ ಇದ್ದೀವಿ ಅನ್ನೋದು ಗೊತ್ತಾದ್ರೆ ಅದೆಲ್ಲದಕ್ಕೂ ಮೇಕಪ್ ಮಾಡಿ, ರಿಯಲ್ ಕ್ಯಾರೆಕ್ಟರ್ ಹೊರಗೆ ಬರದಂತೆ ಕಾಪಾಡಿಕೊಳ್ಳುತ್ತಾರೆ. ಈಗ ಬಿಗ್ ಬಾಸ್, ಸ್ಪರ್ಧಿಗಳಿಗೆ ಅಲರ್ಟ್ ಮಾಡುತ್ತಿದೆ ಎನಿಸುತ್ತಿದೆ. ಎಲ್ಲೋ ಕೂತು, ಆ ಸಮಯಕ್ಕೆ ಮಾತಾಡಿದ್ದನ್ನು ಸ್ಪರ್ಧಿಗಳ ಮುಂದೆ ಹಾಕಿದರೆ, ಬಿಗ್ ಬಾಸ್ ಇದೆಲ್ಲವನ್ನು ಅಬ್ಸರ್ವ್ ಮಾಡ್ತಾ ಇದೆ, ಇನ್ಮುಂದೆ ಹೀಗೆ ಇರೋದು ಬೇಡ ಎಂಬ ನಾಟಕ ಶುರು ಮಾಡುತ್ತಾರೆ. ಬಿಗ್ ಬಾಸ್ ಒಂಥರ ಅವರವರ ನಡುವೆ ತಂದಿಟ್ಟ ಕೆಲಸ ಮಾಡಿದೆ.

ಬಿಗ್‌ಬಾಸ್ ಹೊಸ ಆಟ?

ಬಿಗ್ ಬಾಸ್ ಮನೆಗೆ ಪ್ರತಿ ವರ್ಷ ಕೂಡ ಒಂದೊಂದು ತೆರನಾದ ಸ್ಪರ್ಧಿಗಳು ಬರುತ್ತಾರೆ. ಒಬ್ಬೊಬ್ಬರದ್ದು ವಿಭಿನ್ನ ಗುಣ, ವಿಭಿನ್ನ ಮನಸ್ಥಿತಿ. ಇನ್ನೊಬ್ಬರ ಬಗ್ಗೆ ಮಾತನಾಡುವುದೇ ಕೆಲವೊಬ್ಬರಿಗೆ ತೃಪ್ತಿ ಕೊಡುತ್ತದೆ. ಇನ್ನೊಂದಷ್ಟು ಜನರಿಗೆ ಬೇರೆಯವರ ವಿರುದ್ಧ ತಂದಿಡುವುದೇ ಸುಖ ಕೊಡುತ್ತೆ. ಇಷ್ಟು ಸೀಸನ್‌ನಲ್ಲಿ ಎಲ್ಲರನ್ನು ನೋಡಿ ನೋಡಿ ಬಿಗ್ ಬಾಸ್ ಮನಸ್ಥಿತಿ ಕೂಡ ಅತ್ತ ಕಡೆಗೆ ವಾಲಿಬಿಡ್ತಾ ಎಂಬ ಅನುಮಾನ ಕಾಡುತ್ತಿದೆ.

More from Filmibeat

English summary
BBK 11: Here is the details about Bigg Boss create problems between the contestants;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X