BBK10: ಕ್ಯಾಪ್ಟೆನ್ಸಿ ಟಾಸ್ಕ್‌ಗಾಗಿ ವಿನಯ್ ಜೊತೆಗೆ ತುಕಾಲಿ ಕಿರಿಕ್: ಸ್ನೇಹಿತರೇ ಶತ್ರುಗಳಾದ್ರಾ?

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವು ಕ್ಯಾಪ್ಟನ್ ಆಯ್ಕೆಗಾಗಿ ಟಾಸ್ಕ್‌ ನೀಡಲಾಗುತ್ತದೆ. ಯಾರು ಆಟವನ್ನು ಆಡಬೇಕು ಎಂಬುದನ್ನು ಮನೆಯ ಸದಸ್ಯರೇ ನಿರ್ಧಾರವನ್ನು ಮಾಡುತ್ತಾರೆ. ಇನ್ನು ಈ ವಾರವು ಸಹ ಕ್ಯಾಪ್ಟನ್ ಆಯ್ಕೆಗೆ ಯಾರು ಯಾರು ಟಾಸ್ಕ್ ಆಡಬೇಕು ಎನ್ನುವ ಚರ್ಚೆ ವೇಳೆ ತುಕಾಲಿ ಸಂತೋಷ್ ಹಾಗೂ ವಿನಯ್ ನಡುವೆ ಕಿರಿಕ್ ಆಗಿದೆ. ಇಷ್ಟು ದಿನ ಮಿತ್ರರಂತೆ ಇದ್ದವರು ಈಗ ತಮ್ಮ ತಮ್ಮಲ್ಲೇ ಜಗಳ ಆಡಿಕೊಳ್ಳುತ್ತಾ ಇದ್ದಾರೆ.

ವಿನಯ್ ಮಾತಿಗೆ ತುಕಾಲಿ ಸಂತೋಷ್ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಮಾತನ್ನ ನಾನು ಒಪ್ಪಿಕೊಳ್ಳೋದಿಲ್ಲ, ನೀವು ಹೇಳಿದಂತೆಯೇ ಮನೆಯಲ್ಲಿ ನಡೆಯಬೇಕಾ? ಎಂದು ತುಕಾಲಿ ಸಂತೋಷ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Bigboss season 10: fight breaks out between tukali santhosh and vinay for captaincy task

ಬಿಗ್ ಬಾಸ್ ಮನೆಯ ಸದಸ್ಯರಿಗೆ ಎಕ್ಕಾ, ರಾಜ, ರಾಣಿ ಜೋಕರ್‌ನ್ನು ಕೊಡಬೇಕು ಎಂಬ ಒಂದು ಆಟವನ್ನು ಆಡಿಸಿದಾಗ ವಿನಯ್‌ಗೆ ಆನೆ ರಾಜ ಎಂಬ ಪಟ್ಟವನ್ನು ಮನೆಯ ಸದಸ್ಯರು ಕೊಟ್ಟಿದ್ದರು. ಈ ಬಗ್ಗೆ ವರ್ತೂರು ಸಂತೋಷ್ ಬಳಿ ತುಕಾಲಿ ಸಂತೋಷ್ ಈಗ ಆನೆಗೆ ಮತ್ತಷ್ಟು ಮದ ಬಂದಿದೆ ಎಂದು ಮಾತನಾಡಿದರು. ವರ್ತೂರು ಸಂತೋಷ್ ಆನೆಯ ಮದ ಇಳಿಸುವ ಮಾವುತರು ನಾವಾಗಬೇಕು ಎಂದು ಹೇಳಿದ್ದರು. ಈ ಮಾತನ್ನೇ ಸೀರಿಯಸ್ ಆಗಿ ತಂದುಕೊಂಡಿರುವ ತುಕಾಲಿ ಸಂತೋಷ್ ಈಗ ವಿನಯ್ ಜೊತೆ ಕಿರಿಕ್ ಇಳಿದಿದ್ದಾರೆ.

ವಿನಯ್, ನಮ್ರತಾ ಬಳಿ ತುಕಾಲಿ ಸಂತೋಷ್ ಬಗ್ಗೆ ಹೇಳಿದ್ದರು. ತುಕಾಲಿ ಸಂತೋಷ್ ಅವರ ಹಿಂದೆ ಇದ್ದಾರೆ. ನಮ್ಮದೇ ಟೀಮ್‌ನಲ್ಲಿ ಇದ್ದುಕೊಂಡು ನಮಗೆ ಮೋಸ ಮಾಡಿದರು ಎಂದಿದ್ದರು. ನಂತರ ನಮ್ರತಾ, ವರ್ತೂರು ಸಂತೋಷ್ ಎಲಿಮಿನೇಷನ್ ಆಗಿ ಹೊರಗೆ ಹೋದರೆ ಮತ್ತೆ ತುಕಾಲಿ ಸಂತೋಷ್ ನಮ್ಮ ಟೀಮ್‌ಗೆ ಬರುತ್ತಾರೆ ಎಂದು ಕೂಡ ಮಾತನಾಡಿದರು . ಆದರೆ ವರ್ತೂರು ಸಂತೋಷ್ ಎಲಿಮಿನೇಷನ್‌ನಲ್ಲಿ ಸೇಫ್ ಆದರು. ಈಗ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಎಲ್ಲರೂ ಕ್ಲೋಸ್ ಆಗಿದ್ದು ಮನೆಯಲ್ಲಿರುವ ಇತರ ಸದಸ್ಯರಿಗೆ ಪೈಪೋಟಿ ನೀಡುತ್ತಿದ್ದಾರೆ.

Bigboss season 10: fight breaks out between tukali santhosh and vinay for captaincy task

ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ವೇಳೆ ಕಿರಿಕ್

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆಗಾಗಿ ಈಗ ಟಾಸ್ಕ್ ನೀಡಲಾಗುತ್ತದೆ. ಕ್ಯಾಪ್ಟನ್ಸಿ ಆಯ್ಕೆಗೆ ನಡೆಯುವ ಟಾಸ್ಕ್ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ತುಕಾಲಿ ಸಂತೋಷ್, ಸಿರಿ, ಭಾಗ್ಯಶ್ರೀ, ಕಾರ್ತಿಕ್, ನಮ್ರತಾ ಕೈ ಎತ್ತಿ ನಾವು ಕ್ಯಾಪ್ಟನ್ಸಿ ಟಾಸ್ಕ್ ಆಡುತ್ತೇವೆ ಎಂದಿದ್ದಾರೆ. ಈ ವೇಳೆ ಮನೆಯ ಸದಸ್ಯರು ಯಾರ ಯಾರ ಹೆಸರನ್ನ ಸೂಚಿಸಿ ಯಾರಿಗೆ ಬಹುಮತ ಬರುತ್ತದೆ ಅವರನ್ನು ಆಡಿಸೋಣ ಎಂಬುದು ನಿರ್ಧಾರವಾಗುತ್ತದೆ. ಆದರೆ ಇಲ್ಲಿ ತುಕಾಲಿ ಸಂತೋಷ್, ವಿನಯ್ ಜೊತೆ ಕಿರಿಕ್ ತೆಗೆದಿದ್ದಾರೆ.

ವಿನಯ್ ಮಾತಿಗೆ ಗರಂ ಆದ ತುಕಾಲಿ

ನಮ್ರತಾ, ಸಿರಿ, ಕಾರ್ತಿಕ್, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಈ ಐವರು ಆಡಬೇಕು ಎಂದು ವಿನಯ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ವಿನಯ್ ಮಾತು ತುಕಾಲಿ ಸಂತೋಷ್‌ಗೆ ಕೋಪ ತರಿಸಿದೆ. ನಾನು ಸಹ ಕ್ಯಾಪ್ಟನ್ಸಿ ಆಯ್ಕೆಗಾಗಿ ಆಟ ಆಡುತ್ತೇನೆ ಎಂದು ಹೇಳಿದ್ದಾರೆ. ನೀವು ಒಂದೇ ಒಂದು ಗೇಮ್ ಆಡಿರುವುದು ಎಂದಾಗ, ಒಂದೇ ಗೇಮ್ ಆಡಿ ನಾನು ನನ್ನ ಸಾಮರ್ಥ್ಯ ಏನು ಎಂಬುದನ್ನು ನಾನು ಸಾಬೀತುಪಡಿಸಿದ್ದೇನೆ. ಇದಕ್ಕಾಗಿ ನಾನು ಸಹ ಟಾಸ್ಕ್ ಮಾಡುತ್ತೇನೆ ಎಂದು ತುಕಾಲಿ ಸಂತೋಷ್ ಪಟ್ಟು ಹಿಡಿದಿದ್ದಾರೆ.

ವಿನಯ್ ಮಾತಿಗೆ ವಿರೋಧ ವ್ಯಕ್ತ

ತುಕಾಲಿ ಸಂತೋಷ್, ವಿನಯ್ ಅವರು ಆಡುತ್ತಿರುವ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಲಹೆ ಇನ್ನೊಬ್ಬರಿಗೆ ಚುಚ್ಚುವ ರೀತಿ ಇರಬಾರದು ಎಂದು ಹೇಳಿದ್ದಾರೆ. ಇದಕ್ಕೆ ವಿನಯ್ ರಿಯಾಕ್ಟ್ ಮಾಡಿದ್ದು ನನ್ನ ಮಾತು ಎಲ್ಲರಿಗೂ ಏನು ಚುಚ್ಚುವುದಿಲ್ಲ, ನೀವು ಇಲ್ಲಿ ಬಂದು ಎಷ್ಟು ಜನಕ್ಕೆ ಹೇಗೆ ಚುಚ್ಚಿ ಹೋಗುವ ಕೆಲಸವನ್ನು ಮಾಡಿದ್ದೀರಾ? ಅದು ನನಗೂ ಗೊತ್ತು ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ನಾನು ಯಾರಿಂದಲೂ ಏನನ್ನು ಕಲಿಯಬೇಕಾಗಿ ಇಲ್ಲ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಇಷ್ಟು ದಿನ ಮಿತ್ರರಂತಿದ್ದ ಇವರಿಬ್ಬರೂ ಕೂಡ ಈಗ ಶತ್ರುಗಳಂತೆ ವರ್ತಿಸುತ್ತಾ ಇದ್ದಾರೆ.

More from Filmibeat

English summary
Bigg boss kannada season 10: Here is the details about bigboss captaincy task fight;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X